ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುರಾಣಂ ಪರಾಭವಂ ರಂಗನೋಟ

ಪುರಾಣಂ ಪರಾಭವಂನ ಒಂದು ರಂಗನೋಟ…

manjula r

ಆರ್ ಮಂಜುಳಾ

ದ್ರೌಪದಿ ಎಂದಾಕ್ಷಣ ಪುರಾಣದಲ್ಲಿ ಸೀರೆ ಎಳೆಸಿಕೊಳ್ಳೊದು ನೆನಪಾಗುತ್ತದೆ . ಆದರೆ ಈ ನಾಟಕದ ಸೀರೆ ಎಳೆಸಿಕೊಳ್ಳುವ ದೃಷ್ಯದಲ್ಲ ದ್ರೌಪದಿ ದುಶ್ಯಾಸನ ಮತ್ತು ದುಯರ್ೋಧನನಿಗೆ ಮುಖಭಂಗ ಮಾಡಿ ಅವರ ಮುಖಕ್ಕೆ ಉಗಿದು ಬರುತ್ತಾಳೆ . ನಾಟಕದ ಕೊನೆಯಲ್ಲಿ ದ್ರೌಪದಿ ಪಾತ್ರದಾರಿ ನಾನು ಮತ್ತೆ ಇದೇ ದ್ರೌಪದಿ ಪಾತ್ರ ಮಾಡುತ್ತೇನೆ ಆದ್ರೆ ಸೀರತೆ ಎಳೆಸಿಕೊಳ್ಳುವ ದ್ರೌಪದಿ ಅಲ್ಲ ಹೆಣ್ತನಾನ ಸಂಭ್ರಮಿಸುವ ದ್ರೌಪದಿ ಅನ್ನುವ ಮಾತು ನಮಗೆ ಕಟ್ಟಿಕೊಟ್ಟಿರೋ ಪುರಾಣವನ್ನು ಮರು ವ್ಯಾಖ್ಯಾನಿಸುತ್ತದೆ .

ಸಂಘ, ಹೆಣ್ಣ್ ಅತ್ತಂಗೆ ಅಳ್ತಾನೆ, ಸರಿಯಾಗಿ ಓದಲ್ಲ ಎಂದು ಮಕ್ಕಳನ್ನು ಜೀತಕ್ಕಟ್ಟುವ ನಿದರ್ಾರ ತೆಗೆದು ಕೊಳ್ಳುವ ಪೋಷಕರಿಗೆ, ನಾಟಕದಲ್ಲಿ ಸಾವಿರ ಸರಳುಗಳನ್ನು ಮುರಿಯುತ್ತಾ ಹೊರಟ ರಾಜು ಮತ್ತು ಪುರಾಣದಲ್ಲಿ ಬರುವ ಕೋಟಿಚೆನ್ನಯ್ಯರು ಮುಖಾಮುಖಿಯಾಗಿ ಮತ್ತೊಮ್ಮೆ ನಮ್ಮ ಜವಾಬ್ದಾರಿಯನ್ನು ಎಚ್ಚರಿಸುತ್ತಾರೆ . ಗಂಭೀರವಾದ ವಿಷಯಗಳನ್ನು ಹೇಳುವುದರ ಜೊತೆಯಲ್ಲಿಯೇ ಭಟ್ಟ ಶೇಷಣ್ಣನ ಹೋಟೆಲ್ ದೃಷ್ಯಗಳು ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರು ಬರಿಸುವ ಜೊತೆಗೆ ತುಟಿಯಲ್ಲಿ ನಗುವನ್ನು ಬೀರಿಸುತ್ತದೆ. ಸೀಮಿತ ಜಾತಿಯವರು ಮಾತ್ರ ಮುತ್ತುಕಟ್ಟಿಸಿಕೊಳ್ಳಬೇಕು, ಇದನ್ನು ನಿರಾಕರಿಸಿದರೆ ಯಲ್ಲವ್ವ ಒಳ್ಳೆದು ಮಾಡಲ್ಲ ಶಾಪ ಕೊಡ್ತಾಳೆ ಎನ್ನುವ ಮೌಢ್ಯತೆಯನ್ನು ತುಂಬಿ ಇಷ್ಟವಿದ್ದೊ ಇಲ್ಲದೆಯೋ ಹಲಾವಾರು ಮುಗ್ದ ಮಹಿಳೆಯರನ್ನು ದೇವದಾಸಿಯಂತಹ ಅನಿಷ್ಟ ಪದ್ಧತಿಯೊಳಗೆ ತಳ್ಳುವ ವ್ಯವಸ್ಥೆ ಇನ್ನೂ ರೂಢಿಯಲ್ಲಿದೆ,

ಯಲ್ಲವ್ವ ನಿನ್ನ ಮಾತ್ರ ದೇವ್ರು ಅಂತ ಗರ್ಭಗುಡೀಲಿ ಇಟ್ಟು ಪೂಜೆ ಮಾಡ್ತಾರೆ, ನಿನ್ನ ಹೆಸ್ರಲ್ಲಿ ನನ್ನ ಊರಿಗೆ ಬಸ್ವಿ ಮಾಡವ್ರೆ, ಇದು ಯಾವ ನ್ಯಾಯನೇ..? ಎಂದು ಪ್ರಶ್ನಿಸುವ ರೇಣುಕವ್ವನ ಮಾತಿಗೆ, ಅವಳ ಮಗಳು ಯಲ್ಲವ್ವ ಮುತ್ತು ಕಟ್ಟುವ ಸಂದರ್ಭದಲ್ಲಿ, ಪುರುಷ ಪ್ರಧಾನ ವ್ಯವಸ್ಥೆ, ಜಾತಿ ವ್ಯವಸ್ಥೆಯನ್ನು ಮೆಟ್ಟಿ ತನ್ನ ತನವನ್ನು ಹುಡುಕುತ್ತಾ ಹೊರಡುತ್ತಾಳೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ತುಳುನಾಡಿನಲ್ಲಿ ಗಂಡಸರ ಪರವಾದ ತೀಪರ್ು ನನಗೆ ಬೇಕಾಗಿಲ್ಲ ಎಂದು ಧಿಕ್ಕರಿಸಿ ಹೊರಟ ಸಿರಿಯನ್ನು ಮುಖಾಮುಖಿಗೊಳಿಸಿ ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.

ಕೆಲವೇ ವರ್ಗಗಳ ಆಡಳಿತಕ್ಕೆ ಸೀಮಿತವಾಗಿರುವ ಯಕ್ಷಗಾನದಲ್ಲಿ, ದೇವದಾಸಿಯಾಗಿದ್ದ ಯಲ್ಲವ್ವ ಪೂಜೆ ಮಾಡುವುದು, ಮುಸ್ಲಿಂ ಸಮುದಾಯದವನು ಪಾತ್ರ ಮಾಡುವುದು, ಸೀರೆ, ಬಳೆ, ಕುಂಕುಮ ತೊಟ್ಟಿ ನಮಾಜ್ ಮಾಡುವುದು ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳಿಗೆ ವಾಸಿಯಾಗದ ಪೆಟ್ಟು ನೀಡುವುದರ ಜೊತೆಗೆ, ಭಾರತದ ಮೂಲ ತತ್ವವಾದ ಬಹುತ್ವ ಮತ್ತು ಮನುಷ್ಯತ್ವವನ್ನು ಸಾರುತ್ತದೆ.

 

‍ಲೇಖಕರು Admin

13 January, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading