ನಾಗರಾಜ್ ಹೆತ್ತೂರ್
“ಸಾಹಿತಿಗಳು, ಅಥವಾ ಕಾರಂಬರಿಕಾರರು ಯಾವುದೇ ಒಂದು ಕಾದಂಬರಿ ಬರೆದಾಗ ಅಂತಿಮವಾಗಿ ಒಂದು ಮೆಸೇಜನ್ನು ಸಮಾಜಕ್ಕೆ ನೀಡಬೇಕು” ಹೀಗೆಂದವರು ಹಾಸನದ ಹಿರಿಯ ಸಾಹಿತಿ ಚಂದ್ರಕಾಂತ ಪಡೆಸೂರು. ಇದರ ಬಗ್ಗೆ ಚರ್ಚೆ ನಡೆಯಲಿ. ಇಂದು ನಮ್ಮ ಹಾಡ್ಲಹಳ್ಳಿ ಪಬ್ಲಿಕೇಷನ್ನಿನಲ್ಲಿ ಯುವ ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ ಅವರ ಅಂತ್ರ ಕಾದಂಬರಿ ಕುರಿತಂತೆ ಚರ್ಚೆ ಹಮ್ಮಿಕೊಂಡಿದ್ದೆವು. ಅಂತ್ರ ಒಂದು ನೈಜ ಘಟನೆ ಆಧಾರಿತ ಕೃತಿ. ದಲಿತ ಹೆಣ್ಣುಮಗಳು ಗೌಡನನ್ನು ಪ್ರೀತಿಸಿ ಕೊನೆಗೆ ಆತನಿಂದ ಮೋಸಹೋಗುತ್ತಾಳೆ. ಈ ಸಂದರ್ಭದಲ್ಲಿ ಅವಳು ಎದುರಿಸುವ ಸವಾಲುಗಳು… ಹೀಗೆ ಒಂದು ಸೂಕ್ಷ್ಮ ವಿಷಯವನ್ನು ಕಾದಂಬರಿ ಯಾಗಿ ಮನಮುಟ್ಟುವಂತೆ ಬರೆದಿದ್ದಾರೆ. ಅವಳು ಯಾವ ರೀತಿಯ ಕ್ರಾಂತಿ ಮಾಡುತ್ತಾಳೆ ಎಂದರೆ ತನ್ನ ಮಗನಿಗೆ ಗೌಡ ಎಂದು ಹೆಸರಿಟ್ಟು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾಳೆ.
ಒಮ್ಮೆ ಓದಿ. ಇಂತಹ ಪುಸ್ತಕದ ಬಗ್ಗೆ ಚಲಂ ಇಂದು ಒಳ್ಳೆ ಚರ್ಚೆ ನಡೆಯುವಂತೆ ಕಾರ್ಯಕ್ರಮ ರೂಪಿಸಿದರು. ಚನ್ನೇಗೌಡರು, ದೇವನೂರು ಮಂಜುನಾಥ್, ಶ್ರೀನಿವಾಸ್ ಡಿ.ಶೆಟ್ಟಿ , ಯದುನಂದನ್ ಸೇರಿದಂತೆ ಸಾಕಷ್ಟು ಹೊಸಬರು ಇದ್ದು ತಮ್ಮ ಅಭಿಪ್ರಾಯ ತಿಳಿಸಿದರು. ಸಂಜೆಯಿಂದ ಬೀಳುತ್ತಿದ್ದ ಮಳೆಯ ನಡುವೆ ಒಂದೊಳ್ಳೆ ಚರ್ಚೆ ನಡೆಯಿತು.
ನಾಳೆ (ಶುಕ್ರವಾರ) ಚಲಂ ಪುನರಪಿ ಪುಸ್ತಕದ ಬಗ್ಗೆ ನಾಡಿನ ಖ್ಯಾತ ಕವಯಿತ್ರಿ ರೂಪ ಹಾಸನ ಮಾತನಾಡುತ್ತಾರೆ, ಸಮಯ ಇದ್ದವರು ಹಾಸನದ ಆರ್. ರಸ್ತೆಯ ಕಡೆ ಬಂದರೆ ಬಂದು ಹೋಗಿ. ಟೀ, ಬಿಸ್ಕೆಟ್ ಜತೆ ವಿಚಾರಗಳು ಸಿಕ್ಕುತ್ತವೆ.
ಅಂದ ಹಾಗೆ ಸಾಹಿತಿಗಳು ಅಂತಿಮವಾಗಿ ಅವರ ಕಾದಂಬರಿಗಳಲ್ಲಿ ಮೆಸೆಜ್ ಕೊಡಬೇಕೋ ಬೇಡವೋ… ಈ ಬಗ್ಗೆ ಚರ್ಚೆಯಾಗಲಿ..







ಹೌದು ಯಾವುದೋ ಒಂದು ಕಥೆ ಕಾದಂಬರಿ ಬರಹದ ಯಾವುದೇ ರೂಪವಾದರೂ ಅಂತಿಮವಾಗಿ ಓದುಗನಿಗೆ ಒಂದು ಸಂದೇಶ, ನೀತಿ ಕೊಡಲೇಬೇಕು ಅದು ಹೇಗಿರಬೇಕೆಂದರೆ ಓದುಗ ಓದಿ ಮುಗಿದ ಕೂಡಲೇ ಆ ಸಂದೇಶವನ್ನ ಗ್ರಹಿಸುವಂತಿರಬೇಕು ಮತ್ತು ಆತನ ಒಟ್ಟು ಅಭಿಪ್ರಾಯದ ಸಾರಾಂಶವೇ ಈ ಸಂದೇಶವಾಗಿರಬೇಕು. ಚರ್ಚೆ ಆರೋಗ್ಯಕರವಾಗಿದೆ … ಮುಂದುವರೆಯಲಿ…
ಯಾವುದೇ ಕಾದಂಬರಿಯು ಓದುಗನಿಗೆ ಅದರ ಒಳ ಸಂದೇಶವನ್ನು ಸಂವಹಿಸಲು ಅಸಮರ್ಥವಾದಾಗ ಅದನ್ನು ‘ಫ್ಲಾಪ್’ ಎನ್ನಬಹುದು… ಅಲ್ಲದೇ ಕಾದಂಬರಿಕಾರನ ಜವಾಬ್ದಾರಿ ಮತ್ತು ಹೊಣೆಗಾರಿಕೆಯು ಉತ್ತಮ ಸಂದೇಶವನ್ನು ಸಮಾಜಕ್ಕೆ ರವಾನಿಸುವುದು ಆಗಿರುತ್ತದೆ. ಅದು ನಡೆಯದೇ ಹೋದಾಗ ‘ಸಾರ’ ಇಲ್ಲದ ‘ಸಾರಿ’ನಂತಾಗುತ್ತದೆ.