ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಯ ಓದುಗರೆ ನಮಸ್ಕಾರ!

ಪ್ರೀತಿಯ ಓದುಗರೆ ನಮಸ್ಕಾರ!

ನನ್ನ ‘ ಕಂಡಷ್ಟೂ ಪ್ರಪಂಚ’ ಪುಸ್ತಕದ ಮಾರಾಟದಿಂದ ಬರುವ ಹಣದಿಂದಇಬ್ಬರು ಮಕ್ಕಳ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುತ್ತೇನೆ ಎಂದು ನಿಮ್ಮೆದುರು ಪ್ರಮಾಣ ಮಾಡಿದ್ದೆ.

ಅದರಂತೆ ‘ಸೀಮಾ ಪ್ರಕಾಶನ’ದ ಜಮೀಲ್ ಸಾವಣ್ಣ ರಾಯಲ್ಟಿ ಹಣವನ್ನು ಕೊಟ್ಟಿರುತ್ತಾರೆ. ಜೊತೆಗೆ ಸ್ವಂತ ದುಡಿಮೆಯನ್ನು ಸ್ವಲ್ಪಮಟ್ಟಿಗೆ ಹಾಕಿ ಮೈಸೂರಿನ ‘ಉಷಾ ಕಿರಣ್ ಚಾರಿಟಬಲ್ ಟ್ರಸ್ಟ್’ ಕಣ್ಣಿನ ಆಸ್ಪತ್ರೆಯಲ್ಲಿ ಮಕ್ಕಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲು ಹಣವನ್ನು ಸಂದಾಯ ಮಾಡಿದ್ದೇನೆ.

ಅಲ್ಲಿನ ಡಾ. ರವಿಶಂಕರ್ ಅವರು ಯಾವ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ ಎನ್ನುವ ವಿವರವನ್ನು ಕೊಟ್ಟಿರುತ್ತಾರೆ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಗೋಪ್ಯವಾಗಿ ಇರಿಸಲಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಏನು ಹೇಳಿದರೂ ಕಡಿಮೆಯೇ. ನಿಮ್ಮ ಬೆಂಬಲ ಅಭಿಮಾನ ಪ್ರೀತಿ ಸ್ನೇಹ ಹೀಗೇ ಸಿಗುತ್ತಿರಲಿ ಎನ್ನುವ ಹಂಬಲವಷ್ಟೇ.

 ಪುಸ್ತಕವನ್ನು ಮತ್ತಷ್ಟು ಕೊಂಡುಕೊಂಡು ಓದಿ ನಾನು ಎನ್ನುವ ಮಾಧ್ಯಮದ ಮೂಲಕ ನೀವು ಅಂದುಕೊಂಡ ಒಳ್ಳೆಯ ಕೆಲಸಗಳನ್ನು ಮಾಡಿಸುತ್ತಿರಿ.  ಮತ್ತೊಮ್ಮೆ ಮನ ತುಂಬಿದ ನಮಸ್ಕಾರಗಳು

ಅಂಜಲಿ ರಾಮಣ್ಣ

27 ಮೇ 2024

‍ಲೇಖಕರು avadhi

27 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading