ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಬಿಡುಗಡೆಗೆ ಬನ್ನಿ ಪ್ಲೀಸ್

ದಿಲಾವರ್ ರಾಮದುರ್ಗ

ಇಂದು ಶನಿವಾರ 12.01.2013 ರಂದು ಬೆಳಿಗ್ಗೆ 11 ಗಂಟೆಗೆ, ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಈ ಪುಸ್ತಕದ ಬಿಡುಗಡೆ ಇದೆ. ಬನ್ನಿ. ಈ ಪುಸ್ತಕಕ್ಕೂ ನನಗೂ ಏನು ಸಂಬಂಧ? ಸಂಬಂಧವಿದೆ. ಇದೊಂದು ಸಂಪಾದಿತ ಪುಸ್ತಕ, ಒಂದು ಪುಸ್ತಕ ರೂಪದ ಡಾಕ್ಯುಮೆಂಟರಿ ಎಂದು ಹೇಳಲೂಬಹುದು.
ಕಳೆದ ಜುಲೈನಲ್ಲೇ ಈ ಪುಸ್ತಕ ಸಿದ್ಧಗೊಂಡಿತ್ತು. ಈ ಪುಸ್ತಕವನ್ನು ಸಂಪಾದಿಸಿಕೊಟ್ಟಿದ್ದರ ಜತೆಗೆ ವಿನ್ಯಾಸವೂ ನನ್ನದೇ. ಗೆಳೆಯ ರಾಠೋಡ ಇದರ ಮುಖಪುಟ ರಚಿಸಿದ್ದರು. ರಾಚಪ್ಪ ಹೋಳೂರು ಎನ್ನುವ ಅನಿವಾಸಿ ಭಾರತೀಯ ಇದರ ಪ್ರಕಾಶಕ.
ಕಡೇ ಘಳಿಗೆಯಲ್ಲಿ ಪ್ರಕಾಶಕರು ಮುಖಪುಟ ಬದಲಾಯಿಸಿದರು. ನನಗೂ ಅಚ್ಚರಿ. ಇದರ ಜತೆಗೆ ಇನ್ನೂ ಏನೇನೋ ಆಗಿ ಅಂತೂ ಪುಸ್ತಕ ಹೊರಬರುತ್ತಿದೆ. ಈ ಪುಸ್ತಕದ ಪರಿಕಲ್ಪನೆ ಮತ್ತು ಇದನ್ನು ಸಿದ್ಧಪಡಿಸುವಾಗಿನ ಸಂಭ್ರಮ, ಬೆಳವಣಿಗೆ, ಬಿಡುಗಡೆಗೆ ಸಜ್ಜಾದ ಪರಿಯನ್ನು ಮತ್ತೆ ಹಂಚಿಕೊಳ್ಳುತ್ತೇನೆ. ಪ್ಲೀಸ್ ನೀವು ಬನ್ನಿ.

 

‍ಲೇಖಕರು G

12 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading