
ಪಾರ್ಥಸಾರಥಿ ಶ್ರೀನಿವಾಸರಾವ್
ಪೂವ್ಯಾಶ್ರೀ.. ಅನ್ವರ್ಥ ನಾಮ.. ಪುಸ್ತಕ ವ್ಯಾಪಾರಿ ಶ್ರೀನಿವಾಸ.. ನಮ್ಮ ಹಿರಿಯ ಆತ್ಮೀಯ ಸಂಗಾತಿ ನಮ್ಮನ್ನು ಅಗಲಿದರು. ಅವರಿಗೆ 88 ವರ್ಷಗಳಾಗಿತ್ತು.
ಇವರೂ ಮತ್ತು ಇವರ ಹಿರಿಯ ಅಣ್ಣ ಕಲಾವಿದ ಸಂಗಾತಿ ಪಿ ವಿ ವೆಂಕಟರಾಮನ್ ಮತ್ತು ಕುಟುಂಬ ರಾಜಸೇವಾಸಕ್ತ ದಿವಾನ್ ನಂಜುಂಡಯ್ಯ ಅವರ ಮೊಮ್ಮಕ್ಕಳು.. ನಂಜುಂಡಯ್ಯ,ಹೆಸರನ್ನು ಮಲ್ಲೇಶ್ವರ ನಾಲ್ಕನೇ ಮುಖ್ಯ ರಸ್ತೆಗೆ ಇಟ್ಟಿದ್ದಾರೆ. ಭಾರತ ಕಮ್ಯೂನಿಷ್ಟ್ ಪಕ್ಷದ ನಿಷ್ಠಾವಂತ ಸದಸ್ಯರಾಗಿದ್ದವರು ಇಬ್ಬರೂ ಸಹೋದರರು ಸಂಗಾತಿ ಶ್ರೀನಿವಾಸ ಅಂದರೆ ಯುವಕ ಯುವತಿಯರಿಗೆ ಪ್ರೇರೇಪಿಸುವ ಉತ್ತಮ ಪುಸ್ತಕಗಳನ್ನು ನೀಡಿ ಓದಿಸಿ ಮತ್ತೆ ನೀಡಿ ಚರ್ಚಿಸಿ, ಹೀಗೆಲ್ಲ ಜೀವನಪರ್ಯಂತ.. ಕೆಲವೇ ದಿನಗಳ ಹಿಂದೆಯೂ ಅದೇ ಕೆಲಸ ಮಾಡಿದರು.
ನನಗೆ ಓದುವ ಹವ್ಯಾಸ ಹೆಚ್ಚಲು ಅವರೇ ಕಾರಣ. ಪ್ರಗತಿಪರ ಸಾಹಿತ್ಯ ಪ್ರಚಾರ ಅವರ ದೀಕ್ಷೆ. ಬೆನ್ನಮೇಲೆ ಒಂದು ಹತ್ತಿಬಟ್ಟೆ ಚೀಲ.. ಅದರ ತುಂಬ ಇಂಗ್ಲೀಷ್ ಮತ್ತು ಕನ್ನಡಪುಸ್ತಕಗಳು.. ಸಾದ್ಯವಾದಾಗಲೆಲ್ಲ ಕಾಲುನಡಿಗೆ.. ಹುಡುಕಿಕೊಂಡು ಬಂದು ಪುಸ್ತಕ ತೋರಿಸಿ ಬಿಚ್ಚಿ ಪುಟಗಳ ಪಂಕ್ತಿ ಓದುತ್ತಾ ಅದನ್ನೇಕೆ ಓದಬೇಕು ಅದಾದ ಮೇಲೆ ಓದಬೇಕಾದ ಪುಸ್ತಕಗಳ ಪಟ್ಟಿ.. ಹೀಗೆ ಅವರ ರೀತಿ ನಮ್ಮನ್ನು ಓದಿನತ್ತ ಆಕರ್ಷಿಸುತ್ತಿತ್ತು…ನಾನು ಬೆಂಗಳೂರಿಗೆ 1969 ರಲ್ಲಿ ಬಂದೆ..

ಕೆಲವೇ ದಿನಗಳಲ್ಲಿ ನನಗೆ ಅವರ ಪರಿಚಯ ಮಾಡಿಸಿದವರು ನನ್ನ ಆತ್ಮೀಯ ಗೆಳೆಯ.. ಮೆಂಟರ್.. ಸಂಗಾತಿ ರಘೋತ್ತಮನ್.. ರಘೋತ್ತಮನ್ ಸುಮಾರು 15 ಜನ ಸಂಗಾತಿಗಳ ಓದುಗರ ಗುಂಪು ಮಾಡಿದ್ದರು.. ಸಂಗಾತಿಗಳಾದ ಆನಂದ ರಾಜಗೋಪಾಲ ಮೆನನ್ ನಾರಾಯಣರಾವ್ ಅಶ್ವತ್ಥ ಮುಂತಾದವರು.. ನಾವು ಪುಸ್ತಕ ಓದಬೇಕು.. ಓದಿದವ ಅದರ ವಿಷಯ ಇತರರೊಡನೆ ಹಂಚಿಕೊಳ್ಳಬೇಕು.. ನಂತರ ಇತರರು ಓದಬೇಕು…
ನಮಗೆ ಪುಸ್ತಕ ಪೂರೈಕೆ ಪುವ್ಯಾಶ್ರೀ… ಓ! ಅದೆಂತ ಸುಂದರ ಸಮಯ!
ನಾಡುನುಡಿಯ ಸೇವೆಗೆ ಕಂಕಣಬದ್ಧರಾಗಿಸುವ ಆ ತವಕ!
ಪುವ್ಯಾಶ್ರೀ ತಮ್ಮ ಶರೀರನ್ನು ನಿಮ್ಹಾನ್ಸ್ ಗೆ ದಾನಮಾಡಿದ್ದಾರೆ!






0 Comments