ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮ್ಮೆದುರಿಗೆ ‘ಕನಸೆಂಬೋ ಕುದುರೆಯನೇರಿ ‘

-ಸಾಂಗತ್ಯ

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಹೊಸ ಚಲನಚಿತ್ರ “ಕನಸೆಂಬೋ ಕುದುರೆಯನ್ನೇರಿ” ಡಿ. 10 ರಂದು ಸಂಜೆ 7 ಕ್ಕೆ ಬೆಂಗಳೂರಿನ ಕೋರಮಂಗಲದ ಫೋರಂನ ಪಿವಿಆರ್ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳಲಿದೆ.

ಅಮರೇಶ ನುಗಡೋಣಿಯವರ ಕಥೆಯ ಎಳೆಯನ್ನಾಧರಿಸಿ ರೂಪಿಸಿದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ರೋಮ್ ನಲ್ಲಿ ನಡೆದ ಏಷ್ಯಾಟಿಕ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಎನ್ಇಟಿಪಿಎಸಿ ಪ್ರಶಸ್ತಿ, ರಜತ ಪದಕ ಪ್ರಶಸ್ತಿ ಅತ್ಯುತ್ತಮ ಚಿತ್ರಕಥೆಗೆ, 2009 ರ ರಜತ ಕಮಲ ಗೌರವ ಗಳಿಸಿದೆ.

ಏಷ್ಯಾಟಿಕ್ ಚಿತ್ರೋತ್ಸವ, ವಿಸೋಲ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಫಿಲಿಫೈನ್ಸ್ ನ ಸಿನಿಮನಿಲಾ ಅಂತಾರಾಷ್ಟ್ರೀಯ ಚಿತ್ರೋತ್ಸವ, ಸ್ವೀಡನ್ ನ ಗೊಟಬರ್ಗ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಯುಕೆ ಯ ಗ್ಲಾಸ್ಗೋ ಚಿತ್ರೋತ್ಸವ, ಮುಂಬಯಿಯ ಎಂಎಎಂಐ ಚಿತ್ರೋತ್ಸವ,ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ, ತ್ರಿವೇಂದ್ರಂ ಚಿತ್ರೋತ್ಸವ, ಕೋಲ್ಕತ್ತಾದ ಸಿನಿ ಸೆಂಟ್ರಲ್ ಉತ್ಸವ, ಚೆನ್ನೈ ಅಂತಾರಾಷ್ಟ್ರೀಯ ಚಿತ್ರೋತ್ಸವ, ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಪಾಲ್ಗೊಂಡಿದೆ.

 

‍ಲೇಖಕರು avadhi

8 December, 2010

1 Comment

  1. guruve

    prapancha ellaa sutti beMgaLurina sAmAnyanU nODuvante Ayitu.. dhanya!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading