ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ
ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ರಾಯಚೂರು ಜಿಲ್ಲೆಯ ಬಗ್ಗೆ
ಬೆಳಕು ಚೆಲ್ಲಲಾಗಿದೆ.
26
ರಾಯಚೂರು
ರಾಯಚೂರು ಜಿಲ್ಲೆಯಲ್ಲಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದೆ. ಕನ್ನಡ ಮಾತಾಡುವವರ ಪ್ರತಿಶತತೆ ೭೫% ಇದೆ. ಜಿಲ್ಲೆಯಲ್ಲಿ ಉರ‍್ದು ಮತ್ತು ತೆಲುಗು ಇವೆರಡು ಬಾಶೆಗಳು ಅತಿದೊಡ್ಡ ಬಾಶೆಗಳಾಗಿವೆ. ಆನಂತರ ಲಂಬಾಣಿ ಮತ್ತು ಹಿಂದಿ ತುಸು ದೊಡ್ಡ ಸಂಕೆಯ ಮಾತುಗರನ್ನು ಹೊಂದಿರುವುದು ಕಾಣಿಸುತ್ತದೆ. ರಾಯಚೂರು ಜಿಲ್ಲೆಯ ಒಂದು ವಿಶೇಶ ವಿಚಾರವೆಂದರೆ ಪರಿಗಣಿಸುವಶ್ಟು ಮಂದಿ ಬೆಂಗಾಲಿ ಮಾತುಗರು ಜಿಲ್ಲೆಯಲ್ಲಿ ಇರುವುದು.
***
ಇಲ್ಲಿ ಮೊದಲಿಗೆ ಜನಗಣತಿ ಕೊಟ್ಟಿರುವ ರಾಯಚೂರು ಜಿಲ್ಲೆಯ ಮಾಹಿತಿಯನ್ನು ಕೆಳಗೆ ಅಟ್ಟದಲ್ಲಿ ಕೊಟ್ಟಿದೆ.
| ಬಾಶೆ | ಒಳನುಡಿ | ಒಟ್ಟು | ಗಂಡು | ಹೆಣ್ಣು |
| ಆಸ್ಸಾಮಿ | 4 | 1 | 3 | |
| ಆಸ್ಸಾಮಿ | 1 | 1 | 0 | |
| ಇತರ | 3 | 0 | 3 | |
| ಬೆಂಗಾಲಿ | 13,441 | 6,904 | 6,537 | |
| ಬೆಂಗಾಲಿ | 13,441 | 6,904 | 6,537 | |
| ಗುಜರಾತಿ | 636 | 338 | 298 | |
| ಗುಜರಾತಿ | 430 | 229 | 201 | |
| ಇತರ | 206 | 109 | 97 | |
| ಹಿಂದಿ | 72,257 | 36,872 | 35,385 | |
| ಬಂಜಾರಿ | 535 | 276 | 259 | |
| ಬೋಜ್ಪುರಿ | 13 | 11 | 2 | |
| ದುಂಡಾರಿ | 5 | 2 | 3 | |
| ಹಿಂದಿ | 33,764 | 17,269 | 16,495 | |
| ಲಮಾಣಿ/ಲಂಬಾಡಿ | 34,616 | 17,547 | 17,069 | |
| ಮಾರ‍್ವಾರಿ | 2,795 | 1,466 | 1,329 | |
| ರಾಜಸ್ತಾನಿ | 515 | 291 | 224 | |
| ಇತರ | 14 | 10 | 4 | |
| ಕನ್ನಡ | 14,44,074 | 7,20,204 | 7,23,870 | |
| ಕನ್ನಡ | 14,43,924 | 7,20,129 | 7,23,795 | |
| ಕುರುಬ/ಕುರುಂಬ | 42 | 18 | 24 | |
| ಇತರ | 108 | 57 | 51 | |
| ಕಾಶ್ಮೀರಿ | 7 | 4 | 3 | |
| ಕಾಶ್ಮೀರಿ | 7 | 4 | 3 | |
| ಕೊಂಕಣಿ | 518 | 246 | 272 | |
| ಕೊಂಕಣಿ | 505 | 237 | 268 | |
| ಕುಡುಬಿ/ಕುಡುಂಬಿ | 13 | 9 | 4 | |
| ಮಯ್ತಿಲಿ | 6 | 2 | 4 | |
| ಮಯ್ತಿಲಿ | 6 | 2 | 4 | |
| ಮಲಯಾಳಂ | 439 | 221 | 218 | |
| ಮಲಯಾಳಂ | 436 | 220 | 216 | |
| ಯರವ | 3 | 1 | 2 | |
| ಮರಾಟಿ | 10,190 | 5,234 | 4,956 | |
| ಮರಾಟಿ | 10,175 | 5,226 | 4,949 | |
| ಇತರ | 15 | 8 | 7 | |
| ನೇಪಾಲಿ | 66 | 28 | 38 | |
| ನೇಪಾಲಿ | 66 | 28 | 38 | |
| ಓಡಿಯಾ | 156 | 84 | 72 | |
| ಓಡಿಯಾ | 136 | 74 | 62 | |
| ಇತರ | 20 | 10 | 10 | |
| ಪಂಜಾಬಿ | 91 | 52 | 39 | |
| ಪಂಜಾಬಿ | 91 | 52 | 39 | |
| ಸಂಸ್ಕ್ರುತ | 26 | 13 | 13 | |
| ಸಂಸ್ಕ್ರುತ | 26 | 13 | 13 | |
| ಸಿಂದಿ | 136 | 62 | 74 | |
| ಕಚ್ಚಿ | 74 | 33 | 41 | |
| ಸಿಂದಿ | 62 | 29 | 33 | |
| ತಮಿಳು | 6,595 | 3,324 | 3,271 | |
| ಕೊರವ | 1,663 | 833 | 830 | |
| ತಮಿಳು | 4,932 | 2,491 | 2,441 | |
| ತೆಲುಗು | 1,56,431 | 77,803 | 78,628 | |
| ತೆಲುಗು | 1,56,421 | 77,796 | 78,625 | |
| ಇತರ | 10 | 7 | 3 | |
| ಉರ‍್ದು | 2,23,211 | 1,12,848 | 1,10,363 | |
| ಉರ‍್ದು | 2,23,200 | 1,12,841 | 1,10,359 | |
| ಬನ್ಸಾರಿ | 1 | 1 | 0 | |
| ಇತರ | 10 | 6 | 4 | |
| ಅಂಗಾಮಿ | 6 | 2 | 4 | |
| ಅಂಗಾಮಿ | 6 | 2 | 4 | |
| ಅರಾಬಿಕ್/ಅರ‍್ಬಿ | 53 | 29 | 24 | |
| ಅರಾಬಿಕ್/ಅರ‍್ಬಿ | 53 | 29 | 24 | |
| ಬಿಲಿ/ಬಿಲೋಡಿ | 34 | 13 | 21 | |
| ಇತರ | 34 | 13 | 21 | |
| ಕೂರ‍್ಗಿ/ಕೊಡಗು | 42 | 23 | 19 | |
| ಕೊಡವ | 42 | 23 | 19 | |
| ಇಂಗ್ಲೀಶು | 147 | 76 | 71 | |
| ಇಂಗ್ಲೀಶು | 147 | 76 | 71 | |
| ಹಲಬಿ | 6 | 2 | 4 | |
| ಇತರ | 6 | 2 | 4 | |
| ಕೊಡ/ಕೊರ | 1 | 1 | 0 | |
| ಕೊಡ/ಕೊರ | 1 | 1 | 0 | |
| ಲಹಂದ | 5 | 3 | 2 | |
| ಇತರ | 5 | 3 | 2 | |
| ಲಕೇರ್ | 1 | 0 | 1 | |
| ಮರ | 1 | 0 | 1 | |
| ಮಾಓ | 1 | 1 | 0 | |
| ಇತರ | 1 | 1 | 0 | |
| ತುಳು | 151 | 78 | 73 | |
| ತುಳು | 150 | 78 | 72 | |
| ಇತರ | 1 | 0 | 1 | |
| ಇತರ | 81 | 43 | 38 |
ರಾಯಚೂರು ಜಿಲ್ಲೆಯಲ್ಲಿ ವರದಿಯಾದ ಬಾಶೆಗಳು ಒಟ್ಟು ಇಪ್ಪತ್ತೊಂಬತ್ತು. ಇತರ ಎಂಬ ಒಂದು ಗುಂಪು ವರದಿಯಾಗಿದ್ದು ಇದರಲ್ಲಿ ಒಂದು ಬಾಶೆಯನ್ನು ಮಾತ್ರ ಲೆಕ್ಕ ಹಿಡಿದರೆ ಜಿಲ್ಲೆಯ ಬಾಶೆಗಳ ಸಂಕೆ ಮೂವತ್ತು. ಜಿಲ್ಲೆಯಲ್ಲಿ ದಾಕಲಾದ ಒಟ್ಟು ತಾಯ್ಮಾತುಗಳ ಸಂಕೆ ಅಯ್ವತ್ತು. ಇತರ ಎಂಬ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಲೆಕ್ಕಿಸಿದರೆ ಒಟ್ಟು ತಾಯ್ಮಾತುಗಳು ಅಯ್ವತ್ತೊಂದು ಆಗುತ್ತವೆ. ಹದಿಮೂರು ಬಾಶೆಗಳ ಒಳಗೆ ಇತರ ಎಂಬ ಒಂದು ಗುಂಪು ಇದೆ. ಆಸ್ಸಾಮಿ, ಗುಜರಾತಿ, ಹಿಂದಿ, ಕನ್ನಡ, ಮರಾಟಿ, ಓಡಿಯಾ, ತೆಲುಗು, ಉರ‍್ದು, ಬಿಲಿ/ಬಿಲೋಡಿ, ಹಲಬಿ, ಲಹಂದ, ಮಾಓ ಮತ್ತು ತುಳು. ಇವುಗಳ ಹೊರತಾಗಿ ಹೆಸರಿಸಲಾದ ತಾಯ್ಮಾತುಗಳು ಮೂವತ್ತೇಳು.
ರಾಯಚೂರು ಜಿಲ್ಲೆಯಲ್ಲಿ ಇರುವ ಒಟ್ಟು ಮಂದಿ 19,28,812. ಜಿಲ್ಲೆಯ ಪ್ರದಾನ ಬಾಶೆ ಕನ್ನಡ. ಜಿಲ್ಲೆಯಲ್ಲಿ ಒಟ್ಟು ಕನ್ನಡ ಮಾತುಗರ ಸಂಕೆ 14,44,074 ಆಗಿದೆ. ಇದು ಜಿಲ್ಲೆಯ ಒಟ್ಟು 74.868% ಆಗುತ್ತದೆ. ಎರಡು ಬಾಶೆಗಳಿಗೆ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಉರ‍್ದು 2,23,211, (11.572%) ಮತ್ತು ತೆಲುಗು 1,56,431 (8.110%). ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಹಿಂದಿ 72,257 (3.746%), ಬೆಂಗಾಲಿ 13,441 (0.696%) ಮತ್ತು ಮರಾಟಿ 10,190 (0.528%) ಬಾಶೆಗಳಿಗೆ ಇದ್ದಾರೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆ ತಮಿಳು. ಇದರ ಮಾತುಗರು 6,595 (0.341%). ಏಳು ಬಾಶೆಗಳಿಗೆ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಅವುಗಳೆಂದರೆ, ಗುಜರಾತಿ, ಕೊಂಕಣಿ, ಮಲಯಾಳಂ, ಓಡಿಯಾ, ತುಳು, ಇಂಗ್ಲೀಶು, ಸಿಂದಿ. ಹದಿನಾರು ಬಾಶೆಗಳಿಗೆ ಒಂದು ನೂರಕ್ಕಿಂತ ಕಡಿಮೆ ಮಂದಿ ಮಾತುಗರು ಇದ್ದಾರೆ. ಜಿಲ್ಲೆಯ ಬಾಶೆಗಳು ಮತ್ತು ಮಾತುಗರ ಸಂಕೆಯನ್ನು ಕೆಳಗೆ ಪಟ್ಟಿಯಲ್ಲಿ ಹೊಂದಿಸಿ ತೋರಿಸಿದೆ.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 14,44,074 | 74.868% |
| ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು | ಉರ‍್ದು | 2,23,211 | 11.572% |
| ’’ | ತೆಲುಗು | 1,56,431 | 8.110% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಹಿಂದಿ | 72,257 | 3.746% |
| ’’ | ಬೆಂಗಾಲಿ | 13,441 | 0.696% |
| ’’ | ಮರಾಟಿ | 10,190 | 0.528% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ತಮಿಳು | 6,595 | 0.341% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು | ಗುಜರಾತಿ, ಕೊಂಕಣಿ, ಮಲಯಾಳಂ, ಓಡಿಯಾ, ತುಳು, ಇಂಗ್ಲೀಶು, ಸಿಂದಿ | 2,698 | 0.139% |
| ನೂರಕ್ಕಿಂತ ಕಡಿಮೆ | ಹದಿನಾರು ಬಾಶೆಗಳು | 462 | 0.022% |
| ಒಟ್ಟು ಮಾತುಗರು | 19,28,812 | 100% |
ಇನ್ನು ತಾಯ್ಮಾತುಗಳನ್ನು ಗಮನಿಸಿ ಚರ‍್ಚೆಯನ್ನು ಮುಂದುವರೆಸಬಹುದು. ರಾಯಚೂರು ಜಿಲ್ಲೆಯಲ್ಲಿ ಪಟ್ಟಿಸಿರುವ ಕರ‍್ನಾಟಕದ ಸಂದರ‍್ಬದಲ್ಲಿ ಪ್ರಮುಕವೆನಿಸುವ ಹಿಂದಿಯ ಒಳಗಿನ ತಾಯ್ಮಾತುಗಳನ್ನು ಕೆಳಗೆ ಪಟ್ಟಿಸಿದೆ.
ತಾಯ್ಮಾತು ಮಾತುಗರು ಜಿಲ್ಲೆಯ ಹಿಂದಿಯ %
ಹಿಂದಿ 72,257 100%
ಬಂಜಾರಿ 535 0.740%
ಬೋಜ್ಪುರಿ 13 0.017%
ಹಿಂದಿ 33,764 46.727%
ಲಮಾಣಿ/ಲಂಬಾಡಿ 34,616 47.906%
ಮಾರ‍್ವಾರಿ 2,795 3.868%
ರಾಜಸ್ತಾನಿ 515 0.712%
ಇವುಗಳಲ್ಲಿ ಲಂಬಾಣಿ ಮತ್ತು ಹಿಂದಿ ಇವುಗಳಿಗೆ ದೊಡ್ಡ ಸಂಕೆಯ ಮಾತುಗರಿದ್ದು ಹಿಂದಿಗಿಂತಲೂ ಹೆಚ್ಚು ಮಂದಿ ಲಂಬಾಣಿಯನ್ನು ಮಾತನಾಡುವವರು ಇದ್ದಾರೆ. ಲಮಾಣಿ (35,151) ಮತ್ತು ಬಂಜಾರಿ (535) ಇವುಗಳನ್ನು ಸೇರಿಸಿದರೆ ಲಂಬಾಣಿ ಸಂಕೆ 35,151 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 48.647%, ಮತ್ತು ಜಿಲ್ಲೆಯ 8.110% ಆಗುತ್ತದೆ. ಹಿಂದಿಗೆ 33,764 ಮಂದಿ ಇದ್ದಾರೆ. ಇದು ಜಿಲ್ಲೆಯ ಹಿಂದಿಯ 46.727% ಮತ್ತು ಜಿಲ್ಲೆಯ 1.750% ಆಗುತ್ತದೆ. ಮಾರ‍್ವಾರಿ 2,795 (0.144%) ಮಾತುಗರನ್ನು ಹೊಂದಿದೆ. ಹಾಗೆಯೆ ತಮಿಳಿನ ಒಳಗೆ ಕೊರವಕ್ಕೆ 1,663 (0.086%) ಮಂದಿ ಇದ್ದಾರೆ. ಈಗ ಲಂಬಾಣಿ ಹಿಂದಿಯ ಜೊತೆಗೆ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿಯನ್ನ ಹೊಂದಿರುವ ಬಾಶೆಗಳ ಗುಂಪಿಗೆ ಸೇರುತ್ತದೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಹೊಂದಿರುವ ಬಾಶೆಗಳ ಗುಂಪಿಗೆ ಮಾರ್ವಾರಿ ಮತ್ತು ಕೊರವ ಸೇರುತ್ತವೆ.
ತಾಯ್ಮಾತುಗಳ ಚರ‍್ಚೆಯನ್ನು ಗಮನಿಸಿ ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮರುರೂಪಿಸಿ ಕೊಟ್ಟಿದೆ.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 14,43,924 | 74.860% |
| ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು | ಉರ‍್ದು | 2,23,200 | 11.571% |
| ’’ | ತೆಲುಗು | 1,56,421 | 8.109% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಲಂಬಾಣಿ | 35,151 | 1.822% |
| ’’ | ಹಿಂದಿ | 33,764 | 1.750% |
| ’’ | ಬೆಂಗಾಲಿ | 13,441 | 0.696% |
| ’’ | ಮರಾಟಿ | 10,175 | 0.527% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ತಮಿಳು | 4,932 | 0.255% |
| ’’ | ಮಾರ್ವಾರಿ | 2,795 | 0.144% |
ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಕ್ರಸಂ | ಪ್ರದಾನ ಬಾಶೆ | ಮಾತುಗರು | % |
| ರಾಯಚೂರು | 19,28,812 | 1 | ಕನ್ನಡ | 14,43,924 | 74.860% |
| 2 | ಉರ‍್ದು | 2,23,200 | 11.571% | ||
| 3 | ತೆಲುಗು | 1,56,421 | 8.109% | ||
| 4 | ಲಂಬಾಣಿ | 35,151 | 1.822% | ||
| 5 | ಹಿಂದಿ | 33,764 | 1.750% | ||
| 6 | ಬೆಂಗಾಲಿ | 13,441 | 0.696% | ||
| 7 | ಮರಾಟಿ | 10,175 | 0.527% | ||
| 8 | ತಮಿಳು | 4,932 | 0.255% | ||
| 9 | ಮಾರ‍್ವಾರಿ | 2,795 | 0.144% | ||
| 10 | ಕೊರವ | 1,663 | 0.086% |






0 Comments