ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಪರದೆ ಹಿಂದಿನ ನೋವು…’ – ನಸ್ರಿನ್ ಬಾನು ಬರೀತಾರೆ

’ಅವಧಿ’ ಯಲ್ಲಿ ಈ ಮೊದಲು ಪ್ರಕಟವಾಗಿದ್ದ ಲೇಖನ, ಈ ಸಮಯದಲ್ಲಿ ಪ್ರಸ್ತುತ ಅನ್ನಿಸಿದ್ದರಿಂದ ಇದು ನಿಮ್ಮ ಮರು ಓದಿಗೆ…

***

ನಸ್ರಿನ್ ಬಾನು

ಅವಳು ಸದಾ ಕನಸು ಕಾಣುತಿದ್ದಳು. ಜೀವನದಲ್ಲಿ ತಾನೇನಾದರೂ ಸಾದಿಸಬೇಕೆಂದು. ಅವಳಿಗೂ ಆಸೆಯಿತ್ತು ತಾನು ವಿದ್ಯಾಬ್ಯಾಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು. ಅವಳು ಬಯಸಿದ್ದಳು, ತಾನು ಸ್ವತಂತ್ರ ಜೀವಿಯಾಗಿ ತನ್ನ ಕಾಲ ಮೇಲೆ ತಾನು ನಿಂತು ಬದುಕ ಮನ್ನಡೆಸಬೇಕೆಂದು. ಆದರೇನು ಮಾಡುವುದು ಅವಳು ಬುರ್ಖಾ ತೊಟ್ಟಿದ್ದಾಳೆ. ಅವಳು ಕೆಲವು ನಿಯಮಗಳ ಎಲ್ಲೆಯನ್ನು ಮೀರುವಂತಿಲ್ಲ.
ಬುರ್ಖಾದೊಳಗಿನ ಹೆಣ್ಣು ಹೆಚ್ಚು ಕನಸು ಕಾಣುವುದು ಕೂಡ ತಪ್ಪು. ಯಾಕೆಂದರೆ ಕನಸು ನನಸಾಗುವ ಸಂಭವಗಳೇ ಕಡಿಮೆ. ತಾನು ಕನಸು ಕಂಡಂತೆ ಹೆಚ್ಚಿನ ವಿದ್ಯಾಬ್ಯಾಸ ಪಡೆಯುತ್ತೇನೆಂದರೆ ಕೇಳುವವರ್ಯಾರು. ಮುಸ್ಲಿಂ ಹೆಣ್ಣು ಮಕ್ಕಳು ಹೊರಗಡೆ ದುಡಿಯಲು ಹೊರಗಡೆ ಹೋಗಬಾರದು, ಗಂಡಿನ ಸೇವೆಯನ್ನು ಮಾಡಿಕೊಂಡು ಮಕ್ಕಳನ್ನು ನೋಡಿಕೊಂಡರೆ ಸಾಕು ಎನ್ನುವ ಮನಸ್ಥಿತಿಗಳ ನಡುವೆ. ಅಲ್ಪ ಸ್ವಲ್ಪ ಸ್ವತಂತ್ರ ಪಡೆದು ಓಡಾಡುವ ಹೆಣ್ಣು ಮಕ್ಕಳನ್ನು ನೋಡಿ ಗಂಡುಬೀರಿಯರು ಎಂದು ಕುಚೋದ್ಯೆ ಮಾಡುವವರು ಅದ್ಹೇಗೆ ತಾನೆ ತಮ್ಮ ಮನೇಯ ಹೆಣ್ಣು ಮಕ್ಕಳಿಗೆ ಸ್ವತಂತ್ರ ಕೊಟ್ಟಾರು?
ಅಪ್ಪಿ ತಪ್ಪಿ ವಿದ್ಯಾಬ್ಯಾಸ ಮಾಡಲು ಅವಕಾಶವೇನಾದರೂ ಸಿಕ್ಕಿತು ಎಂದುಕೊಳ್ಳಿ. ನೂರಾರು ಕಂಡಿಷನ್ಸ್. ಬುರ್ಖಾ ತೊಡಬೇಕು, ಸ್ನೇಹಿತರೊಂದಿಗೆ ಹೆಚ್ಚು ಒಡನಾಡಬಾರದು, ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಮನೆ ಸೇರಬೇಕು, ಗಂಡು ಹುಡುಗರ ಸ್ನೇಹ ಬೇಡ, ಸಿನಿಮಾ ಮಂದಿರಕ್ಕೆ ಹೋಗುವುದಂತೊ ಮೊದಲೆ ನಿಷಿದ್ದ. ಇದೆಲ್ಲದರ ನಡುವೆ ಅವಳು ಕೂಡ ತಮ್ಮಂತೆಯೇ ಮನುಷ್ಯೆ ಎಂಬುದನ್ನು ಮರೆತುಬಿಡುತ್ತಾರೆ. ಕೇವಲ ತಾನು ಹುಟ್ಟಿದ ಜಾತಿಯ ಕಾರಣಕ್ಕೆ ಮುಸ್ಲಿಂ ಹೆಣ್ಣು ಇನ್ನೆಷ್ಟು ಕಾಲ ಈ ಬಂದನದಲ್ಲೆ ಬದುಕಬೇಕು. ಅವಳಿಗೂ ಮನಸ್ಸಿದೆ. ಅವಳಿಗೂ ಭಾವನೆಗಳಿರುತ್ತವೆ ಎಂಬುದನ್ನು ಪುರುಷ ಸಮಾಜಕ್ಕೆ ತಿಳಿಸಿ ಕೊಡಲು ಇನ್ನೆಷ್ಟ ಕಾಲ ಹೆಣಗಬೇಕು. ತನ್ನ ಬುರ್ಖಾದೊಳಗಿನ ನೋವನ್ನು ಯಾರಲ್ಲಿ ನಿವೇದನೆ ಮಾಡಿಕೊಳ್ಳಬೇಕು. ಸ್ವತಂತ್ರದ ಅರ್ಥವನ್ನು ಯಾವ ಪರಿಯಲ್ಲಿ ಕಂಡುಕೊಳ್ಳಬೇಕು. ಇದೆಲ್ಲದರ ಮದ್ಯೆ ಸಮಾನತೆಯ ವ್ಯಾಪ್ತಿಯನ್ನು ಊಹಿಸಿಕೊಳ್ಳುವುದಾದರೂ ಹೇಗೆ?
ಆದುನೀಕರಣ, ಜಾಗತೀಕರಣ ನೆಲೆಯಲ್ಲಿ ನಿಂತು ಮಾತನಾಡುವಾಗ ಇನ್ನೂ ವಿದ್ಯಾಬ್ಯಾಸ ಪಡೆಯಲು ಪರಿತಪಿಸುವ ಹೆಣ್ಣುಮಕ್ಕಳ ಸ್ಥಿತಿ ಜೀವಂತವಾಗಿರುವುದು ದುರಂತದ ಸಂಗತಿಯಲ್ಲವೆ. ಮುಸ್ಲಿಂ ಹೆಣ್ಣು ಮಕ್ಕಳು ಸಹ ಇತರ ಹೆಣ್ಣು ಮಕ್ಕಳಂತೆ ವಿದ್ಯಾಬ್ಯಾಸ ಪಡೆಯಬೇಕು ಎಂಬುದನ್ನು ಅರಿತುಕೊಂಡು ಪುರುಷ ಸಮಾಜ ಸಹಕರಿಸಿದರೆ ಆಕೆಯು ಇತರರಂತೆ ಜಾಗತಿಕ ಬದುಕನ್ನು ಕಂಡುಕೊಳ್ಳಲು ಸಾದ್ಯ ಅಲ್ಲವೆ. ಇದೆಲ್ಲಾ ಬದಲಾಗುವ ಕಾಲ ಬರುವುದಾದರೂ ಯಾವಾಗ?…

‍ಲೇಖಕರು G

12 September, 2014

6 Comments

  1. g.n.nagaraj

    ಬುರ್ಖಾದೊಳಗಿನ ನೋವು ಅನುಭವಿಸಿದವರೇ ಬರೆಯುವುದು, ಅವರ ಕನಸುಗಳು, ಅವು ನನಸಾಗಲಾರದ ನೋವುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಬಹಳ ಅಗತ್ಯವಾದ ಸಂಗತಿಗಳು.
    ಅದೇ ಸಮಯದಲ್ಲಿ ಆ ಸಂಕಟವನ್ನು ಅನುಭವಿಸುವವರೇ ಎದ್ದು ನಿಂತು ತಮ್ಮ ಕನಸುಗಳ ಸಾಕಾರಕ್ಕಾಗಿ ದನಿಯೆತ್ತದಿದ್ದರೆ ತನ್ನಿಂದ ತಾನಾ ಸಾಕಾರವಾಗುವುದಿಲ್ಲ. ಮಲಾಲ ಉದಾಹರಣೆ ಕಣ್ಣ ಮುಂದಿದೆಯಲ್ಲ.

  2. Parameshwar

    True

  3. amardeep.p.s.

    ಮಲಾಲಾ …. ಎಂಬ ಸಣ್ಣ ಆಕೃತಿ ಪಾಕಿಸ್ತಾನದಲ್ಲಿ ಎಬ್ಬಿಸಿದ ಸಂಚಲನ ಇಡೀ ವಿಶ್ವವನ್ನೇ ವ್ಯಾಪಿಸಿದ ಬಗೆಯನ್ನು ಮಾದರಿಯನ್ನಾಗಿಟ್ಟುಕೊಂಡು ಪ್ರೋತ್ಸಾಹಿಸಬೇಕು ಗೌರವಿಸಲೇಬೇಕು ಹಾಗೂ ಅಭಿನಂಧಿಸಲೇಬೇಕು …. ಆದರೆ, ಆ ಹುಡುಗಿಗೆ ಬಂದಂಥ ಆಪತ್ತು ಬಾರದಿರಲಿ ಎಂಬುದೇ ನನ್ನಂತೆ ಎಲ್ಲರ ಆಶಯ …

  4. Anonymous

    ಸಮಯ ಬಂದಿದೆ ಸ್ವತಂತ್ರವಾಗಿ ಅರಳಲು, ಮನಸ್ಸು ಮಾಡಿ. ನಿಮ್ಮ ಮನದ ಕನಸುಗಳು ನನಸಾಗುವುದು.Tima has come to blossom free.ಇದನ್ನು ಬರೆದವಳು ಪಾಕಿಸ್ತಾನಿ ಕವಯಿತ್ರಿ. ಕಿಶ್ವರ ನಾಸಿರ್. ನಿಮ್ಮ ಹಕ್ಕನ್ನು ಚಲಾಯಿಸಿ. ಉದಯಕುಮಾರ

  5. Sowmya K R

    ವಿದ್ಯಾಬ್ಯಾಸ ಪಡೆಯಲು ಪರಿತಪಿಸುವ ಹೆಣ್ಣುಮಕ್ಕಳ ಸ್ಥಿತಿ ಜೀವಂತವಾಗಿರುವುದು ದುರಂತದ ಸಂಗತಿಯಲ್ಲವೆ. ಮುಸ್ಲಿಂ ಹೆಣ್ಣು ಮಕ್ಕಳು ಸಹ ಇತರ ಹೆಣ್ಣು ಮಕ್ಕಳಂತೆ ವಿದ್ಯಾಬ್ಯಾಸ ಪಡೆಯಬೇಕು ಎಂಬುದನ್ನು ಅರಿತುಕೊಂಡು ಪುರುಷ ಸಮಾಜ ಸಹಕರಿಸಿದರೆ ಆಕೆಯು ಇತರರಂತೆ ಜಾಗತಿಕ ಬದುಕನ್ನು ಕಂಡುಕೊಳ್ಳಲು ಸಾದ್ಯ ಅಲ್ಲವೆ. ಇದೆಲ್ಲಾ ಬದಲಾಗುವ ಕಾಲ ಬರುವುದಾದರೂ ಯಾವಾಗ?…
    Sowmya K R

  6. Ganapathi Magalu

    ಲೇಖನಕ್ಕೆ ಧನ್ಯವಾದಗಳು. ಪರದೆ ಬುರ್ಕಾವೆ ಆಗಬೇಕಿಲ್ಲ. ನಾನು ಕಂಡ ಕೇಳಿದ ಹಲವಾರು ಹೆಣ್ಣು ಮಕ್ಕಳ ಪಾಡು ಇದೇ. ಮದುವೆ ಆದರೂ ಕೆಲಸ ಮಾಡುವುದು ಹಣಕ್ಕಾಗಿ. ಅದು ಗಂಡ/ಅವರ ಮನೆಯ ಸ್ವತ್ತು. ಮದುವೆ ಆದ ಹೆಣ್ಣು ಸಹ! ಹಾಗಾಗಿ ಇದು ಕೇವಲ ಮುಸ್ಲಿಂ ಸಮಾಜದ ಕಥೆಯಲ್ಲ. ಅಲ್ಲಿಯ ಸುದ್ದಿಗಳು ಉಳಿದವರಿಗೆ ಕಡಿಮೆ ತಿಳಿದಿರುವುದರಿಂದ ಈ ಲೇಖನ ಒಂದು ತರಹದ ಚಿಂತನೆಗೆ ಹಚ್ಚುತ್ತದೆ. ಪೋಷಕರು, ಸಮಾಜದಲ್ಲಿ ಬಲಾಢ್ಯರು, ತೀರ್ಮಾನ ತೆಗೆದುಕೊಳ್ಳುವವರಿಗೆ ಅರಿವು ಮೂಡಿಸುವ ಬಗ್ಗೆ ಆಲೋಚನೆ ಹರಿಸುವುದು ಸೂಕ್ತ. ಸರ್ಕಾರ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಯ ಕುರಿತ ವಿಶೇಷ ಗ್ರಾಮ ಸಭೆಗಳನ್ನು ನಡೆಸಲು ಸುತ್ತೋಲೆ ಹೊರಡಿಸಿದ್ದು ಕುಂದಾಪುರ ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್ ಗಳು ಅದನ್ನು ನಡೆಸಿವೆ. ಅಲ್ಲಿ ರಕ್ಷಣೆಯ ಹಿನ್ನೆಲೆಯಲ್ಲಿ ಅನೇಕ ವಿಚಾರಗಳು ಚರ್ಚೆಯಾಗಿದ್ದು ಸ್ವಾಗತಾರ್ಹ. ಹೆಚ್ಚಿನ ವಿವರಗಳು ಬೇಕಿದ್ದರೆ ನನ್ನನ್ನು ಸಂಪರ್ಕಿಸಬಹುದು- ೯೪೪೯೨೬೮೦೭೨ ಅಥವಾ ganapathimm@gmail.com ಬರೆಯಬಹುದು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading