ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಿನ್ನ ಮುಖ ನೋಡಿದರೆ ನನ್ನ ಮುಖದಲ್ಲಿ ಕೆಂಡದ ಉಂಡೆಗಳು ಏಳುತ್ತವೆ..’

ಹುಸೇನ್ ಪಾಷ

’ನಿನ್ನ ಮುಖ ನೋಡಿದರೆ ನನ್ನ ಮುಖದಲ್ಲಿ ಕೆಂಡದ ಉಂಡೆಗಳು ಏಳುತ್ತವೆ
ಅಸ್ಪೃಶ್ಯ ದಲಿತರ ಬಗ್ಗೆ ನೀಚ ಭಾವನೆ, ಜಾತಿಯ ನಂಜು ತುಂಬಿಕೊಂಡಿರುವ, ಧರ್ಮ ಶ್ರೇಷ್ಠತೆಯ ಅಮಲಿನಲ್ಲಿರುವ ಬಾಜಿರಾವ್ ಪೇಶ್ವೆ ಕೋರೆಗಾಂವ್ ನಾಟಕದಲ್ಲಿ ಹೇಳುವ ಮಾತುಗಳಿವು.

1818 ರ ಜನೇವರಿ 1ರಂದು ನಡೆದದ್ದು ಕೋರೆಗಾಂವ್ ಕದನ. ಬ್ರಿಟಿಷರಿಗೂ ಪೇಶ್ವೆಗಳಿಗೂ ಯುದ್ಧದ ಸಂಭವ ಕಂಡಾಗ ಬ್ರಿಟಿಷ ಸೈನ್ಯದ ಮಹರ್ ಸೈನಿಕರು ಪೇಶ್ವೆಯನ್ನು ನಮ್ಮವರೆಂಬ ಕಕ್ಕುಲಾತಿಯಿಂದ ಬೆಂಬಲಿಸುತ್ತೇವೆಂದು ಹೋದರೆ ಅವನು ತನ್ನೋಳಗಿನ ನೀಚತನ ತೋರಿಸುವ ಮಾತುಗಳವು.
ಕೊನೆಗೆ ಯುದ್ಧ ನಡೆದು ಬ್ರಿಟಿಷರ ಪಡೆಯಲ್ಲಿದ 500 ಮಹರ್ ಸೈನಿಕರು ಪೇಶ್ವೆಯ 30 ಸಾವಿರದಷ್ಟು ಇದ್ದ ಸೈನ್ಯವನ್ನು ಸೋಲಿಸುತ್ತಾರೆ. ಹಾಗೇ 21 ಮಹರ್ ಸೈನಿಕರು ವೀರ ಮರಣ ಅಪ್ಪುತ್ತಾರೆ. 1822 ಜನೇವರಿ 1ರಂದು ಕೋರೆಗಾಂವ್ ನಲ್ಲಿ ಕಟ್ಟುವ ಸ್ಮಾರಕ ಮಹರ್ ಸೈನಿಕರ ವಿಜಯೋತ್ಸವದ ಸಂಕೇತದ ಸಂದರ್ಭದಲ್ಲಿ ಬ್ರಿಟಿಷ ಅಧಿಕಾರಿ ಹೇಳುತ್ತಾನೆ.-‘ಸೂರ್ಯ ಚಂದ್ರರಿರುವ ತನಕ ಈ ಸೈನಿಕರ ಹೆಸರು ಶಾಸ್ವತ ‘
ಆದರೆ ಅದಾಗಿ ಬರೀ 50 ವರ್ಷಗಳಿಗೆ ಆ ಸೈನಿಕರ ಹೆಸರುಗಳಿರಲಿ ಆ ಕದನವೇ ಇತಿಹಾಸದಲ್ಲಿ ದಾಖಲಾಗಿರಲಿಲ್ಲ. ಬಹುಶಃ ಭಾರತದ ಇತಿಹಾಸಕಾರರು ಶೂದ್ರ ವರ್ಗಕ್ಕೆ ಬಹಳ ಅನ್ಯಾಯ ಮಾಡಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ನಿನ್ನೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಈ ನಾಟಕವನ್ನು ರಚಿಸಿದ್ದ ಹಾಲ್ಕುರಿಕೆ ಶಿವಶಂಕರ ನಿರ್ದೆಶಿಸಿದರು. ವಿಸ್ತಾರ್ ಸಂಸ್ಥೆಯ ಬಾಂಧವಿ ಸಿಬ್ಬಂದಿ ವರ್ಗ ಅಭಿನಯಿಸಿದರು.
 

‍ಲೇಖಕರು G

12 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading