ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, ಕಳೆದ ವರ್ಷದಂತೆ ‘ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಸ್ಪರ್ಧೆ-೨೦೨೨ ರನ್ನು ಏರ್ಪಡಿಸಿದ್ದು, ನಾಡಿನ ಎಲ್ಲ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆಯಾದ ಕಥೆಯೊಂದು ರೂ. ೫೦೦೦/- ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಡಾ. ಪ್ರಹ್ಲಾದರ ಜನ್ಮ ದಿನವಾದ ಜೂನ್ ೩ ರಂದು ಬಹುಮಾನವನ್ನು ವಿತರಿಸಲಾಗುವುದು ಎಂದು ‘ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಉದಯೋನ್ಮುಖ ಕತೆಗಾರರು ತಮ್ಮ ಕಾಲೇಜಿನ ಮುಖ್ಯಸ್ಥರಿಂದ ಪಡೆದ ‘ನಮ್ಮ ಕಾಲೇಜಿನ ವಿದ್ಯಾರ್ಥಿ/ನಿ’ ಎಂಬ ದೃಢೀಕೃತ ಪ್ರಮಾಣ ಪತ್ರದೊಂದಿಗೆ ತಮ್ಮ ಅಪ್ರಕಟಿತ ಸ್ವರಚಿತ ಕಥೆಯೊಂದನ್ನು ಕಳುಹಿಸಬೇಕು.
ವಿ.ಸೂ : ಕತೆಗಳನ್ನು ಕಾಗದದ ಒಂದೇ ಮಗ್ಗುಲಿಗೆ ಕಾಗುಣಿತ ತಪ್ಪಿಲ್ಲದೇ ಶುದ್ಧವಾಗಿ ಬರೆದು ಕಳಿಸಿ ಅಥವಾ ಟೈಪ್ ಮಾಡಿ ಕಳಿಸಿ. ಮೇಲ್ ಮೂಲಕವೂ ಕತೆಯನ್ನು ಸ್ವೀಕರಿಸುತ್ತೇವೆ. ಮೇಲ್ ಜೊತೆಯಲ್ಲೂ ದೃಢೀಕೃತ ಪ್ರಮಾಣ ಪತ್ರದ ಲಗತ್ತಿರಲಿ.
ಕಥೆ ಕಳುಹಿಸಲು ಕೊನೆಯ ದಿನಾಂಕ : ೩೧ ಮಾರ್ಚ ೨೦೨೨
ಕಥೆ ಕಳುಹಿಸಬೇಕಾದ ವಿಳಾಸ :
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ,
ಅಕ್ಷರ ಸಾಹಿತ್ಯ ವೇದಿಕೆ,
ಹುಬ್ಬಳ್ಳಿ, ಛಿ/o ಸುನಂದಾ ಪ್ರಕಾಶ ಕಡಮೆ,
# ೯೦, ‘ನಾಗಸುಧೆ’ ೬/ಬಿ ಕ್ರಾಸ್,
ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ,
ಹುಬ್ಬಳ್ಳಿ- ೫೮೦೦೩೧,
ದೂರವಾಣಿ : ೯೮೪೫೭೭೯೩೮೭
ಮೇಲ್ ವಿಳಾಸ: sunandakadame@gmail.com






0 Comments