ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಎ೦ದರೆ..

‘ಇದನ್ನು ನಾನು ಸೃಷ್ಟಿಸಿದ್ದಾ?!’ ಅಂತ ನಾನು ಡಾಕ್ಟರನ್ನ ಕೇಳಿದೆ. ಅವರು ನಗುತ್ತಾ ‘ನಿನ್ನ ಬಸಿರಿಂದಲೇ ಬಂತು ಅಂದರೆ ಹಾಗನ್ನಿಸುತ್ತಪ್ಪಾ’ ಅಂದರು. ಇಬ್ಬರೂ ಜೋರಾಗಿ ನಗತೊಡಗಿದೆವು. ಅವರು tear ಹೊಲಿಗೆ ಹಾಕತೊಡಗಿದರು. ‘ಏನು ಮಾಡುತ್ತಿದ್ದೀರಿ?’ ಅಂದೆ. ‘ಎಂಬ್ರಾಯಿಡರಿ ಮಾಡುತ್ತಿದ್ದೀವಿ’ ಎಂದರು. ‘ಒಳ್ಳೆ design ಮಾಡಿ’ ಎಂದೆ. ಇಬ್ಬರೂ ಮತ್ತೆ ಜೋರಾಗಿ ನಗತೊಡಗಿದೆವು. ಹೊರಗೆ ನಿಂತಿದ್ದ ನನ್ನ ಅತ್ತಿಗೆ ಆ ಮೇಲೆ ನನಗೆ ಹೇಳಿದರು. ‘ಯಾವ ಲೇಬರ್ ವಾಡರ್ಿನಿಂದಲೂ ಅಂತ ಗಹಗಹಿಸುವ ನಗು ನಾನು ಯಾವತ್ತೂ ಕೇಳಿಲ್ಲ. ಹೆರಿಗೆ ಎಂದರೆ ಎಲ್ಲರೂ ಚೀರಿ ಚೀರಿ ಅಳ್ತಾರೆ’.

***

ಕಡ್ಡಿ ಗೀರಿದೆ. ಅದು ಕೈಜಾರಿ ನನ್ನ ಬಟ್ಟೆಯ ಮೇಲೆ ಬಿತ್ತು ಅಷ್ಟೇ. ಒಂದೇ ಕ್ಷಣಕ್ಕೆ ಭಗ್ಗೆಂದು ಹೊತ್ತಿಕೊಂಡು ಉರಿಯುತ್ತಿದ್ದೆ. ಜೋರಾಗಿ ಅವನ ಹೆಸರು ಕಿರುಚಿದೆ. ಕಣ್ಣುಬಿಟ್ಟ ಅವನು ಹೊತ್ತಿ ಉರಿಯುತ್ತಿದ್ದ ನನ್ನನ್ನು ನೋಡಿ ವಿಪರೀತ ಗಾಬರಿಯಾಗಿ ಓಡಿ ಬಂದು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ನೀರು ಸುರಿದ. ಷವರ್ ಆನ್ ಮಾಡಿದ, ಬಟ್ಟೆ ಕಿತ್ತು ಬಿಸಾಡಿದ. ಎಲ್ಲದಕ್ಕೂ ಬಹುಶಃ ಎರಡು ಸೆಕೆಂಡು ಕೂಡ ಹಿಡಿಸಿರಲಿಲ್ಲ. ಅಷ್ಟರಲ್ಲಾಗಲೇ ನಾನು ಪೂತರ್ಿ ಸುಟ್ಟು ಹೋಗಿದ್ದೆ.

***

‘ಒಂದೇ ಒಂದು ಸಲ ಹೇಳಿ ಬಿಡಲಾ? ಎಂದೋ ಹೇಳಬೇಕಾಗಿದ್ದ. ಆದರೆ ಎಂದೂ ನನ್ನಿಂದ ಹೇಳಲಾಗದ ಮಾತು’ ಹೇಳು ಎಂದಿತು ಅವರ ಕಣ್ಣು. ‘ಐ ಲವ್ ಯೂ’ ಅಂದೆ. ‘ಅದು ನಿನ್ನ ಜೀವನ ಪ್ರೀತಿ.  You don’t love me, you love life’ ಎಂದರು. ‘Can I shake hands with you?’ ನನಗೆ ಅವರನ್ನು ಸ್ಪಶರ್ಿಸುವುದು ಅಷ್ಟು ಅಗತ್ಯವಾಗಿತ್ತು. ಅವರು ಒಂದು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿದರು. ಏನನ್ನಿಸಿತೋ, ಬಾಗಿ, ಹಗುರವಾಗಿ ನನ್ನ ಭುಜ ಬಳಸಿ, ಜಯನಗರ ನಾಲ್ಕನೇ ಬ್ಲಾಕಿನ ಸಮಸ್ತ ಜನ ಜಂಗುಳಿಯ ನಡುವೆ, ಇಡೀ ಭೂಮಿ, ಆಕಾಶಗಳ ಸಾಕ್ಷಿಯಲ್ಲಿ, ಪಂಚಭೂತಗಳ ಸನ್ನಿಧಿಯಲ್ಲಿ ನನ್ನ ಕೆನ್ನೆಗೆ ಹಗುರವಾಗಿ ಮುತ್ತಿಟ್ಟರು. ‘ಗೋಪ್ಯವಾದದ್ದು ಎನ್ನಿಸುವ ಯಾವುದನ್ನೂ ನನಗೆ ಬರೆಯಬೇಡಾ. ಯಾಕೆಂದರೆ ನನಗೆ ಯಾವುದನ್ನೂ ಮುಚ್ಚಿಡುವ ಅಭ್ಯಾಸವಿಲ್ಲ. ಯಾರಾದರೂ ನಿನ್ನ ಪತ್ರ ಓದಿದರೆ ನಿನಗೆ ಬೇಸರವಾಗಬಾರದು!’ ‘ಬೇಸರವೇ? ಬೇಕಾದರೆ ಐಫಲ್ ಟವರ್ ಮೇಲಿನಿಂದ, ಎಂಪೈರ್ ಸ್ಟೇಟ್ ಬಿಲ್ಡಿಂಗ್ನಿಂದ, ನಮ್ಮದೇ ಯುಟಿಲಿಟಿ ಬಿಲ್ಡಿಂಗ್ ಮೇಲಿನಿಂದ ಇಡೀ ಜಗತ್ತಿಗೆ ಕೂಗಿ ಕೂಗಿ ಹೇಳುತ್ತೇನೆ…. ಐ ಲವ್ ಯೂ….’ ಅದಕ್ಕೆ, ತುಂಬ ಆರ್ತವಾಗಿ ಅವರು ಪ್ರತಿಕ್ರಿಯಿಸಿದ್ದು ಹೀಗೆ ‘ಥ್ಯಾಂಕ್ಯೂ’!

***

`ನಾನು ಸತ್ತ ಮೇಲೆ ನೀನು ಬೇರೆ ಯಾರಿಗೂ ಸೇರಬಾರದು. ಬೇರೆ ಯಾರನ್ನೂ ಪ್ರೀತಿಸಿ ಮದುವೆಯಾಗಬಾರದು. ನಾನು ಸತ್ತ ಸುದ್ದಿ ತಿಳಿದ ತಕ್ಷಣ. ನೀನು ಆತ್ಮಹತ್ಯೆ ಮಾಡಿಕೊಳ್ಳಬೇಕು. ಹಾಗಂತ ಪ್ರಾಮಿಸ್ ಮಾಡು’. ನಾನು ಏನು ಹೇಳಲಿ? ಆ ಕ್ಷಣಕ್ಕೆ ಅವನಿಗೆ ಇಡೀ ಬದುಕಿನ ಅರ್ಥವೇ ನನ್ನ ಉತ್ತರವನ್ನು ಅವಲಂಬಿಸಿತ್ತು. ಅವನ ಹತಾಶೆ. ಆತಂಕ ಎದ್ದು ಕಾಣುತ್ತಿತ್ತು. ನಾನು ನಕ್ಕು ಅವನ ಕೈ ಮೇಲೆ ಕೈ ಹಾಕಿ ಹೇಳಿದೆ. ‘ಪ್ರಾಮಿಸ್, ನೀನು ಸತ್ತರೆ ತಕ್ಷಣ ನಾನು ಸಾಯ್ತೀನಿ’.

****

ನಾನು ಗೋಡೆಯ ಕಡೆಗೆ ಮುಖಮಾಡಿ ಸುಮ್ಮನೇ ದಿಟ್ಟಿಸುತ್ತಿದ್ದೆ. ನಾನು ಕೊನೇ ಗಳಿಗೆಯಲ್ಲಿ ಈ ಕಡೆ ತಿರುಗಿ ತಟಕ್ಕನೆ ಏನೂ ಪೂರ್ವ ಯೋಜನೆ ಇಲ್ಲದೆ ಕೇಳಿದೆ. ‘ನಾನು ಏನೂ ಗಲಾಟೆ ಮಾಡದೇ ಫಿಸಿಯೋಥೆರಪಿ ಮಾಡಿಸಿಕೊಂಡರೆ ಏನು ಕೊಡ್ತೀಯಾ?’ ‘ಏನು ಬೇಕು?’ ಏನು ಕೇಳಬೇಕೋ ಗೊತ್ತಾಗದೇ ಒಂದು ಕ್ಷಣ ಯೋಚಿಸಿ ನಾನು ಉತ್ತರಿಸಿದೆ. ‘ನನಗೊಂದು ಮುತ್ತು ಕೊಡುತ್ತೀಯಾ?’ ಪದ್ಯ- ಈ ಜ್ವರ ಇಳಿಯುವ ಮೊದಲು ಚೆನ್ನಾಗಿ ಬೆವರಬೇಕು ಒಳಗಿನದೆಲ್ಲ ಹೊರ ಬರಬೇಕು ಅನುದಿನದ ಅಂತರಗಂಗೆ ದಾಟುವ ಯತ್ನ ಇದು.]]>

‍ಲೇಖಕರು G

19 April, 2012

6 Comments

  1. D.RAVI VARMA

    ಮೇಡಂ, ತುಂಬಾ ಮಾರ್ಮಿಕವಾಗಿದೆ, ಮೊದಲಿಂದಲೂ ಅಸ್ತೆ ನೀವು ಏನ್ ಮಾಡಿದ್ರು ಅದು ವಿಭಿನ್ನ ಹಾಗು ವಿಸಿಸ್ತ ವಾಗಿರುತ್ತೆ, ನಿಮ್ಮ ಈ ಪುಸ್ತಿಕೆ ತಕ್ಷಣ ಓದುವ ಕುತೂಹಲ ಹೆಚ್ಚಾಗಿದೆ, ಪ್ರಕಾಶಕರು ಯಾರು ತಿಲಿಸಿಲ್ಲವಲ್ಲ. ಸಾದ್ಯ ವಾದರೆ ಒಂದು ಪುಸ್ತಿಕೆ ವಿ,ಪಿ,ಪಿ ಕಳಿಸಿಕೊಡಿ ರವಿ ವರ್ಮ ,ಭಾರತೀಯ ಜೀವ ನಿಮ ನಿಗಮ ,ಹೊಸಪೇಟೆ ೫೮೩೨೦೧
    ೯೯೦೨೫೯೬೬೧೪

  2. Sandhya

    ಪ್ರತಿಭಾ ಅ೦ದರೆ ಜೀವ೦ತಿಕೆ, ಜೀವನದಿ, ಲ೦ಕೇಶರ ’ಅವ್ವ’, ತರ್ಕಶಾಸ್ತ್ರವನ್ನು ಮೀರಿದ ಜೀವಶಾಸ್ತ್ರ…. ಎಲ್ಲ ಹೆಣ್ಣುಗಳ ಬದುಕಿನ ಹನಿ ಹನಿ ನಿಮ್ಮ ಅ೦ತರಗ೦ಗೆ, ಹಾಗಾಗೆ ಇದು ನಮ್ಮೆಲ್ಲರ ಬದುಕು ಅನ್ನಿಸುತ್ತೆ, ನಮ್ಮಲ್ಲಿತ್ತು, ನೀವು ದನಿ ಕೊಟ್ಟಿರಿ… ಪುಸ್ತಕಕ್ಕಾಗಿ ಕಾಯುತ್ತಾ

  3. akshatha

    D.RAVI VARMa sir , pustakakkaagi 9449174662 athava 08182-241681 duravani sankye samparkisi. danyvadagalu.-Akshatha.K

  4. Vikram Hathwar

    Pratibhaa!!!

  5. malathi S

    Looking forward to this book
    malathi S

  6. chandrashekhar.g.jadar

    aatma kathe odidaga pratibhaaravara naija jeevanada sulivu sigutte. jeevandalli nadedaddannu hagee helo koovattu yellarigoo barolla. tamma jote aadaddannu hanchikondiruva pratibha madam avarige dhanyavadagalu. jeevanadalli maadiro sangharsha apratima. begane second part bareyalu nanna prarthane. dhanyavadagalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading