ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪದ್ಮಿನಿ ನಾಗರಾಜು ಆಹ್ವಾನ.. 

ಮತ್ತೊಂದು ಸಂತೋಷದ ಸುದ್ಧಿ… ನೀವು ನಮ್ಮ ಜೊತೆಯಿದ್ದರೆ ಚಂದ…

ನಾಡಿನ ಪ್ರಸಿದ್ಧ ರಂಗಭೂಮಿಯ ನಟ… ನಿರ್ದೇಶಕ… ಚಲನಚಿತ್ರ ನಟರಾದ ಕೃಷ್ಣಮೂರ್ತಿ ಕವತ್ತಾರವರ ನಿರ್ದೇಶನದಲ್ಲಿ ನಾನು ಬರೆದ ಕತೆ “ಸಮಾಧಿ ಮೇಲಿನ ಹೂ” ನಾಟಕವಾಗುತ್ತಿದೆ.

“ಮಂಗಳ ಮುಖಿ” ಯಾಗಿ. 10th ಶನಿವಾರ..ಪ್ರಯೋಗ ಥೇಟರನಲ್ಲಿ…

ತೃತೀಯ ಲಿಂಗಿಗಳ ಬದುಕಿನ ಚಿತ್ರಣ ಈ ಕತೆಯಲ್ಲಿದೆ. ತಾವು ಮಾಡದ ತಪ್ಪಿಗೆ ಜೀವನಪೂರ್ತಿ ಅವರು ಅನುಭವಿಸುವ ನೋವು.. ಸಂಕಟದ ಅನಾವರಣ … ಸಮಾಜದ ಧೋರಣೆಯ ಒಳನೋಟ ಈ ಕತೆಯದ್ದು.
ಈಗಾಗಲೇ ಲಂಕೇಶರ ಬದುಕಿನ ಅನಾವರಣವಾದ ‘ಅವ್ವ’ ನಾಟಕವಾಗಿ ನಾಡಿನಾದ್ಯಂತ ಮೂರು ತಂಡಗಳು ಅಭಿನಯಿಸುತ್ತಿವೆ.

ನಾನು ಬರೆದ ಕತೆ Perfume ಕಿರುಚಿತ್ರವಾಗಿದೆ… ನಿರ್ದೇಶನ ಎರಡಕ್ಕೂ ಕವತ್ತಾರರದ್ದು.

-ಪದ್ಮಿನಿ ನಾಗರಾಜು

‍ಲೇಖಕರು avadhi

13 August, 2019

1 Comment

  1. Chandraprabha Katari

    ನಿಜಕ್ಕು ಅದ್ಭುತ ಪ್ರಯೋಗ. ಸರಳ ರೇಖೆಯ ದುರಂತ ಕತೆ ಸಮಾಧಿ ಮೇಲಿನ ಹೂ. ಅದು ನಾಟಕವಾಗಿ ಹೇಗಿರುತ್ತದೆಂಬ ಕುತೂಹಲದೊಂದಿಗೆ ಬಂದಿದ್ದೆ. ಸುಮಾರು ಒಂದು ಗಂಟೆಯ ಪ್ರದರ್ಶನ ಸಮ್ಮೋಹನಗೊಳಿಸಿತ್ತು. ಎಂಥಾ ಚಾಕಚಕ್ಯತೆಯ ನಿರೂಪಣೆ, ಸಹಜಾಭಿನಯದ ನಟನೆ, ಹಿನ್ನಲೆ ಸಂಗೀತ ನಿಜಕ್ಕೂ ಮಂಗಳಮುಖಿಯರ ಲೋಕಕ್ಕೆ ಕರೆದೊಯ್ಯಿತು. ಮಡಿವಂತಿಕೆ ಆಚಿಗಿನ ವಿಷಯಗಳನ್ನು ಅಕ್ಷರದಲ್ಲಿ ಮೂಡಿಸುವುದು ಸವಾಲಿನದ್ದು. ಆದರೆ ದೃಶ್ಯ ಮಾಧ್ಯಮವಾಗಿ ನಾಟಕದಲ್ಲಿ ಅಂಥವನ್ನು ಅಶ್ಲೀಲವೆನಿಸದಂತೆ ತರುವುದು ಕಲ್ಪನೆಗೆ ಮೀರಿದ ಸಂಗತಿ. ಆ ವಿಷಯವಾಗಿ ಕವತ್ತಾರರನ್ನು ಶ್ಲಾಘಿಸಬೇಕು. ಅಂಥ ದೃಶ್ಯ ಕಲ್ಪನೆ ಜೊತೆಗೆ ರಂಗಪ್ರಯೋಗವಾಗಿ ನೋಡುಗನಿಗೆ ಯಾವ ಮುಜುಗರವನ್ನು ಉಂಟು ಮಾಡದೆ ಪರಿಣಾಮಕಾರಿಯಾಗಿ ಕತ್ತಲು ಬದುಕಿನ ನೋವನ್ನು ಕಟ್ಟಿಕೊಡುತ್ತಾರೆ. ಅವರಿಗೆ, ನಿಮಗೆ ಮತ್ತೊಮ್ಮೆ ಅಭಿನಂದನೆಗಳು…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading