ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಹೆಗಡೆ ಬರ್ತಿದ್ದಾರೆ ಹೊಸ ಪುಸ್ತಕದೊಂದಿಗೆ..

ಹೆಸರು ಇಡುವದು ಬಲು ಕಷ್ಟದ ಕೆಲಸ…

 

ಹೆಸರಿಡುವ ಮೊದಲೂ..

ನಂತರವೂ..

ಸಮಾಧಾನವಾಗುವದು ಬಲು ಕಡಿಮೆ…

ನನ್ನ ಎರಡನೇ ಪುಸ್ತಕ ಬಿಡುಗಡೆ ಆಗ್ತಾ ಇದೆ….

ಸರಿ…

“ಈ ಪುಸ್ತಕಕ್ಕೆ ಏನು ಹೆಸರು…?”

“ಹೆಸರೇ.. ಬೇಡ.. !””

” ಅಯ್ಯೋ…ಅದು ಆಗ್ಲೇ ಇಟ್ಟಾಗಿದೆ.. !!..”

ತಲೆ ಕೆರೆದು ಕೊಳ್ಳುವಂಥಹ ಪರಿಸ್ಥಿತಿ..!!

ಆಗ ಹೊಳೆದದ್ದು “ಇದೇ.. ಇದರ.. ಹೆಸರು… !..”

ಆಗ ತಕ್ಷಣ ನೆನಪಾದದ್ದು ನಾಡಿನ ಹೆಸರಾಂತ ಕಲಾವಿದ “ರಘು ಅಪಾರ”

“ರಘುರವರೆ ..

“ಇದಕ್ಕೊಂದು ಮುಖಪುಟ ಮಾಡಿಕೊಡಿ…

ಪುಸ್ತಕದ ಹೆಸರು..

“ಇದೇ.. ಇದರ.. ಹೆಸರು… !..”

“ನೀವು ಈ..ತರಹದ ಹೆಸರಿಟ್ಟರೆ ಮುಖ ಪುಟ ಮಾಡುವದು ಹೇಗೆ…?”

ಈಗ ಅಪಾರ ತಲೆ ಬಿಸಿ ಮಾಡಿಕೊಂಡರು…

ಗೆಳೆಯ ಮಲ್ಲಿಕಾರ್ಜುನ.. ದಿನಕರ ಮೊಗೆರಾ.. ಅಳಿಯ ಅನಿಲ್, ನವಿನ ಹಳ್ಳಿ ಹುಡುಗ, ಮೈಸೂರಿನ ಬಾಲು ಸರ್..

ಎಲ್ಲರೂ.. ಪ್ರಯತ್ನಿಸಿದರೂ..

ಇವರೆಲ್ಲರ ಸಂಗಡ ನಾನೂ ಕೆಲವು ಫೋಟೋ ತೆಗೆದೆ..

ಯಾವುದೂ ” ಅಪಾರ ” ಅವರಿಗೆ ಸಮಾಧಾನವಾಗಲಿಲ್ಲ..

ಅವರೊಂದು ಅಧ್ಬುತ ಪ್ರತಿಭೆ..

ಅವರಿಗೆ ಸಮಾಧಾನವಾದಂತೂ ಪಟ್ಟು ಸಡಿಲಿಸುವವರಲ್ಲ…

ಅಷ್ಟರಲ್ಲಿ ನನ್ನ ಅಳಿಯ ನಾಗರಾಜ ಕೆ. ಒಂದು ಐಡಿಯಾ ಕೊಟ್ಟ…

ಅದನ್ನು ಪ್ರತಿಭಾನ್ವಿತ ಛಾಯಾಗ್ರಾಹಕ “ದಿಗ್ವಾಸ್ ” ಬಳಿ ಹೇಳಿದೆ…

ಇದು ದಿಗ್ವಾಸ್ ತೆಗೆದ ಫೋಟೋ..

ಅದಕ್ಕೊಂದು ರೂಪ.. ವಿನ್ಯಾಸ ಮಾಡಿದವರು ರಘು “ಅಪಾರ”

ಗೆಳೆಯರೆಲ್ಲರಿಗೂ ಹೃದಯ ಪೂರ್ವಕ ವಂದನೆಗಳು…

ಅವರೆಲ್ಲರ ಪರಿಶ್ರಮ ನಿಮ್ಮ ಮುಂದಿದೆ…

ಹೇಗಿದೆ…?

ಬೆನ್ನುಡಿಯನ್ನು ಪ್ರೀತಿಯಿಂದ ಬರೆದುಕೊಟ್ಟವರು..

ಹೆಸರಾಂತ ರಂಗ ಭೂಮಿ ಕಲಾವಿದೆ..

ಕಿರುತೆರೆ ನಟಿ..

ಮುಕ್ತ ಮುಕ್ತ ಧಾರಾವಾಹಿಯ “ಮಂಗಳತ್ತೆ..”

ಶ್ರೀಮತಿ. ಜಯಲಕ್ಷ್ಮಿ ಪಾಟಿಲ್..

ಅಂತೂ ಮತ್ತೊಂದು ಕನಸು ನನಸಾಗುತ್ತಿದೆ..

ನನ್ನ ಎರಡನೇ ಪುಸ್ತಕ ಬಿಡುಗಡೆಯಾಗುತ್ತಲಿದೆ..

ಇದೇ ತಿಂಗಳು ಭಾನುವಾರ …

(24/4/2011)…

ಬಸವನಗುಡಿಯ ವಾಡಿಯಾ ರಸ್ತೆಯಲ್ಲಿರುವ…

“ವರ್ಲ್ಡ್ ಕಲ್ಚರ್ ಸೆಂಟರ್” ನಲ್ಲಿ..

ಬೆಳಿಗ್ಗೆ ೧೦.೩೦ ಕ್ಕೆ…..

ದಯವಿಟ್ಟು… ದಯವಿಟ್ಟು ಬನ್ನಿ…

ಅಂದು …

ಕಿವಿಗೆ ಇಂಪಾದ ಸಂಗಿತವಿರುತ್ತದೆ…

ಹೊಟ್ಟೆ ತುಂಬಾ ನಗಲಿಕ್ಕೆ ಹಾಸ್ಯವಿರುತ್ತದೆ..

ರುಚಿಕಟ್ಟಾದ ತಿಂಡಿ…

ಬೆಚ್ಚನೆಯ ಟೀ.. ಕಾಫಿ..

ಜೋರಾಗಿ ನಕ್ಕು ನಗಲು ಗೆಳೆಯರ ದಂಡೆ ಇದ್ದಿರುತ್ತದೆ…

ಬ್ಲಾಗಿಗರ…

ಬ್ಲಾಗ್ ಓದುಗರ ಮಿನಿ ಸಮ್ಮೇಳನ ಅದಾಗಿರುತ್ತದೆ…

ಬರುವಿರಲ್ಲಾ…?

” ಅದೆಲ್ಲ ಸರಿ… ಮಾರಾಯ್ರೇ…!

ಅತಿಥಿಗಳು ಯಾರು?

ಕಾರ್ಯಕ್ರಮದ ಅಧ್ಯಕ್ಷರು ಯಾರು…?

ನಗಿಸಲು ..

ಹಾಸ್ಯದ ಹೊಳೆ ಹರಿಸಲು ಯಾರ್ಯಾರು ಬರ್ತಾರೆ…?”

ಸ್ವಲ್ಪ…

ಸ್ವಲ್ಪ….ದಯವಿಟ್ಟು ಕೆಲವೇ…ದಿನ… ಕಾಯಬೇಕು ..

ವಿವರಗಳನ್ನು ತಿಳಿಸುವೆ….

ನಿಮ್ಮೆಲ್ಲರ ಪ್ರೀತಿ… ಸ್ನೇಹಕ್ಕೆ ಸದಾ ಚಿರ ಋಣಿ…

ಪ್ರೀತಿಯಿಂದ…

ಇಟ್ಟಿಗೆ ಸಿಮೆಂಟು….

‍ಲೇಖಕರು G

13 April, 2011

5 Comments

  1. Tejaswini Hegde

    Cover page design is superb… Liked it very much 🙂

  2. Kamalakar

    “ಇದೇ ಇದರ ಹೆಸರು” ಎಂಬ ಹೆಸರಿನ ನನ್ನ ಕವನ ಪ್ರಜಾವಾಣಿಯಲ್ಲಿ 27.6. 2010 ರಂದು ಪ್ರಕಟವಾಗಿತ್ತು. ಪ್ರಕಾಶ ಹೆಗಡೆ ತಮ್ಮ ಪುಸ್ತಕಕ್ಕಾಗಿ ಈ ಹೆಸರನ್ನು ಆಯ್ದಿರುವುದು ಓದಿ ಫುಲಕವಾಯಿತು.

  3. prakash hegde

    ತೇಜಸ್ವಿನಿಯವರೆ..
    ಮುಖ ಪುಟ ರಚನೆ “ರಘು ಅಪಾರ” ಅವರದ್ದು..
    ಫೋಟೊ “ದಿಗ್ವಾಸ್” ಅವರದ್ದು…
    ಈ ಮುಖಪುಟದ ಕಲ್ಪನೆ ಕೊಟ್ಟವರು “ನಾಗರಾಜ್ ಕೆ. ಅವರದ್ದು..

    ನಮ್ಮ ಬಳಗದಿಂದ ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು… ಜೈ ಹೋ !!

    ಕಮಲಾಕರರವರೆ…

    ತುಂಬಾ ತುಂಬಾ ಧನ್ಯವಾದಗಳು..

    ” ಇದೇ.. ಇದರ ಹೆಸರು” ಅಂತ ನನಗೆ ಹೇಗೆ, ಎಂದು ಹೊಳೆಯಿತು ಅಂತ ಗೊತ್ತಿಲ್ಲ..

    ನೀವು ಹೇಳಿದ ಪ್ರಜಾವಾಣಿ ಪತ್ರಿಕೆಯನ್ನು ನೋಡಿಲ್ಲ..
    ಕವನವನ್ನೂ ಓದಿಲ್ಲ..

    ನೀವೂ ಅದೇ ಹೆಸರು ಇಟ್ಟಿದ್ದು..
    ನನಗೂ ಈ ಹೆಸರು ಹೊಳೆದದ್ದು… ಸೋಜಿಗವೇ ಸರಿ..

    ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ…
    ಪ್ರೋತ್ಸಾಹಕ್ಕೆ ಧನ್ಯವಾದಗಳು…..

  4. Shashidhar Bhat

    Name of your book “ಇದೇ ಇದರ ಹೆಸರು” is very unique,, have heard this kind of a name for first time !! The cover page design is also very attractive ,very curious to know more about the book !! Best Regards for your Book !!

  5. prakash hegde

    Thank you Shashidhar..

    ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ…

    ಪ್ರೋತ್ಸಾಹಕ್ಕೆ ವಂದನೆಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading