ರೆಡ್ ವೈನ್ ರಾದ್ಧಾಂತ
ಪ್ರೊಫೈಲ್ ನಲ್ಲಿದ್ದ ಈ ಸಾಲು ಅಷ್ಟೊಂದು ಮುಖ್ಯ ಅಂತ ಅನಿಸಿರಲಿಲ್ಲ. ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಅಂತಾನೂ ಊಹಿಸಿರಲಿಲ್ಲ.ಕೊಡಗಿನ ಮಾಮನ ಮನೆಯ ಗೌಜಿಯಲ್ಲಿ ಯಾವತ್ತೋ ಸ್ವಲ್ಪ ಗುಟುಕರಿಸಿದ್ದ ವೈನ್ ತುಂಬ ಇಷ್ಟ ಆಗಿತ್ತು. ಮನೆಗೆ ವಾಪಸಾದ ಮೇಲೂ ಹಟ ಮಾಡಿ ’ಗೋಲ್ಕೊಂಡ ರೆಡ್ ವೈನ್’ ತರಿಸಿದ್ದೆ. ಅದರ ಸಣ್ಣ, ಉದ್ದನೆ ಕುತ್ತಿಗೆಯ ಬಾಟಲ್ ಕೂಡ ಮುದ್ದಾಗಿತ್ತು. ಅಪ್ಪನ ಮಂಗಳೂರಿನ ಗೆಳೆಯರೊಬ್ಬರು ಇದರ ಔಷಧೀಯ ಗುಣಗಳ ಪಟ್ಟಿಮಾಡಿದ ಮೇಲಂತೂ ಅಧಿಕೃತವಾಗಿ ಪರವಾನಗಿ ಸಿಕ್ಕಂತಾಗಿತ್ತು! ನಾಲಗೆಗೆ ಸಂಪೂರ್ಣ ಜೀವ ಎರೆದುಬಿಡುವ ಅದರ ರುಚಿ ಮತ್ತು ಗಾಢ ಮೋಹಕ ಬಣ್ಣ ಅಧ್ಬುತ ಎನಿಸಿತ್ತು! ಆದರೆ ಯಾವತ್ತೂ ನಿಶೆ ಏರಿಸುವ ಮಟ್ಟಿಗೆ ಅದರ ಸಹವಾಸ ಮಾಡಿರಲಿಲ್ಲವಷ್ಟೆ.
ನಾನೂ ಹಾಡುತ್ತೇನೆ… ಅಮೆರಿಕ…
ನಾನೊಬ್ಬ ಕರಿಯ
ಅವರೆಲ್ಲಾ ಬಂದಾಗ
ನನ್ನನ್ನು ಅಡುಗೆ ಮನೆಗೆ
ಕಳಿಸುತ್ತಾರೆ.
ನಾನು ನಕ್ಕು,
ಚೆನ್ನಾಗಿಯೇ ತಿನ್ನುತ್ತೇನೆ
ಗಟ್ಟಿಯಾಗುತ್ತೇನೆ.




0 Comments