ಎಸ್.ಸಿ. ದಿನೇಶ್ ಕುಮಾರ್
ಒಂದು ಸೃಜನಶೀಲ ಕಥೆಯನ್ನು, ಕಾದಂಬರಿಯನ್ನು, ನಾಟಕವನ್ನು ಹೇಗೆ ಓದಿಕೊಳ್ಳುವುದು ಎಂಬುದೂ ಗೊತ್ತಿಲ್ಲದಷ್ಟು ಬೌದ್ಧಿಕ ದಾರಿದ್ರ್ಯ ಮತ್ತು ಅಸಹಿಷ್ಣುತೆ ಈ ಪ್ರಮಾಣದಲ್ಲಿ ಬೆಳೆಯಬೇಕಿತ್ತೆ? ಈ ತಿಂಗಳ `ಕರವೇ ನಲ್ನುಡಿ’ಯಲ್ಲಿ ಪ್ರಕಟಗೊಂಡ `ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ’ ಎಂಬ ಮಹಂತೇಶ್ ನವಲಕಲ್ ಅವರ ಕಥೆಯನ್ನು ಗುರಿಯಾಗಿಟ್ಟುಕೊಂಡು ವಿವಾದವೊಂದನ್ನು ಸೃಷ್ಟಿಸಲಾಗಿದೆ.
ನಲ್ನುಡಿಯಿಂದ ನಾವು ಪ್ರತಿವರ್ಷ ನಡೆಸುವ ರಾಜ್ಯೋತ್ಸವ ಕಥಾಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ ಇದು. ಕಥೆಗಳನ್ನು ಆಯ್ಕೆ ಮಾಡಿದವರು ಕನ್ನಡದ ಹೆಸರಾಂತ ಕಥೆಗಾರರಾದ ಕೇಶವ ಮಳಗಿಯವರು. ಕಥೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಮಕ್ಕಳ ಮಾರಾಟ ದಂಧೆಯನ್ನು ಕೇಂದ್ರವಾಗಿಟ್ಟುಕೊಂಡಿದೆ. ಇವತ್ತು ಮಧ್ಯಾಹ್ನ ಲಂಬಾಣಿ ಸಮುದಾಯಕ್ಕೆ ಅಪಮಾನವೆಸಗಲಾಗಿದೆ ಎಂದು ಬಂಜಾರ ಸಮುದಾಯದ ಕೆಲವು ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಅಬ್ಬರಿಸಿದ್ದಾರೆ, ಮಾತ್ರವಲ್ಲ ಜಾತಿ ನಿಂದನೆ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ! ವಿಚಿತ್ರವೆಂದರೆ ಸ್ವತಃ ಸಾಹಿತಿಯಾಗಿರುವ ಬಿ.ಟಿ.ಲಲಿತಾ ನಾಯಕ್ ಈ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ನಡುವೆ ಕಳೆದ ಮೂರು ನಾಲ್ಕು ದಿನಗಳಿಂದ ಹಗಲು ರಾತ್ರಿಯೆನ್ನದೆ ಕಥೆಗಾರ ಮಹಂತೇಶ್ ನವಲಕಲ್ ಅವರಿಗೆ ಬೆದರಿಕೆ ಕರೆಗಳು, ಬೈಗುಳಗಳ ಸುರಿಮಳೆಯಾಗಿದೆ ಅವರ ಮೊಬೈಲ್ ನಲ್ಲಿ. ಒಬ್ಬ ಕವಿ, ಕಥೆಗಾರ, ಕಾದಂಬರಿಕಾರನಿಗೆ ಹೀಗೆ ನಿರ್ಬಂಧಿಸುವುದು, ಬೆದರಿಸುವುದು ಎಷ್ಟು ಸರಿ? ಅಷ್ಟಕ್ಕೂ ಮಹಂತೇಶ್ ತಾಂಡಾಗಳಲ್ಲಿ ನಡೆಯುವ, ಈಗಾಗಲೇ ಸಾಕಷ್ಟು ಬಾರಿ ವರದಿಯಾಗಿರುವ ಮಕ್ಕಳ ಮಾರಾಟದ ವಿಷಯವನ್ನು ಈ ಕಥೆಯ ಮೂಲಕ ಮತ್ತೆ ಚರ್ಚೆಗೆ ತರುವ ಕೆಲಸವನ್ನು ಮಾಡಿದ್ದಾರೆ. ಅದು ತಪ್ಪೇ? ಈ ರೀತಿಯ ಒತ್ತಡಗಳನ್ನು ಸೃಜನಶೀಲ ಬರೆಹಗಾರರ ಮೇಲೆ ಹೇರುತ್ತ ಹೋದರೆ ಅದರ ಪರಿಣಾಮಗಳೇನು? ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಗಳಿಗೆ ಪತ್ರಿಕೆಯ ಸಂಪಾದಕನಾದ ನನ್ನ ಕ್ಷಮೆ ಬೇಕಂತೆ.
ಅವರಿಗೆ ಸಮಾಧಾನ ಆಗುವುದಾದರೆ ಒಂದಲ್ಲ ಸಾವಿರ ಕ್ಷಮೆ ಕೇಳಲು ನಾನು ಸಿದ್ಧ. ಆದರೆ ಸೃಜನಶೀಲ ಕಲೆ-ಸಾಹಿತ್ಯದ ಮೇಲೆ ಈ ರೀತಿಯ ನೈತಿಕ ಪೊಲೀಸುಗಿರಿ ಮುಂದುವರೆದರೆ ನಾವು ಯಾವ ಸಮಾಜವನ್ನು ಕಟ್ಟಲು ಸಾಧ್ಯ?








Kathana huttuvude anubhavadinda, parisaradinda milithvagi ondu framenalli baruthe, adakke vividha ayaamada saadhyathegalu hechu, abhivyakthi swathantryada enondu roopave kathe.. a katheyondige anusandhana endare namannu olagondidhe endartha, higadalli kathegaara olle kathe ksttikottiddane endhe thiliyabahudu. Nalnudi yalli banda katheyannu naanu odhiddene dinesh, chennagidhe samakaalina vishayavide. Sathya yaavathigu kahi katheya mulaka adhu thalupidhe. Adanna aragisikollalagada avivekigalu kiri kiri maduthiddare, nivu kshame keluva agathyavilla, mahantesh ge baruthiruva bedarike galanna kadeganisi, virodha sthaapitha hithasakthigala kruthya, agathyavadare dooru daakalisi.
ಒಟ್ಟು ಸಮಾಜವೇ ಅಸಹನೆಯಿಂದ ತುಂಬಿಹೋಗಿದೆ, ನೈತಿಕ ಪೋಲಿಸ್ ಗಿರಿಯ ಹಾಗೇ ಇದು ಸಾಂಸ್ಕೃತಿಕ ಗೂಂಡಾಗಿರಿ ಅಷ್ಟೆ,ಕತೆಯ ಉದ್ಧೇಶವೇನೆಂದು ಅರ್ಥಮಾಡಿಕೊಳ್ಳದೆ ಮಾಡುವ ವಿತಂಡವಾದ…
very sad development,but not new.how com B T Lalitha nayak?utter disgusting…….
ನಾಣಜ್ಜೇರ್ ಸುದೆ ತಿರ್ಗಾಯೇರ್ ಎಂಬ ತುಳು ಕಾದಂಬರಿ ಬರೆದ ಡಾ| ಮಹಾಲಿಂಗ ಭಟ್, ಬಾಲಪಾಠದ ಮರುಮುದ್ರಣ ಕಾಣಿಸಿದ ಶಿವರಾಮ ಕಾರಂತರು ಎದುರಿಸಿದ ಪ್ರತಿಭಟನೆಗಳಾದರೂ ಇಂಥವೇ – ಎರಡು ಮೂರು ದಶಕಗಳ ಹಿಂದೆ! ಮೊನ್ನೆ ಮೊನ್ನೆ ಮಲೆಗಳಲ್ಲಿ ಮದುಮಗಳು ನಾಟಕ ನೋಡಿಯೂ ಇಂಥವೇ ಕೆಲವು (ಅಸಾಹಿತ್ಯಕ ಮತ್ತು ಸಂಕುಚಿತ) ಅಪಸ್ವರಗಳು ಕೇಳಿದ್ದವು; ಅದೃಷ್ಟವಶಾತ್ ಬೆಳೆಯಲಿಲ್ಲ. ಕಷ್ಟ, ಬಲು ಕಷ್ಟ.
ಮ್ಮನ್ನು ತಾವು ಪ್ರೀತಿಸಿಕೊಳ್ಳುವ ಮತ್ತು ಅರಿತುಕೊಳ್ಳುವ ಮನಸ್ಸುಗಳು ಇವಲ್ಲ. ಏನಕೇನ ಕಾರಣಗಳ ನಾಯಕಾಂಕ್ಷಿ ಚಿದ್ರೂಪಿಗಳು. ಸಹಿಸಿಕೊಳ್ಳಬೇಕು – ಸೈರಿಸಿಕೊಳ್ಳಬೇಕು. ಅದೇ ಸರ್ ‘ದೊಡ್ಡವರೆಲ್ಲ ಜಾಣರಲ್ಲ’.
ಇಂಥ ಅನುಭವಗಳು ಹಲವಾರು ಲೇಖಕರನ್ನು ಸತಾಯಿಸಿವೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಸಂಕುಚಿತ ಮನಸ್ಸುಗಳು ಅನಾರೋಗ್ಯಕರವಾಗಿ ಅಸಹ್ಯಕರವಾಗಿ ವರ್ತಿಸುತ್ತವೆ. ಕಾಲ ಕಳೆದಂತೆ ಎಲ್ಲ ಮೂಲೆಗುಂಪಾಗುತ್ತವೆ. ಸತ್ಯವನ್ನು ಅರಗಿಸಿಕೊಳ್ಳಲು ತಯಾರಿಲ್ಲದ ಮನಸ್ಸುಗಳು.