ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ’ಕವಿಗಳು ಕಾರಿನಲ್ಲಿ ತಿರುಗತೊಡಗಿದ ಮೇಲೆ’

– ಅಶೋಕ್ ಶೆಟ್ಟರ್

ಕುಳಿತು ಹಟಕ್ಕೆ ಬಿದ್ದಂತೆ ಎಂದೂ ಕೆತ್ತಲಿಲ್ಲ

ಹಂಗಂತ ನೀ ನನ್ನ ಕೈ ಬಿಟ್ಟಿರಲಿಲ್ಲ.

ಬುಗ್ಗೆ ಒಸರಿದಂತೆ ಎಲ್ಲೋ ಒಂದು ಜಿನುಗು, ಒಂದು ಕವಿತೆ

ಸಭೆಯೊಂದರಲ್ಲಿ ಆಮೂರ್ ಹೇಳಿದ್ದರು

ಕವಿಗಳು ಕಾರಿನಲ್ಲಿ ತಿರುಗತೊಡಗಿದ ಮೇಲೆ ಕವಿತೆ ಎಲ್ಲಿಂದ ಹುಟ್ಟೀತು?

ಇದು ನಿಜವಿರಬಹುದೆ? ಎಂದು ನಾನು ಭಯಗೊಳ್ಳುವ ಮೊದಲು

ಇದ ಸುಳ್ಳಾಗಿಸಬಾರೇ ನನ್ನ ಮಾಯಾವಿನಿ..!

‍ಲೇಖಕರು G

29 October, 2012

2 Comments

  1. prathibha nandakumar

    ಸಾರಿ ಕಾರಿಗೂ ಕವಿತೆಗೂ ಸಂಬಂಧ ಇಲ್ಲ. ಅದಕ್ಕೇ ಆಮೂರರು ಕವಿ ಅಲ್ಲ.

    • ಅಶೋಕ ಶೆಟ್ಟರ್

      ಹ ಹಾ,ಕಳೆದೊಂದು ದಶಕದಲ್ಲಿ ಆಮೂರರೂ ಹತ್ತಾರು ಕವಿತೆಗಳನ್ನು ಬರೆದಿದ್ದಾರೆ ಪ್ರತಿಭಾ ಅವ್ರೆ. ನೀವು ಕಾರಿಗೂ ಕವಿತೆಗೂ ಸಂಬಂಧ ಇಲ್ಲ ಅಂದ್ರಲ್ಲ, ಅದನ್ನು ಓದಿ ನನಗೂ ಸ್ವಲ್ಪ ಸಮಾಧಾನವಾಯಿತು..:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading