ಪ ಸ ಕುಮಾರ್ ಜೊತೆ ನಡೆದ ಕಲಾ ಪಯಣದ ನೋಟ ಇಲ್ಲಿದೆ.
ಈ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಕಾಗಿನೆಲೆ ಸಹಾ ಹಾಜರಿದ್ದರು.





ಪ ಸ ಕುಮಾರ್ ಬಗ್ಗೆ ಅಲೆಮಾರಿ ಬರೆದಿರುವ ಪತ್ರ ಬಹುಷಃ ಪ ಸ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತದೆ ಎಂಬ ಕಾರಣಕ್ಕಾಗಿ ಇಲ್ಲಿ ನೀಡುತ್ತಿದ್ದೇವೆ.
ಇಂದು ಸಂಜೆ ಪ.ಸ.ಕುಮಾರ್ ಅವರೊಂದಿಗೆ ಫಿಶ್ ಮಾರ್ಕೆಟ್ ಸೇರುತ್ತದೆ ಎಂಬ ಆಹ್ವಾನ ಬಂತು. ಆದರೆ ಕೆಲಸದೊತ್ತಡ ಮಾರ್ಕೆಟ್ ಗೆ ಬರಲಾಗುತ್ತಿಲ್ಲ. ಪ.ಸ. ಕುಮಾರ್ ಅವರೊಂದಿಗೆ ಬಹುಶಃ ಅತ್ಯಂತ ಸಂತೋಷದ ಸಂವಾದವೊಂದರಲ್ಲಿ ಭಾಗಿಯಾಗುವ ಅವಕಾಶ ಮಿಸ್ ಆಗುತ್ತಿದೆ.
ಕುಮಾರ್ ಸರ್ ತುಂಬಾ ಇಂಟ್ರೆಸ್ಟಿಂಗ್ ವ್ಯಕ್ತಿ. ಅವರೊಂದಿಗೆ ಕೂತರೆ ಸಾಹಿತ್ಯದ ಬಗ್ಗೆ ಮಾತಾಡಬಹುದು, ಸಿನಿಮಾ ಬಗ್ಗೆ, ಕಲೆಯ ಜತೆಗೆ, ರಾಜ್ಯದಲ್ಲಿ ನಡೆದ ಕಲಾ ಚಳವಳಿಗಳ ಬಗ್ಗೆ ಮಾತನಾಡಬಹುದು.ಕವಿತೆಗಳು ಪ್ರತಿಮೆಗಳ ಬಗ್ಗೆ ಭರಫೂರ ಮಾತಾಡಬಹುದು. ಅವರಿಗೆ ಮೂಡಿದ್ದರೆ ಸಂಗೀತದ ಆಲಾಪಗಳನ್ನು ಕೇಳಬಹುದು. ಹಿಂದೂಸ್ತಾನಿ ಅವರಿಗೆ ಅಚ್ಚುಮೆಚ್ಚು. ದೇವರ ಮನೆ ಹೊಕ್ಕರೆ ಅರ್ಧ ತಾಸು ಹಾಡಿ ಪೂಜೆ ಮುಗಿಸಿ ಬರುತ್ತಾರೆ ಕುಮಾರ್ ಸರ್. ಕಾರ್ಯಕ್ರಮಕ್ಕೆ ಬಂದರೆ ನಾನು ಎಲ್ಲರ ಮಾತಿನ ನಡುವೆ ಹಾಡಲು ಕೇಳುತ್ತಿದ್ದದಂತೂ ನಿಜ.
ನನಗೀಗಲೂ ಬೆರಗಾಗುವ ಸಂಗತಿ; ನಮಗೆ ನಾಚಿಕೆಯಾಗಿಸುವಂತೆ ಇರುವ ಅವರ ಉತ್ಸಾಹ. ವಯಸ್ಸಿನ ಅಂತರ ನೋಡದೆ ಎಲ್ಲರೊಂದಿಗೆ ಖುಷ್ ಖುಷ್ಯಾಗಿ ಮಾತನಾಡುತ್ತಾರೆ. ನಿಮಗೆ ಗೊತ್ತಾ? ಕೆಲಸದಿಂದ ನಿವೃತ್ತರಾದ ಮೇಲೆ ಕ್ಯಾಸಿಯೋ ಕೀಬೋರ್ಡ್ ನುಡಿಸುವುದನ್ನು ಅಭ್ಯಾಸ ಮಾಡಲಾರಂಭಿಸಿದ್ದಾರೆ.
ಇತ್ತೀಚೆಗೆ ಮಿತ್ರ ಮಂಜುನಾಥ ಸ್ವಾಮಿ ಜತೆಗೆ ಅವರ ಸ್ಟುಡಿಯೋಕ್ಕೆ ಹೋದಾಗ ಮೂರ್ನಾಲ್ಕು ಹಾಡುಗಳನ್ನು ನುಡಿಸಿದ್ದರು. ಹಾಂ. ಸ್ಟುಡಿಯೋ ಅಂದಾಕ್ಷಣ ನೆನಪಾಯ್ತು.. ಕುಮಾರ್ ಸರ್ ಗೆ ಚಂದ್ರ ಅಂದ್ರೆ ತುಂಬಾ ಇಷ್ಟ. “ಚಂದ್ರನ ಕುರಿತು ಪೇಟಿಂಗ್ ಸೀರಿಸ್ ಮಾಡ್ತಿದ್ದೀನಿ” ಅಂತ್ಹೇಳಿದ್ರು. ಹಾಗೆ ಹೇಳಿ ತುಂಬಾ ದಿನ ಆಯ್ತು. ಆಗಲೇ ಎರಡು ಪೇಟಿಂಗ್ ಮುಗಿಸಿದ್ದರು. ಮತ್ತೆ ಬರೆದ್ರಾ? ಅದನ್ನು ಕೇಳಬೇಕೂಂತ ಇದ್ದೆ. ಎಲ್ಲರ ಮುಂದೆ ಕೇಳಿದ್ರೆ ಕುಮಾರ್ ಸರ್ ಕಮಿಟ್ ಆಗ್ತಾರೆ ಅನ್ನೋ ಆಸೆ..
ಈ ಸೀರಿಸ್ ಗೆ ಹೆಸರೂ ಇಟ್ಟಿದ್ದಾರೆ. .. “ಆಧಾ ಹೈ ಚಂದ್ರಮಾ…” ಅಂತಾ. ಅವರ ಸೀರೀಸ್ “ಆಧಾ” ಆಗಿ ಉಳಿದಿದೆಯೋ ಹೇಗೆ? ಕೇಳಬೇಕು.
ಮಕ್ಕಳಿಗೆ ಕಥೆ ಹೇಳುವ ಹಾಗೆ, ಚಿತ್ರಗಳನ್ನು ನೋಡೋದನ್ನು ಕಲಿಸಬೇಕೂಂತ ಯಾವಾಗ್ಲೂ ಹೇಳ್ತಾ ಇರ್ತಾರೆ. ಇದನ್ನು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಇದೂ ಫಿಶ್ ಮಾರ್ಕೆಟ್ ನಲ್ಲಿ ಚರ್ಚೆಯಾಗಬಹುದಾ?
ಫಿಶ್ ಮಾರ್ಕೆಟ್ ಗೆ ಕಡೆಗೆ ಒಂದರ್ಧ ಗಂಟೆ ಬಂದು ಹೋಗಬಹುದಾ? ಪ್ರಯತ್ನ ಮಾಡುತ್ತೇನೆ.
-ಅಲೆಮಾರಿ
ಪ ಸ ಕುಮಾರ್ ಕಲಾ ಪಯಣ
ನಿಮಗೆ ಇವೂ ಇಷ್ಟವಾಗಬಹುದು…





ಹೆಚ್ಚಿನ ಫೋಟೋಗಳಿಗೆ ’ ಓದುಬಝಾರ್ ’ ನೋಡಿ ಅನ್ನೋದು ಮಿಸ್ ಆಗಿದೆ ಯಾಕೆ?
ಇಷ್ಟೇನಾ ಫೋಟೋ ಇರೋದು?:(
jana irode ashtu