ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರಲಿದೆಯೆ ಆಮಿರ್‌ಖಾನ್ ಮಹಾಭಾರತ?

ಫೇಸ್ ಬುಕ್ ಪಿಕ್ 

ಬಿ ಎಂ ಬಶೀರ್

ಬಾಲಿವುಡ್‌ನಲ್ಲಿ ಎಲ್ಲರೂ ಒಂದು ದಾರಿ ಹಿಡಿದರೆ ಆಮೀರ್ ತನ್ನದೇ ವಿಭಿನ್ನ ದಾರಿಯೊಂದನ್ನು ಆಯ್ದುಕೊಂಡವರು. ಇದೀಗ ಅವರು ತನ್ನ ಬೃಹತ್ ಕನಸೊಂದನ್ನು ಮಾಧ್ಯಮಗಳಿಗೆ ತೆರೆದಿಟ್ಟಿದ್ದಾರೆ. “ಮಹಾಭಾರತವನ್ನು ಬೆಳ್ಳಿ ತೆರೆಯ ಮೇಲೆ ತರುವುದು ಬಹುದಿನಗಳ ಕನಸು. ಆದರೆ ಈ ಕನಸು ನನಸಾಗುವುದು ಸುಲಭದ ಮಾತಲ್ಲ…ಇದನ್ನು ತೆರೆಗಿಳಿಸುವ ಸಾಮಥ್ಯ ತನಗಿದೆಯೋ ಎನ್ನುವುದರ ಬಗ್ಗೆಯೂ ಅನುಮಾನವಿದೆ…ಒಂದು ರೀತಿಯಲ್ಲಿ ಹೆದರಿಕೆ ಹುಟ್ಟಿಸುವ ಕನಸು ಇದು…” ಎಂದು ಮಹಾ-ಕಾವ್ಯದ ಮುಂದೆ ವಿನಯದ ಮಾತನಾಡಿದ್ದಾರೆ.

ಅಂದ ಹಾಗೆ ಮಹಾಭಾರತದಲ್ಲಿ ಅವರಿಗೆ ಪ್ರೀತಿಯ ಪಾತ್ರ ಕರ್ಣನದಂತೆ. ಆದರೆ ನನ್ನ ವ್ಯಕ್ತಿತ್ವಕ್ಕೆ ಅದು ಒಪ್ಪುವುದಿಲ್ಲ. ಆದುದರಿಂದ ಮಹಾಭಾರತ ಮಾಡಿದ್ದೇ ಆದಲ್ಲಿ ನಾನು ಕೃಷ್ಣನ ಪಾತ್ರವನ್ನು ನಿರ್ವಹಿಸುತ್ತೇನೆ ಎಂದೂ ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ. ನಿಜಕ್ಕೂ ಇಂತಹದೊಂದು ವಿಭಿನ್ನ ಕನಸನ್ನು ಹೊಂದಿದ ಆಮಿರ್‌ಖಾನ್ ಅಭಿನಂದನಾರ್ಹರು.

‘ಟ್ರಾಯ್’ನಂತಹ ಹಾಲಿವುಡ್ ಸಿನಿಮಾಗಳನ್ನು ನೋಡಿದಾಗ, ಅರೆ…ಹೀಗೆಯೇ ಹಾಲಿವುಡ್ ಮಾದರಿಯಲ್ಲಿ ಮಹಾಭಾರತವನ್ನು ತೆರೆಗಿಳಿಸಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನನಗನ್ನಿಸಿತ್ತು. ಒಂದು ಸಿನಿಮಾಕ್ಕೆ ಬೇಕಾಗಿರುವ ಸರ್ವರಸಗಳ ಪಾಕ ಮಹಾಭಾರತ. ಅದಕ್ಕೆ ಬೇಕಾದದ್ದು ದೈತ್ಯ ನಟರು. ಟ್ರಾಯ್, ಅಲೆಕ್ಸಾಂಡರ್‌ನಂತಹ ಚಿತ್ರಗಳಿಗೆ ಬಳಸಿದ ಹಾಲಿವುಡ್‌ನ ತಂತ್ರಜ್ಞಾನ. ಟಿವಿಯಲ್ಲಿ ಬಂದ ಮಹಾಭಾರತ, ಕಾವ್ಯದ ರಸವನ್ನು ಹೀರಿ ತೆಗೆದು, ಬರೇಗೊಂಬೆಗಳಂತೆ ಸಂಭಾಷಣೆ ಉದುರಿಸುವುದರಲ್ಲಿ ಮುಗಿದು ಹೋಯಿತು. ಒಂದು ರೀತಿಯಲ್ಲಿ ನಮ್ಮ ಮಹಾಭಾರತದ ರಮ್ಯ ಕಲ್ಪನೆಯನ್ನೇ ಬಾಲಿವುಡ್‌ನಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ಮತ್ತೊಮ್ಮೆ ಮಹಾಭಾರತ ಚಿತ್ರವಾಗಿ ಬರುವ ಅಗತ್ಯವಿದೆ. ಭೀಮನ ರೋಷ, ಕರ್ಣನ ತ್ಯಾಗ, ಧುರ್ಯೋಧನನ ಹಟ, ಅರ್ಜುನನ ಶೌರ್ಯ, ಕೃಷ್ಣನ ತಂತ್ರ…ದ್ರೌಪದಿಯ ಆಕ್ರೋಶ….ಆಹಾ… ಆಮಿರ್‌ಖಾನ್ ಕನಸು ಆದಷ್ಟು ಬೇಗ ಈಡೇರಲಿ.

‍ಲೇಖಕರು G

12 December, 2012

2 Comments

  1. D.Ravivarma

    AMIRKHAN… AVARA HOSA CHINTANE…AVARA BADUKINA PRIITI… SAAMAAJIKA KALAKALI GONDU PRIITIPURVAKA VANDANEGALU….

  2. Pramod

    ನಮ್ಮ ಮಹಾಭಾರತ “ಲಾರ್ಡ್ ಆಫ್ ದಿ ರಿ೦ಗ್ಸ್” ಗಿ೦ತ ಏನೂ ಕಮ್ಮಿ ಇಲ್ಲ. ಆದ್ರೆ ಅ೦ತಹ ಬುದ್ಧಿವ೦ತ ನಿರ್ದೇಶಕ ಕೊರತೆ ಧಾರಳವಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading