ಚಿತ್ರ: ಅಪಾರ
ಪಟ್ಟಿ ಹೇಳುವುದು ಕಷ್ಟವೇ ಆದರೂ, ಈಗ ನೆನಪಾದವನ್ನು ಬರೆಯುತ್ತೇನೆ! ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ.
೧. ಪರ್ವ – ಎಸ್.ಎಲ್.ಭೈರಪ್ಪ
೨. ಚೆನ್ನಬಸವನಾಯಕ – ಶ್ರೀನಿವಾಸ
೩. ವೈಶಾಖ – ಚದುರಂಗ
೪.ಶಾಂತಲಾ – ಕೆ.ವಿ.ಐಯ್ಯರ್
೫.ವಂಶವೃಕ್ಷ – ಎಸ್.ಎಲ್.ಭೈರಪ್ಪ
೬.ಪುರುಷೋತ್ತಮ – ಯಶವಂತ ಚಿತ್ತಾಲ
೭..ದುರ್ಗಾಸ್ತಮಾನ- ತ.ರಾ.ಸು
೮. ಹಸಿರು ಹೊನ್ನು – ಬಿ.ಜಿ.ಎಲ್.ಸ್ವಾಮಿ
೯.ಮುಳುಗಡೆ – ನಾ.ಡಿ’ಸೋಜ
೧೦.ನಿರಂತರ – ಕೆ.ಟಿ.ಗಟ್ಟಿ
ಇವು ಅಲ್ಲದೇ, ಇನ್ನೂ ಕೆಲವು ಈ ಪಟ್ಟಿಯಲ್ಲಿ ಇರಬೇಕಾಗಿತ್ತು ಎನ್ನಿಸುತ್ತಿದೆ – ಆದರೆ, ಅವುಗಳನ್ನು ಪೂರ್ತಿ ಓದಿಲ್ಲವಾಗಿ, (ಅಥವಾ ಅವು ಕಥೆಗಳ, ಹರಟೆಗಳ ಸಂಗ್ರಹಗಳಾಗಿರುವುದರಿಂದ, ಒಟ್ಟಿಗೇ ಒಂದೇಸಲ ಕೂತು ಓದದ ಕಾರಣ) ಇಲ್ಲಿ ಸೇರಿಸದೇ ಹೋದೆ (ಉದಾ: ಮಾಸ್ತಿ ಅವರ ಕತೆಗಳು, ಮಂಕುತಿಮ್ಮನ ಕಗ್ಗ, ಅಶ್ವತ್ಥರ ಕತೆಗಳು, ಮೂರ್ತಿರಾಯರ ಹರಟೆಗಳು, ಟಿ.ಕೆ. ರಾಮರಾಯರ ಪತ್ತೇದಾರಿ ನೀಳ್ಗತೆಗಳು ಇತ್ಯಾದಿ).






0 Comments