ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
54
ಕುಳು
ಕರ್ನಾಟಕದಲ್ಲಿ ತಮಿಳು ಮಾತಾಡುವ 21,10,128 ಮಂದಿ ದಾಕಲಾಗಿದ್ದಾರೆ. ತಮಿಳಿನಲ್ಲಿ ಕಯ್ಕಾಡಿ (523), ಕೊರವ (8,385) ಮತ್ತು ತಮಿಳು (21,01,032) ಎಂಬ ಮೂರು ತಾಯ್ಮಾತುಗಳು ಮತ್ತು ಇತರ (188) ಎಂಬ ಒಂದು ಗುಂಪು ದಾಕಲಾಗಿದೆ. ಕುಳು ಬಾಶೆಯನ್ನು ಕೊರವ ಎಂಬ ಹೆಸರಿನಲ್ಲಿ ತಮಿಳಿನ ಒಳಗೆ ದಾಕಲಿಸಿದೆ. ಒಟ್ಟು ಬಾರತದಾಗ ಕುಳು ಮಾತುಗರ ಸಂಕೆ 10,421. ಇದು ದೇಶದ ಒಟ್ಟು ತಮಿಳಿನ 0.015% ಆಗುತ್ತದೆ. ಬಾರತದಾಗ ದಾಕಲಾದ ಕುಳು ಮಾತುಗರ ಸಂಕೆ 10,421. ಇದರಲ್ಲಿ ಕರ್ನಾಟಕದಲ್ಲಿ ದಾಕಲಾದ ಕುಳುವರ ಸಂಕೆ 8,385 ಆಗಿದೆ. ಇದು ಒಟ್ಟು ಕೊರವದ 80.462% ಆಗುತ್ತದೆ. ಇದು ಒಟ್ಟು ಕರ್ನಾಟಕದ 0.013% ಆಗುತ್ತದೆ. ಕುಳು ಜನಗಣತಿಯ ಪ್ರಕಾರ ರಾಜ್ಯದ ಇಪ್ಪತ್ತೆಂಟನೆಯ ದೊಡ್ಡ ಬಾಶೆ.
ಕುಳು (ಕೊರವ) ಎಂಬುದು ಕರ್ನಾಟಕದ ಪ್ರದಾನ ಸಮುದಾಯಗಳಲ್ಲಿ ಒಂದು. ಇವರು ಕೊರವರು ಎಂದು ಹೆಸರಾಗಿದ್ದಾರೆ. ಇವರಾಡುವ ಬಾಶೆಯನ್ನು ಅವರು ಕುಳು ಎಂದು ಕರೆಯುತ್ತಾರೆ. ಆದರೆ, ಕೊರವ ಎಂಬ ಹೆಸರೂ ಚಾಲ್ತಿಯಲ್ಲಿದೆ. ಕುಳು ಕರ್ನಾಟಕದ ಒಂದು ಪ್ರದಾನ ಬಾಶೆ. ಕುಳು ಮಾತಾಡುವ ಲಕ್ಶಾಂತರ ಮಂದಿ ಕರ್ನಾಟಕದಲ್ಲಿ ಸಿಗುತ್ತಾರೆ.
ಕುಳು ಮಾತಾಡುವವರ ಹಂಚಿಕೆಯನ್ನು ಕೆಳಗೆ ತೋರಿಸಿದೆ. ಕುಳು ಹೆಚ್ಚಾಗಿ ಉತ್ತರ ಕರ್ನಾಟಕ ಬಾಗದಲ್ಲಿ ದಾಕಲಾಗಿದೆ. ಬೆಳಗಾವಿ (1,745), ರಾಯಚೂರು (1,663), ಬೀದರ (1,413) ಮತ್ತು ಗದಗ (1,185) ಈ ನಾಲ್ಕು ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಕುಳುವರು ದಾಕಲಾಗಿದ್ದಾರೆ. ಏಳು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದರೆ, ಹನ್ನೊಂದು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಉಳಿದ ಎಂಟು ಜಿಲ್ಲೆಗಳಲ್ಲಿ ಕುಳು ದಾಕಲೆ ಆಗಿಲ್ಲ.
ಕೆಳಗೆ ಕೊರವ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
| ಕರ್ನಾಟಕ | 6,10,95,297 | 8,385 | 0.013% | 100% |
| ಬೆಳಗಾವಿ | 47,79,661 | 1,745 | 0.036% | 20.810% |
| ರಾಯಚೂರು | 18,89,752 | 1,663 | 0.088% | 19.833% |
| ಬೀದರ | 21,77,331 | 1,413 | 0.064% | 16.851% |
| ಗದಗ | 17,03,300 | 1,185 | 0.069% | 14.132% |
| ಬಳ್ಳಾರಿ | 19,28,812 | 544 | 0.028% | 6.487% |
| ಬಾಗಲಕೋಟೆ | 13,89,921 | 499 | 0.035% | 5.951% |
| ಕಲಬುರಗಿ | 10,20,791 | 458 | 0.044% | 5.462% |
| ಯಾದಗಿರಿ | 18,47,023 | 314 | 0.017% | 3.744% |
| ಕೋಲಾರ | 14,37,169 | 248 | 0.017% | 2.957% |
| ದಾರವಾಡ | 15,97,668 | 185 | 0.011% | 2.206% |
| ಕೊಪ್ಪಳ | 24,52,595 | 130 | 0.005 % | 1.550% |
| ವಿಜಯಪುರ | 16,59,456 | 93 | — | 1.109% |
| ಉಡುಪಿ | 19,45,497 | 37 | — | 0.441% |
| ಬೆಂಗಳೂರು ನಗರ | 17,52,753 | 37 | — | 0.441% |
| ಉತ್ತರ ಕನ್ನಡ | 11,77,361 | 32 | — | 3.959% |
| ಹಾವೇರಿ | 11,37,961 | 23 | — | 0.274% |
| ಶಿವಮೊಗ್ಗ | 26,78,980 | 7 | — | 0.083% |
| ಬೆಂಗಳೂರು ಗ್ರಾಮಂತರ | 96,21,551 | 6 | — | 0.071% |
| ಕೊಡಗು | 18,05,769 | 6 | — | 0.071% |
| ದಕ್ಶಿಣ ಕನ್ನಡ | 17,76,421 | 5 | — | 0.059% |
| ಮಯ್ಸೂರು | 20,89,649 | 3 | — | 0.035% |
ಕೊರವ ಮಾತುಗರ ಹಂಚಿಕೆ






0 Comments