ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನೆಟ್’ಗೆ ಬರ್ತಾವ್ರೆ ಕೊಟ್ಟೂರ್ ಗ್ಯಾಂಗ್

k

ಕನ್ನಡ ಸಾಹಿತ್ಯ ಲೋಕಕ್ಕೆ ಈಗ ‘ವೆಂಕಟಾಲ ಗ್ಯಾಂಗ್’ ಚಿರಪರಿಚಿತ.

ಫಾದರ್ 55, ಲೆವೆಲ್ ಕ್ರಾಸಿಂಗ್ ಮೂಲಕ ಕನ್ನಡ ಸಾಹಿತ್ಯಕ್ಕೆ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟ ವಿ ಎಂ ಮಂಜುನಾಥ್ ಮುತುವರ್ಜಿಯಿಂದ ರೂಪಿಸಿದ ಗ್ಯಾಂಗ್ ಅದು.

ಅದರಲ್ಲಿ ಟೈಲರ್, ಕಾರ್ಪೆಂಟರ್ ಎಲ್ಲರೂ ಇದ್ದಾರೆ.

dsc_0362ಈಗ ಆ ಸಾಲಿಗೆ ಎಂಟ್ರಿ ಕೊಟ್ಟಿರುವ ಮತ್ತೊಂದು ಗ್ಯಾಂಗ್ ಕೊಟ್ಟೂರ್ ಗ್ಯಾಂಗ್. ಕೊಟ್ಟೂರು ಮಿರ್ಚಿ ತಿಂದಿದ್ದೀರೋ ಇಲ್ಲವೊ ಗೊತ್ತಿಲ್ಲ ಆದರೆ. ಈ ಹುಡುಗರು ಅದರಷ್ಟೇ ಚುರುಕು. ಆ ಕಾರಣಕ್ಕಾಗಿಯೇ ಬ್ಲಾಗಿನ ಹೆಸರು ಕೊಟ್ಟೂರ್ ಮಿರ್ಚಿ.

ಈಗಾಗಲೇ ‘ನಾವು ನಮ್ಮಲ್ಲಿ’ ಮೂಲಕ ಕೊಟ್ಟೂರು ಗೆಳೆಯರಿಗೆ ಒಂದು ನೆಲೆ ಕಲ್ಪಿಸಿರುವ ನಿರಂಜನ ಹಾಗೂ ಉಷಾ ಈಗ ಈ ‘ಮಿರ್ಚಿ’ ರೆಡಿ ಮಾಡಿದ್ದಾರೆ. ‘ನಾವು ನಮ್ಮಲ್ಲಿ’ ಅವರ ಖಾಸಗಿ ಬ್ಲಾಗ್ ಆಗಿತ್ತು. ನಿರಂಜನ ಹಾಗೂ ಉಷಾ ಇಬ್ಬರೂ ಊರಿಗೇ ಆಗಿ ಮಿಗುವಷ್ಟು ಗೆಳೆಯರನ್ನು ಹೊಂದಿದ್ದಾರೆ. ಹಾಗಿರುವಾಗ ಅವರ ಮನೆಯಲ್ಲಿ ಖಾಸಗಿ ಎಂಬ ಮಾತೇ ಇಲ್ಲ.

ಬಂದ ಗೆಳೆಯರೆಲ್ಲರೂ ಅದು ತಮ್ಮದೇ ಮನೆಯೇನೋ ಅನ್ನುವಂತೆ ಓಡಾಡುತ್ತಾರೆ. ಅದೇ ಆಗಿದ್ದು ಅವರ ಬ್ಲಾಗ್ನಲ್ಲಿಯೂ. ಇದು ನಮ್ಮದೇ ಏನೋ ಎನ್ನುವಂತೆ ಕೊಟ್ಟೂರು ಹುಡುಗರೆಲ್ಲಾ ಅಲ್ಲಿ ಬೀಡು ಬಿಟ್ಟರು. ಹಾಗಾಗಿ ಈಗ ಕೊಟ್ಟೂರು ಹುಡುಗರಿಗೆ ಎರಡು ಬ್ಲಾಗ್.

ಈ ಕೊಟ್ಟೂರ್ ಗ್ಯಾಂಗ್ ನಲ್ಲಿ ಯಾರ್ಯಾರಿದ್ದಾರೆ. ಅವರ ಕಲ್ಯಾಣ ಗುಣಗಳನ್ನು ಸೇರಿಸಿ ಅವರೇ ಕಟ್ಟಿದ ಡೈಲಾಗ್ ಗಳು ಇಲ್ಲಿವೆ.

ಪೀರ್ ಭಾಷಾ ಗೇ ಬಾವುಟಾನಾ?
ರುಗ್ವೇದಿಗೇ ಭಾಷಣಾನಾ ?
ಸಾಲೀಗೇ ಗಜಲ್ಲಾ
ವಿಕ್ರಮ್ ಗೇ ನೈಸಾ
ಕಲಾಲ್ ಗೇ ಪ್ರತಿಕ್ರಿಯೇನಾ
ಉಷನಿಗೇ ಉಪ್ಪಿಟ್ಟಾ?
ನಿರಂಜನನಿಗೇ ಸಂಘಟನೇನಾ?
ಸಿದ್ದುಗೇ ಮಿಸ್ ಕಾಲಾ?

‍ಲೇಖಕರು avadhi

1 February, 2009

4 Comments

  1. siddudevaramani

    ಸರ್, ನಿಮ್ಮ ಚುರುಕತನಕ್ಕೆ ಬೆರಗಾಗಿದ್ದೇನೆ ! ಸ೦ಜೆ ಅಷ್ಟೇ .. ನಮ್ಮನ್ನೇ ನಾವು ಜೋಕ್ ಮಾಡಿಕೊ೦ಡು ಮನೆ ಮುಟ್ಟಿಲ್ಲ , ಅಲೆ ಅವಧಿ ಯಲ್ಲಿ ಇದೆ ಅ೦ದ್ರೆ ನಿಮ್ಮ ಪ್ರೀತಿ ಯ ಪಾಲು ನಮಗೇ ಜಾಸ್ತಿ ಹ೦ಚಿದ್ದೀರಿ ಎ೦ಬ ಕುಶಿ ನಮಗೆ… ಬೇಗ ಕೊಟ್ಟೂರಿಗೆ ಬನ್ನಿ ಮಿರ್ಚಿ ನಮ್ಮೊ೦ದಿಗೆ ತಿನ್ನುವಿರ೦ತೆ.

  2. ವೀರಣ್ಣ ಕಮ್ಮಾರ

    ಕೊಟ್ಟೂರು ಗ್ಯಾಂಗ್್ ಓದಿ ಬಲೆ ಖುಷಿ ಆಯ್ತು. ಕೊಟ್ಟೂರು ಬಸ್್ ನಿಲ್ದಾಣವು ಕುಂವೀ ಅವರಿಂದ ಪರಿಚಿತ ಾಗಿತ್ತು
    ಈಗ ನಿಮ್ಮಿಂದ ೀ ಗ್ಯಾಂಗ್್ನ ಪರಿಚಯ ಾಗಿದೆ. thanks!

  3. srinivasagowda

    welcome kottur gang… welcome.

  4. basavaraja halli

    ನಾನು ಮೊನ್ನೆ ಹಂಪಿ ಉತ್ಸವಕ್ಕೆಂದು ಬಂದಾಗ ಕವಿಗೋಷ್ಠಿಯ ಸಂದರ್ಭದಲ್ಲಿ ಕೊಟ್ಟೂರು ಗ್ಯಾಂಗ್ನ ಕೆಲವರನ್ನು ಕಂಡಿದ್ದೇನೆ. ಕವಿಗೋಷ್ಠಿಯ ಹಿಂಭಾಗದಲ್ಲಿ ಕುಳಿತಿದ್ದ ನಾನು ನನ್ನ ಮುಂದೆಯೇ ಚಂದ್ರು ತುವರ್ಿಹಾಳ, ಅರುಣ್ ಜೋಳದ್ ಕೂಡ್ಲಿಗಿ,ಪೀರ್ಭಾಷಾ ‘ನಾವು ನಮ್ಮಲ್ಲಿ’ ಬ್ಲಾಗ್ನ ನಿಮ್ಮನ್ನು ಕಲಿಗಣನಾಥ ಗುಡದೂರು ಅವರ ಶಿಷ್ಯನಾದ ನಾನು ಪರಿಚಯ ಮಾಡಿಕೊಳ್ಳಬೇಕೆಂದಿದ್ದೆ ಆದರೆ ಆಗಲಿಲ್ಲ. ಕವಿಗೋಷ್ಠಿ ಮುಗಿಯವರೆಗೆ ಇದ್ದೆ. ಕವಿಗೋಷ್ಠಿಯ ಕೊನೆಯಲ್ಲಿ ಅಳುಮುಂಜಿ ಮಾರಿ ಮಾಡಿ ಕವನ ಓದಿದ ಅಣ್ಣ ಅರುಣ್ ಜೋಳದ್ ಕೂಡ್ಲಿಗಿ ಕವನ ಕೇಳಿ ಅಲ್ಲಿಂದ ಕಾಲ್ಕತ್ತಿದೆ. ಈಗಾಗಲೇ ನಾನು ಮತ್ತು ನನ್ನ ಗುರುಗಳು ನಾವು ನಮ್ಮಲ್ಲಿ ಅನುಸರಿಸುತ್ತಿದ್ದು. ಕೊಟ್ಟೂರು ಮಿಚರ್ಿ ಇನ್ಮುಂದೆ ತಿಂತೇವೆ.
    – ಬಸವರಾಜ ಹಳ್ಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading