ಪುಟಾಣಿ ಕೆಂಪು ಶೂ
ಕವಿತಾ ಸಂಕಲನ
ಛಾಯಾ ಭಗವತಿ
ಪುಟ:56 ಬೆಲೆ: 30 ರೂ
ಲೋಹಿಯಾ ಪ್ರಕಾಶನ
ಕ್ಷಿತಿಜ, ಕಪ್ಪಗಲ್ಲು ರಸ್ತೆ
ಬಳ್ಳಾರಿ- ೫೮೩೧೦೩
ದೂರವಾಣಿ: ೦೮೩೯೨- ೨೫೭೪೧೨

ಛಾಯಾ ಭಗವತಿ ಅವರ 19 ಕವನಗಳು ಹತ್ತೊಂಬತ್ತರ ಕವಿತೆಗಳೂ ಹೌದು. ಕಣ್ತುಂಬ ಕನಸುಗಳು, ಮೃದು ಮಧುರ ಮಾತುಗಳು, ಬೆಣ್ಣೆಯಂತೆ ಕರಗಿ ಹೋಗುವ ಭಾವಗಳು. ಬಾಯಾರಿದ ಭೂಮಿಗೆ ಹನಿದು ಬರುವ ಮಳೆ. ಅವನೂರಿನ ಕೆರೆ ಏರಿಯ ಮೇಲೆ ಅವಳು ನೆಟ್ಟುಬಂದ ಸವಿಗನಸಿನ ಗಿಡ, ಇವಳು ತೊಟ್ಟ ದಾವಣಿಯ ಕುಸುರಿಯೂ ಉಸುರುವುದು ‘ಎಲ್ಲೆ ಹುಡುಗಿ ನಿನ್ನ ಚೆಲುವ’.. ಬದುಕಿನ ಈ ರಮ್ಯ ಭಾವಗಳನ್ನು ಮೊಗೆಮೊಗೆದು ಕೊಡುವಂತೆ ಮೈದುಂಬಿ ಬರೆಯುವ ಛಾಯಾ ಅವರ ಕವಿತೆಗಳು ಅರಳಿರುವುದೇ ಒಲವಿನಲ್ಲಿ.
ನೇರವಾಗಿ ಹೈದಯಕ್ಕೆ ತಾಕುವಂತೆ ಭಾವಗಳನ್ನು ಉಕ್ಕಿಸಿ ಬರೆಯುವ ಕವಿತೆಗಳ ಚೆಲುವು ಇರುವುದೇ ಅವುಗಳ ಸರಳತೆಯಲ್ಲಿ, ಪ್ರಾಮಾಣಿಕತೆಯಲ್ಲಿ .ಇಲ್ಲಿನ ಕೆಲವು ಕವಿತೆಗಳಲ್ಲಿ ಈ ಪ್ರಾಮಾಣಿಕತೆ, ಪಾರದರ್ಶಕತೆ ಒಡೆದು ಕಾಣಿಸುತ್ತದೆ.
-ಜಿ. ಪಿ. ಬಸವರಾಜು
ಬೆನ್ನುಡಿಯಿಂದ
ಪುಟಾಣಿ ಕೆಂಪು ಶೂ
ನಿಮಗೆ ಇವೂ ಇಷ್ಟವಾಗಬಹುದು…





0 Comments