ಸೌಮ್ಯ ಕಲ್ಯಾಣ್ಕರ್
ಮೊನ್ನೆ ಫೇಸ್ಬುಕ್ನಲ್ಲಿ ಜಯವಂತ ದಳವಿಯವರ ಮಾನೂ ಪುಸ್ತಕದ ಬಗ್ಗೆ ವಿಚಾರಿಸಿದ್ದೆ. ಅವಧಿಯಲ್ಲೂ ಕೂಡ ಆ ಪೋಸ್ಟ್ ಹಾಕಿದ್ದರು.
ಜಗದೀಶ್ ಕೊಪ್ಪ ಅವರು ಚಂದ್ರಕಾಂತ ಪೋಕಳೆ ಅವರ ನಂಬರ್ ಕೊಟ್ಟಿದ್ದರು. ಇದರಿಂದ ಚಂದ್ರಕಾಂತ ಪೋಕಳೆ ಅವರ ಹತ್ತಿರ ಮಾತಾಡುವ ಸದವಕಾಶ ದೊರಕಿತು, ಹಾಗೂ ಪೋಕಳೆ ಅವರು ಔಟ್ ಆಫ್ ಪ್ರಿಂಟ್ ಆಗಿರುವ, ಅವರ ಗೆಳೆಯರ ಬಳಿ ಇದ್ದ ಮಾನೂ ಅಲ್ಲದೆ, ಅವರ ಇತರ ಐದು ಪುಸ್ತಕಗಳನ್ನು ನನಗಾಗಿ ಕಳುಹಿಸಿ ಕೊಟ್ಟಿದ್ದಾರೆ. ದುಡ್ಡಿನ ಬಗ್ಗೆ ಕೇಳಿದರೆ, ನಿಮ್ಮ ಓದುವ ಹವ್ಯಾಸ ದೊಡ್ಡದು ಎಂದರು. ಅವರನ್ನು ನೆನೆಯುತ್ತಾ ಅಂತಹ ವ್ಯಕ್ತಿಯೊಡನೆ ಮಾತನಾಡಲು ಅನುವು ಮಾಡಿಕೊಟ್ಟ ಜಗದೀಶ್ ಕೊಪ್ಪ ಅವರಿಗೆ ಕೃತಜ್ಞತೆಗಳು. ಅವರ ಬಳಿ ಬೇರೆ ಕಾಪಿ ಇಲ್ಲದಿದ್ದಲ್ಲಿ, ಜೆರಾಕ್ಸ್ ಮಾಡಿಸಿಕೊಡುವೆ ಎಂದೂ ಅವರು ನುಡಿದ್ದರು. ಆಲ್ಲದೇ ವಾಜಪೇಯಿ ಅಂಕಲ್ ಕೂಡಾ ಫೋನ್ ಮಾಡಿ ಇದೇ ಮಾನೂವಿಗಾಗಿ ಚೌಗಲೆಯವರ ನಂಬರ್ ಕೊಡುತ್ತೇನೆ ಅಂದಿದ್ದರು. ಅವರಿಗೂ ಧನ್ಯವಾದಗಳು.
ಕೇವಲ ನನ್ನ ಓದುವ ಹುಚ್ಚಿಗೆ ಇಷ್ಟೆಲ್ಲಾ ಪ್ರೋತ್ಸಾಹ ಕೊಟ್ಟ ಎಲ್ಲರಿಗೂ ಧನ್ಯವಾದಗಳು







0 Comments