ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ
ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ಯಾದಗಿರಿ ಜಿಲ್ಲೆಯ ಬಗ್ಗೆ
ಬೆಳಕು ಚೆಲ್ಲಲಾಗಿದೆ.
25
ಯಾದಗಿರಿ
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಕನಿಶ್ಟ ಇಪ್ಪತ್ನಾಲ್ಕು ಬಾಶೆಗಳು ಮತ್ತು ಕನಿಶ್ಟ ಮೂವತ್ತೊಂಬತ್ತು ತಾಯ್ಮಾತುಗಳು ದಾಕಲಾಗಿವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದ್ದು, ಕನ್ನಡ ಮಾತುಗರ ಪ್ರತಿಶತತೆ ೭೪% ಇದೆ. ಕನ್ನಡದ ನಂತರ ಉರ‍್ದು ಜಿಲ್ಲೆಯ ಅತಿದೊಡ್ಡ ಬಾಶೆಯಾಗಿದೆ. ಜಿಲ್ಲೆಯಲ್ಲಿ ಉರ‍್ದುವಿನ ಪ್ರತಿಶತತೆ ೧೨% ಆಗಿದೆ. ಲಂಬಾಣಿ ಯಾದಗಿರಿಯಲ್ಲಿ ಅತಿ ದೊಡ್ಡ ಬಾಶೆಗಳಲ್ಲಿ ಒಂದಾಗಿ ಕಾಣಿಸುತ್ತದೆ. ಆನಂತರ ತೆಲುಗು ಜಿಲ್ಲೆಯ ಇನ್ನೊಂದು ದೊಡ್ಡ ಬಾಶೆ.
***
ಮೊದಲಿಗೆ ಜನಗಣತಿ ಕೊಟ್ಟಿರುವ ಯಾದಗಿರಿ ಜಿಲ್ಲೆಯ ಮಾಹಿತಿಯನ್ನು ಕೆಳಗೆ ಅಟ್ಟದಲ್ಲಿ ಕೊಟ್ಟಿದೆ.
| ಬಾಶೆ | ಒಳನುಡಿ | ಒಟ್ಟು | ಗಂಡು | ಹೆಣ್ಣು |
| ಬೆಂಗಾಲಿ | 151 | 90 | 61 | |
| ಬೆಂಗಾಲಿ | 151 | 90 | 61 | |
| ಬೊಡೊ | 1 | 1 | 0 | |
| ಕಚರಿ | 1 | 1 | 0 | |
| ಗುಜರಾತಿ | 983 | 497 | 486 | |
| ಗುಜರಾತಿ | 227 | 113 | 114 | |
| ಇತರ | 756 | 384 | 372 | |
| ಹಿಂದಿ | 90,383 | 45,971 | 44,412 | |
| ಬಂಜಾರಿ | 806 | 419 | 387 | |
| ಬೋಜ್ಪುರಿ | 9 | 8 | 1 | |
| ಹಿಂದಿ | 12,977 | 6,580 | 6,397 | |
| ಲಮಾಣಿ/ಲಂಬಾಡಿ | 74,998 | 38,128 | 36,870 | |
| ಮಾರ‍್ವಾರಿ | 1,313 | 672 | 641 | |
| ರಾಜಸ್ತಾನಿ | 233 | 136 | 97 | |
| ಇತರ | 47 | 28 | 19 | |
| ಕನ್ನಡ | 8,69,618 | 4,37,021 | 4,32,597 | |
| ಕನ್ನಡ | 8,69,432 | 4,36,930 | 4,32,502 | |
| ಕುರುಬ/ಕುರುಂಬ | 38 | 20 | 18 | |
| ಇತರ | 148 | 71 | 77 | |
| ಕಾಶ್ಮೀರಿ | 4 | 0 | 4 | |
| ಕಾಶ್ಮೀರಿ | 4 | 0 | 4 | |
| ಕೊಂಕಣಿ | 34 | 16 | 18 | |
| ಕೊಂಕಣಿ | 32 | 15 | 17 | |
| ಇತರ | 2 | 1 | 1 | |
| ಮಲಯಾಳಂ | 68 | 39 | 29 | |
| ಮಲಯಾಳಂ | 63 | 35 | 28 | |
| ಯರವ | 5 | 4 | 1 | |
| ಮರಾಟಿ | 9,487 | 4,838 | 4,649 | |
| ಮರಾಟಿ | 9,487 | 4,838 | 4,649 | |
| ನೇಪಾಲಿ | 40 | 21 | 19 | |
| ನೇಪಾಲಿ | 40 | 21 | 19 | |
| ಓಡಿಯಾ | 383 | 195 | 188 | |
| ಓಡಿಯಾ | 383 | 195 | 188 | |
| ಪಂಜಾಬಿ | 26 | 13 | 13 | |
| ಪಂಜಾಬಿ | 26 | 13 | 13 | |
| ಸಂತಾಲಿ | 2 | 0 | 2 | |
| ಸಂತಾಲಿ | 2 | 0 | 2 | |
| ಸಿಂದಿ | 1 | 0 | 1 | |
| ಸಿಂದಿ | 1 | 0 | 1 | |
| ತಮಿಳು | 1,206 | 620 | 586 | |
| ಕೊರವ | 314 | 149 | 165 | |
| ತಮಿಳು | 892 | 471 | 421 | |
| ತೆಲುಗು | 61,054 | 30,035 | 31,019 | |
| ತೆಲುಗು | 61,027 | 30,025 | 31,002 | |
| ವಡರಿ | 1 | 0 | 1 | |
| ಇತರ | 26 | 10 | 16 | |
| ಉರ‍್ದು | 1,40,606 | 70,850 | 69,756 | |
| ಉರ‍್ದು | 1,40,605 | 70,850 | 69,755 | |
| ಬನ್ಸಾರಿ | 1 | 0 | 1 | |
| ಅರಾಬಿಕ್/ಅರ‍್ಬಿ | 17 | 10 | 7 | |
| ಅರಾಬಿಕ್/ಅರ‍್ಬಿ | 17 | 10 | 7 | |
| ಬಿಲಿ/ಬಿಲೋಡಿ | 8 | 5 | 3 | |
| ಇತರ | 8 | 5 | 3 | |
| ಕೂರ‍್ಗಿ/ಕೊಡಗು | 37 | 19 | 18 | |
| ಕೊಡವ | 37 | 19 | 18 | |
| ಇಂಗ್ಲೀಶು | 28 | 10 | 18 | |
| ಇಂಗ್ಲೀಶು | 28 | 10 | 18 | |
| ಕುರುಕ್/ಓರಆನ್ | 3 | 0 | 3 | |
| ಕುರುಕ್/ಓರಆನ್ | 3 | 0 | 3 | |
| ತುಳು | 60 | 33 | 27 | |
| ತುಳು | 60 | 33 | 27 | |
| ಇತರ | 71 | 45 | 26 |
2011ರ ಜನಗಣತಿ ವರದಿ ಮಾಡಿದ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಇಪ್ಪತ್ಮೂರು ಬಾಶೆಗಳು ಇವೆ. ಇವುಗಳ ಜೊತೆಗೆ ಇತರ ಎಂಬ ಗುಂಪೊಂದರ ವರದಿ ಆಗಿದ್ದು ಅದರಲ್ಲಿ ಎಪ್ಪತ್ತೊಂದು ಮಂದಿ ಮಾತುಗರು ಇದ್ದಾರೆ. ಇದನ್ನು ಒಂದು ಬಾಶೆ ಇರಬಹುದು ಎಂದು ಗಣಿಸಿದರೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಜನಗಣತಿ ವರದಿ ಮಾಡಿದ ಬಾಶೆಗಳ ಸಂಕೆ ಇಪ್ಪತ್ನಾಲ್ಕು ಆಗುತ್ತದೆ. ಬಾಶೆಗಳ ಒಳಗೆ ಪಟ್ಟಿಸಿರುವ ತಾಯ್ಮಾತುಗಳನ್ನು ನೋಡಿದಾಗ ಒಟ್ಟು ಮೂವತ್ತೆಂಟು ತಾಯ್ಮಾತುಗಳನ್ನು ವರದಿ ಮಾಡಿದೆ ಮತ್ತು ಇತರ ಗುಂಪಿನಲ್ಲಿ ಇರುವ ಬಾಶೆಯನ್ನು ಒಂದು ತಾಯ್ಮಾತು ಎಂದೆ ಪರಿಗಣಿಸಿದರೆ ಒಟ್ಟು ತಾಯ್ಮಾತುಗಳ ಸಂಕೆ ಮೂವತ್ತೊಂಬತ್ತು ಆಗುತ್ತದೆ. ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ತೆಲುಗು ಮತ್ತು ಬಿಲಿ/ಬಿಲೋಡಿ ಈ ಆರು ಬಾಶೆಗಳ ಒಳಗೆ ಇತರ ಎಂಬ ಗುಂಪು ದಾಕಲಾಗಿದೆ. ಇವುಗಳನ್ನು ಕಳೆದರೆ ಯಾದಗಿರಿ ಜಿಲ್ಲೆಯಲ್ಲಿ ಹೆಸರಿಸಿದ ತಾಯ್ಮಾತುಗಳ ಸಂಕೆ ಮೂವತ್ತೆರಡು ಆಗುತ್ತದೆ.
2011ರ ಜನಗಣತಿ ವರದಿಯಂತೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 11,74,271 ಮಂದಿ ಇದ್ದಾರೆ. ಯಾದಗಿರಿ ಜಿಲ್ಲೆಯ ಪ್ರದಾನ ಬಾಶೆ ಕನ್ನಡ. ಯಾದಗಿರಿ ಜಿಲ್ಲೆಯ ಕನ್ನಡ ಮಾತನಾಡುವವರ ಸಂಕೆ 8,69,618. ಅಂದರೆ ಜಿಲ್ಲೆಯ ಒಟ್ಟು ಮಾತುಗರ 74.055%. ಜಿಲ್ಲೆಯ ಮುಕ್ಕಾಲು ಬಾಗ ಮಂದಿ ಕನ್ನಡ ಮಾತನಾಡುತ್ತಾರೆ. ಉಳಿದ ಮಂದಿ ಇತರ ಬಾಶೆಗಳನ್ನು ಆಡುತ್ತಾರೆ. ಕನ್ನಡದ ನಂತರ ಹೆಚ್ಚು ಮಂದಿ ಮಾತನಾಡುವ ಜಿಲ್ಲೆಯ ಬಾಶೆ 1,40,606 ಮಂದಿ ಮಾತುಗರನ್ನು ಹೊಂದಿರುವ ಉರ‍್ದು. ಉರ‍್ದುವಿನ ಪ್ರತಿಶತತೆ 11.973% ಆಗುತ್ತದೆ. ಆನಂತರ ಹಿಂದಿಗೆ 90,383 ಮಾತುಗರು ಇದ್ದು 7.696% ಪ್ರತಿಶತ ಆಗುತ್ತದೆ. ಜಿಲ್ಲೆಯ ಇನ್ನೊಂದು ಮಹತ್ವದ ಬಾಶೆ 61,054 (5.199%) ಮಾತುಗರನ್ನು ಹೊಂದಿರುವ ತೆಲುಗು. ಇವುಗಳ ನಂತರ 9,487 (0.807%) ಮಾತುಗರೊಂದಿಗೆ ಮರಾಟಿ ಅಯ್ದನೆಯ ಜಾಗದಲ್ಲಿ ನಿಲ್ಲುತ್ತದೆ. ಆನಂತರ 1,206 ಮಂದಿ ಮಾತಾಡುವ ತಮಿಳು (0.102%) ಇದೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಆರು ಬಾಶೆಗಳು ವರದಿಯಾಗಿವೆ. ಅದರೊಂದಿಗೆ ಗುಜರಾತಿ ಬಾಶೆಗೆ ಸಾವಿರಕ್ಕೆ ಹತ್ತಿರದ ಅಂದರೆ 983 (0.083%) ಮಂದಿ ವರದಿ ಆಗಿದ್ದಾರೆ. ಇನ್ನುಳಿದಂತೆ ಸಾವಿರಕ್ಕೂ ಕಡಿಮೆ ಮಂದಿ ಮಾತಾಡುವ ಎರಡು (ಓಡಿಯಾ ಮತ್ತು ಬೆಂಗಾಲಿ) ಬಾಶೆಗಳು ಇವೆ. ಉಳಿದ ಹದಿನಾಲ್ಕು ಬಾಶೆಗಳು ನೂರಕ್ಕಿಂತ ಕಡಿಮೆ ಮಾತುಗರನ್ನು ಹೊಂದಿವೆ. ಈ ಬಾಶೆಗಳನ್ನು ಕೆಳಗೆ ಪಟ್ಟಿಸಿ ತೋರಿಸಿದೆ ಗಮನಿಸಿ.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಒಂದು ಲಕ್ಶಕ್ಕಿಂತ ಹೆಚ್ಚು | ಕನ್ನಡ | 8,69,618 | 74.055% |
| ’’ | ಉರ‍್ದು | 1,40,606 | 11.973% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಹಿಂದಿ | 90,383 | 7.696% |
| ’’ | ತೆಲುಗು | 61,054 | 5.199% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಮರಾಟಿ | 9,487 | 0.807% |
| ’’ | ತಮಿಳು | 1,206 | 0.102% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು | ಗುಜರಾತಿ, ಓಡಿಯಾ ಬೆಂಗಾಲಿ | 1,517 | 0.129% |
| ನೂರಕ್ಕಿಂತ ಕಡಿಮೆ | ಹದಿನಾಲ್ಕು ಬಾಶೆಗಳು | 400 | 0.034 |
| ಒಟ್ಟು ಮಾತುಗರು | 11,74,271 | 100% |
ವಿವಿದ ಬಾಶೆಗಳ ಒಳಗೆ ಪಟ್ಟಿಸಿರುವ ತಾಯ್ಮಾತುಗಳನ್ನು ಒಮ್ಮೆ ಗಮನಿಸಿದಾಗ ಈ ಮೇಲಿನ ಬಾಶೆಗಳ ಅನುಕ್ರಮ ಬದಲಾಗುತ್ತದೆ. ಹಿಂದಿಯೊಳಗೆ ಪಟ್ಟಿಸಿರುವ ಕೆಲವು ಮಹತ್ವದ ಬಾಶೆಗಳನ್ನು ಕೆಳಗೆ ಕೊಟ್ಟಿದೆ.
ಹಿಂದಿ 90,383
ಬಂಜಾರಿ 806
ಬೋಜ್ಪುರಿ 9
ಹಿಂದಿ 12,977
ಲಮಾಣಿ/ಲಂಬಾಡಿ 74,998
ಮಾರ‍್ವಾರಿ 1,313
ರಾಜಸ್ತಾನಿ 233
ಹಿಂದಿಗೆ ಜನಗಣತಿ ಯಾದಗಿರಿ ಜಿಲ್ಲೆಯಲ್ಲಿ ವರದಿ ಮಾಡಿದ ಮಾತುಗರ ಸಂಕೆ 90,383. ಆದರೆ ಇದರಲ್ಲಿ ಲಂಬಾಣಿಯ ಸಂಕೆಯೆ ಹೆಚ್ಚಿದೆ. ಲಂಬಾಣಿಗೆ ವರದಿಯಾದ ಸಂಕೆ 74,998. ಇದರಲ್ಲಿ ಬಂಜಾರಿ ಎಂಬ ಇನ್ನೊಂದು ತಾಯ್ಮಾತಿನ 806 ಮಂದಿಯನ್ನು ಕೂಡಿಸಿದರೆ ಒಟ್ಟು ಲಂಬಾಣಿ ಮಾತುಗರ ಸಂಕೆ 75,804. ಅಂದರೆ ಹಿಂದಿ ಬಾಶೆಯಲ್ಲಿ 83.869% ಪ್ರತಿಶತ ಲಂಬಾಣಿ ಮಾತುಗರೆ ಇದ್ದಾರೆ. ಇದು ಜಿಲ್ಲೆಯ 6.455% ಆಗುತ್ತದೆ. ಮಾರ‍್ವಾರಿ (1,313) ಎಂಬ ಇನ್ನೊಂದು ಬಾಶೆಯನ್ನು ಆಡುವವರ ಸಂಕೆಯೂ ಸಾವಿರಕ್ಕೂ ಹೆಚ್ಚಿದೆ. ಹಿಂದಿ ಮಾತುಗರ ಸಂಕೆ 12,977 ಮಾತ್ರ. ಅಂದರೆ ಒಟ್ಟು ಹಿಂದಿಯ 14.357% ಮತ್ತು ಜಿಲ್ಲೆಯ 1.105%. ಈಗ ಲಂಬಾಣಿ ಜಿಲ್ಲೆಯ ಮೂರನೆ ಅತಿ ದೊಡ್ಡ ಮಾತುಗ ಸಮುದಾಯವನ್ನು ಹೊಂದಿದ ಬಾಶೆಯಾಗುತ್ತದೆ. ಅಲ್ಲದೆ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಜಿಲ್ಲೆಯ ಬಾಶೆಗಳ ಸಂಕೆ ಮೂರು ಆಗುತ್ತವೆ. ಈ ಮೇಲಿನ ಪಟ್ಟಿಯಲ್ಲಿ ಇದ್ದ ಹಿಂದಿ, ತೆಲುಗು ಇವುಗಳ ಜೊತೆಗೆ ಲಂಬಾಣಿ ಸೇರಿಕೊಳ್ಳುತ್ತದೆ.
ಈ ಚರ‍್ಚೆಯನ್ನು ಮತ್ತು ತಾಯ್ಮಾರುಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಮೇಲಿನ ಬಾಶೆಗಳ ಪಟ್ಟಿಯನ್ನು ಮರುರಚಿಸಿ ಇಲ್ಲಿ ತೋರಿಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಒಂದು ಲಕ್ಶಕ್ಕಿಂತ ಹೆಚ್ಚು | ಕನ್ನಡ | 8,69,618 | 74.055% |
| ’’ | ಉರ‍್ದು | 1,40,606 | 11.973% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಲಂಬಾಣಿ | 75,804 | 6.455% |
| ತೆಲುಗು | 61,054 | 5.199% | |
| ’’ | ಹಿಂದಿ | 12,977 | 1.105% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಮರಾಟಿ | 9,487 | 0.807% |
| ’’ | ಮಾರ‍್ವಾರಿ | 1,313 | 0.111% |
ಇಲ್ಲಿ ಯಾದಗಿರಿ ಜಿಲ್ಲೆಯ ಹತ್ತು ದೊಡ್ಡ ಬಾಶೆಗಳನ್ನು ಮತ್ತು ಅವು ಹೊಂದಿರುವ ಪ್ರತಿಶತತೆಯನ್ನು ತೋರಿಸಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಬಾಶೆ | ಮಾತುಗರು | ಜಿಲ್ಲೆಯ % | ಜಿಲ್ಲೆಯಲ್ಲಿ ಸ್ತಾನ |
| ಯಾದಗಿರಿ | 11,74,271 | ಕನ್ನಡ | 8,69,432 | 74.040% | 1 |
| ಉರ‍್ದು | 1,40,605 | 11.973% | 2 | ||
| ಲಂಬಾಣಿ | 75,804 | 6.455% | 3 | ||
| ತೆಲುಗು | 61,027 | 5.197% | 4 | ||
| ಹಿಂದಿ | 12,977 | 1.105% | 5 | ||
| ಮರಾಟಿ | 9,487 | 0.807% | 6 | ||
| ಮಾರ‍್ವಾರಿ | 1,313 | 0.111% | 7 | ||
| ಗುಜರಾತಿ | 983 | 0.083% | 8 | ||
| ತಮಿಳು | 892 | 0.075% | 9 | ||
| ಓಡಿಯಾ | 383 | 0.032% | 10 |






0 Comments