ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜಾವಾಣಿ-ದಿನೇಶ್ ಅಮೀನ್ ಮಟ್ಟು-ಅಕ್ಷತಾ ಮತ್ತು ನಾವೂ, ನೀವೂ

       

ವಿವೇಕಾನಂದರನ್ನು ಅಪ್ತರನ್ನಾಗಿಸಿತು

– ಅಕ್ಷತಾ ಹು೦ಚದಕಟ್ಟೆ

        ಅಮೀನಮಟ್ಟು  ಅವರ  ಲೇಖನ ಓದಿದ ನಂತರ ನನಗೆ ವಿವೇಕಾನಂದರು ಇನ್ನಸ್ಟು ಆಪ್ತರಾದರು. ಅಪ್ಪಟ ಮನುಷ್ಯರಂತೆ ಕಂಡರು. ವಾಲ್ಮೀಕಿ ಋಷಿ ಪರಂಪರೆಯ ಮುಂದುವರಿಕೆಯಂತೆ ಕಂಡರು . ಮನುಷ್ಯ ತಲ್ಲಣಗಳನ್ನು ಅರಿತು ಸಹನೆ, ಪ್ರೇಮ  ಮತ್ತು  ಪ್ರಾಮಾಣಿಕತೆಯಿಂದ ವರ್ತಿಸಿದ ವಿವೇಕಾನಂದರನ್ನು  ವೀರ   , ಶೂರ, ಧೀರ  ಎಂದೆಲ್ಲ  ಅರಚುತ್ತ ಭಾಷಣ ಮಾಡುತ್ತಿದ್ದವರಿಗಿಂತ ಅಪ್ಪಟ ಮಾನವೀಯತೆಯ ಅನ್ಥಕರಣದ ವ್ಯಕ್ತಿಯಾಗಿ ಅವರನ್ನು ಚಿತ್ರಿಸಿದ ಈ ಬರಹ ನನ್ನಂತೆ ಹಲವರಲ್ಲಿ ವಿವೇಕಾನಂದರ ಬಗ್ಗೆ ಮತ್ತಷ್ಟು  ಗೌರವ ಹೊಂದಲು ಪ್ರೇರೇಪಿಸುತ್ತದೆ ಎಂದು ನಾನು ನಂಬಿದ್ದೇನೆ. ಅಕ್ಷತಾರ೦ತೆಯೇ ಬರಹಕ್ಕೆ ಸ್ಪ೦ದಿಸಿದ ಕೆಲವರು… Iranna Shettar ‎”Satya” yavattiddaru belakige bande baruttade, Lekhanadondige mula maahiti ellinda tandiddu endu aakara granthagala patti neediddare eega kirichaduvavarella baymuchchi kulitukolluvantagiruttitta​llave?   Anilkumar Ogennavar ಅಮಿನ್ ಜೊತೆ ನಾವಿದ್ದೇವೆ…..   Basavaraj Sulibhavi ತುಂಬ ಮಾನವೀಯ ನೆಲೆಯಲ್ಲಿ ವಿವೇಕಾನಂದರನ್ನು ಕಟ್ಟಕೊಟ್ಟ ದಿನೇಶ ಜತೆ ನಾವೆಲ್ಲ ಇದ್ದೇವೆ   Laxminarasimha Kanthaveenam ವಿವೇಕಾನಂದರ ಅಭಿಮಾನಿಯಾಗಿದ್ದ ನನ್ನ ಗೆಳೆಯರೊಬ್ಬರು ಮೂವತ್ತು ವರ್ಷಗಳಹಿಂದೆ ಹೇಳಿದ ವಿವೇಕರ ಉಕ್ತಿ ಇದು: “ಈಟ್ ಎನಿಥಿಂಗ್ ಬಟ್ ಬಿ ಎ ಹ್ಯುಮನ್ ಬಿಯಿಂಗ್” ( ಮಾಂಸಾಹಾರ ಒಳ್ಳೆಯದೇ ಅಥವ ಕೆಟ್ಟದ್ದೇ ಎಂಬ ತಮ್ಮ ಶಿಷ್ಯನ ಪ್ರಶ್ನೆಗೆ ಉತ್ತರವಾಗಿ)  ]]>

‍ಲೇಖಕರು G

18 January, 2012

11 Comments

  1. malathi S

    Also pls read the response to Sri Dinesh’s article in todays Prajavani- under Sangata/Editorial
    ms

  2. Chandrashekhar Aijoor

    ಮಿತ್ರರೇ, ಕನ್ನಡದ ದಿಟ್ಟ ಬರಹಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಮೊನ್ನೆ ಪ್ರಜಾವಾಣಿಯಲ್ಲಿ ಬರೆದ ಲೇಖನವನ್ನು ನೆಪವಾಗಿಟ್ಟುಕೊಂಡು ಬಲಪಂಥೀಯ ವಲಯದ ಸೈತಾನರು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳನ್ನೇ ಹಿಚುಕಲು ಮುಂದಾಗುತ್ತಿದ್ದಾರೆ. ದಿನೇಶರೊಂದಿಗೆ ಪ್ರಜಾವಾಣಿಗೆ ನೈತಿಕ ಬೆಂಬಲ ಸೂಚಿಸಲು ನಾವೆಲ್ಲ ಗೆಳೆಯರು ಈ ದಿನ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪ್ರಜಾವಾಣಿ ಕಛೇರಿ ಎದುರು ಸೇರಬೇಕೆಂದು ನಿರ್ಧರಿಸಿದ್ದೇವೆ. ತಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಿತ್ರರೊಂದಿಗೆ ನಮ್ಮ ಜತೆಗೂಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ತಡೆಯೋಣ; ನಿಷ್ಠುರ ಪತ್ರಕರ್ತನ ಬೆನ್ನಿಗೆ ನಾವೆಲ್ಲ ನಿಲ್ಲೋಣ.

  3. veeranna madiwalar

    ಈ ಹಿಂದೆ ಲಂಕೇಶ್ ತುಂಬಾ ಪರಿಣಾಮಕಾರಿಯಾಗಿ ವಿವೇಕಾನಂದರ ಮನುಷ್ಯ ಸಹಜತೆಯನ್ನು ಬರೆದಿದ್ದರು. ಅವರ ಲೇಖನದಲ್ಲಿ ಬರುವ ಒಂದು ಮಾತು ಹೀಗಿದೆ….
    ವಿವೇಕಾನಂದರ ವತ೵ನೆಗಳನ್ನು ಕಂಡು ಕೆಲವು ಜನ ಪರಮಹಂಸರಿಗೆ ಕಂಪ್ಲೇಂಟ್ ಮಾಡಿದರಂತೆ, ಆಗ ಪರಮಹಂಸರು ” ವಿವೇಕಾನಂದರ ಬಾಯೊಳಗೆ ಏನು ಹೋಗುತ್ತಿದೆ ಎಂಬುದನ್ನು ನೋಡದೆ, ಅವನ ಬಾಯಿಂದ ಏನು ಬರುತ್ತಿದೆ ಎಂಬುದನ್ನಷ್ಟೇ ತೆಗೆದುಕೊಳ್ಳಿ” ಎಂದರಂತೆ. ದಿನೇಶ್ ರು ಜೀವಂತಿಕೆ ಇರುವ ಮನುಷ್ಯರೆಲ್ಲರೂ ವಿವೇಕಾನಂದ ೆಂಬ ಮನುಷ್ಯನಿಂದ ೇನು ಪಡೆಯಬಹುದು ಎಂಬುದನ್ನು ತುಂಬ ಆಥ೵ಪೂಣ೵ವಾಗಿ ದಾಖಲಿಸಿದ್ದಾರೆ… ಇದಕ್ಕೆ ನಾವೆಲ್ಲ ಬದ್ಧರು..

  4. ಪುರುಷೋತ್ತಮ ಕೆ

    `ಮೌನ ಮತ್ತು ತೀಕ್ಷ್ಣ ಪ್ರತಿಭಟನೆ’ ಎಂದು ಆರ್್ಎಸ್್ಎಸ್ ಪ್ರತಿನಿಧಿಗಳು ಪ್ರಜಾವಾಣಿ ಪ್ರತಿಕಾ ಕಚೇರಿ ಮುಂದೆ ಕೂಗಾಡುತ್ತಾ ಅರಚಿದರು. ದಿನೇಶ್ ಅಮಿನ್್ಮಟ್ಟು ಅವರ ವಿವೇಕಾನಂದರ ಕುರಿತು ಬರೆದ ಲೇಖನಕ್ಕೆ ಘೇರಾವ್ ಹಾಕಲು ಮೌನದ ಮುಖೇಡಿಗಳು ಸಾಲುಸಾಲಾಗಿ ನಿಂತರು. ಮೌನ ಪ್ರತಿಭಟನೆ ಎಂದು ಹೇಳಿದ ಮಹನೀಯರು ತೀಕ್ಷ್ಣವಾಗಿ ಪ್ರಚೋದಿಸಿದರು. ಕೊನೆಗೆ ನೈತಿಕತೆ ಕಳೆದುಕೊಂಡ ಜೀವವಿರೋಧಿಗಳು ಗೆದ್ದೇವೆಂದು ಬೀಗುತ್ತಾ ಭಾರತಾಂಭೆಗೆ ಜೈ ಎಂದು ಕೂಗಿ ಅಪಮಾನವೆಸಗಿದರು. ವಿವೇಕಾನಂದರ ಹೆಸರನ್ನು ದುರ್ಬಳಿಕೆ ಮಾಡಿಕೊಂಡು ನಕ್ಕುನಲಿಯುತ್ತಾ ಹೊರಟುಹೋದರು.
    ವಿವೇಕಾನಂದರನ್ನು ಮೌನದಿಂದಿರಿಸಿ ಅವರ ಮಾನ ಹರಾಜು ಮಾಡಲು ಹೊರಟ ಮಹನೀಯರಿಗೆ ನನ್ನ ಮನವಿ ಇಷ್ಟೆ… ಅವರ ಆಲೋಚನೆಗಳಲ್ಲಿ ಒಂದನ್ನಾದರೂ ಪಾಲಿಸಿದ್ದೀರಾ? ಪಾಲನೆಗೆ ನೀವು ಅರ್ಹರೇ? ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಮುಂದೆ ಬನ್ನಿ… ಚಡ್ಡಿಯಿಂದ ಜೀನ್ಸ್್ಗೆ ಬಂದಿದ್ದೂ ಆಗಿದೆ, ಅದನ್ನು ತೊಡಬೇಡಿ ಎಂದು ನಾವು ಹೇಳುವುದಿಲ್ಲ. ಅದು ನಿಮ್ಮ ಇಚ್ಚೆಗೆ ಬಿಟ್ಟದ್ದು…
    ಮತ್ತೆ…. ದಿನೇಶ್ ಅಮಿನ್್ಮಟ್ಟು ಅವರು ಬರೆದ ಲೇಖನದಿಂದ ನಿಜಕ್ಕೂ ವಿವೇಕಾನಂದರ ಬಗ್ಗೆ ಮತ್ತಷ್ಟು ಒಲವು ಹೆಚ್ಚಿದೆ. ವಿವೇಕಾನಂದರು ಯಾರ ಸ್ವತ್ತು ಅಲ್ಲ; ಅವರು ಜನಸಾಮಾನ್ಯರ ಸ್ವತ್ತು.
    – ವಿವೇಕಾನಂದರ ಅಭಿಮಾನಿ

  5. ಡಾ.ಟಿ.ಎನ್. ವಾಸುದೇವಮೂರ್ತಿ

    ಪ್ರತಿಭಟನೆ ಮಾಡಿದವರು ತಾವು ನಿಷ್ಠರಾಗಿರುವುದು ವಿವೇಕಾನಂದರಿಗೋ ಸಂಪ್ರದಾಯಕ್ಕೋ ಎಂಬುದನ್ನು ಸ್ಪಷ್ಟಪಡಿಸಲಿ. ವಿವೇಕಾನಂದರನ್ನು ತಿಳಿಯುವ ಆಸಕ್ತಿ, ಪ್ರೀತಿಗಳನ್ನು ಕಳೆದುಕೊಂಡವರು ಮಾತ್ರ ಹೀಗೆ ’ವಿವೇಕಾನಂದರಿಗೆ ಜಯಕಾರ ಮಾತ್ರ ಹಾಕಿ’ ಎಂದು ಆಗ್ರಹಿಸುವುದು.

  6. Samvartha 'Sahil'

    Ramachandra Gandhi narrates this incident from Swami Vivekananda’s life, in his book Sita’s Kitchen:
    Towards the end of his life Swami Vivekananda was in Kashmir. Even in the paradise of earth, as Ramachandra Gandhi writes, the heart of Vivekananda was heavy and felt tormented by the fact that successive invaders has desecrated and destroyed countless sacred images of Hinduisms Gods and Goddesses and pulled down Hindu temples and built mosques over their ruins. Unable to bear the burden of the humiliating testimony of History, Ramchandra Gandhi writes, Vivekananda poured out his anguish at the feet of divine mother in a Kali temple. “How could you let this happen, Mother, why did you permit this desecration?” asked despairingly. Kali whispered in his heart the following reply to his question: “What is it with you, Vivekananda, if the invader breaks my images. Do you protect me, or do I protect you?”

  7. ವಿಠ್ಠಲ ದಳವಾಯಿ

    ಸನಾತನವಾದಿಗಳು ಹೊಸ ವಿಚಾರಗಳನ್ನು. ವೈಚಾರಿಕತೆಯನ್ನು ಒಪ್ಪುವುದೇ ಇಲ್ಲ಼ ಅದಕ್ಕೆ ಹೀಗೆ ಅರಚಾಡುತ್ತಾರೆ. ಇದನ್ನೆಲ್ಲ ನಾವು ಗಟ್ಟಿಯಾಗಿ ಖಂಡಿಸಬೇಕು.

  8. Sharadhi

    ಹಹ್ಹಹ್ಹ!, ಈ ಲೇಖನ ನನಗೆ ಆಶ್ಚರ್ಯ ಏನೂ ಉಂಟುಮಾಡಲಿಲ್ಲ. ಆದರೆ ಹತ್ತು ಹಲವು ಸೈಕೋ ಫ್ಯಾನ್ಸಿ ಗಳಿಂದ ‘ನಳನಳಿಸುತ್ತಿರುವ’ , ತೀವ್ರ ಅನಾರೋಗ್ಯಕರವಾದ ವ್ಯಕ್ತಿ ಪೂಜೆಯನ್ನು ಪೋಷಿಸಿಕೊಂಡು ಬಂದಿರುವ, ಮಾತು ಸೋತು ಬರೀ ಪ್ರತಿಮೆಗಳಲ್ಲೀ ಹೂತು ಹೋಗಿರುವ ಭಾರತೀಯ ಸಮಾಜ ಈ ಸತ್ಯವನ್ನು ಹೇಗೆ ಅರಗಿಸಿಕೊಳ್ಳುತ್ತದೆ?. ಒಟ್ಟಿನಲ್ಲಿ, ಪವಾಡಗಳ ಅಶ್ಲೀಲತೆಗೆ ಮನ ಸೋಲದೆ, ಬದುಕನ್ನು ಮೌಲ್ಯ ಶೋಧನೆಗೆ ಒಡ್ಡಿಕೊಂಡು ಬದುಕುವುದೇ ಶ್ರೇಷ್ಠ. ಅಲ್ಲವೇ?

  9. Chandrashekhar Aijoor

    ವಿವೇಕಾನಂದರನ್ನು ಕುರಿತ ಸಂದರ್ಭೋಚಿತ ಲೇಖನ ಬರೆದ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟು ಅವರಿಗೆ ಬೆದರಿಕೆ ಒಡ್ಡುತ್ತಿರುವ ಶಕ್ತಿಗಳ ವಿರುದ್ಧ, ಪ್ರಜಾವಾಣಿ ಶಿವಮೊಗ್ಗ ಕಚೇರಿಯಲ್ಲಿ ದಾಂಧಲೆ ನಡೆಸಿದ ಧರ್ಮಾಂಧರ ವಿರುದ್ಧ, ವಿವೇಕಾನಂದರನ್ನು ನೀಚ, ಯಥಾಸ್ಥಿತಿವಾದಿ ಸಂಘಪರಿವಾರದಿಂದ ಬಿಡುಗಡೆಗೊಳಿಸುವ ಸಲುವಾಗಿ ಪ್ರಗತಿಪರ ಸಂಘಟನೆಗಳು ನಾಳೆ ಶುಕ್ರವಾರ ಬೆಳಿಗ್ಗೆ 11ಗಂಟೆಯಿಂದ ಮಹಾತ್ಮ ಗಾಂಧಿ ರಸ್ತೆ ಮಹಾತ್ಮ ಗಾಂಧಿ ಪ್ರತಿಮೆ ಬಳಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿವೆ. ಮಾನವತೆಯಲ್ಲಿ ವಿಶ್ವಾಸವಿಟ್ಟ ಎಲ್ಲ ಜನಪರರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡುತ್ತೇವೆ. ಬನ್ನಿ, ವಿವೇಕಾನಂದರು ಇಡೀ ಜಗತ್ತಿಗೆ ಬೆಳಕು ಕೊಟ್ಟವರು, ಅವರನ್ನು ದುಷ್ಟಶಕ್ತಿಗಳಿಂದ ಬಿಡುಗಡೆಗೊಳಿಸೋಣ. ದಿನೇಶ್ ಅಮೀನ್ ಮಟ್ಟು ಅವರಿಗೆ ನಮ್ಮ ನೈತಿಕ ಬೆಂಬಲ ಸೂಚಿಸೋಣ.

  10. Jaleel

    ಪ್ರಜಾವಾಣಿಯಲ್ಲಿ ದಿನೇಶ್ ಅಮೀನ್ ಮಟ್ಟುರವರು ತಮ್ಮ ಅಂಕಣದಲ್ಲಿ ವಿವೇಕಾನಂದರ ಬಗ್ಗೆ ಬರೆದ ‘‘ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು’’ ಎಂಬ ಲೇಖನದ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ನೋಡಿದರೆ ನಮಗೆ ಮನುಷ್ಯರ ಜೊತೆಗೆ ಬದುಕುವುದು ಗೊತ್ತಿಲ್ಲ ಎಂಬುದು ಸಾಬೀತಾಗುತ್ತಿದೆ. ಮನುಷ್ಯರಿದ್ದ ಕಡೆ ಮನುಷ್ಯರ ಬಗ್ಗೆ ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳಿರುತ್ತವೆ. ವಿವೇಕ ಹುಟ್ಟು ವುದು ಅವುಗಳ ನಡುವಿನ ಮಂಥನದಲ್ಲಿ. ಅಂತಿಮದಲ್ಲಿ ಆ ವಿವೇಕದ ಬದುಕೇ ಆನಂದ ವನ್ನು ನೀಡುತ್ತದೆ. ಮನುಷ್ಯರಿಲ್ಲದ ಕೇವಲ ದೇವರು ಮತ್ತು ದೆವ್ವಗಳಿರುವ ಸಮಾಜದಲ್ಲಿ ಭಕ್ತಿ ಅಥವಾ ಭೀತಿ ಮಾತ್ರ ಇರಲು ಸಾಧ್ಯ. ಅಂಥ ಕಡೆ ಮನುಷ್ಯನ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಹೆಣವಾಗಿರುತ್ತದೆ. ಮತ್ತಲ್ಲಿ ಪ್ರಜಾತಂತ್ರವೂ ಉಳಿಯುವುದಿಲ್ಲ. ಆದರೆ ಇಂದು ಅಸಹನೆ, ಅಸಹಿಷ್ಣುತೆ ಮತ್ತು ದ್ವೇಷ ಗಳೇ ಸಮಾಜದ ಮುಖ್ಯ ಧಾರೆಯನ್ನು ಆವರಿಸಿ ಕೊಂಡಿದೆ. ವಿವೇಕದ ಆನಂದಕ್ಕಿಂತ ಅವಿವೇಕದ ಆವೇಶವೇ ವರ್ತಮಾನವನ್ನು ಮತ್ತು ಗತವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ.ಆ ಅವಿವೇಕಾನಂದಿಗಳೇ ಮಟ್ಟುರವರ ಲೇಖನವನ್ನು ಮತ್ತು ವಿವೇಕಾನಂದರ ದರ್ಶನವನ್ನೂ ತಿರುಚಲು ಪ್ರಯತ್ನಿಸುತ್ತಿದ್ದಾರೆ.
    ಮಟ್ಟುರವರು ತಮ್ಮ ಲೇಖನದಲ್ಲಿ ಪ್ರಧಾನವಾಗಿ, ನಮ್ಮಂತೆ ಸಾಮಾನ್ಯ ಮನುಷ್ಯರಾದ ನರೇಂದ್ರನಾಥ ಅಪಾರ ಪರಿಶ್ರಮ ಮತ್ತು ತುಳಿತಕ್ಕೊಳಗಾದ ಜನರ ಬಗೆಗಿನ ಅಪಾರ ಅನುಕಂಪ ಮತ್ತು ಬದ್ಧತೆಯಿಂದ ನಡೆಸಿದ ಅಧ್ಯಯನದಿಂದ ಹೇಗೆ ವಿವೇಕಾನಂದರಾದರು ಎಂಬುದನ್ನಷ್ಟೆ ಹೇಳಿದ್ದಾರೆ. ಆದರ್ಶಗಳನ್ನು ಮತ್ತು ಆದರ್ಶ ಜೀವನ ನಡೆಸಿದ ವರನ್ನು ಬಣ್ಣಿಸುವಾಗ ಆ ಆದರ್ಶಗಳು ಅಸಾಮಾನ್ಯರಿಂದ ಮಾತ್ರ ಸಾಧ್ಯ ಎಂಬ ಧ್ವನಿ ಹೊರಡುತ್ತದೆ.ಮತ್ತು ಅತಿ ಸಹಜವಾಗಿ ಸಾಧ್ಯವಾಗಬಹುದಾದ ಸಾಧಿಸಬಹುದಾದ ಗುಣಗಳನ್ನೂ ಅಸಾಧ್ಯವೆಂದೂ, ಅಸಹಜ ವೆಂದೂ ಮಾಡಿ ಬಿಡುವುದು ಇದರ ಇನ್ನೊಂದು ಮುಖ. ಆದರೆ ವಿವೇಕಾನಂದರ ಬದುಕು ಸಾಮಾನ್ಯರೂ ಸಹ ಆದರ್ಶ ಬದುಕಿನ ಆನಂದ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸುತ್ತದೆ ಎಂಬ ಮಟ್ಟು ಅವರ ಲೇಖನದ ಧ್ವನಿ ಆರೋಗ್ಯಪೂರ್ಣ ವಾದದ್ದು.
    ಇದಲ್ಲದೆ ವಿವೇಕಾನಂದರ ಬದುಕನ್ನು ಮತ್ತು ಅವರ ವಿವೇಕದ ಸಾರಾಂಶವನ್ನು ವಿವರಿಸುವಾಗ ಮಟ್ಟುರವರು ಹೇಗೆ ವಿವೇಕಾನಂದರ ವಿವೇಕ ಮತ್ತು ಆನಂದದ ಮೂಲ ಈಗ ಸಂಘಪರಿವಾರ ಬಣ್ಣಿಸು ತ್ತಿರುವ ಆದರ್ಶ, ವಿವೇಕ, ಮತ್ತು ಆನಂದ ಗಳಿಗಿಂತ ಭಿನ್ನವಾಗಿತ್ತು ಎಂದು ವಿವರಿಸು ತ್ತಾರೆ. ಇದು ಅತಿ ಮುಖ್ಯ. ಮತ್ತು ಅವಿವೇಕಾ ನಂದಿಗಳ ಕುತರ್ಕದ ಮೂಲ. ಅದರಲ್ಲಿ ಅತಿ ಮುಖ್ಯವಾದದ್ದು ಹೇಗೆ ವಿವೇಕಾನಂದರ ಧರ್ಮ ದರ್ಶನ ಮತ್ತು ಜೀವನ ದರ್ಶನ ಪುರೋಹಿತಶಾಹಿ ವಿರೋಧಿ ಯಾಗಿತ್ತು ಎಂಬುದು.
    ವಾಸ್ತವವಾಗಿ ಮಟ್ಟುರವರು ಪದಮಿತಿಯಿಂದ ಉದ್ಧರಿಸಲಾಗದ ವಿವೇಕಾನಂದರ ಹಲವು ವ್ಯಾಖ್ಯಾನಗಳು ವಿವೇಕಾನಂದರ ಆಧ್ಯಾತ್ಮ ಮತ್ತು ಧರ್ಮ, ಸಂಘಪರಿವಾರದ ಹಿಂದುತ್ವಕ್ಕಿಂತ ಹೇಗೆ ಭಿನ್ನ ವಾಗಿತ್ತು ಎಂಬುದನ್ನು ಸಾಬೀತು ಪಡಿಸುತ್ತದೆ. ಉದಾಹರಣೆಗೆ ರಾಮಕೃಷ್ಣ ಮಿಷನ್ನೇ ಪ್ರಕಟ ಪಡಿಸಿರುವ ‘ವಿವೇಕಾನಂದರ ಸಮಗ್ರ ಬರಹ’ ಗಳ ಆರನೇ ಸಂಪುಟದಲ್ಲಿ ವಿವೇಕಾನಂದರು ಆಧ್ಯಾತ್ಮದ ಬಗ್ಗೆ ಮಾಡಿರುವ ಭಾಷಣವಿದೆ. ಅದರಲ್ಲಿ ಅವರು ಆಧ್ಯಾತ್ಮವೆಂಬುದು ಮನುಷ್ಯ ರೆಲ್ಲ ಒಂದೇ ಎಂಬ ಸತ್ಯವನ್ನು ಪ್ರತಿಪಾದಿಸು ತ್ತದೆ. ಆ ತಿಳುವಳಿಕೆಯನ್ನು ಸಾಧಿಸಲು ಕ್ರೈಸ್ತ ಧರ್ಮ, ಇಸ್ಲಾಂ, ಬೌದ್ಧ ಹಾಗೂ ಹಿಂದೂ ಧರ್ಮಗಳೆಂಬ ಮಾರ್ಗಗಳಿವೆಯಷ್ಟೇ ಎನ್ನುತ್ತಾರೆ.
    ಹಿಮಾಲಯದ ಅಲ್ಮೊರದ ಅದ್ವೈತ ಆಶ್ರಮ ಹೊರತಂದಿರುವ ‘ವಿವೇಕಾನಂದರ ಸಮಗ್ರ ಪತ್ರಗಳ’ ಸಂಪುಟದಲ್ಲಿ ‘‘ವಾಸ್ತವವಾಗಿ ಮನುಕುಲವನ್ನು ವೇದಗಳು, ಕುರ್‌ಆನ್ ಮತ್ತು ಬೈಬಲ್‌ಗಳಿಲ್ಲದ ಸ್ಥಿತಿಗೆ ಕೊಂಡೊಯ್ಯಬೇಕು. ಆದರೆ ಅದರ ಪ್ರಥಮ ಹೆಜ್ಜೆ, ವೇದ, ಕುರ್‌ಆನ್ ಮತ್ತು ಬೈಬಲ್‌ಗಳ ತತ್ವಾದರ್ಶಗಳ ಸಮನ್ವಯ ಮಾಡುವುದು’’ ಎಂದು ಹೇಳುತ್ತಾರೆ. ಈ ಹೇಳಿಕೆಯಲ್ಲಿ ಅಸಾಧ್ಯವಾದ ಹಲವು ಅಂಶಗಳಿರಬಹುದಾದರೂ ವಿವೇಕಾನಂದರ ವಿಚಾರ ಸರಣಿ ಹಾಗಿತ್ತು. ಉದಾಹರಣೆಗೆ ಹಿಂದೂ ಧರ್ಮ ಎಂದಾಗ ಅಬ್ರಾಹ್ಮಣ ಆಚರಣೆಗಳು ಪ್ರಧಾನ ಧಾರೆ ಹಿಂದೂವಾಹಿನಿಯಲ್ಲಿ ಪರಿಗಣಿಸಲ್ಪಡುವುದೇ ಇಲ್ಲ. ಈಗಂತೂ ದಲಿತರು ಮತ್ತು ಪ್ರಜ್ಞಾವಂತ ಶೂದ್ರರು, ಲಿಂಗಾಯತರು ತಮ್ಮನ್ನು ಹಿಂದೂ ಎಂದು ಕರೆಸಿಕೊಳ್ಳಲು ನಿರಾಕರಿಸುತ್ತಾರೆ.
    ಆದರೆ ಆ ಕಾಲಘಟ್ಟದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತೀಯತೆಯ ಸಾಂಸ್ಕೃತಿಕ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಭಾಗವಾಗಿ ಹಿಂದೂ ಎಂಬುದನ್ನು ಒಂದು ಅಖಂಡ ಅಸ್ಮಿತೆಯನ್ನಾಗಿ ಕಟ್ಟಿಕೊಳ್ಳುವ ಪ್ರಯತ್ನವನ್ನು ಅಂಬೇಡ್ಕರ್ ಅವರನ್ನು ಬಿಟ್ಟು ಮಿಕ್ಕ ಎಲ್ಲರೂ ಮಾಡಿದ್ದರು. ಆದರೆ ಇತರ ಕಾಂಗ್ರೆಸ್ ಅಥವಾ ಆರೆಸ್ಸೆಸ್ ನಾಯಕರಂತೆ ಹಿಂದೂ ಧರ್ಮದ ಸುಧಾರಿತ ಅಖಂಡತ್ವವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆಹಾರ, ಉಡುಪು, ಧರ್ಮಾಚರಣೆಗಳಲ್ಲಿದ್ದ ಬ್ರಾಹ್ಮಣೀಯ ಶ್ರೇಣೀಕರಣವನ್ನು ಖಂಡತುಂಡವಾಗಿ ಖಂಡಿಸುತ್ತಿದ್ದ ವಿವೇಕಾನಂದರು ಭಾರತದಲ್ಲಿ ಇನ್ನೂ ಬದಲಾವಣೆಯ ಬಿರುಗಾಳಿ ಶೂದ್ರ ಸಂವೇದನೆಗಳಿಂದಲೇ ಬರಬೇಕೆಂದು ಪ್ರತಿಪಾದಿಸಿದ್ದರು.
    ಎಲ್ಲ ನಾಗರಿಕತೆಗಳಲ್ಲೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವಿಭಜನೆಗಳಿರುತ್ತವೆ. ಈವರೆಗಿನ ಎಲ್ಲ ನಾಗರಿಕತೆಗಳಲ್ಲೂ ಬ್ರಾಹ್ಮಣ, ವೈಶ್ಯ, ಕ್ಷತ್ರೀಯರು ಆಳಿದ್ದಾಗಿದೆ. ಇನ್ನು ಎಲ್ಲೆಡೆ ಶೂದ್ರರ ಕಾಲ ಎಂಬ ತಾರ್ಕಿಕ ಮತ್ತು ತಾತ್ವಿಕವಾದವನ್ನು ಪ್ರತಿಪಾದಿಸುತ್ತಿದ್ದರು. ವಿಗ್ರಹಾರಾಧನೆ, ಪುರೋಹಿತಶಾಹಿಯ ಶೋಷಣೆ, ವರ್ಣಾಶ್ರಮ, ಬ್ರಾಹ್ಮಣ್ಯ ಇವುಗಳ ಬಗ್ಗೆ ಅವರಿಗೆ ಅತ್ಯಂತ ಆಕ್ರೋಶದ ಪ್ರತಿರೋಧವಿತ್ತು. ಹೀಗೆ ವಿವೇಕಾನಂದರ ವಿವೇಕ ಮತ್ತು ಆನಂದ ಹಾಗೂ ಆದರ್ಶಗಳ್ಯಾವುವೂ ಸಂಘಪರಿವಾರದ ಪ್ರತಿಗಾಮಿ ತತ್ವಗಳಿಗೆ ಪೂರಕವಾಗಿಲ್ಲ. ವಾಸ್ತವವಾಗಿ ವಿವೇಕಾನಂದರ ಜೀವನ ಮತ್ತು ಧರ್ಮ ದರ್ಶನದಲ್ಲಿದ್ದ ಈ ಬ್ರಾಹ್ಮಣ್ಯ ವಿರೋಧಿ ಅಂಶಗಳನ್ನು ಮರೆಮಾಚಿಯೇ ಅವರನ್ನು ಸಂಘಪರಿವಾರ ಹಿಂದುತ್ವದ ವಕ್ತಾರನನ್ನಾಗಿ ಮಾಡಲು ಪ್ರಯತ್ನ ನಡೆಸಿದೆ.
    ಇನ್ನು ಮಟ್ಟು ಅವರ ಲೇಖನದಲ್ಲಿ ಆದರ್ಶ ಮಯ ವ್ಯಕ್ತಿಯೊಬ್ಬನ ಬದುಕನ್ನ ಹೀಗೆಳೆಯಲಾಗಿದೆ ಎಂಬ ತಪ್ಪು ಆರೋಪವನ್ನು ಇನ್ನಿತ ರರು ಮಾಡುತ್ತಿದ್ದಾರೆ. ವಾಸ್ತವದಲ್ಲಿ ಈ ಆರೋಪದ ಹಿಂದೆ ‘‘ಕುಡಿಯದ, ಮಾಂಸಾ ಹಾರ ಮಾಡದ, ಪೂರ್ವಜರ ಬಗ್ಗೆ ಅವಿಮ ರ್ಶಾತ್ಮಕ ಆರಾಧನೆ’’ ಇರುವ ಮೌಲ್ಯಗಳೇ ನಿಜವಾದ ಆದರ್ಶವೆಂಬ ಒಂದು ‘ಕುಲೀನ ತಿಳುವಳಿಕೆ’ ಇದೆ. ಮಟ್ಟು ಅವರ ಮೊದಲ ಲೇಖನ ಸಾರಾಂಶದಲ್ಲಿ ಈ ಆದರ್ಶಗಳ ನೆಲೆಗಟ್ಟನ್ನೇ ಪ್ರಶ್ನಿಸುತ್ತದೆ. ಅದರ ಹಿಂದಿರುವ ಬ್ರಾಹ್ಮಣೀಯ ಶ್ರೇಣೀ ಕರಣದ ತಿಳವಳಿಕೆಯನ್ನು, ಜನಸಾಮಾ ನ್ಯರ ಬದುಕಿನ ದರ್ಶನವನ್ನೂ ಅಮೌಲ್ಯಗೊಳಿಸುವ ಪುರೋಹಿತಶಾಹಿ ಹುನ್ನಾರವನ್ನು ಪ್ರತಿರೋಧಿಸುತ್ತದೆ. ವಿವೇಕಾನಂದರ ಬದುಕು ಈ ಹುಸಿ ಮತ್ತು ಜೀವವಿರೋಧಿ ಆದರ್ಶಗಳ ಬದಲಿಗೆ ಪರ್ಯಾಯ ಜೀವನ ಮೌಲ್ಯ ಮತ್ತು ಆದರ್ಶಗಳನ್ನು ಕಟ್ಟುತ್ತದೆ. ಅದರಲ್ಲಿ ಶೂದ್ರ ಬದುಕಿನ ಮಾಂಸಾಹಾರ, ಶ್ರಮ, ಸಹಕಾರ, ಸಹಜೀವನ ಎಲ್ಲವೂ ಪರ್ಯಾಯ ಆದರ್ಶಗಳಾಗುತ್ತವೆ.
    ವಿವೇಕಾನಂದರ ಖಾಸಗಿ ಬದುಕು ಮತ್ತು ಸಾರ್ವಜನಿಕ ಪ್ರತಿಪಾದನೆ ಯಾವುದ ರಲ್ಲೂ ಅವರು ಮಾಂಸಾಹಾರ, ಆರಾ ಧನೆಗಳ ಬಗ್ಗೆ ಶೂದ್ರ ಆಚರಣೆಗಳಿಗೂ ಮೌಲ್ಯವನ್ನು ತಂದುಕೊಟ್ಟರು. ಹೀಗಾಗಿ ಮಟ್ಟುರವರು ತಮ್ಮ ಲೇಖನದಲ್ಲಿ ಆದರ್ಶ ವಿವೇಕಾನಂದರ ಮೇಲೆ ಧೂಳೆರಚಿಲ್ಲ. ಬದಲಿಗೆ ಪರ್ಯಾಯ ಆದರ್ಶಗಳನ್ನು ಹೇಗೆ ಕಟ್ಟಿದರು ಎಂದು ವಿವರಿಸಿದ್ದಾರೆ. ಇದರಷ್ಟೆ ಮುಖ್ಯವಾದದ್ದು ಭಾರತಕ್ಕೆ ಇಂದು ‘‘ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು’’ ಬೇಕೆಂಬ ಅವರ ತಿಳುವಳಿಕೆ. ಅವರ ಪ್ರಕಾರ ವೇದಾಂತವೆಂದರೆ ಇಂದು ಪ್ರಚುರವಾಗಿರುವಂತೆ ಹಿಂದೂ ಧರ್ಮವಲ್ಲ. ಅದು ಎಲ್ಲ ಮನುಷ್ಯರಲ್ಲೂ ದೈವತ್ವವಿದೆ ಎಂದು ಅರ್ಥಮಾಡಿಕೊಳ್ಳುವ ಅರಿವು. ಅದೇ ಧರ್ಮ ಸಾರ. ಅವರ ಪ್ರಕಾರ ಸಕಲ ಧರ್ಮ ಸಾರ. ಇದನ್ನು ಪ್ರತಿಯೊಬ್ಬರೂ ತಮ್ಮದೇ ಆದ ಮಾರ್ಗದಲ್ಲಿ ಅರಿತುಕೊಳ್ಳಬೇಕು.
    ಒಂದು ಗುರಿಯನ್ನು ತಲುಪಲು ಹಲವು ಮಾರ್ಗಗಳಂತೆ ಈ ವೇದಾಂತ ಜ್ಞಾನವನ್ನು ಪಡೆದುಕೊಳ್ಳಲು ಹಿಂದೂ ಧರ್ಮವನ್ನು ಒಳಗೊಂಡಂತೆ, ಇಸ್ಲಾಂ, ಕ್ರೈಸ್ತ ಧರ್ಮ ಸೇರಿದಂತೆ ಹಲವು ಮಾರ್ಗಗಳಿವೆ. ಅದರಲ್ಲಿ ಹಿಂದೂ ಧರ್ಮವೂ ಒಂದು ಮಾರ್ಗವಷ್ಟೆ ಎಂದು ವಿವೇಕಾನಂದರು ಭಾವಿಸಿದ್ದರು. ಆದರೆ ಹಿಂದೂ ಧರ್ಮ ತನ್ನ ಆಚರಣೆಯಲ್ಲಿ ಪಡೆದುಕೊಂಡಿರುವ ವಿಕೃತಿಯನ್ನು, ವರ್ಣಾಶ್ರಮದ ತಾರತಮ್ಯವನ್ನೂ, ಪುರೋಹಿತಶಾಹಿ ಪ್ರಾಧಾನ್ಯವನ್ನೂ ಕಂಡು ‘‘ಭಾರತಕ್ಕೆ ವೇದಾಂತದ ಮೆದುಳು ಮತ್ತು ಇಸ್ಲಾಮಿನ ದೇಹ’’ ಬೇಕೆಂದು ಹೇಳಿದ್ದರು.
    ಅಂದರೆ ವೇದಾಂತದ ತಿಳವಳಿಕೆಯನ್ನು ಪಡೆಯಲು ಭಾರತಕ್ಕೆ ಇಸ್ಲಾಮಿಕ್ ಮಾರ್ಗ ಬೇಕೆಂಬುದು ಅವರ ತಾತ್ಪರ್ಯ. ವೇದಾಂತದ ತಿಳುವಳಿಕೆ ಅದು ಎಷ್ಟೇ ಉತ್ತಮವಿರಲಿ ಅದು ಪ್ರಾಯೋಗಿಕ ಇಸ್ಲಾಮಿನೊಡನೆ ಬೆರೆಯದಿದ್ದರೆ ಈ ದೇಶದ ಪುನರುತ್ಥಾನ ಸಾಧ್ಯವಿಲ್ಲ ಎಂಬುದನ್ನು ಅವರು ಯಾವುದೇ ಮಾತನ್ನು ಬೆರೆಸದೆ ಸ್ಪಷ್ಟಪಡಿಸುತ್ತಿದ್ದರು. ಇದು ಸಂಘ ಪರಿವಾರದ ಹಿಂದುತ್ವವಾದದ ಸಂಪೂರ್ಣ ಧಾರ್ಮಿಕ ಮತ್ತು ನೈತಿಕ ತಿರಸ್ಕಾರವಲ್ಲದೆ ಮತ್ತೇನು?
    ಅವೆಲ್ಲ ಏನೇ ಇರಲಿ. ವಿವೇಕಾನಂದ, ಅಂಬೇಡ್ಕರ್, ಭಗತ್‌ಸಿಂಗ್ ಇನ್ನಿತರ ದಮನಿತ ಜನರ ತತ್ವಾದರ್ಶಗಳನ್ನು ಬದುಕನ್ನು ತಿರುಚಿ ತಮ್ಮ ಜನವಿರೋಧಿ ರಾಜಕಾರಣದ ವಕ್ತಾರರನ್ನಾಗಿ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮಟ್ಟುರವರ ಲೇಖನ ಅತ್ಯಂತ ಸಮಯೋಚಿತವಾಗಿತ್ತು. ಇದನ್ನು ಪ್ರಕಟಿಸುವ ಧೈರ್ಯ ಮಾಡಿದ ಪ್ರಜಾವಾಣಿಗೆ ಅಭಿನಂದನೆಗಳನ್ನು ಹೇಳಬೇಕು. ಮತ್ತು ಈ ಚರ್ಚೆ ಇನ್ನಷ್ಟು ಮುಂದುವರಿಯಬೇಕು ಎಂಬುದು ಪ್ರಜ್ಞಾವಂತರ ಕೋರಿಕೆ.
    ಆದರೂ ನಂತರದಲ್ಲಿ ಮಟ್ಟು ಅವರು ಕೊಟ್ಟ ಸಮಜಾಯಿಷಿ ಲೇಖನ ಸಮಾಧಾನದ ಬದಲು ಹಲವು ಪ್ರಶ್ನೆಗಳನ್ನು ಹುಟ್ಟಿಸುವಂತಿದೆ ಎಂದು ಹೇಳಲೇಬೇಕು. ಸಮಾಜದ ಮತ್ತು ದಮನಿತರ ವಿಮೋಚನೆಯ ಬಗ್ಗೆ ವಿವೇಕಾನಂದರಿಗಿಂತ ಸಾಕಷ್ಟು ಕ್ರಾಂತಿಕಾರಿ ಮಾರ್ಗಗಳನ್ನು ಅನ್ವೇಷಿಸಿದ ಅಂಬೇಡ್ಕರ್ ಜೊತೆಗೆ ಭಿನ್ನಾಭಿಪ್ರಾಯವಿದೆ ಎಂದು ಹೇಳುವ ಮಟ್ಟುರವರು ವಿವೇಕಾನಂದರ ಜೊತೆಗೆ ಮಾತ್ರ ಸಂಪೂರ್ಣ ಸಹಮತ ವ್ಯಕ್ತಪಡಿಸುವುದು ನನಗೆ ಆಶ್ಚರ್ಯ ತಂದಿದೆ. ಅದರಲ್ಲೂ ಸುಧಾರಿತ ಹಿಂದೂ ಧರ್ಮವನ್ನು ಜಗತ್ತಿನ ಧರ್ಮವನ್ನು ಮಾಡುವ ವಿವೇಕಾನಂದರ ಅಜೆಂಡಾವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಧರ್ಮ ಮಾತ್ರದಿಂದಲೇ ದಮನಿತರ ಲೌಕಿಕ ಕಷ್ಟಗಳು, ಅದೂ ಸುಧಾರಿತ ಹಿಂದೂ ಧರ್ಮವೇ ಆಗಲಿ, ಬಗೆಹರಿಯುವುದಿಲ್ಲ. ಮಟ್ಟುರವರು ತಮ್ಮ ಮೂಲ ಲೇಖನದ ನಿಲುವಿನಿಂದ ಹಿಂದೆ ಸರಿಯುವ ಅಗತ್ಯವಿರಲಿಲ್ಲ.

  11. safwan iddya surathkal

    The great writer dinedsh aminmattu sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading