ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಚ್ಚಿನ ಗೋವಿಂದಣ್ಣನಿಗೆ ಅಭಿನಂದನೆಗಳು..

ಪುರುಷೋತ್ತಮ ಬಿಳಿಮಲೆ 

ಸೂರಿಕುಮೇರು ಗೋವಿಂದ ಭಟ್ ಅವರಿಗೆ ಈ ಸಲದ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಘೋಷಣೆಯಾಗಿದೆ.

ಯಕ್ಷಗಾನಕ್ಕೆಂದೇ ಹುಟ್ಟಿಕೊಂಡ ಕಲಾವಿದ ಇವರು ಎಂದು ನಾವೆಲ್ಲ ಮಾತಾಡಿಕೊಳ್ಳುವುದುಂಟು.

ಹಿತಮಿತವಾದ ಮಾತು, ಅಚ್ಚುಕಟ್ಟಾದ ಕುಣಿತ, ಪಾತ್ರಗಳ ಗುಣಗ್ರಹಣ ಮಾಡಿ ರಂಗದಲ್ಲಿ ಅದನ್ನು ಅನನ್ಯವಾಗಿ ಮಂಡಿಸುವ ಕ್ರಮ, ರಂಗದ ಒಳಗೆ ಹಾಗೂ ಹೊರಗೆ ಶಿಸ್ತಿನ ಬದುಕು ಇತ್ಯಾದಿಗಳಿಂದ ಗೋವಿಂದಣ್ಣ ಎಲ್ಲರಿಗೂ ಆಪ್ತ.

ಅವರ ಜೊತೆ ಜಪಾನಿನ ಆರು ಕಡೆಗಳಲ್ಲಿ ಅಭಿಮನ್ಯು, ನರಕಾಸುರ ಮತ್ತು ಇಂದ್ರಜಿತು ಯಕ್ಷಗಾನ ಪ್ರದರ್ಶಿಸಿದ ಭಾಗ್ಯ ನನ್ನದು. ಏಷಿಯಾದ ಸುಮಾರು 60 ಕಲಾವಿದರಿಗೆ ಯಕ್ಷಗಾನದ ಹೆಜ್ಜೆ ಕಲಿಸಿದ ಕೀರ್ತಿ ಅವರದು. 60ರ ದಶಕದಿಂದ ಆರಂಭವಾಗಿ ಸುಮಾರಾಗಿ 90ರ ದಶಕದಲ್ಲಿ ಕೊನೆಯಾದ ಯಕ್ಷಗಾನದ ಸುವರ್ಣಯುಗದ ಧ್ರುವ ನಕ್ಷತ್ರ ಅವರು.

ಗೋವಿಂದ ಭಟ್ವರ ರಾಮ, ಅತಿಕಾಯ, ಇಂದ್ರಜಿತು, ಹನುಮಂತ, ಕೌರವ, ಭೌಮಾಸುರ, ಬಾಹುಬಲಿ, ರಕ್ತಬೀಜ, ಮೊದಲಾದ ಪಾತ್ರಗಳನ್ನು ಮರೆಯುವುದಾದರೂ ಹೇಗೆ? ಅವರ ಆತ್ಮ ಚರಿತ್ರೆ ಪ್ರಕಟವಾಗಿದೆ.

ನೆಚ್ಚಿನ ಗೋವಿಂದಣ್ಣನಿಗೆ ಅಭಿನಂದನೆಗಳು.

‍ಲೇಖಕರು avadhi

28 May, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading