ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾತ್ ರೂಮ್ ಬಾಗಿಲು ಎತ್ತರ ಮಾಡ್ಸು ಆಂದ್ರು ರಾಜೀವ್ ತಾರಾನಾಥ್

ಖ್ಯಾತ ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ಅವರು ತಮ್ಮ ನೆನಪೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ

ನಟರಾಜ ಹೊನ್ನವಳ್ಳಿ


ಪ್ರಸಿದ್ಧ ಸರೋದ್ ವಾದಕರಾದ ಶ್ರೀ ರಾಜೀವ ತಾರಾನಾಥರು ತುಮಕೂರಿನ ನನ್ನ ಮನೆಗೆ ಬಂದಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯ ಮದುವೆಗೆ.

ಅದು ಅಂತರ್ಜಾತೀಯ ಮದುವೆ. ಅದಕ್ಕೂ ಮುಂಚೆ ಅವರು ಕಡಿದಾಳ್ ಶಾಮಣ್ಣನವರನ್ನು ಸಂಪರ್ಕಿಸಿದ್ದರೆಂದು ಕಾಣುತ್ತದೆ. ಶಾಮಣ್ಣನವರು ನನಗೆ ಫೋನ್ ಮಾಡಿದರು. ನಾನು ಅದರ ವ್ಯವಸ್ಥೆ ಗೆ ಒಪ್ಪಿದೆ. ನಾನು ಮೊದಲು ಕೆ. ಬಿ. ಸಿದ್ದಯ್ಯನವರಿಗೆ ಪೋನ್ ಮಾಡಿ ವಿಷಯ ತಿಳಿಸಿದೆ. ಅವರು ‘ ಹ್ಞೂ ‌‌‌‌…ಆಗ್ಲಿ ಕಣೋ’ ಅಂದರು. ಚೇಳೂರು ವೆಂಕಟೇಶ ನಮ್ಮ ಜೊತೆ ಇದ್ದರು.

ಮದುವೆ ತುಮಕೂರಿನ ಎಂ. ಜಿ. ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಆ ಮದುವೆಗೆ ಕಡಿದಾಳ್ ಶಾಮಣ್ಣನವರು ಬೆಳಗಿನ ಜಾವಕ್ಕೆ ಬಂದರು. ನನ್ನ ಮನೆಯಲ್ಲಿ ಉಳಿದರು. ರಾಜೀವ ತಾರಾನಾಥರು, ಕೆಬಿ, ಶಾಮಣ್ಣ ಮುಂತಾದವರು ಮಾತನಾಡಿದರು. ಹಾಸನದಿಂದ ಬಾನು ಮುಸ್ತಾಕ್ ಮೇಡಂ ಬಂದಿದ್ದರು ‌. ಮದುವೆಯ ನಂತರ ಎಲ್ಲರೂ ನನ್ನ ಮನೆಗೆ ಬಂದರು.

ರಾಜೀವ ತಾರಾನಾಥರು ಎತ್ತರದ ಆಳು. ಬಾತ್ ರೂಂ ಬಾಗಿಲೂ ಚಿಕ್ಕದು. ಬಾತ್ ರೂಮ್ ಗೆ ಹೋಗಿ ಬಂದ ರಾಜೀವರು’ ಬಾತ್ ರೂಮ್ ಬಾಗಿಲು ಎತ್ತರ ಮಾಡ್ಸು’ ಆಂದರು . ಎಲ್ಲರೂ – ಬಾನು ಮೇಡಂ ಸೇರಿ ಗಸೆಗಸೆ ಪಾಯ್ಸ ಕುಡಿದೆವು.

ಮಧು ಮಗ, ಮಧು ಮಗಳ ಹೆಸರು ನೆನಪಿಗೆ ಬರ್ತಾಯಿಲ್ಲ! ಆ‌ ದಿನ ಶಾಮಣ್ಣನವರು ರೈತ ಸಂಘದ ಚಳುವಳಿಯ ದೊಡ್ಡ ಫೋಟೋ ಕೊಟ್ರು. ನಟ್ರಾಜಪ್ಪ ಶಾಮಣ್ಣವರನ್ನು ನನ್ನ ಮನೆಗೆ ಕರೆದುಕೊಂಡು ಬಂದ ನೆನಪು. ಅವತ್ತಿನಿಂದ ನಾನು ಸರೋದ್ ಕೇಳಲು ತೊಡಗಿದೆ

‍ಲೇಖಕರು avadhi

11 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading