ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ’ನಮಗೆ ಇಂಗ್ಲಿಶ್ ಬರೋಲ್ಲ ಸಾ…’

ಪ್ರಿಯಾಂಕ್ ಭಾರ್ಗವ್

ಇವತ್ತು ಬೆಳಿಗ್ಗೆ ಗಾಡಿಗೆ ಪೆಟ್ರೋಲ್ ತುಂಬಿಸುವಾಗ ಕೇಳಿಬಂದ ಚಿಕ್ಕ ಘಟನೆಯೊಂದು, ಇಲ್ಲಿ ಕಟ್ಟಲಾಗಿರುವ ಸಾಮಾಜಿಕ ಏರ್ಪಾಡಿನಲ್ಲಿ ಬಡವರಿಗೆ ಏನೆಲ್ಲಾ ತೊಂದರೆ ಎಂದೆನಿಸಿತು.
ಬೆಳಿಗ್ಗೆ ಬೆಳಿಗ್ಗೆಯೇ ಯಾರೋ 1900 ರುಪಾಯಿಯಷ್ಟು ಪೆಟ್ರೋಲ್ ತುಂಬಿಸಿ, ’ಮೋಸದ ಕಾರ್ಡ್’ ಕೊಟ್ಟಿದಾರೆ. ಅದನ್ನು ಪೆಟ್ರೋಲ್ ಹಾಕುವವ ಉಜ್ಜಿದಾಗ, “Declined” ಎಂದು ಬರೆಯಲಾಗಿದ್ದ ಪೇಪರ್ ತುಣುಕೊಂದು ಕಾರ್ಡ್ ಮೆಶೀನಿನಿಂದ ಹೊರಬಂದಿದೆ. ಇಂಗ್ಲಿಶ್ ತಿಳಿಯದ ಪೆಟ್ರೋಲ್ ಅಂಗಡಿ ಕೆಲಸದವನು, ಆ ಪೇಪರ್ ತುಣುಕಿನಲ್ಲೇ ಸಹಿ ಮಾಡಿಸಿಕೊಂಡು ’ಮೋಸದ ಕಾರ್ಡ್’ ಕೊಟ್ಟವರನ್ನು ಕಳುಹಿಸಿಕೊಟ್ಟಿದಾನೆ.

ನಾನು ಪೆಟ್ರೋಲ್ ತುಂಬಿಸಿಕೊಳ್ಳುವಾಗ, ಅಂಗಡಿಯ ಮ್ಯಾನೇಜರು ಈತನಿಗೆ ಬೈಯ್ಯುತ್ತಿದ್ದುದು ಕಂಡೆ. ಆಮೇಲೆ ವಿಚಾರಿಸಿದಾಗ, ಪೂರ್ತಿ ಕಥೆ ತಿಳಿದುಬಂತು. “ನಮಗೆ ಇಂಗ್ಲೀಶ್ ಬರಲ್ಲ ಸಾ. ಈಗ ನಾನು 1900 ರುಪಾಯ್ ಕಟ್ಬೇಕಂತೆ” ಎನ್ನುವಾಗ ಆತನ ಕಣ್ಣಲ್ಲಿ ನೀರಿತ್ತು.
ಬ್ಯಾಂಕಿನ (ಹಣಕಾಸಿನ) ವಹಿವಾಟುಗಳಲ್ಲಿ ಕನ್ನಡದ ಬಳಕೆಯನ್ನು ಬದಿಗೊತ್ತಿರುವುದರಿಂದ, ಅದಿನ್ನೆಷ್ಟು ಕಣ್ಣೀರಿನ ಕಥೆಗಳು ಕರ್ನಾಟಕದಲ್ಲಿ ಆಗಿ ಹೋಗಿರುವವೋ

‍ಲೇಖಕರು avadhi

8 April, 2013

3 Comments

  1. sugunamahesh

    ಇಂತಹ ಘಟನೆಗಳು ಮತ್ತೆ ಮತ್ತೆ ನೆಡೆಯದಿರಲಿ, ಬಡವನ ಹೊಟ್ಟೆಯ ಮೇಲೆ ಹೊಡೆಯದಿರಲಿ

  2. ರಮೇಶ್ ಹಿರೇಜಂಬೂರು

    ಇಂಗ್ಲಿಷ್ ಮೇಲಿನ ವ್ಯಾಮೋಹ ಕಡಿಮೆಯಾಗದೆ ಹಾಗೂ ಕನ್ನಡವೂ ಹೊಟ್ಟೆಪಾಡಿನ ಭಾಷೆಯಾಗದ ಹೊರತು ಇಂಥ ಸಾವಿರ ಸಾವಿರ ಕಥೆ ನಮ್ಮ ಕಣ್ಣಮುಂದೆಯೇ ನಡೆಯುತ್ತಲೇ ಇರುತ್ತವೆ. ಆದರೆ ಅದನ್ನು ಸಹಿಸುವ ವಿಚಿತ್ರ ವ್ಯವದಾನ ಮಾತ್ರ ನಮ್ಮದಾಗಿದೆ. ಏಕೆಂದರೆ ನಾವು “ಕನ್ನಡಿಗರು” ಅಲ್ಲವೆ !? ತಾಳ್ಮೆ, ಸಹನೆ ನಮ್ಮ ಜನ್ಮಸಿದ್ಧ ಹಕ್ಕು….
    -ರಮೇಶ್ ಹಿರೇಜಂಬೂರು

  3. sathyavathi

    ಕನ್ನಡವನ್ನು ವ್ಯವಹಾರಿಕ ಭಾಷೆಯಾಗಿ ಮಾಡಿ ದರೆ ಇಂಥಹ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇನೋ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading