ಆತ್ಮೀಯ ಶ್ರೀವತ್ಸ ಜೋಶಿಯವರೇ,
ನಿನ್ನೆಯ ಉದಯವಾಣಿ ಶೀರ್ಷಿಕೆಯ ಕುರಿತು ತಾವು ವ್ಯಕ್ತಪಡಿಸಿದ ಅಭಿಪ್ರಾಯವನ್ನು ನನ್ನ ಸಹೋದ್ಯೋಗಿಗಳು ಗಮನಕ್ಕೆ ತಂದರು. ನೀವು ನಮ್ಮ ಶೀರ್ಷಿಕೆಯ ಜೊತೆ ಸುದ್ದಿಯ ಮೊದಲ ಪ್ಯಾರಾವನ್ನೂ ಓದಿದ್ದರೆ ಇಂತಹ ಪ್ರತಿಕ್ರಿಯೆ ನೀಡುತ್ತಿರಲಿಲ್ಲವೇನೋ. ನಾವು ಯಾಕೆ ಈ ಶೀರ್ಷಿಕೆ ಬಳಸಿದ್ದೇವೆ ಎಂಬುದನ್ನು ಮೊದಲ ಪ್ಯಾರಾದಲ್ಲೇ ಹೇಳಿದ್ದೇವೆ.
ನಿಮಗೆ, ಅಂಗೂಲಿಮಾಲಾ ಮತ್ತು ಬುದ್ಧನ ಕಥೆ ಗೊತ್ತಿರಬಹುದು. ಅಂಗೂಲಿಮಾಲಾ ಓರ್ವ ಕ್ರೂರವ್ಯಕ್ತಿ. ಆತನನ್ನು ಬುದ್ಧ ಅಹಿಂಸೆ-ನಿರ್ಭಯ-ನಗುವಿನಿಂದಲೇ ಗೆದ್ದ ಕಥೆ ಅದು.
ಉಗ್ರ ಅಂಗೂಲಿಮಾಲಾ ಬುದ್ಧನ ಮೇಲೆ ಆಕ್ರಮಣ ಮಾಡಿದಾಗ ಬುದ್ಧ ಹೆದರಲಿಲ್ಲ. ಭಯೋತ್ವಾದನೆಯಿಂದ ಬೆದರಲಿಲ್ಲ. ತನ್ನ ಮುಖದ ಮೇಲಿನ ಪ್ರಶಾಂತ ನಗುವನ್ನು ಕಳೆದುಕೊಳ್ಳಲಿಲ್ಲ. ಇದರಿಂದ ನಿಜಕ್ಕೂ ವಿಚಲಿತನಾದವನು ಅಂಗೂಲಿಮಾಲಾ! ತನ್ನ ಭಯೋತ್ಪಾದನೆಗೆ ಹೆದರದ ಬುದ್ಧನಿಗೆ, ಆತನ ಶಾಂತಿ ಸಂದೇಶಕ್ಕೆ, ಅಹಿಂಸಾ ತತ್ವಕ್ಕೆ ಅಂಗುಲಿಮಾಲಾ ಸೋತುಹೋದ. ನಾವು ಇದೇ ಕಥೆಯನ್ನು ಆಧರಿಸಿ ಶೀರ್ಷಿಕೆ ನೀಡಿದ್ದೇವೆ.

ಭಯೋತ್ಪಾದಕರು ಬೋಧಗಯಾ ಮೇಲೆ ಆಕ್ರಮಣ ಮಾಡಿದರು. ಆದರೆ, ಬೌದ್ಧಬಿಕ್ಕುಗಳು ಇದಕ್ಕೆ ಹೆದರಲಿಲ್ಲ. ಸ್ಫೋಟದಿಂದಾಗಿ ಅಲ್ಲಿ ಕೆಲ ಕಾಲ ಭಯದ ವಾತಾವರಣ ಸೃಷ್ಟಿಯಾದರೂ ನಂತರ ಸಂತರು ಪ್ರಶಾಂತವಾಗೇ ತಮ್ಮ ಎಂದಿನ ಧಾರ್ಮಿಕ ಕಾರ್ಯಗಳನ್ನು ಮುಂದುವರೆಸಿದರು. ಇದರೊಂದಿಗೆ ಭಯ ಸೃಷ್ಟಿಸುವ, ಗಲಭೆ ಉಂಟುಮಾಡುವ ವಿಚ್ಛಿದ್ರಕಾರಿ ಶಕ್ತಿಗಳ ಉದ್ದೇಶ ವಿಫಲವಾಯಿತು. ಇದೆಕ್ಕೆಲ್ಲ ಸಾಕ್ಷಿಯಾದ ಬುದ್ಧನ ಪ್ರಶಾಂತ ಮುಖದ ಮೇಲೆ ನಗು ಹಾಗೇ ಇತ್ತು. ಇದನ್ನು ಸಾಂಕೇತಿಕವಾಗಿ ಹೇಳುವುದೇ ನಮ್ಮ ಶಿರ್ಷಿಕೆಯ ಉದ್ದೇಶವಾಗಿತ್ತು.
ಅದನ್ನು ಮೊದಲ ಪ್ಯಾರಾದಲ್ಲೇ ಹೇಳಿದ್ದೇವೆ. ನಗುವ ಬುದ್ಧನ ಈ ಸಂದೇಶವನ್ನು ನೀಡುವಲ್ಲಿ ನಾವು ಯಶಸ್ವಿಯೂ ಆಗಿರಬಹುದು. ವಿಫಲವೂ ಆಗಿರಬಹುದು. ಆದರೆ ಒಂದು ಪ್ರಯತ್ನವನ್ನಂತೂ ಮಾಡಿದ್ದೇವೆ. ಅದಕ್ಕೆ ಅಪಾರ್ಥ ಹಚ್ಚಿದವರು ಮಾತ್ರ ನೀವು. ನಿಮ್ಮ ಈ ಕೃತ್ಯಕ್ಕೆ ಬುದ್ಧನ ನಗುವೇ ಉತ್ತರ!
ನಮಗೆ ನಮ್ಮ ಶೀರ್ಷಿಕೆ ಅದ್ಭುತ ಎಂಬ ಭ್ರಮೆಯೇನೂ ಇಲ್ಲ. ಅಥವಾ ಇದೊಂದು ಅವಹೇಳನಕಾರಿ ಶೀರ್ಷಿಕೆ ಎಂಬ ತಮ್ಮ ವಾದವನ್ನು ನಾವು ಒಪ್ಪುವುದೂ ಇಲ್ಲ. ಈ ಶೀರ್ಷಿಕೆಯಿಂದ ಘಟನೆಯ ಗಾಂಭೀರ್ಯ ಹೋಗಿದೆ ಎಂಬ ತಮ್ಮ ವ್ಯಾಖ್ಯಾನ ತಪ್ಪು.
ಭಾರತ ಮೊದಲ ಬಾರಿ ಅಣು ಪರೀಕ್ಷೆ ನಡೆಸಿದಾಗ ಬಹುತೇಕ ಎಲ್ಲ ಕನ್ನಡ ಪತ್ರಿಕೆಗಳೂ ಗಂಭೀರವಾಗಿ “ಅಣು ಪರೀಕ್ಷೆ ನಡೆಸಿದ ಭಾರತ” ಎಂಬಂಥ ಶೀರ್ಷಿಕೆ ನೀಡಿದ್ದವು. ಆದರೆ, ಕೆಲವು ಪ್ರತಿಷ್ಠಿತ ಆಂಗ್ಲ ಪತ್ರಿಕೆಗಳು – ‘Buddha Smiled’ – ಎಂಬ ಶೀರ್ಷಿಕೆ ನೀಡಿದ್ದವು. ಎರಡನೇ ಬಾರಿ ಭಾರತ ಅಣು ಪರೀಕ್ಷೆ ನಡೆಸಿದಾಗ – ‘Buddha Smiled Again’ – ಎಂಬ ತಲೆಬರಹ ನೀಡಿದ್ದವು. ಇದರಿಂದ ಅಣು ಪರೀಕ್ಷೆಯಂಥ ಗಂಭೀರ ಸುದ್ದಿಗೆ “ಬುದ್ಧ ನಕ್ಕ” ಎಂಬ ಶೀರ್ಷಿಕೆ ಅವಹೇಳನಕಾರಿ ಎಂದು ಹೇಳಲಾಗದು. (‘Buddha Smiled’ – ಎಂಬುದು ಭಾರತದ ಮೊದಲ ಅಣುಪರೀಕ್ಷೆಯ ಗುಪ್ತಪದವಾಗಿತ್ತು ಎಂಬ ಪಾಠವನ್ನು ದಯವಿಟ್ಟು ಇಲ್ಲಿ ಯಾರೂ ನನಗೆ ಹೇಳಿಕೊಡಬಾರದಾಗಿ ವಿನಂತಿ) Buddha Smiled’ – ಎಂಬುದು ಮೇಲ್ನೋಟಕ್ಕೆ ಯಾರಿಗೂ ಅಂದು ಅರ್ಥವಾಗಿರಲಿಲ್ಲ. ಸುದ್ದಿ ಓದಿದ ನಂತರವೇ ಶೀರ್ಷಿಕೆಯ ಅರ್ಥ ತಿಳಿದಿತ್ತು ಎಂಬುದನ್ನು ಗಮನಿಸಿ.
ಅದೇ ರೀತಿ, ಅಂಗೂಲಿಮಾಲಾನ ಕಥೆಯನ್ನು ಆಧರಿಸಿ, ಭಯೋತ್ಪಾದನೆಯನ್ನು ಸೋಲಿಸಿದ ಬುದ್ಧನ ಪ್ರಶಾಂತ ನಗುವಿನ ಸಂದೇಶವನ್ನು ಸಾಂಕೇತಿಕವಾಗಿ ಹೇಳುವುದು ನಮ್ಮ ಪ್ರಯತ್ನವಾಗಿತ್ತು. ಇದನ್ನು, ಮೊದಲ ಪ್ಯಾರಾದಲ್ಲೇ ನಾವು ಹೇಳಿದನ್ನು ತಾವು ಯಾಕೋ ಗಮನಿಸಿಲ್ಲ. ಪರವಾಗಿಲ್ಲ ಬಿಡಿ. ಟೀಕಿಸುವ ಭರದಲ್ಲಿ ತಾವು ಇನ್ನೊಂದು ಮಗ್ಗಲನ್ನು ಎಂದೂ ಗಮನಿಸುವುದಿಲ್ಲ ಎಂಬುದು ನಮಗೆ ಗೊತ್ತು.
ಈಗಿನ 24×7 ಸುದ್ದಿಯ ಕಾಲದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಸ್ಫೋಟದ ಸುದ್ದಿ ಸೋಮವಾರ ಬೆಳಿಗ್ಗೆ ಸುದ್ದಿಯೇ ಅಲ್ಲ. ಅದು ಭಾನುವಾರ ಸಂಜೆಯ ವೇಳೆಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ಬೋಧಗಯಾದಲ್ಲಿ ಬಾಂಬ್ ಸ್ಫೋಟ ಎಂಬುದು ಸೋಮವಾರದ ಪಾಲಿಗೆ ಹಳಸಲು ಹೆಡ್ಡಿಂಗ್. We need to dive deep for more insight ಎಂಬುದು ನಮ್ಮ ಕಾರ್ಯಶೈಲಿ. We just went beyond the normal heading. ಹಲವರಿಗೆ ಇದು ಇಷ್ಟವಾಗಬಹುದು. ಇನ್ನು ಹಲವರಿಗೆಇಷ್ಟವಾಗದಿರಬಹುದು. ತಾವು ಬಹಳ ಉಮೇದಿಯಲ್ಲಿ ಬರೆಯುವ ಜೋಕುಗಳು ಎಲ್ಲರಿಗೂ ಇಷ್ಟವಾಗುತ್ತಾ ಶ್ರೀವತ್ಸ ಜೋಶಿಯವರೇ?
ತಾವು ಎಲ್ಲ ವಿಷಯಕ್ಕೂ ಅಡ್ಡಾರ್ಥ ಹುಡುಕುವುದರಲ್ಲಿ ಪಂಡಿತರು ಎಂದು ಜಗತ್ತಿಗೇ ಗೊತ್ತು. ಆದರೆ, ಹಾಗೆ ಅಡ್ಡಾರ್ಥ ಹುಡುಕಿ, ಅದನ್ನು ಅತೀವ ಸಂಭ್ರಮದಿಂದ ಟಾಂಟಾಂ ಮಾಡುವಾಗ ನಿಮಗೇ ಗೊತ್ತಿಲ್ಲದೇ ನೀವು ಅನವಶ್ಯಕವಾಗಿ ಕೆಲವು ವ್ಯಕ್ತಿಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗುತ್ತೀರಿ. ನಿಮ್ಮೊಂದಿಗೆ, ನಿಮ್ಮನ್ನು ಕೊಂಡಾಡುವ ಇನ್ನಷ್ಟು ಜನರೂ ದಾರಿತಪ್ಪಿ ಮನಸೋಇಚ್ಛೆ ಉಗಿಯುತ್ತಿರುತ್ತಾರೆ. (ಈಗಲೂ ನನ್ನ ಈ ಪ್ರತಿಕ್ರಿಯೆ ನೋಡಿ ಅವರು ಎಷ್ಟು ಉಗಿಯುತ್ತಾರೆ ನೀವೇ ನೋಡಿ)
// ಯಡಿಯೂರಪ್ಪನ ಮೀಸೆ ಮತ್ತು ಶ್ರೀವತ್ಸ ಜೋಶಿ //
ಅಂದಹಾಗೆ, ಎಲ್ಲದರಲ್ಲೂ ಏನಾದರೂ ಅಡ್ಡಾರ್ಥ ಹುಡುಕಿ ಕುಣಿದಾಡುವುದು ನಿಮಗೆ ಚಟವಾಗಿಬಿಟ್ಟಿದೆ. ಈ ಹಿಂದೆ ಕೂಡ ನೀವು ಇದೇ ರೀತಿ ಮಾಡಿದ ಒಂದು ಘಟನೆ ನನಗೆ ನೆನಪಾಗುತ್ತಿದೆ. ನಾನು ಕನ್ನಡಪ್ರಭದಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿದ್ದ ಕಾಲ ಅದು. ಕುಮಾರಸ್ವಾಮಿ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡದ ದಿನ ಕನ್ನಡಪ್ರಭದ ಮುಖಪುಟದಲ್ಲಿ ಯಡಿಯೂರಪ್ಪನವರ ಬಾಡಿದ ಮುಖದ ಕ್ಲೋಸಪ್ ಪ್ರಕಟವಾಗಿತ್ತು. ಮರುದಿನ ಈಮೇಲುಗಳಲ್ಲಿ ಶ್ರೀವತ್ಸ ಜೋಶಿಯವರ ತಾಂಡವ ನರ್ತನ! ಛೀ.. ಥೂ.. ಕನ್ನಡಪ್ರಭದವರು ಇಂಥ ಹೀನಮಟ್ಟಕ್ಕೆ ಇಳಿಯಬಾರದಿತ್ತು. ಬೇಕೆಂದೇ ಯಡಿಯೂರಪ್ಪನವರ ಅರ್ಥಮೀಸೆ ಬೋಳಿಸಿದ (ಡಿಜಿಟಲಿ ಅಳಿಸಿದ) ಚಿತ್ರವನ್ನು ಕನ್ನಡಪ್ರಭದಲ್ಲಿ ಪ್ರಕಟಿಸಿದ್ದಾರೆ. ಈ ರೀತಿ ಒಂದು ಪತ್ರಿಕೆ ಯಡಿಯೂರಪ್ಪನವರ ತೇಜೋವಧೆ ಮಾಡಬಹುದೇ? ಇದನ್ನು ಜಗತ್ತಿನಾದ್ಯಂತ ಕನ್ನಡಿಗರು ಖಂಡಿಸಬೇಕು. ಎಂದು ಜಾಗತಿಕ ಹೋರಾಟಕ್ಕೆ ನೀವು ಕರೆ ನೀಡಿದ್ದಿರಿ.
ಏನಪ್ಪಾ ಇದು – ಎಂದು ನಾನು ತನಿಖೆ ನಡೆಸಿದಾಗ ಸತ್ಯ ಬಯಲಾಯ್ತು. ಯಡಿಯೂರಪ್ಪನವರ ಮೀಸೆಯನ್ನು ಯಾರೂ ಬೋಳಿಸಿರಲಿಲ್ಲ. ಅವರ ತಿಳುವಾದ, ಬಿಳಿ ಮೀಸೆಯ ಒಂದು ಭಾಗ ಕ್ಯಾಮರಾ ಬೆಳಕಿನಲ್ಲಿ ಮಸುಕಾಗಿ, ತ್ವಚೆಯ ಹೊಳಪಿನಲ್ಲಿ ಸರಿಯಾಗಿ ಕಾಣುತ್ತಿರಲಿಲ್ಲ. ಇದರಿಂದ ಯಡಿಯೂರಪ್ಪನವರ ಮೀಸೆ ಬೋಳಿಸಿಹೋಗಿದೆ ಎಂದು ನೀವು ತೀರ್ಮಾನಕ್ಕೆ ಬಂದಿರಿ. ಅಂತಹ ತೀರ್ಮಾನಕ್ಕೆ ಬಂದ ಜಗತ್ತಿನ ಏಕೈಕ ವ್ಯಕ್ತಿ ನೀವು! ಇದರಲ್ಲಿ ಕನ್ನಡಪ್ರಭದ ಯಾವ ತಪ್ಪೂ ಇರಲಿಲ್ಲ. ಇದೇ ಫೋಟೋವನ್ನು ಇತರ ಕೆಲ ಪತ್ರಿಕೆಗಳೂ ಪ್ರಕಟಿಸಿದ್ದವು. ಅವುಗಳನ್ನು ನೀವು ನೋಡದೇ, ಇದೆಲ್ಲ ಕನ್ನಡಪ್ರಭದ ಹೀನ ಕುಚೋದ್ಯ ಎಂದು ಟಾಂಟಾಂ ಮಾಡುತ್ತಿದ್ದಿರಿ. ನಿಮ್ಮ ಈಮೇಲನ್ನು ಜೋಗಿ ನನ್ನ ಗಮನಕ್ಕೆ ತಂದರು. ಆಗಲೂ ನಾನು ಗೌರವದಿಂದಲೇ ತಮಗೆ ಉತ್ತರಿಸಿದ್ದನ್ನು ತಾವು ಮರೆತಿರಬಹುದು. ನಾನು ಮರೆತಿಲ್ಲ. ಯಡಿಯೂರಪ್ಪನವರ ಮೀಸೆ ನೋಡಿದಾಗಲೆಲ್ಲ ತಮ್ಮ ಕುಚೋದ್ಯ ನೆನಪಾಗುತ್ತದೆ 🙂
ಈಗ ಕೆಲ ತಿಂಗಳ ಹಿಂದೆ ಉದಯವಾಣಿಯಿಂದಾದ ಒಂದು ಅಚಾತುರ್ಯವನ್ನು ನೀವು ನಿಮ್ಮ ವಾಲ್ ಮೇಲೆ ಪ್ರಕಟಿಸಿದಿರಿ. ನಮಗೆ ಚೆನ್ನಾಗಿ ಉಗಿದಿರಿ. ಧಿಕ್ಕಾರ ಕೂಗಿದಿರಿ. ಕನ್ನಡದ ಅನೇಕ ಆರೋಗ್ಯಕರ ಮನಸುಗಳು ಬಂದು ನಿಮ್ಮ ವಾಲ್ ಮೇಲೆ ಉದಯವಾಣಿ ಸಂಪಾದಕರ ಹೀನ ಮನಃಸ್ಥಿತಿಯ ಕುರಿತು ಬರೆದುಬರೆದು ಬಿಸಾಕಿದರು. ಸರಿ. ನಾವು ನಮ್ಮ ಅಚಾತುರ್ಯವನ್ನು ಅರ್ಥ ಮಾಡಿಕೊಂಡೆವು. ತಪ್ಪು ತಿದ್ದಿಕೊಂಡೆವು. ಅಲ್ಲಾ… ಶ್ರೀವತ್ಸ ಜೋಶಿಯವರೇ, ಒಂದು ಕೆಟ್ಟ ಜೋಕನ್ನು ಉದಯವಾಣಿ ಪ್ರಕಟಿಸಿದರೆ ಹೀನ ಮನಃಸ್ಥಿತಿ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ಅದೇ ಕೆಟ್ಟ ಜೋಕನ್ನು ನಿಮ್ಮ ವಾಲ್ ಮೇಲೆ ನೀವು ಪ್ರಕಟಿಸುವುದೂ ಅಷ್ಟೇ ಹೀನ ಮನಃಸ್ಥಿತಿಯಲ್ಲವೇ? ನಾವು ಕೆಟ್ಟ ಜೋಕ್ ಪ್ರಕಟಿಸಿದರೆ ತಪ್ಪು. ಅದೇ ಜೋಕನ್ನು ನೀವು ಪ್ರಕಟಿಸಿದರೆ ಸರಿಯಾ? ಉದಯವಾಣಿಯ ಜವಾಬ್ದಾರಿಯುತ ವ್ಯಕ್ತಿಯಾಗಿ ನಾವು ಆ ಅಚಾತುರ್ಯಕ್ಕೆ ಕ್ಷಮೆ ಕೇಳಿದ್ದಾಯಿತು. ಆದರೆ, ತಾವು ಕಟ್ ಆಂಡ್ ಪೇಸ್ಟ್ ಮಾಡಿದ ಆ ಜೋಕು ಇನ್ನೂ ನಿಮ್ಮ ವಾಲ್ ಮೇಲೇ ಕೊಳೆಯುತ್ತಾ ಬಿದ್ದಿದೆ. ಇದು ಯಾವ ಸೀಮೆಯ ಆರೋಗ್ಯಕರ ಮನಃಸ್ಥಿತಿ ಮಾರಾಯ್ರೇ!
ನಿಮ್ಮದು ಆರೋಗ್ಯಕರ ಮನಃಸ್ಥಿತಿಯಾಗಿದ್ದರೆ, ನೀವು ಆ ಜೋಕಿನ ಮರುಪ್ರಕಟಣೆ ಮಾಡದೇ ನಮ್ಮ ತಪ್ಪನ್ನು ಗಮನಕ್ಕೆ ತರುತ್ತಿದ್ದಿರಿ ಅಷ್ಟೇ. ಅಂದಹಾಗೆ, ನಿಮ್ಮ ವಾಲ್ ಮೇಲೆ ಬರೆದ ಕನ್ನಡದ ಇತರ ಆರೋಗ್ಯಕರ ಮನಸ್ಸುಗಳು ನಮ್ಮ ಜೊತೆಗೆ ನಿಮಗೂ ಯಾಕೆ ಉಗಿಯುವ ಆರೋಗ್ಯಕರ ಮನಸ್ಸನ್ನು ಪ್ರದರ್ಶಿಸಲಿಲ್ಲವೋ ಕಾಣೆ! ಇಷ್ಟಕ್ಕೂ ಆ ಜೋಕು… ರೇಪ್ ಅಥವಾ ರೇಪ್ ಆದ ಹುಡುಗಿಯ ವ್ಯಂಗ್ಯವಾಗಿರಲ್ಲ. ಅದು ನಮ್ಮ ನ್ಯಾಯಾಂಗ ವ್ಯವಸ್ಥೆಯ ವ್ಯಂಗ್ಯವಾಗಿತ್ತು. ತಾವು ಎಷ್ಟೆಂದರೂ ಅಡ್ಡಾರ್ಥ ಪ್ರವೀಣರಲ್ಲವೇ? ಜೋಕಿಗೆ ಬೇರೆಯದೇ ಅರ್ಥ ಹುಡುಕಿ ಉದಯವಾಣಿಯ ಕುರಿತು ಅಪಪ್ರಚಾರ ಮಾಡಿದರಿ. ಪರವಾಗಿಲ್ಲ ಬಿಡಿ. ಆ ಪ್ರಕರಣ ನಮ್ಮನ್ನು ಇನ್ನಷ್ಟು ಸಂವೇದನಾಶೀಲರನ್ನಾಗಿಸಿತು. ಅದಕ್ಕೆ ನಾವು ನಿಮಗೆ ಋಣಿ. ಅಂದಹಾಗೆ ಮಾರಾಯ್ರೆ… ಆ ಕೆಟ್ಟ ಜೋಕನ್ನು ಈಗಲಾದರೂ ತಮ್ಮ ವಾಲಿನಿಂದ ತೆಗೆಯುವ ಆರೋಗ್ಯಕರ ಮನಸ್ಸನ್ನು ತೋರಿಸುತ್ತೀರಾ? ನಾವು ಮಾಡಿರುವ ತಪ್ಪನ್ನೇ ,ನೀವೂ ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೀರಾ?
ಗೌರವಾದರಗಳಿಂದ
ರವಿ ಹೆಗಡೆ
ಸಮೂಹ ಸಂಪಾದಕ, ಉದಯವಾಣಿ







ಒಳ್ಳೆಯ ಉತ್ತರ..
ಡಾಕ್ಟರ್ ಶೀವತ್ಸ ಜೋಶಿಯವರು ಪದೇ ಪದೇ ಪತ್ರಿಕೆಗಳಲ್ಲಿ ಬಂದ ತಪ್ಪುಗಳನ್ನು ಭೂತಕನ್ನಡಿಯಲ್ಲಿ ತೋರಿಸಿ ಅವರ ಶಿಷ್ಯಂದಿರನ್ನು ಪ್ರಚೋದಿಸುವುದನ್ನು ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮತ್ತೊಂದು ಹವ್ಯಾಸವೂ ಇದೆ. ತಾನು ಫೇಸುಬುಕ್ಕಿನಲ್ಲಿ ಹಾಕಿದ್ದನ್ನು ಪ್ರತಿಯೊಬ್ಬರಿಗೂ ಮೇಲ್ ಮೂಲಕ ಕಳಿಸಿ ಉತ್ತರಿಸುವಂತೆ ಕೇಳಿಕೊಳ್ಳುತ್ತಾರೆ. ಅದೊಂದು ಹವ್ಯಾಸ ಅಂತ ಇಟ್ಟುಕೊಳ್ಳಬಹುದು.
ಆದರೆ ಪತ್ರಿಕೆಗಳ ವಿರುದ್ಧದ ಅವರ ಕ್ರೋಧಕ್ಕೆ ಕಾರಣ ಇದೆ. ಅವರಿಗೆ ಅಂಕಣ ಬರೆಯುವ ಅವಕಾಶ ಕೊಟ್ಟವರು ಶ್ರೀ ವಿಶ್ವೇಶ್ವರ ಭಟ್ಟರು. ಅಲ್ಲಿ ವಿಶ್ವೇಶ್ವರ ಭಟ್ಟರು ಕೆಲಸ ಬಿಟ್ಟ ನಂತರವೂ ಭಟ್ಟರು ಅಂಕಣ ಮುಂದುವರಿಸಿಕೊಂಡು ಬಂದರು. ಹೊಸ ಸಂಪಾದಕರು ಅವರ ಅಂಕಣವನ್ನು ಕಿತ್ತು ಹಾಕುತ್ತಿದ್ದಂತೆ ವಿಶ್ವೇಶ್ವರಭಟ್ಟ ರ ಬಳಿ ಅಂಕಣ ಬರೆಯುವಂತೆ ಕೇಳಿಕೊಂಡರು. ಆಗಲೇ ಅಂಕಣಗಳೆಲ್ಲ ಭರ್ತಿಯಾದ್ದರಿಂದ ಮುಂದೆ ನೋಡೋಣ ಎಂದು ಭಟ್ಟರು ಹೇಳುತ್ತಿದ್ದಂತೆ ಜೋಷಿಯವರಿಗೆ ಕನ್ನಡ ಪ್ರಭ ಕೆಟ್ಟ ಪತ್ರಿಕೆಯಂತೆ ಕಾಣತೊಡಗಿತು. ಉದಯವಾಣಿ ಮತ್ತು ವಿಜಯ ಕರ್ನಾಟಕದಲ್ಲೂ ಅವರು ಮತ್ತೆ ಅಂಕಣ ಬರೆಯಲು ಯತ್ನಿಸಿ ನಿರಾಶರಾದರು. ಹೀಗಾಗಿ ಎರಡೂ ಪತ್ರಿಕೆಗಳ ವಿರುದ್ಧವೂ ದ್ವೇಷ ಕಾರತೊಡಗಿದರು.
ಇದರ ಜೊತೆ ಇವರು ಒಬ್ಬರ ಫೇಸ್ ಬುಕ್ ಹೇಳಿಕೆಯನ್ನು ಮತ್ತೊಬ್ಬರಿಗೆ ಮೇಲಿಸಿ, ಅವರಿವರನ್ನು ಎತ್ತಿಕಟ್ಟುವ ಕೆಲಸವನ್ನೂ ನಿಷ್ಟೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಅವರ ಹೇಳಿಕೆಗಳನ್ನು ಅಲಕ್ಷ್ಯ ಮಾಡುವುದೇ ಏಕೈಕ ದಾರಿಯೆಂದು ಅನೇಕರು ಭಾವಿಸಿ ಅವರನ್ನು ಅಲಕ್ಷ್ಯ ಮಾಡಿದ್ದಾರೆ. ರಂಗನಾಥ್ ಭಾರದ್ವಾಜ್ ಬೇಧಿಯಾದವನಂತೆ ಮಾತಾಡುತ್ತಾರೆ. ಭಟ್ಟರು ನೋಡುವುದಕ್ಕೆ ಮಾತ್ರ ಲಾಯಕ್ಕು, ಮಾತು ಸರಿಯಿಲ್ಲ. ರಂಗನಾಧನಿಗೆ ಎಲ್ಲರೂ ಛೀಮಾರಿ ಹಾಕಿದರು, ಮಹಾದಾನಂದ ಆಗುತ್ತಿದೆ ಎಂದೆಲ್ಲ ಬರೆದುಕೊಳ್ಳುವ ಜೋಷಿಯವರನ್ನು ಗಂಭೀರವಾಗಿ ಹೇಗೆ ಪರಿಗಣಿಸಲು ಸಾಧ್ಯ.
ಕುತರ್ಕದಲ್ಲಿ ಶ್ರೀವತ್ಸಜೋಶಿಯವರನ್ನು ಮೀರಿಸುವವರಿಲ್ಲ. ಹಿಂದೆ ಅವರು ಬರೆಯುತ್ತಿದ್ದ ಪರಾಗ ಎಂಬ ಏನೋ ಒಂದನ್ನು ನಾನು ಓದುತ್ತಿರಲಿಲ್ಲ. ಓದಲು ಅಲ್ಲೇನೂ ಇರುತ್ತಿರಲಿಲ್ಲ. ಫೇಸ್ ಬುಕ್ ಅನ್ನು ಕೆಟ್ಟತನಕ್ಕೆ ಬಳಸಿಕೊಂಡು ತಮ್ಮ ವಿಕೃತತನವನ್ನು ಕಕ್ಕುವವರಲ್ಲಿ ಇವರೂ ಒಬ್ಬರು. ಈ ಹಿಂದೆ ಸಂಧ್ಯಾ ಪೈ ರವರು ಡಾ. ಸಂಧ್ಯಾ ಪೈ ಎಂದು ಹಾಕಿಕೊಂಡಿದ್ದಾರೆ ಎಂಬುದನ್ನೆ, ಪ್ರಪಂಚ ಬಿದ್ದವರಂತೆ ಬರೆದು, ಅವರ ಮಾನ ಮರ್ಯಾದೆಯೆಲ್ಲ ಕಳೆದುಹೋಯಿತು ಎಂಬಂತೆ ನೂರಾರು ಶೇರ್ ಮಾಡಿಸಿ ಒಂದಷ್ಟು ಜನಗಳಿಂದ ಉಗಿಸಿದ್ದರು. ಇದು ಇವರ ದೈನಂದಿನ ಕಾರ್ಯಗಳಲ್ಲೊಂದು. ತಾನು ಪರಿಶುದ್ಧ ಎಂದು ಭಾವಿಸುವ ವ್ಯಕ್ತಿಗಳ ಒಣ ಪ್ರತಿಷ್ಟೆಗಳು ಇವುಗಳು. ಬಿಟ್ಟು ತಳ್ಳಿ
This seems to be getting too personal. Can the editor interfere here? We dont want person fights in this healthy website.