ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ
ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ದಾರವಾಡ ಜಿಲ್ಲೆಯ ಬಗ್ಗೆ ಬೆಳಕು
ಚೆಲ್ಲಲಾಗಿದೆ.
14
ದಾರವಾಡ
ದಾರವಾಡ ಜಿಲ್ಲೆಯಲ್ಲಿ ಕನಿಶ್ಟ ಮೂವತ್ತಾರು ಬಾಶೆಗಳು ಇವೆ ಮತ್ತು ಕನಿಶ್ಟ ಎಪ್ಪತ್ತು ತಾಯ್ಮಾತುಗಳು ಇವೆ. ಜಿಲ್ಲೆಯ 70%ದಶ್ಟು ಕನ್ನಡ ಮಾತಾಡುವವರು ಇದ್ದಾರೆ. ಉರ್ದು ಸುಮಾರು 18% ಮಾತುಗರನ್ನು ಹೊಂದಿದ್ದು ಪ್ರದಾನ ಬಾಶೆಯಾಗಿದೆ. ಆನಂತರ ಮರಾಟಿ, ತೆಲುಗು ದೊಡ್ಡ ಬಾಶೆಗಳಾಗಿ ಕಾಣಿಸುತ್ತವೆ. ಗುಜರಾತಿ ಮಾತುಗರ ಸಂಕೆ ಗಮನ ಸೆಳೆಯುತ್ತದೆ. ಅದರೊಂದಿಗೆ ಕೊಂಕಣಿ, ಲಂಬಾಣಿ, ತಮಿಳು ಮತ್ತು ಮಾರ್ವಾರಿ ಬಾಶೆಗಳ ಮಾತುಗರ ಸಂಕೆಯೂ ಪರಿಗಣಿಸುವಶ್ಟು ಇದೆ.
ದಾರವಾಡ ಜಿಲ್ಲೆಯಲ್ಲಿ ಇರುವ ಬಾಶೆಗಳ ಮಾಹಿತಿಯನ್ನು ಜನಗಣತಿ ಈ ಕೆಳಗಿನಂತೆ ಒದಗಿಸುತ್ತದೆ.
| ಬಾಶೆ | ತಾಯ್ಮಾತು | ಒಟ್ಟು ಮಾತುಗರು | ಗಂಡು | ಹೆಣ್ಣು |
| ಆಸ್ಸಾಮಿ | 3 | 1 | 2 | |
| ಆಸ್ಸಾಮಿ | 3 | 1 | 2 | |
| ಬೆಂಗಾಲಿ | 641 | 396 | 245 | |
| ಬೆಂಗಾಲಿ | 641 | 396 | 245 | |
| ಗುಜರಾತಿ | 26887 | 13726 | 13161 | |
| ಗುಜರಾತಿ | 3113 | 1536 | 1577 | |
| ಪಟ್ಟಣಿ | 1 | 1 | 0 | |
| ಸವರಾಶ್ಟ್ರ/ಸವರಾಶ್ಟ್ರಿ | 9 | 6 | 3 | |
| ಇತರ | 23764 | 12183 | 11581 | |
| ಹಿಂದಿ | 43892 | 22654 | 21238 | |
| ಬಂಜಾರಿ | 52 | 21 | 31 | |
| ಬೋಜ್ಪುರಿ | 110 | 62 | 48 | |
| ಗರ್ವಾಲಿ | 2 | 1 | 1 | |
| ಗೊಜ್ರಿ/ಗುಜ್ಜಾರಿ/ಗುಜರ್ | 51 | 30 | 21 | |
| ಹರಿಯಾಣ್ವಿ | 10 | 4 | 6 | |
| ಹಿಂದಿ | 22880 | 11876 | 11004 | |
| ಲಮಾಣಿ/ಲಂಬಾಡಿ | 11306 | 5723 | 5583 | |
| ಮಾರ್ವಾರಿ | 7585 | 3917 | 3668 | |
| ರಾಜಸ್ತಾನಿ | 1378 | 738 | 640 | |
| ಸಾದನ್/ಸಾದ್ರಿ | 1 | 0 | 1 | |
| ಸುಗಾಲಿ | 18 | 10 | 8 | |
| ಇತರ | 499 | 272 | 227 | |
| ಕನ್ನಡ | 1294476 | 657962 | 636514 | |
| ಕನ್ನಡ | 1294240 | 657843 | 636397 | |
| ಕುರುಬ/ಕುರುಂಬ | 10 | 6 | 4 | |
| ಪ್ರಾಕ್ರುತ/ಪ್ರಾಕ್ರುತ ಬಾಶಾ | 118 | 61 | 57 | |
| ಇತರ | 108 | 52 | 56 | |
| ಕಾಶ್ಮೀರಿ | 24 | 11 | 13 | |
| ಕಾಶ್ಮೀರಿ | 24 | 11 | 13 | |
| ಕೊಂಕಣಿ | 16858 | 8343 | 8515 | |
| ಕೊಂಕಣಿ | 16823 | 8327 | 8496 | |
| ಕುಡುಬಿ/ಕುಡುಂಬಿ | 9 | 5 | 4 | |
| ಇತರ | 26 | 11 | 15 | |
| ಮಯ್ತಿಲಿ | 33 | 21 | 12 | |
| ಮಯ್ತಿಲಿ | 33 | 21 | 12 | |
| ಮಲಯಾಳಂ | 1667 | 866 | 801 | |
| ಮಲಯಾಳಂ | 1665 | 866 | 799 | |
| ಯರವ | 2 | 0 | 2 | |
| ಮಣಿಪುರಿ | 3 | 3 | 0 | |
| ಮಣಿಪುರಿ | 3 | 3 | 0 | |
| ಮರಾಟಿ | 58291 | 29193 | 29098 | |
| ಕೋಳಿ | 1 | 1 | 0 | |
| ಮರಾಟಿ | 58169 | 29131 | 29038 | |
| ಇತರ | 121 | 61 | 60 | |
| ನೇಪಾಲಿ | 234 | 121 | 113 | |
| ನೇಪಾಲಿ | 234 | 121 | 113 | |
| ಓಡಿಯಾ | 381 | 189 | 192 | |
| ಓಡಿಯಾ | 381 | 189 | 192 | |
| ಪಂಜಾಬಿ | 5448 | 2713 | 2735 | |
| ಪಂಜಾಬಿ | 5448 | 2713 | 2735 | |
| ಸಂಸ್ಕ್ರುತ | 17 | 7 | 10 | |
| ಸಂಸ್ಕ್ರುತ | 17 | 7 | 10 | |
| ಸಂತಾಲಿ | 2 | 1 | 1 | |
| ಸಂತಾಲಿ | 2 | 1 | 1 | |
| ಸಿಂದಿ | 866 | 443 | 423 | |
| ಕಚ್ಚಿ | 493 | 237 | 256 | |
| ಸಿಂದಿ | 373 | 206 | 167 | |
| ತಮಿಳು | 9022 | 4383 | 4639 | |
| ಕೊರವ | 185 | 105 | 80 | |
| ತಮಿಳು | 8822 | 4270 | 4552 | |
| ಇತರ | 15 | 8 | 7 | |
| ತೆಲುಗು | 43644 | 21698 | 21946 | |
| ತೆಲುಗು | 43547 | 21654 | 21893 | |
| ಇತರ | 97 | 44 | 53 | |
| ಉರ್ದು | 339854 | 172066 | 167788 | |
| ಉರ್ದು | 339802 | 172040 | 167762 | |
| ಇತರ | 52 | 26 | 26 | |
| ಅಂಗಾಮಿ | 1 | 1 | 0 | |
| ಅಂಗಾಮಿ | 1 | 1 | 0 | |
| ಅರಾಬಿಕ್/ಅರ್ಬಿ | 24 | 11 | 13 | |
| ಅರಾಬಿಕ್/ಅರ್ಬಿ | 24 | 11 | 13 | |
| ಬಿಲಿ/ಬಿಲೊಡಿ | 264 | 146 | 118 | |
| ಬಿಲಿ/ಬಿಲೊಡಿ | 2 | 1 | 1 | |
| ಕೊಕ್ನ/ಕೊಕ್ನಿ/ಕುಕ್ನ | 3 | 2 | 1 | |
| ಮವ್ಚಿ | 2 | 1 | 1 | |
| ಪರದಿ | 204 | 110 | 94 | |
| ವಾಗ್ಡಿ | 50 | 30 | 20 | |
| ಇತರ | 3 | 2 | 1 | |
| ಕೂರ್ಗಿ/ಕೊಡಗು | 37 | 18 | 19 | |
| ಕೂರ್ಗಿ/ಕೊಡಗು | 12 | 6 | 6 | |
| ಕೊಡವ | 25 | 12 | 13 | |
| ಇಂಗ್ಲೀಶು | 813 | 403 | 410 | |
| ಇಂಗ್ಲೀಶು | 813 | 403 | 410 | |
| ಗೊಂಡಿ | 4 | 1 | 3 | |
| ಮರಿಯ/ಮುರಿಯ | 4 | 1 | 3 | |
| ಹಲಬಿ | 48 | 25 | 23 | |
| ಇತರ | 48 | 25 | 23 | |
| ಕಾಸಿ | 1 | 0 | 1 | |
| ಕಾಸಿ | 1 | 0 | 1 | |
| ಕಿಎಮ್ನುಂಗನ್ | 6 | 3 | 3 | |
| ಇತರ | 6 | 3 | 3 | |
| ಕೊಡ/ಕೊರ | 20 | 10 | 10 | |
| ಕೊಡ/ಕೊರ | 20 | 10 | 10 | |
| ಕುರುಕ್/ಓರಆನ್ | 35 | 17 | 18 | |
| ಕುರುಕ್/ಓರಆನ್ | 35 | 17 | 18 | |
| ಲಕೇರ್ | 2 | 2 | 0 | |
| ಮರ | 2 | 2 | 0 | |
| ನಿಸ್ಸಿ/ದಪ್ಲ | 1 | 1 | 0 | |
| ಅಪ್ತಾನಿ | 1 | 1 | 0 | |
| ಟಿಬೇಟನ್ | 6 | 4 | 2 | |
| ಟಿಬೇಟನ್ | 6 | 4 | 2 | |
| ತುಳು | 3104 | 1563 | 1541 | |
| ತುಳು | 3084 | 1553 | 1531 | |
| ಇತರ | 20 | 10 | 10 |
ದಾರವಾಡ ಜಿಲ್ಲೆಯಲ್ಲಿ ಒಟ್ಟು ಮೂವತ್ತಯ್ದು ಬಾಶೆಗಳನ್ನು ಜನಗಣತಿ ಪಟ್ಟಿಸುತ್ತದೆ. ಇತರ ಎಂಬ ಒಂದು ಗುಂಪಿನಲ್ಲಿ 414 ಮಂದಿ ಮಾತುಗರು ದಾಕಲಾಗಿದ್ದು ಇದನ್ನು ಒಂದು ಬಾಶೆ ಎಂದು ಪರಿಗಣಿಸಿದರೆ ಜನಗಣತಿ ದಾರವಾಡ ಜಿಲ್ಲೆಯಲ್ಲಿ ಮೂವತ್ತಾರು ಬಾಶೆಗಳೆಂದು ಪಟ್ಟಿಸಿದಂತಾಗುತ್ತದೆ. ಇನ್ನು ತಾಯ್ಮಾತುಗಳ ಸಂಕೆ ಅರ್ವತ್ತೊಂಬತ್ತು ಇದೆ. ಇತರ ಎಂಬ ಬಾಶೆಯ ಗುಂಪಿನಲ್ಲಿ ಒಂದೆ ತಾಯ್ಮಾತು ಎಂದು ಲೆಕ್ಕಿಸಿದರೆ ಜಿಲ್ಲೆಯ ತಾಯ್ಮಾತುಗಳ ಸಂಕೆ ಎಪ್ಪತ್ತು ಎಂದಾಗುತ್ತದೆ. ಇವುಗಳಲ್ಲಿ ಹನ್ನೆರಡು ಬಾಶೆಗಳ ಒಳಗೆ ಇತರ ಗುಂಪು ದಾಕಲಾಗಿದೆ. ಇತರ ಎಂಬ ಗುಂಪು ದಾಕಲಾದ ಬಾಶೆಗಳು ಹೀಗಿವೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮರಾಟಿ, ತಮಿಳು, ತೆಲುಗು, ಉರ್ದು, ಬಿಲಿ/ಬಿಲೊಡಿ, ಹಲಬಿ, ಕಿಎಮ್ನುಂಗನ್ ಮತ್ತು ತುಳು. ಅಂದರೆ ಒಟ್ಟು ಅರ್ವತ್ತೊಂಬತ್ತು ತಾಯ್ಮಾತುಗಳಲ್ಲಿ ಹೆಸರಿಸಲಾದ ತಾಯ್ಮಾತುಗಳು ಅಯ್ವತ್ತೇಳು ಆಗುತ್ತವೆ.
ದಾರವಾಡ ಜಿಲ್ಲೆಯ ಜನಸಂಕೆ 2011ರ ಜನಗಣತಿ ಪ್ರಕಾರ 18,47,023 ಇದೆ. ಇದರಲ್ಲಿ ಕನ್ನಡ ಮಾತಾಡುವ 12,94,476 ಮಂದಿ ಇದ್ದಾರೆ. ಅಂದರೆ ಒಟ್ಟು ಜಿಲ್ಲೆಯ 70.084% ಆಗುತ್ತದೆ. ಜಿಲ್ಲೆಯಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡ ಮಾತ್ರ ಆಗಿದೆ. ಉರ್ದು ಬಾಶೆಗೆ 3,39,854 (18.400%) ಮಂದಿ ಇದ್ದು ಒಂದು ಲಕ್ಶಕ್ಕೂ ಹೆಚ್ಚಿನ ಮಂದಿ ಇರುವ ಬಾಶೆ ಇದಾಗಿದೆ. ಆನಂತರ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳು ಅಯ್ದು ಇವೆ. ಇವುಗಳಲ್ಲಿ ಮರಾಟಿಗೆ 58,291 (3.155%), ಹಿಂದಿಗೆ 43,892 (2.376%), ತೆಲುಗಿಗೆ 43,644 (2.362%), ಗುಜರಾತಿಗೆ 26,887 (1.455%) ಮತ್ತು ಕೊಂಕಣಿಗೆ 16,858 (0.912%) ಮಂದಿ ಮಾತುಗರು ಇದ್ದಾರೆ. ಆನಂತರ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಬಾಶೆಗಳು ಒಟ್ಟು ನಾಲ್ಕು ಮಾತ್ರ ಇವೆ. ಅವುಗಳೆಂದರೆ ತಮಿಳು – 9,022 (0.488%), ಪಂಜಾಬಿ – 5,448 (0.294%), ತುಳು – 3,104 (0.168%) ಮತ್ತು ಮಲಯಾಳಂ – 1,667 (0.090%) ಬಾಶೆಗಳು. ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತಾಡುವ ಆರು ಬಾಶೆಗಳು ಇವೆ. ಇವುಗಳಲ್ಲಿ ಸಿಂದಿ, ಇಂಗ್ಲೀಶು, ಬೆಂಗಾಲಿ, ಓಡಿಯಾ, ಬಿಲಿ/ಬಿಲೊಡಿ ಮತ್ತು ನೇಪಾಲಿ ಬಾಶೆಗಳು ಇವೆ. ಇವುಗಳ ಜೊತೆಗೆ ಇತರ ಎಂಬ ಗುಂಪಿನಲ್ಲಿ 414 ಮಂದಿ ಇದ್ದು ಇದನ್ನೂ ಸೇರಿಸಿದರೆ ಒಟ್ಟು ಏಳು ಬಾಶೆಗಳು ಆಗುತ್ತವೆ. ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಒಟ್ಟು ಹದಿನೆಂಟು ಬಾಶೆಗಳು ಇವೆ. ಜನಗಣತಿ ಒದಗಿಸಿರುವ ಮಾಹಿತಿಯನ್ನು ಕೆಳಗಿನಂತೆ ಚಿತ್ರಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 12,94,476 | 70.084% |
| ಹತ್ತು ಲಕ್ಶಕ್ಕಿಂತ ಕಡಿಮೆ ಒಂದು ಲಕ್ಶಕ್ಕಿಂತ ಹೆಚ್ಚು | ಉರ್ದು | 3,39,854 | 18.400% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಮರಾಟಿ | 58,291 | 3.155% |
| ’’ | ಹಿಂದಿ | 43,892 | 2.376% |
| ’’ | ತೆಲುಗು | 43,644 | 2.362% |
| ’’ | ಗುಜರಾತಿ | 26,887 | 1.455% |
| ’’ | ಕೊಂಕಣಿ | 16,858 | 0.912 |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ತಮಿಳು | 9,022 | 0.488% |
| ’’ | ಪಂಜಾಬಿ | 5,448 | 0.294% |
| ’’ | ತುಳು | 3,104 | 0.168% |
| ’’ | ಮಲಯಾಳಂ | 1,667 | 0.090% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು | ಸಿಂದಿ, ಇಂಗ್ಲೀಶು, ಬೆಂಗಾಲಿ, ಓಡಿಯಾ, ಬಿಲಿ/ಬಿಲೊಡಿ, ನೇಪಾಲಿ | 3613 | 0.195% |
| ನೂರಕ್ಕಿಂತ ಕಡಿಮೆ | ಹತ್ತೊಂಬತ್ತು ಬಾಶೆಗಳು | 269 | 0.014% |
| ಒಟ್ಟು ಮಾತುಗರು | 18,47,023 | 100% |
ತಾಯ್ಮಾತುಗಳ ಮಾಹಿತಿಯನ್ನು ತುಸು ಗಮನಿಸಿದಾಗ ದಾರವಾಡ ಜಿಲ್ಲೆಯ ಬಾಶಿಕ ಮಾಹಿತಿಯಲ್ಲಿ ಏರುಪೇರಾಗುತ್ತದೆ. ಈಗ ತಾಯ್ಮಾತುಗಳ ಬಗೆಗೆ ತುಸು ಮಾತುಕತೆ ಮಾಡಬಹುದು.
ಗುಜರಾತಿ ಬಾಶೆಗೆ 26,887 ಮಂದಿ ದಾಕಲಾಗಿದ್ದು ಇದರಲ್ಲಿ ಇತರ ಎಂಬ ಗುಂಪಿನಲ್ಲಿ ದೊಡ್ಡ ಸಂಕೆಯ ಅಂದರೆ 23,764 ಸಂಕೆಯ ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ಗುಜರಾತಿಯ 88.384% ಆಗುತ್ತದೆ. ಗುಜರಾತಿ ಮಾತಾಡುವ ಮಂದಿ ಕೇವಲ 3,113 ಮಾತ್ರ (11.578%). ಆದರೆ ಈ ತಾಯ್ಮಾತುಗಳು ಯಾವು ಎಂಬ ತಿಳುವಳಿಕೆ ಇಲ್ಲದಿರುವುದರಿಂದ ಇದನ್ನು ಗುಜರಾತಿ ಎಂದೆ ಪರಿಗಣಿಸಿ ಮುಂದುವರೆಯಬಹುದು.
ಹಿಂದಿ ಬಾಶೆಯ ಅಂಕೆಸಂಕೆಗಳು ಸಹಜವಾಗಿ ಹೆಚ್ಚಿನ ಗಮನ ಸೆಳೆಯುತ್ತವೆ. ಈಗ ಹಿಂದಿಯೊಳಗೆ ಪಟ್ಟಿಸಿರುವ ಮತ್ತು ಕರ್ನಾಟಕದ ಸಂದರ್ಬದಲ್ಲಿ ಮಹತ್ವ ಪಡೆದುಕೊಳ್ಳುವ ಕೆಲವು ಬಾಶೆಗಳ ಪಟ್ಟಿಯನ್ನು ಗಮನಿಸಬಹುದು
ಹಿಂದಿ 43,892
ಬಂಜಾರಿ 52
ಬೋಜ್ಪುರಿ 110
ಹಿಂದಿ 22,880
ಲಮಾಣಿ/ಲಂಬಾಡಿ 11,306
ಮಾರ್ವಾರಿ 7,585
ರಾಜಸ್ತಾನಿ 1,378
ಸುಗಾಲಿ 18
ಹಿಂದಿ ಬಾಶೆಗೆ ಒಟ್ಟು 43,892 ಮಂದಿಯನ್ನು ತೋರಿಸಿದೆ. ಇದರಲ್ಲಿ ಹಿಂದಿ ಮಾತಾಡುವ ಮಂದಿ ಅರ್ದದಶ್ಟು ಇದ್ದಾರೆ. ಹಿಂದಿಯ ಮಾತುಗರು 22,880 ಇದ್ದು ಇದು ಜಿಲ್ಲೆಯ ಹಿಂದಿಯ 52.127% ಮತ್ತು ಜಿಲ್ಲೆಯ 1.238% ಆಗುತ್ತದೆ. ಇದರಲ್ಲಿ ಪರಿಗಣಿಸುವಶ್ಟು ಮಂದಿ ಲಂಬಾಣಿ ಮಾತಾಡುವವರು ಇದ್ದಾರೆ. ಲಮಾಣಿ ಹೆಸರಿನಲ್ಲಿ 11,306, ಬಂಜಾರಿ ಹೆಸರಿನಲ್ಲಿ 52 ಮತ್ತು ಸುಗಾಲಿ ಹೆಸರಿನಲ್ಲಿ 18 ಮಂದಿ ದಾಕಲಾಗಿದ್ದಾರೆ. ಇದರ ಒಟ್ಟು ಮೊತ್ತ 11,376 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 25.918% ಮತ್ತು ಜಿಲ್ಲೆಯ 0.615% ಆಗುತ್ತದೆ. ಹಾಗೆಯೆ ಮಾರ್ವಾರಿ ಮಾತಾಡುವ 7,585 (0.410%) ಮಂದಿ ಮತ್ತು ರಾಜಸ್ತಾನಿ ಮಾತಾಡುವ 1,378 (0.074%) ಮಂದಿ ದಾಕಲಾಗಿದ್ದಾರೆ. ಈಗ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳ ಪಟ್ಟಿಗೆ ಲಂಬಾಣಿ ಬರುತ್ತದೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಾತುಗರ ಬಾಶೆಗಳ ಪಟ್ಟಿಗೆ ಮಾರ್ವಾರಿ ಮತ್ತು ರಾಜಸ್ತಾನಿ ಸೇರುತ್ತವೆ. ಹಿಂದಿಯ ಈ ಚರ್ಚೆಯನ್ನು ಗಮನದಲ್ಲಿ ಇಟ್ಟುಕೊಂಡು ದಾರವಾಡ ಜಿಲ್ಲೆಯ ಬಾಶೆಗಳನ್ನು ಹೀಗೆ ಬಿಡಸಿ ತೋರಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 12,94,240 | 70.071% |
| ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು | ಉರ್ದು | 3,39,802 | 18.397% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಮರಾಟಿ | 58,169 | 3.149% |
| ’’ | ತೆಲುಗು | 43,547 | 2.357% |
| ’’ | ಗುಜರಾತಿ | 26,887 | 1.286% |
| ’’ | ಹಿಂದಿ | 22,880 | 1.238% |
| ’’ | ಕೊಂಕಣಿ | 16,823 | 0.910% |
| ’’ | ಲಂಬಾಣಿ | 11,376 | 0.615% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ತಮಿಳು | 8,822 | 0.477% |
| ’’ | ಮಾರ್ವಾರಿ | 7,585 | 0.410% |
| ’’ | ರಾಜಸ್ತಾನಿ | 1,378 | 0.074% |
| ಪ್ರದೇಶ | ಜಿಲ್ಲೆಯ ಜನಸಂಕೆ | ಬಾಶೆ | ಮಾತುಗರು | ಜಿಲ್ಲೆಯ % | ಜಿಲ್ಲೆಯಲ್ಲಿ ಸ್ತಾನ |
| ದಾರವಾಡ | 18,47,023 | ಕನ್ನಡ | 12,94,240 | 70.071% | 1 |
| ಉರ್ದು | 3,39,802 | 18.397% | 2 | ||
| ಮರಾಟಿ | 58,169 | 3.149% | 3 | ||
| ತೆಲುಗು | 43,547 | 2.357% | 4 | ||
| ಗುಜರಾತಿ | 26,887 | 1.286% | 5 | ||
| ಹಿಂದಿ | 22,880 | 1.238% | 6 | ||
| ಕೊಂಕಣಿ | 16,823 | 0.910% | 7 | ||
| ಲಂಬಾಣಿ | 11,376 | 0.615% | 8 | ||
| ತಮಿಳು | 8,822 | 0.477% | 9 | ||
| ಮಾರ್ವಾರಿ | 7,585 | 0.410% | 10 |






0 Comments