ಅನುರಾಧ ಬಿ ರಾವ್
ದೊಡ್ಡೇರಿ ಕೆರೆಯಲ್ಲಿ ಊರಿನ ಕೆಲಸಗಾರರು ಸಣ್ಣ ಸಣ್ಣ ಮೀನು ಬಿಟ್ಟು ಅದನ್ನು ಬೆಳೆಸುತ್ತಾರೆ . ಬಲಿತ ಮೀನನ್ನು ಹಿಡಿಯಲು ಅವರ ಬಳಿ ಸಲಕರಣೆಗಳಿಲ್ಲ . ಸೊರಬದಿಂದ ಬಲೆ ಮತ್ತು ಮೀನು ಹಿಡಿಯುವವರನ್ನು ಕರೆತರುತ್ತಾರೆ . ಸಿಕ್ಕ ಮೀನಗಳನ್ನು ಸಮಭಾಗ ಮಾಡಿಕೊಳ್ಳುತ್ತಾರೆ . ಒಂದು ಕೆಜಿಗೆ 170 ರುಪಾಯಿ ದೊರೆಯುತ್ತದೆ . ಒಂದು ದೊಡ್ಡ ಮೀನು ಐದು ಕೆಜಿ ತೂಗುತ್ತದೆ . ಬಲೆಗೆ ಸಣ್ಣ ಸಣ್ಣ ಸಿಗಡಿ ಮೀನುಗಳೂ ಬೀಳುತ್ತವೆ . ಅವುಗಳನ್ನು ದಡಕ್ಕೆ ಹಾಕಿದಾಗ ಹೆಂಗಸರು ಆಯುತ್ತಾರೆ . ದೊಡ್ಡ ದೊಡ್ಡ ಮೀನು ಸಿಕ್ಕ ಖುಷಿಯಲ್ಲಿದ್ದ ವರು ಬಂದ ಹಣವನ್ನು ದಡದ ಮೇಲಿರುವ ಭೂತಪ್ಪನ ಗುಡಿಯ ರಿಪೇರಿ ಕೆಲಸಕ್ಕೆ ಬಳಸುತ್ತಾರಂತೆ . ಭೂತಪ್ಪ ಏನು ಕೇಳಿದರೂ ಕೊಡ್ತಾನೆ ಅನ್ನೋ ನಂಬಿಕೆ ಅವರದ್ದು . ಪಾಪ .. ಭೂತಪ್ಪ ಮೀನುಗಳನ್ನು ಕಾಯಲಿಲ್ಲ !!











0 Comments