
ಗೆಳೆಯ ಪ್ರಸಾದ್ ರಕ್ಷಿದಿ ತನ್ನ ಈ ಬರೆಹವನ್ನು ‘ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ’ವೆಂದು ಕರೆದುಕೊಂಡಿದ್ದಾರೆ. ರಂಗಭೂಮಿಯ ಮುಖಾಂತರ ಮಲೆನಾಡಿನ ಪುಟ್ಟ ಜನಸಮುದಾಯವೊಂದು ತನ್ನ ಮಿತಿ ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳುವುದರ ನಿರೂಪಣೆ ಎಂಬ ಅರ್ಥದಲ್ಲಿ ಇದು ಒಂದು ಆತ್ಮಕಥನವೇ ಹೌದು. ಆದರೆ ಬೆಳ್ಳೇಕೆರೆ ಹಳ್ಳಿ ಥೇಟರ್, ಮಲೆನಾಡಿನ ಹಳ್ಳಿಯೊಂದರ ರಂಗ ಚಳವಳಿಯ ಕಥನವನ್ನಷ್ಟೇ ಅಲ್ಲ, ಅದು ಆ ಪ್ರದೇಶದ ಜನರ, ಅಂದರೆ ಮನೆಗಳ, ಸಂಸಾರಗಳ ದುಃಖ ದುಮ್ಮಾನ ಹಾಗೂ ಸುಖ ಸಂತೋಷಗಳ ಕಥನವೂ ಆಗಿದೆ.
ಈ ಕೃತಿ ರಂಗ ಅಧ್ಯಯನದ ದೃಷ್ಟಿಯಿಂದ ಉಪಯುಕ್ತ ಮಾಹಿತಿ ಒದಗಿಸುವುದರ ಜತೆಗೆ ಸೊಗಸಾದ ಕಾದಂಬರಿಯಂತೆಯೂ ಓದಿಸಿಕೊಳ್ಳುತ್ತದೆ. ರಂಗ ನಿಷ್ಠೆಯ ಜೊತೆ ಮನುಷ್ಯ ಸ್ವಭಾವದ ಓರೆಕೋರೆಗಳ ಬಗೆಗೂ ಲೇಖಕರು ತೋರುವ ಗಾಢ ಅನುರಕ್ತಿಯಿಂದಾಗಿ ಈ ಕೃತಿಯ ಗದ್ಯ ಹೃದಯಂಗಮವಾಗಿದೆ.ಅಕ್ಷರ ಜ್ಞಾನವಿಲ್ಲದ ಆದರೆ ಸ್ವಾಭಿಮಾನಿಯಾದ ದುಡಿಮೆಗಾರ ತರುಣನೊಬ್ಬ ಸ್ವಾಧ್ಯಾಯಿಯಾಗಿ ಅಕ್ಷರ ಕಲಿಯುವ ವೃತ್ತಾಂತದೊಂದಿಗೆ ಪ್ರಾರಂಭವಾಗುವ ಈ ಕೃತಿ, ಸಮುದಾಯವೊಂದು ಅಕ್ಷರ ಮತ್ತು ರಂಗಭೂಮಿಗಳ ಜೊತೆ ಅನುಸಂಧಾನದ ಮುಖಾಂತರ ಸ್ವಾತಂತ್ರ್ಯ, ಅಸ್ಮಿತೆಗಳತ್ತ ನಡೆಯುವುದರ ರೋಮಾಂಚಕ ಕಥನವಾಗಿದೆ.
-ಜಿ.ರಾಜಶೇಖರ ಬೆನ್ನುಡಿಯಲ್ಲಿ
ಇನ್ನೂ ಓದಬೇಕಾದರೆ: ಚಂಪಕಾವತಿ
ಪ್ರಸಾದ್ ರಕ್ಷಿದಿ ಬರುತ್ತಿದ್ದಾರೆ…ದಾರಿ ಬಿಡಿ…
ನಿಮಗೆ ಇವೂ ಇಷ್ಟವಾಗಬಹುದು…





0 Comments