ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ಗದಗ ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.
8
ಗದಗ
ಗದಗ ಜಿಲ್ಲೆಯಲ್ಲಿ ಕಡಿಮೆ ಎಂದರೂ ಇಪ್ಪತ್ತೆಂಟು ಬಾಶೆಗಳೂ ಅಯ್ವತ್ತೆರಡು ತಾಯ್ಮಾತುಗಳೂ ಇವೆ. ಜಿಲ್ಲೆಯಲ್ಲಿ ಸುಮಾರು 85% ಪ್ರತಿಶತ ಕನ್ನಡ ಮಾತುಗರು ಇದ್ದು ಜಿಲ್ಲೆಯ ದೊಡ್ಡ ಬಾಶೆಯಾಗಿದೆ. ಕರ‍್ನಾಟಕದ ನಡುಬಾಗದಲ್ಲಿ ಬರುವ ಗದಗ ಜಿಲ್ಲೆಯಲ್ಲಿ ಕನ್ನಡ ಮಾತಾಡುವವರು ಹೆಚ್ಚಿನ ಸಂಕೆಯಲ್ಲಿ ಇರುವುದು ಕಾಣಿಸುತ್ತದೆ. ಆನಂತರದ ಮಹತ್ವದ ಬಾಶೆ ಉರ‍್ದು ಆಗಿದೆ. ಲಂಬಾಣಿ ಜಿಲ್ಲೆಯಲ್ಲಿ ದೊಡ್ಡ ಸಂಕೆಯ ಮಾತುಗರನ್ನು ಹೊಂದಿದೆ. ಹಾಗೆಯೆ ಮರಾಟಿ, ಗುಜರಾತಿ ಬಾಶೆಗಳೂ ಪರಿಗಣಿಸುವಶ್ಟು ಮಂದಿಯನ್ನು ಹೊಂದಿವೆ.
ಗದಗ ಜಿಲ್ಲೆಯಲ್ಲಿ ಜನಗಣತಿ ಒದಗಿಸಿರುವ ಬಾಶಿಕ ಮಾಹಿತಿಯನ್ನು ಕೆಳಗೆ ಪಟ್ಟಿಯಲ್ಲಿ ತೋರಿಸಿದೆ.
| ಬಾಶೆ | ತಾಯ್ಮಾತು | ಒಟ್ಟು ಮಾತುಗರು | ಗಂಡು | ಹೆಣ್ಣು |
| ಬೆಂಗಾಲಿ | 61 | 41 | 20 | |
| ಬೆಂಗಾಲಿ | 61 | 41 | 20 | |
| ಗುಜರಾತಿ | 6329 | 3160 | 3169 | |
| ಗುಜರಾತಿ | 413 | 205 | 208 | |
| ಪಟ್ಟಣಿ | 1 | 0 | 1 | |
| ಇತರ | 5915 | 2955 | 2960 | |
| ಹಿಂದಿ | 39418 | 20159 | 19259 | |
| ಬಂಜಾರಿ | 2309 | 1199 | 1110 | |
| ಬರ‍್ಮವುರಿ/ಗಡ್ಡಿ | 16 | 7 | 9 | |
| ಬೋಜ್ಪುರಿ | 4 | 2 | 2 | |
| ಗೊಜ್ರಿ/ಗುಜ್ಜಾರಿ/ಗುಜರ್ | 5 | 3 | 2 | |
| ಹರಿಯಾಣ್ವಿ | 10 | 5 | 5 | |
| ಹಿಂದಿ | 4905 | 2560 | 2345 | |
| ಲಮಾಣಿ/ಲಂಬಾಡಿ | 30262 | 15388 | 14874 | |
| ಮಾರ‍್ವಾರಿ | 1328 | 686 | 642 | |
| ರಾಜಸ್ತಾನಿ | 418 | 222 | 196 | |
| ಸಾದನ್/ಸಾದ್ರಿ | 4 | 3 | 1 | |
| ಇತರ | 157 | 84 | 73 | |
| ಕನ್ನಡ | 908322 | 458568 | 449754 | |
| ಕನ್ನಡ | 908273 | 458544 | 449729 | |
| ಕುರುಬ/ಕುರುಂಬ | 19 | 12 | 7 | |
| ಪ್ರಾಕ್ರುತ/ಪ್ರಾಕ್ರುತ ಬಾಶಾ | 3 | 1 | 2 | |
| ಇತರ | 27 | 11 | 16 | |
| ಕಾಶ್ಮೀರಿ | 4 | 1 | 3 | |
| ಕಾಶ್ಮೀರಿ | 4 | 1 | 3 | |
| ಕೊಂಕಣಿ | 1326 | 675 | 651 | |
| ಕೊಂಕಣಿ | 1314 | 668 | 646 | |
| ಕುಡುಬಿ/ಕುಡುಂಬಿ | 8 | 5 | 3 | |
| ಇತರ | 4 | 2 | 2 | |
| ಮಯ್ತಿಲಿ | 6 | 3 | 3 | |
| ಮಯ್ತಿಲಿ | 6 | 3 | 3 | |
| ಮಲಯಾಳಂ | 69 | 35 | 34 | |
| ಮಲಯಾಳಂ | 66 | 34 | 32 | |
| ಯರವ | 3 | 1 | 2 | |
| ಮರಾಟಿ | 7813 | 3915 | 3898 | |
| ಮರಾಟಿ | 7813 | 3915 | 3898 | |
| ನೇಪಾಲಿ | 63 | 35 | 28 | |
| ನೇಪಾಲಿ | 63 | 35 | 28 | |
| ಓಡಿಯಾ | 35 | 23 | 12 | |
| ಓಡಿಯಾ | 35 | 23 | 12 | |
| ಪಂಜಾಬಿ | 38 | 17 | 21 | |
| ಪಂಜಾಬಿ | 38 | 17 | 21 | |
| ಸಂತಾಲಿ | 1 | 1 | 0 | |
| ಸಂತಾಲಿ | 1 | 1 | 0 | |
| ಸಿಂದಿ | 212 | 99 | 113 | |
| ಕಚ್ಚಿ | 183 | 86 | 97 | |
| ಸಿಂದಿ | 29 | 13 | 16 | |
| ತಮಿಳು | 2070 | 1065 | 1005 | |
| ಕೊರವ | 1185 | 616 | 569 | |
| ತಮಿಳು | 884 | 449 | 435 | |
| ಇತರ | 1 | 0 | 1 | |
| ತೆಲುಗು | 8903 | 4458 | 4445 | |
| ತೆಲುಗು | 8888 | 4451 | 4437 | |
| ಇತರ | 15 | 7 | 8 | |
| ಉರ‍್ದು | 89149 | 44511 | 44638 | |
| ಉರ‍್ದು | 89144 | 44508 | 44636 | |
| ಬನ್ಸಾರಿ | 1 | 0 | 1 | |
| ಇತರ | 4 | 3 | 1 | |
| ಆದಿ | 9 | 5 | 4 | |
| ಆದಿ | 9 | 5 | 4 | |
| ಬಿಲಿ/ಬಿಲೋಡಿ | 2 | 1 | 1 | |
| ಕೊಕ್ನ/ಕೊಕ್ನಿ/ಕುಕ್ನ | 2 | 1 | 1 | |
| ಕೂರ‍್ಗಿ/ಕೊಡಗು | 17 | 14 | 3 | |
| ಕೊಡಗು | 17 | 14 | 3 | |
| ಇಂಗ್ಲೀಶು | 45 | 26 | 19 | |
| ಇಂಗ್ಲೀಶು | 45 | 26 | 19 | |
| ಕೊಡ/ಕೊರ | 38 | 23 | 15 | |
| ಕೊಡ/ಕೊರ | 38 | 23 | 15 | |
| ಕೊಮ್ | 5 | 4 | 1 | |
| ಕೊಮ್ | 5 | 4 | 1 | |
| ಕುರುಕ್/ಓರಆನ್ | 1 | 1 | 0 | |
| ಕುರುಕ್/ಓರಆನ್ | 1 | 1 | 0 | |
| ಲಡಾಕಿ | 1 | 1 | 0 | |
| ಲಡಾಕಿ | 1 | 1 | 0 | |
| ಲಹಂದ | 43 | 22 | 21 | |
| ಇತರ | 43 | 22 | 21 | |
| ತುಳು | 189 | 93 | 96 | |
| ತುಳು | 189 | 93 | 96 | |
| ಇತರ | 401 | 191 | 210 |
ಗದಗ ಜಿಲ್ಲೆಯಲ್ಲಿ ದಾಕಲಾದ ಒಟ್ಟು ಬಾಶೆಗಳು ಇಪ್ಪತ್ತೇಳು ಮತ್ತು ಇತರ ಎಂಬ ಇನ್ನೊಂದು ಗುಂಪು. ಇತರ ಎನ್ನುವುದರಲ್ಲಿ ಕಡಿಮೆ ಎಂದರೆ 401 ಮಂದಿ ಇದ್ದು ಅದರಲ್ಲಿ ಒಂದು ಬಾಶೆ ಎಂದು ಲೆಕ್ಕಿಸಿದರೆ ಜಿಲ್ಲೆಯಲ್ಲಿ ದಾಕಲಾದ ಒಟ್ಟು ಬಾಶೆಗಳು ಇಪ್ಪತ್ತೆಂಟು ಆಗುತ್ತದೆ. ಒಟ್ಟು ಅಯ್ವತ್ತೊಂದು ತಾಯ್ಮಾತುಗಳು ದಾಕಲಾಗಿವೆ. ಇತರ ಗುಂಪಿನಲ್ಲಿಯೂ ಒಂದು ತಾಯ್ಮಾತು ಎಂದು ಲೆಕ್ಕಿಸಿ ಜಿಲ್ಲೆಯಲ್ಲಿ ಒಟ್ಟು ಅಯ್ವತ್ತೆರಡು ತಾಯ್ಮಾತುಗಳು ಬಳಕೆಯಲ್ಲಿವೆ ಎಂದು ಗಣತಿ ಹೇಳುತ್ತಿದೆ ಎನ್ನಬಹುದು. ಇವುಗಳಲ್ಲಿ ಒಟ್ಟು ಎಂಟು, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ತಮಿಳು, ತೆಲುಗು, ಉರ‍್ದು ಮತ್ತು ಲಹಂದ ಬಾಶೆಗಳ ಒಳಗೆ ಇತರ ಎಂಬ ಗುಂಪನ್ನು ಕೊಟ್ಟಿದೆ. ಇವುಗಳ ಹೊರತಾಗಿ ಹೆಸರಿಸಲಾದ ತಾಯ್ಮಾತುಗಳು ನಲ್ವತ್ತೊಂದು ಆಗುತ್ತುವೆ.
ಗದಗ ಜಿಲ್ಲೆಯಲ್ಲಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದೆ. ಕನ್ನಡ ಮಾತಾಡುವ 9,08,322 ಮಂದಿ ದಾಕಲಾಗಿದ್ದಾರೆ. ಗದಗ ಜಿಲ್ಲೆಯ ಒಟ್ಟು ಜನಸಂಕೆ 10,64,570 ಆಗಿದ್ದು, ಕನ್ನಡ ಮಾತಾಡುವವರ ಪ್ರತಿಶತತೆ 85.322% ಆಗುತ್ತದೆ. ಜಿಲ್ಲೆಯ ಒಟ್ಟು ಜನಸಂಕೆ ಹತ್ತು ಲಕ್ಶಕ್ಕಿಂತ ತುಸು ಹೆಚ್ಚಿರುವುದರಿಂದ ಸಹಜವಾಗಿ ಯಾವುದೆ ಬಾಶೆಗೆ ಹತ್ತು ಲಕ್ಶಕ್ಕಿಂತ ಹೆಚ್ಚು ಮಾತುಗರು ದಾಕಲಾಗಿಲ್ಲ. ಕನ್ನಡಕ್ಕೆ ಹತ್ತು ಲಕ್ಶಕ್ಕೆ ಹತ್ತಿರದ ಮಾತುಗರು ಇದ್ದಾರೆ. ಆನಂತರ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಯಾವುದೆ ಬಾಶೆಯೂ ಜಿಲ್ಲೆಯಲ್ಲಿ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಎರಡನೆಯ ಅತಿ ದೊಡ್ಡ ಬಾಶೆ ಉರ‍್ದು ಆಗಿದ್ದು 89,149 (8.374%) ಮಂದಿ ಇದ್ದಾರೆ. ಇದರ ನಂತರ ಹಿಂದಿಗೆ 39,418 (3.702%) ಇದ್ದು, ಇವೆರಡು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಎರಡು ಬಾಶೆಗಳಾಗಿವೆ. ಇವುಗಳ ನಂತರ 8,903 (0.836%) ಮಂದಿ ಮಾತಾಡುವ ತೆಲುಗು, 7,813 (0.733%) ಮಂದಿ ಮಾತಾಡುವ ಮರಾಟಿ, 6,329 (0.594%) ಮಂದಿ ಮಾತಾಡುವ ಗುಜರಾತಿ, 2070 (0.194%) ಮಂದಿ ಮಾತಾಡುವ ತಮಿಳು ಮತ್ತು 1,326 (0.124%) ಮಂದಿ ಮಾತಾಡುವ ಕೊಂಕಣಿ ಹೀಗೆ ಒಟ್ಟು ಅಯ್ದು ಬಾಶೆಗಳಿಗೆ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಸಿಂದಿ (212) ಮತ್ತು ತುಳು (189) ಎರಡು ಬಾಶೆಗಳಿಗೆ ಮಾತ್ರ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಇವುಗಳ ಜೊತೆಗೆ ಇತರ ಗುಂಪಿನಲ್ಲಿಯೂ 401 ಮಂದಿ ದಾಕಲಾಗಿದ್ದಾರೆ. ಹದಿನೇಳು ಬಾಶೆಗಳು ನೂರಕ್ಕಿಂತ ಕಡಿಮೆ ಮಂದಿ ಮಾತುಗರೊಂದಿಗೆ ದಾಕಲಾಗಿವೆ. ಈ ವಿವರವನ್ನು ಕೆಳಗೆ ಪಟ್ಟಿಸಿ ತೋರಿಸಿದೆ.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಒಂದು ಲಕ್ಶಕ್ಕಿಂತ ಹೆಚ್ಚ | ಕನ್ನಡ | 9,08,322 | 85.322% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಉರ‍್ದು | 89,149 | 8.374% |
| ’’ | ಹಿಂದಿ | 39,418 | 3.702% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ತೆಲುಗು | 8,903 | 0.836% |
| ’’ | ಮರಾಟಿ | 7,813 | 0.733% |
| ’’ | ಗುಜರಾತಿ | 6,329 | 0.594% |
| ’’ | ತಮಿಳು | 2,070 | 0.194% |
| ’’ | ಕೊಂಕಣಿ | 1,326 | 0.124% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು | ಇತರ, ಸಿಂದಿ, ತುಳು | 438 | 0.041% |
| ನೂರಕ್ಕಿಂತ ಕಡಿಮೆ | ಹದಿನೇಳು ಬಾಶೆಗಳು | 802 | 0.075% |
| ಒಟ್ಟು ಮಾತುಗರು | 10,64,570 | 100% |
ತಾಯ್ಮಾತುಗಳ ಸಂಕೆಯನ್ನು ಗಮನಿಸಿದಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗುತ್ತವೆ. ಮುಕ್ಯವಾಗಿ ಹಿಂದಿ, ಗುಜರಾತಿ ಮತ್ತು ತಮಿಳು ಬಾಶೆಗಳಲ್ಲಿನ ಒಳನುಡಿಗಳ ಅಂಕಿಸಂಕೆಗಳು ಗಮನ ಸೆಳೆಯುತ್ತವೆ. ಗುಜರಾತಿ ಬಾಶೆಯಲ್ಲಿ ದಾಕಲಾದ ಒಟ್ಟು ಮಾತುಗರು 6,329. ಇದರಲ್ಲಿ ಕುತೂಹಲವೆಂಬಂತೆ ಇತರ ಗುಂಪಿನಲ್ಲಿ ಬಹುತೇಕ ಅಂದರೆ 5,915 ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ಗುಜರಾತಿಯ 93.458% ಆಗುವುದು ಗಮನೀಯ. ಆದರೆ ಇತರ ಎಂಬುದರ ಬಗೆಗೆ ಯಾವುದೆ ತಿಳುವಳಿಕೆ ಇಲ್ಲದಿರುವುದರಿಂದ ಇದನ್ನು ಇಡಿಯಾಗಿ ಗುಜರಾತಿ ಎಂದು ಪರಿಗಣಿಸಿ ಮುಂದುವರೆಯಬಹುದು. ಇನ್ನು ತಮಿಳಿನಲ್ಲಿ ದಾಕಲಾದ ಮಾತುಗರು 2,070. ಇದರಲ್ಲಿ ಕೊರವ ಮಾತಿಗೆ 1,185 ಮಂದಿ ಮತ್ತು ತಮಿಳಿಗೆ 884 ಮಂದಿ ದಾಕಲಾಗಿದ್ದಾರೆ. ಹೀಗಾಗಿ ತಮಿಳು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳ ಪಟ್ಟಿಯಿಂದ ಕೆಳಗಿಳಿದರೆ ಕೊರವ ಆ ಪಟ್ಟಿಗೆ ಸೇರುತ್ತದೆ. ಇನ್ನು ಹಿಂದಿಯ ಒಳಗೆ ಪಟ್ಟಿಸಿರುವ ತಾಯ್ಮಾತುಗಳನ್ನು ಗಮನಿಸಬಹುದು. ಕೆಳಗೆ ಕರ‍್ನಾಟಕಕ್ಕೆ ಮುಕ್ಯವೆನಿಸುವ ಹಿಂದಿಯೊಳಗಿನ ಬಾಶೆಗಳ ಪಟ್ಟಿಯನ್ನು ಕೊಟ್ಟಿದೆ.
ಹಿಂದಿ 39,418
ಬಂಜಾರಿ 2,309
ಬೋಜ್ಪುರಿ 1
ಹಿಂದಿ 4,905
ಲಮಾಣಿ/ಲಂಬಾಡಿ 30,262
ಮಾರ‍್ವಾರಿ 1,328
ರಾಜಸ್ತಾನಿ 418
ಹಿಂದಿಗೆ ಒಟ್ಟು ದಾಕಲಾದ ಮಾತುಗರು 39,418. ಆದರೆ ಅದರೊಳಗೆ ಹಿಂದಿ ತಾಯ್ಮಾತಿನ ಮಾತುಗರು ಕೇವಲ 4,905 ಮಾತ್ರ. ಅಂದರೆ ಇದು ಜಿಲ್ಲೆಯ ಹಿಂದಿ ಮಾತುಗರ 12.443% ಮತ್ತು ಜಿಲ್ಲೆಯ 0.460% ಮಾತ್ರ ಆಗುತ್ತದೆ. ಲಂಬಾಣಿ ಇದರೊಳಗಿನ ಅತಿದೊಡ್ಡ ಬಾಶೆಯಾಗಿದೆ. ಲಮಾಣಿ ಹೆಸರಲ್ಲಿ 30,262 ಮತ್ತು ಬಂಜಾರಿ ಹೆಸರಲ್ಲಿ 2,309 ಮಂದಿ ದಾಕಲಾಗಿದ್ದು ಇವೆರಡನ್ನೂ ಸೇರಿಸಿದಾಗ ಲಂಬಾಣಿ ಬಾಶೆಗೆ 32,571 ಮಂದಿ ಮಾತುಗರು ಇರುವುದು ಕಾಣಿಸುತ್ತದೆ. ಇದು ಒಟ್ಟು ಹಿಂದಿಯ 82.629% ಆಗುತ್ತದೆ. ಇದು ಜಿಲ್ಲೆಯ 3.059% ಆಗುತ್ತದೆ. ಇವುಗಳೊಟ್ಟಿಗೆ ಮಾರ‍್ವಾರಿ ಬಾಶೆಗೂ 1,328 (0.124%) ಮಂದಿ ದಾಕಲಾಗಿದ್ದು ಸಾವಿರಕ್ಕೂ ಹೆಚ್ಚು ಮಾತುಗರಿರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಆನಂತರ ರಾಜಸ್ತಾನಿಗೆ ಜಿಲ್ಲೆಯಲ್ಲಿ 418 (0.039%) ಮಂದಿ ದಾಕಲಾಗಿದ್ದಾರೆ. ಈ ಮಾತುಕತೆಯನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲೆಯ ಅಂಕಿಅಂಶಗಳನ್ನು ಕೆಳಗಿನಂತೆ ಮರುಚಿತ್ರಿಸಬಹುದು. ಈಗ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ದಾಕಲಾಗಿರುವ ಬಾಶೆಗಳು ಎರಡೆ ಆಗಿದ್ದರೂ ಆ ಪಟ್ಟಿಯಲ್ಲಿ ಮೇಲೆ ಇದ್ದ ಹಿಂದಿ ಕೆಳಗಿಳಿದು ಇದರಲ್ಲಿ ಲಂಬಾಣಿ ಬಂದಿದೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಪಟ್ಟಿಯಲ್ಲಿ ಏಳು ಬಾಶೆಗಳು ಕಾಣಿಸುತ್ತವೆ. ಈ ಪಟ್ಟಿಯನ್ನು ಗಮನಿಸಿ.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಒಂದು ಲಕ್ಶಕ್ಕಿಂತ ಹೆಚ್ಚ | ಕನ್ನಡ | 9,08,273 | 85.318% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಉರ‍್ದು | 89,144 | 8.373% |
| ’’ | ಲಂಬಾಣಿ | 32,571 | 3.059% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ತೆಲುಗು | 8,888 | 0.834% |
| ’’ | ಮರಾಟಿ | 7,813 | 0.733% |
| ’’ | ಗುಜರಾತಿ | 6,329 | 0.594% |
| ’’ | ಹಿಂದಿ | 4,905 | 0.460% |
| ’’ | ಮಾರ‍್ವಾರಿ | 1,328 | 0.124% |
| ’’ | ಕೊಂಕಣಿ | 1,314 | 0.123% |
| ’’ | ಕೊರವ | 1,185 | 0.111% |
ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿ ಕೆಳಗಿನಂತಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಬಾಶೆ | ಮಾತುಗರು | ಜಿಲ್ಲೆಯ % | ಜಿಲ್ಲೆಯಲ್ಲಿ ಸ್ತಾನ |
| ಗದಗ | 10,20,791 | ಕನ್ನಡ | 9,08,273 | 85.318% | 1 |
| ಉರ‍್ದು | 89,144 | 8.373% | 2 | ||
| ಲಂಬಾಣಿ | 32,571 | 3.059% | 3 | ||
| ತೆಲುಗು | 8,888 | 0.834% | 4 | ||
| ಮರಾಟಿ | 7,813 | 0.733% | 5 | ||
| ಗುಜರಾತಿ | 6,329 | 0.594% | 6 | ||
| ಹಿಂದಿ | 4,905 | 0.460% | 7 | ||
| ಮಾರ‍್ವಾರಿ | 1,328 | 0.124% | 8 | ||
| ಕೊಂಕಣಿ | 1,314 | 0.123% | 9 | ||
| ಕೊರವ | 1,185 | 0.111% | 10 |






0 Comments