ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಬಳ್ಳಾರಿ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಬಳ್ಳಾರಿ ಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

16

ಬಳ್ಳಾರಿ

ಬಳ್ಳಾರಿ ಜಿಲ್ಲೆಯಲ್ಲಿ ಕಡಿಮೆ ಎಂದರೂ ಮೂವತ್ತೊಂಬತ್ತು ಬಾಶೆಗಳು ದಾಕಲಾಗಿವೆ ಮತ್ತು ಎಪ್ಪತ್ತೆರಡು ತಾಯ್ಮಾತುಗಳು ದಾಕಲಾಗಿವೆ. ಜಿಲ್ಲೆಯಲ್ಲಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದ್ದು ಕನ್ನಡ ಮಾತಾಡುವವರ ಪ್ರತಿಶತತೆ 71.846% ಇದೆ. ಕನ್ನಡದ ನಂತರ ಉರ‍್ದು ಮತ್ತು ತೆಲುಗು ಬಾಶೆಗಳು ಜಿಲ್ಲೆಯ ದೊಡ್ಡ ಬಾಶೆಗಳಾಗಿದ್ದು ತಲಾ ಎರಡು ಲಕ್ಶಕ್ಕಿಂತಲೂ ಹೆಚ್ಚು ಮಾತುಗರನ್ನು ಹೊಂದಿವೆ. ಲಂಬಾಣಿ ಜಿಲ್ಲೆಯಲ್ಲಿ ದೊಡ್ಡ ಸಂಕೆಯ ಮಾತುಗರನ್ನು ಹೊಂದಿದೆ. ಇವುಗಳ ಜೊತೆಗೆ ಹಿಂದಿ, ತಮಿಳು ಮತ್ತು ಮರಾಟಿ ಬಾಶೆಗಳಿಗೂ ಪರಿಗಣಿಸುವಶ್ಟು ಸಂಕೆಯ ಮಾತುಗರು ಕಾಣಿಸುತ್ತಾರೆ. ಕನ್ನಡದೊಳಗೆ ಇತರ ಎಂಬ ತಾಯ್ಮಾತಿನ ಗುಂಪಿನಲ್ಲಿ 2,596 ಮಂದಿ ದಾಕಲಾಗಿರುವುದೂ ಗಮನೀಯ.

***

ಜನಗಣತಿ ಕೊಡುವ ಬಳ್ಳಾರಿ ಜಿಲ್ಲೆಯ ಮಾಹಿತಿಯನ್ನು ಇಲ್ಲಿ ಪಟ್ಟಿ ಮಾಡಿ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ443212
ಆಸ್ಸಾಮಿ443212
ಬೆಂಗಾಲಿ843550293
ಬೆಂಗಾಲಿ843550293
ಡೋಗ್ರಿ110
ಡೋಗ್ರಿ110
ಗುಜರಾತಿ955475480
ಗುಜರಾತಿ606301305
ಸವರಾಶ್ಟ್ರ/ಸವರಾಶ್ಟ್ರಿ1174
ಇತರ338167171
ಹಿಂದಿ1179566174556211
ಬಂಜಾರಿ954493461
ಬೋಜ್ಪುರಿ433293140
ಚತ್ತೀಸ್‍ಗರಿ312
ಗರ‍್ವಾಲಿ431
ಹರಿಯಾಣ್ವಿ17125
ಹಿಂದಿ351011944615655
ಲಮಾಣಿ/ಲಂಬಾಡಿ746843786636818
ಮಾರ‍್ವಾರಿ558229432639
ನಿಮಾಡಿ532
ಪಹರಿ431
ರಾಜಸ್ತಾನಿ960549411
ಸಾದನ್/ಸಾದ್ರಿ642
ಸುಗಾಲಿ624
ಇತರ19712770
ಕನ್ನಡ1764713889024875689
ಕನ್ನಡ 1762103887729874374
ಕುರುಬ/ಕುರುಂಬ1055
ಪ್ರಾಕ್ರುತ/ಪ್ರಾಕ್ರುತ ಬಾಶಾ422
ಇತರ259612881308
ಕಾಶ್ಮೀರಿ16610
ಕಾಶ್ಮೀರಿ16610
ಕೊಂಕಣಿ1007530477
ಕೊಂಕಣಿ988520468
ಕುಡುಬಿ/ಕುಡುಂಬಿ1376
ಇತರ633
ಮಯ್ತಿಲಿ583028
ಮಯ್ತಿಲಿ583028
ಮಲಯಾಳಂ230912511058
ಮಲಯಾಳಂ230412471057
ಯರವ541
ಮಣಿಪುರಿ382018
ಮಣಿಪುರಿ382018
ಮರಾಟಿ19924100129912
ಮರಾಟಿ 19910100059905
ಇತರ1477
ನೇಪಾಲಿ260146114
ನೇಪಾಲಿ260146114
ಓಡಿಯಾ1198791407
ಓಡಿಯಾ1194789405
ಇತರ422
ಪಂಜಾಬಿ380209171
ಪಂಜಾಬಿ380209171
ಸಂಸ್ಕ್ರುತ431
ಸಂಸ್ಕ್ರುತ431
ಸಂತಾಲಿ532
ಸಂತಾಲಿ532
ಸಿಂದಿ284149135
ಕಚ್ಚಿ552728
ಸಿಂದಿ229122107
ತಮಿಳು254141270412710
ಕೊರವ544285259
ತಮಿಳು248091238512424
ಇತರ613427
ತೆಲುಗು237403118111119292
ತೆಲುಗು237380118103119277
ಇತರ23815
ಉರ‍್ದು277947140225137722
ಉರ‍್ದು277932140216137716
ಇತರ1596
ಅರಾಬಿಕ್/ಅರ‍್ಬಿ1046
ಅರಾಬಿಕ್/ಅರ‍್ಬಿ1046
ಬಿಲಿ/ಬಿಲೊಡಿ19893105
ಕೊಕ್ನ/ಕೊಕ್ನಿ/ಕುಕ್ನ312
ಮವ್ಚಿ110
ವಾಗ್ದಿ1155164
ಇತರ794039
ಬೋಟಿಯ514
ಇತರ514
ಕೂರ‍್ಗಿ/ಕೊಡಗು472522
ಕೂರ‍್ಗಿ/ಕೊಡಗು1165
ಕೊಡವ361917
ಇಂಗ್ಲೀಶು269135134
ಇಂಗ್ಲೀಶು269135134
ಗದಬ413
ಗದಬ413
ಗೊಂಡಿ110
ಗೊಂಡಿ110
ಕಾಸಿ110
ಲಿಂಗ್ಯಂಗ್ಮ110
ಕೊಡ/ಕೊರ220
ಕೊಡ/ಕೊರ220
ಕೊರ‍್ಕು220
ಕೊರ‍್ಕು220
ಕುರುಕ್/ಓರಆನ್1055
ಕುರುಕ್/ಓರಆನ್1055
ಲಹಂದ211
ಇತರ211
ಮುಂಡ532
ಮುಂಡ532
ಸೆಮಾ231310
ಸೆಮಾ231310
ತಾಡೊ211
ತಾಡೊ211
ಟಿಬೆಟನ್303
ಟಿಬೆಟನ್303
ತುಳು823447376
ತುಳು800438362
ಇತರ23914
ಇತರ429202227

ಬಳ್ಳಾರಿ ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಬಾಶೆಗಳು ಒಟ್ಟು ಮೂವತ್ತೆಂಟು ಎಂಬ ಮಾಹಿತಿ ಜನಗಣತಿಯಿಂದ ದೊರೆಯುತ್ತದೆ. ಇವುಗಳ ಜೊತೆಗೆ ಒಂದು ಇತರ ಎಂಬ ಗುಂಪು ಇದೆ. ಇದನ್ನೂ ಸೇರಿಸಿದರೆ ಬಳ್ಳಾರಿಯಲ್ಲಿ ಮೂವತ್ತೊಂಬತ್ತು ಬಾಶೆಗಳು ಇವೆ ಎಂದಾಗುತ್ತದೆ. ತಾಯ್ಮಾತುಗಳ ಸಂಕೆಯನ್ನು ಗಮನಿಸಿದಾಗ ಎಪ್ಪತ್ತೊಂದು ಇವೆ. ಇವುಗಳ ಜೊತೆಗೆ ಇತರ ಎಂಬ ಬಾಶೆಯ ಗುಂಪಿನಲ್ಲಿ ಇರುವ ಮಾತುಗರ ಸಂಕೆ ಕಡಿಮೆ ಇರುವುದರಿಂದ ಅದನ್ನು ಒಂದು ತಾಯ್ಮಾತು ಎಂದು ಗಣಿಸಿದರೆ ಒಟ್ಟು ದಾಕಲಾದ ತಾಯ್ಮಾತುಗಳ ಸಂಕೆ ಎಪ್ಪತ್ತೆರಡು. ಇದರಲ್ಲಿ ಹದಿಮೂರು ಬಾಶೆಗಳ ಒಳಗೆ ಇತರ ಎಂಬ ಗುಂಪನ್ನು ಕೊಟ್ಟಿದೆ. ಅವುಗಳೆಂದರೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮರಾಟಿ, ಓಡಿಯಾ, ತಮಿಳು, ತೆಲುಗು, ಉರ‍್ದು, ಬಿಲಿ/ಬಿಲೊಡಿ, ಬೋಟಿಯ, ಲಹಂದ ಮತ್ತು ತುಳು. ಈ ಇತರ ಎಂಬ ಗುಂಪುಗಳನ್ನು ಕಳೆದರೆ ಅಯ್ವತ್ತೊಂಬತ್ತು ತಾಯ್ಮಾತುಗಳನ್ನು ಹೆಸರಿಸಿದೆ. 

ಬಳ್ಳಾರಿ ಜಿಲ್ಲೆಯ ಒಟ್ಟು ಜನಸಂಕೆ 24,52,595 ಆಗಿದೆ. ಇದರಲ್ಲಿ ಕನ್ನಡ ಮಾತಾಡುವ 17,64,713 ಮಂದಿ ಇದ್ದಾರೆ. ಇದು ಜಿಲ್ಲೆಯ 71.952% ದಶ್ಟು ಆಗುತ್ತದೆ. ಜಿಲೆಯಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದು ಬಾಶೆ ಕನ್ನಡವಾಗಿದೆ. ಕನ್ನಡದ ನಂತರ ಉರ‍್ದು ಬಾಶೆಗೆ 2,77,947 (11.332%), ತೆಲುಗು ಬಾಶೆಗೆ 2,37,403 (9.679%) ಮತ್ತು ಹಿಂದಿ ಬಾಶೆಗೆ 1,17,956 (4.809%) ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಎರಡು ಬಾಶೆಗಳು ಇವೆ. ತಮಿಳು – 25,414 (1.036%) ಮತ್ತು ಮರಾಟಿ – 19,924 (0.812%) ಈ ಎರಡು ಬಾಶೆಗಳಾಗಿವೆ. ಆನಂತರ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಮೂರು ಬಾಶೆಗಳು ಇವೆ. ಮಲಯಾಳಂ – 2,309 (0.094%), ಓಡಿಯಾ – 1,198 (0.048%) ಮತ್ತು ಕೊಂಕಣಿ – 1,007 (0.041%). ಒಟ್ಟು ಎಂಟು ಬಾಶೆಗಳಿಗೆ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಾತುಗರಿದ್ದಾರೆ. ಅವು, ಗುಜರಾತಿ, ಬೆಂಗಾಲಿ, ತುಳು, ಇತರ, ಪಂಜಾಬಿ, ಸಿಂದಿ, ಇಂಗ್ಲೀಶು, ನೇಪಾಲಿ ಮತ್ತು ಬಿಲ್/ಬಿಲೊಡಿ. ಹಾಗೆಯೆ ಇತರ ಗುಂಪಿನಲ್ಲಿಯೂ 429 (0.017%) ಮಂದಿ ಇದ್ದಾರೆ. ಇದನ್ನು ಸೇರಿಸಿ ಒಂಬತ್ತು ಬಾಶೆಗಳು ಎನ್ನಬಹುದು. ಇಪ್ಪತ್ತೊಂದು ಬಾಶೆಗಳಿಗೆ ನೂರಕ್ಕಿಂತ ಕಡಿಮೆ ಮಂದಿ ಮಾತುಗರು ದಾಕಲಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಜನಗಣತಿ ಕೊಡುವ ಬಾಶಿಕ ಮಾಹಿತಿಯನ್ನು ಈ ಕೆಳಗಿನಂತೆ ಚಿತ್ರಿಸಿ ಕೊಡಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ17,64,71371.952%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,77,947 11.332%
’’ತೆಲುಗು2,37,403 9.679%
’’ಹಿಂದಿ1,17,956 4.809%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತಮಿಳು25,414 1.036%
’’ಮರಾಟಿ 19,924 0.812%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಲಯಾಳಂ2,309 0.094%
’’ಓಡಿಯಾ1,198 0.048%
’’ಕೊಂಕಣಿ 1,007 0.041%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಗುಜರಾತಿ, ಬೆಂಗಾಲಿ, ತುಳು, ಇತರ, ಪಂಜಾಬಿ, ಸಿಂದಿ, ಇಂಗ್ಲೀಶು, ನೇಪಾಲಿ, ಬಿಲ್/ಬಿಲೊಡಿ4,4410.181%
ನೂರಕ್ಕಿಂತ ಕಡಿಮೆ ಮೂವತ್ಮೂರು ಬಾಶೆಗಳು2830.011%
ಒಟ್ಟು ಮಾತುಗರು24,52,595100%

ಬಳ್ಳಾರಿ ಜಿಲ್ಲೆಯಲ್ಲಿ ದಾಕಲಾಗಿರುವ ತಾಯ್ಮಾತುಗಳನ್ನು ಇನ್ನು ತುಸು ಗಮನಿಸಬಹುದು. ತಾಯ್ಮಾತುಗಳನ್ನು ಗಮನಿಸಿ ಬಾಶಿಕ ಮಾಹಿತಿಯನ್ನು ಗಮನಿಸಿದಾಗ ಜಿಲ್ಲೆಯ ಬಾಶಿಕ ಚಿತ್ರಣ ತುಸು ಬದಲಾಗುತ್ತದೆ. ಹಿಂದಿ ಬಾಶೆಯ ಒಳಗೆ ದಾಕಲಾಗಿರುವ ಕರ‍್ನಾಟಕದ ಸಂದರ‍್ಬದಲ್ಲಿ ಮಹತ್ವದವೆನಿಸುವಂತ ಬಾಶೆಗಳನ್ನು ಕೆಳಗೆ ಪಟ್ಟಿಸಿದೆ.

ಹಿಂದಿ 1,17,956

ಬಂಜಾರಿ 954

ಬೋಜ್ಪುರಿ 433

ಹಿಂದಿ 35,101

ಲಮಾಣಿ/ಲಂಬಾಡಿ 74,684

ಮಾರ‍್ವಾರಿ 5,582

ರಾಜಸ್ತಾನಿ 960

ಸುಗಾಲಿ 6

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ದಾಕಲಾದ ಹಿಂದಿ ಮಾತಾಡುವ ಮಂದಿ 1,17,956. ಇದರಲ್ಲಿ ಹಿಂದಿ ಮಾತುಗರು 35,101 ಮಾತ್ರ. ಇದು ಜಿಲ್ಲೆಯ ಹಿಂದಿಯ 29.757% ಮತ್ತು ಜಿಲ್ಲೆಯ 1.431% ಆಗುತ್ತದೆ. ಲಂಬಾಣಿಯ ಮಾತುಗರ ಸಂಕೆ ದೊಡ್ಡದಾಗಿದೆ. ಲಮಾಣಿ ಹೆಸರಿನ 74,684, ಬಂಜಾರಿ ಹೆಸರಿನ 954 ಮತ್ತು ಸುಗಾಲಿ ಹೆಸರಿನ 6 ಮಂದಿ ಸೇರಿ ಲಂಬಾಣಿಗೆ 75,644 ಮಂದಿ ಇದ್ದಾರೆ. ಇದು ಜಿಲ್ಲೆಯ ಹಿಂದಿಯ 64.128% ಮತ್ತು ಜಿಲ್ಲೆಯ 3.084% ಆಗುತ್ತದೆ. ಈಗ ಲಂಬಾಣಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳ ಪಟ್ಟಿಗೆ ಸೇರುತ್ತದೆ. ಒಂದು ಲಕ್ಶಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳ ಪಟ್ಟಿಯಿಂದ ಹಿಂದಿ ಕೆಳಗಿಳಿದು ಒಂದು ಲಕ್ಶಕ್ಕಿಂತ ಕಡಿಮೆ ಮಾತುಗರು ಇರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಹಾಗೆಯೆ ಮಾರ‍್ವಾರಿ ಬಾಶೆಗೆ 5,582 (0.227%) ಮಂದಿ ಇದ್ದಾರೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳ ಪಟ್ಟಿಗೆ ಇದು ಸೇರುತ್ತದೆ. 

ಕನ್ನಡ ಬಾಶೆಯೊಳಗೆ ಇತರ ಗುಂಪಿನಲ್ಲಿ ಬಳ್ಳಾರಿಯಲ್ಲಿ ದೊಡ್ಡ ಸಂಕೆಯ ಅಂದರೆ 2,596 (0.105%) ಮಂದಿ ಇದೆ. ಇದು ಸಾವಿರಕ್ಕೂ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳ ಪಟ್ಟಿಯಲ್ಲಿ ಪರಿಗಣಿಸಬೇಕಾಗುತ್ತದೆ. ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಕೊಂಕಣಿ (1,007) ಬಾಶೆಯಲ್ಲಿ ಕುಡುಬಿ ಮಾತಾಡುವ 13 ಮತ್ತು ಇತರ ಗುಂಪಿನಲ್ಲಿ 6 ಮಂದಿ ಇದ್ದಾರೆ. ಕೊಂಕಣಿ ಮಾತಾಡುವ 988 ಮಂದಿ ಇದ್ದಾರೆ. ಹಾಗಾಗಿ ಕೊಂಕಣಿ ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳ ಪಟ್ಟಿಯಿಂದ ಕೆಳಗಿಳಿಯುತ್ತದೆ.

ಈಗ ತಾಯ್ಮಾತುಗಳನ್ನು ಪರಿಗಣಿಸಿ, ಮೇಲಿನ ಚರ‍್ಚೆಯನ್ನು ಒಳಗೊಂಡು ಬಳ್ಳಾರಿ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ಮರುಹೊಂದಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ17,62,10371.846%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,77,93211.332%
’’ತೆಲುಗು2,37,3809.678%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಲಂಬಾಣಿ 75,6383.083%
’’ಹಿಂದಿ35,1011.431%
’’ತಮಿಳು24,8091.011%
’’ಮರಾಟಿ19,9100.811%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮಾರ‍್ವಾರಿ5,5820.227%
’’ಕನ್ನಡ-ಇತರ2,5960.105%
’’ಮಲಯಾಳಂ2,3040.093%
’’ಓಡಿಯಾ1,1940.048%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಬಳ್ಳಾರಿ24,52,595ಕನ್ನಡ17,62,10371.846%1
ಉರ‍್ದು2,77,93211.332%2
ತೆಲುಗು2,37,3809.678%3
ಲಂಬಾಣಿ75,6383.083%4
ಹಿಂದಿ35,1011.431%5
ತಮಿಳು24,8091.011%6
ಮರಾಟಿ19,9100.811%7
ಮಾರ‍್ವಾರಿ5,5820.227%8
ಇತರ-ಕನ್ನಡ2,5960.105%9
ಮಲಯಾಳಂ2,3040.093%10

‍ಲೇಖಕರು Admin

9 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading