ಪುಸ್ತಕ ವ್ಯಾಪಾರಿ ಶ್ರೀನಿವಾಸ್ ಅವರು ಎಪ್ಪತ್ತರ ದಶಕದಿಂದ ಬೆಂಗಳೂರಿನಲ್ಲಿ ಹಲವರ ಮನೆಗೆ ನೇರವಾಗಿ ಪುಸ್ತಕಗಳನ್ನು ತಾವೇ ತಲುಪಿಸುತ್ತಿದ್ದರು. ಎರಡು ಬ್ಯಾಗ್ ತುಂಬಾ ಪುಸ್ತಕ ತುಂಬಿಕೊಂಡು ಬಸ್ಸುಗಳಲ್ಲಿ ಓಡಾಡುತ್ತಾ, ಪುಸ್ತಕ ಪ್ರೇಮಿಗಳ ಮನೆಗೆ ನೇರವಾಗಿ ಬರುತ್ತಿದ್ದರು. ನಾವು ಕಾಫಿ ಕೊಟ್ಟರೆ, ತಾವು ಬ್ಯಾಗಿನಿಂದ ಕೋಡುಬಳೆ, ರಸ್ಕು ತೆಗೆದು ನೀಡುತ್ತಾ ಜಗತ್ತಿನ ಹಲವು ವಿದ್ಯಮಾನಗಳ ಕುರಿತು ತಿಳುವಳಿಕೆ ನೀಡುತ್ತಿದ್ದರು.
ಅವರ ಪೂರ್ಣ ಹೆಸರು ಯು.ಎಸ್.ಶ್ರೀನಿವಾಸ್. ಅವರ ಅಣ್ಣ ಪತ್ರಕರ್ತರು. ತಂಗಿ ರಸಾಯನಶಾಸ್ತ್ರ ಕಲಿಸುತ್ತಿದ್ದ ಲೆಕ್ಚರರ್. ಈ ಮೂವರು ಮದುವೆಯಾಗದೆಯೇ ಉಳಿದಿದ್ದರು.
೨೦೧೦ರ ವರೆಗೆ ಪ್ರತಿ ತಿಂಗಳೂ ಸಂಪರ್ಕದಲ್ಲಿರುತ್ತಿದ್ದ ಪು.ವ್ಯಾ.ಶ್ರೀ. ಅವರು, ಬಸ್ಸು ಒಂದರಿಂದ ಇಳಿವಾಗ ಜಾರಿ ಬಿದ್ದು ಸುಮಾರು ಹತ್ತು ವರ್ಷ ಕಾಲ ಹಾಸಿಗೆ ಹಿಡಿದಿದ್ದರು. ನಿನ್ನೆ ಬೆಳಿಗ್ಗೆ ಅವರು ತೀರಿಕೊಂಡರು ಎಂಬ ಸುದ್ದಿ ಅವರ ಅಂತ್ಯಕ್ರಿಯೆ ಮುಗಿದ ನಂತರ ಈ ದಿನ ಬೆಳಿಗ್ಗೆ ದೊರಕಿತು.
ಬಿ ಸುರೇಶ್ ಅವರ ಮಾಹಿತಿ
ಬಿ ಎಸ್ ವಿದ್ಯಾರಣ್ಯ ಅವರ ಮೂಲಕ






ನಮನಗಳು