ಓದಿಸಿಕೊಂಡು, ಬರೆಸಿಕೊಂಡ ಕಥೆ
ಸುನೀತಾ ಮಂಜುನಾಥ್
ಅವನೊಬ್ಬ ಅಮೆರಿಕಾದ ಯುದ್ದ ವಿಮಾನ ಚಾಲಕ ….
ವಿಯೆಟ್ನಾಂ ಯುದ್ದದ್ದಲ್ಲಿ ಸುಮಾರು ಶತ್ರುಗಳ ನಾಶ ಮಾಡಿ ಮುಂದೆ ಸಾಗುವಾಗ ವಿಮಾನ ಪತನಗೊಳ್ಳುತ್ತದೆ….
ಪತನಗೊಳ್ಳುವ ಮುನ್ನ ಅವನು parachute ಮೂಲಕ ಹೊರಗೆ ಹಾರಿ ಸಾವಿನಿಂದ ತಪ್ಪಿಸಿಕೊಳ್ಳುತ್ತಾನೆ…ಆದರೆ ವೈರಿಗಳ ಕೈಗೆ ಸಿಕ್ಕಿಹಾಕಿಕೊಳ್ತಾನೆ..
ಸುಮಾರು ಆರೇಳು ವರ್ಷಗಳ ನಂತರ ಕಷ್ಟದ ದಿನಗಳು ಕೊನೆಗೊಂಡು ದ್ಧ ಕೈದಿಯಾಗಿ ಬಿಡುಗಡೆ ಆಗುತ್ತಾನೆ…
ಬಿಡುಗಡೆಯಾಗಿ ಬಂದ ನಂತರ ಬಹಳಷ್ಟು ಕಡೆ ಸನ್ಮಾನಗಳು ನಡೆಯುತ್ತವೆ…ಅವನ ಶೌರ್ಯಕ್ಕೆ ಅಭಿಮಾನ ವ್ಯಕ್ತವಾಗುತ್ತದೆ….ಕರೆದಲ್ಲೆಲ್ಲ ಹೋಗಿ ತನ್ನ ಅನುಭವಗಳ ಹಂಚಿಕೊಳ್ಳುತ್ತ ಇರುತ್ತಾನೆ….
ಹೀಗೆ ಒಂದು ದಿನ ಒಂದು ಉಪಹಾರ ಗೃಹದಲ್ಲಿ ಅವನು ಅವನ ಪತ್ನಿಯ ಜೊತೆ ಕುಳಿತ್ತಿದ್ದಾಗ…ಒಬ್ಬ ವ್ಯಕ್ತಿ ಅವನ ಮೇಜಿನ ಬಳಿ ಬಂದು …..’ನೀನು ____ ಅಲ್ವ….ನೀನು ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದವನಲ್ವ ??’ ಅಂತೆಲ್ಲ ಕೇಳ್ತಾನೆ…..
ಇವನು ಹೆಮ್ಮೆಯಿಂದ ತಲೆ ಅಲುಗಿಸಿ ‘ಹೌದು, ನಿನಗೆ ಹೇಗೆ ಗೊತ್ತು’ ಅಂತಾನೆ….
ಆ ವ್ಯಕ್ತಿ..’ನಿನ್ನ parachute ಪ್ಯಾಕ್ ಮಾಡಿದ್ದು ನಾನೇ…. ದಿನಾಲು ನಾನು ಅದನ್ನ ಚೆಕ್ ಮಾಡಿ ಪ್ಯಾಕ್ ಮಾಡ್ತಾ ಇದ್ದೆ …ಅದೇ ನನ್ನ ಕೆಲಸ ಸೈನ್ಯದಲ್ಲಿ…ಅದು ಚೆಂದ ಕೆಲಸ ಮಾಡಿತು ಅಂದ್ಕೊಳ್ತೀನಿ’ ಅಂದ…
ಅಲ್ಲಿಯವರೆಗೂ ಇಲ್ಲದ ಒಂದು ವಿಚಿತ್ರ ಭಾವ ಇವನನ್ನ ಆವರಿಸಿಕೊಳ್ಳುತ್ತದೆ…….ತನ್ನ ಬದುಕಿನ ಹಿಂದೆ ….ತಾನು ಬದುಕಿರುವುದರ ಹಿಂದೆ ಇರುವ ತನಗೇ ತಿಳಿಯದ…ಅಥವಾ ತಾನು ಗಮನಿಸದೆ ಉಳಿದ ಕೈಗಳೆಲ್ಲ ತನ್ನ ಮುಂದೆ ಬಂದಂತೆ ಅನಿಸುತ್ತದೆ…..
ಈಗ ಅವನು ಎಲ್ಲಿ ಹೋದರೂ ತನ್ನ ಪ್ರೇಕ್ಷಕರನ್ನ ಇದೆ ಕೇಳ್ತಾನೆ………”Do you know who packed yr parachute….physical parachute, mental parachute, emotional parachute, and spiritual parachute??..”
ಇದು ಕಥೆ …..
ಈಗ ಇದನ್ನು ನಮಗೆ ನಾವೇ ಕೇಳಿಕೊಳ್ಳೋಣವೇ plz…….ಅಂತವರ ಮನದಲ್ಲಾದರು ಸರಿ …ಸ್ಮರಿಸಿ ಧನ್ಯವಾದ ಹೇಳೋಣವೇ…:)))))







ಸುನೀತಕ್ಕ, ಚಂದದ ಕತೆಗಳನ್ನು ಅನುವಾದಿಸುತ್ತೀರಿ.. ಆದರೆ ಮೂಲ ಲೇಖಕರ ಹೆಸರು ಮತ್ತು ಪುಸ್ತಕದ ಹೆಸರನ್ನು ನೀವು ಎಲ್ಲೂ ನೀಡುವುದಿಲ್ಲ.. ಮುಂದಿನ ಕತೆಗಳಲ್ಲಿ ಮೂಲ ಲೇಖಕರ ಹೆಸರನ್ನು ಬರೆಯಲು ಮರೆಯದಿರಿ.. ಶುಭವಾಗಲಿ..
ಮೇಲಿನ ಕತೆಯ ಮೂಲ ಬರಹದ ಲಿಂಕ್ ಈ ಕೆಳಗಿನಂತಿದೆ..
http://www.charlieplumb.com/book-insights.htm
The God Of Small Things..:-) ತುಂಬಾ ನಿಜ. ಚೆನ್ನಿದೆ ಕಥೆ. ಓದಿ, ಬರೆದಿದ್ದಕ್ಕೆ ಧನ್ಯವಾದ.
ಸೂಕ್ಷ್ಮವಾದ ಕಥೆ. ಇದನ್ನು ಇದೇ ಮೊದಲು ಓದುತ್ತಿದ್ದೇನೆ. ಹಂಚಿಕೊಂಡು ನಮ್ಮೆಲ್ಲರಿಗೂ ಓದಿಸಿದ್ದಕ್ಕೆ ಧನ್ಯವಾದಗಳು ಅಕ್ಕ.. 🙂
ಹೊರ ಜಗತ್ತಿಗೆ ಮಿಂಚುವ ಹಲವು ಮೇರು ವ್ಯಕ್ತಿಗಳ ಹಿಂದೆ ಮರೆಯಲ್ಲಿ ದುಡಿಯುವ ಮತ್ತು ಮರೆಯಾಗಿ ಹೋಗುವ ಅಜ್ಞಾತರ ಬಗ್ಗೆ ಒಂದು ಸಂತಾಪ ಲೇಖನ.