ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಮೊಗಸಾಲೆ ಹೊಸ ಕವಿತೆ- ಕತ್ತಿ

ಕತ್ತಿ

ಡಾ.ನಾ. ಮೊಗಸಾಲೆ

*
ಕಬ್ಬಿಣವ ಕಾಯಿಸಿ ಬಡಿದು
ಮಾಡಿದ ಕತ್ತಿಯ ಹಾಗೆ
ಇದ್ದರು ಬಯಲ ಸಂತೆಯಲ್ಲಿ ಕತ್ತಿ ಮಾರುತ್ತ


ಸುಡು ಸುಡು ಬಿಸಿಲು
ತಪ್ಪಿಸಿಕೊಂಡು ಹೋದ ನೆರಳು
ಸಂತೆ ಸಂತೆಯಾಗಿಯೇ ಎಂಬಂತ್ತಿತ್ತು
ಚೆಲ್ಲಾಪಿಲ್ಲಿಯಾಗಿ
ಕತ್ತಿಗಳ ಕೊಳ್ಳುವವರು ಅಲ್ಲಿ ಇಲ್ಲಿ


ನಾನು ಒಬ್ಬಳೇ ಇದ್ದವಳ ಬಳಿ ಹೋಗಿ ಕೇಳಿದೆ
‘ಆ ಕತ್ತಿಗೆ ಎಷ್ಟು ? ಈ ಕತ್ತಿಗೆ ಎಷ್ಟು ?
ಇದು ಮಿಲಾವಿನದ್ದೋ? ಅದು ಕಬ್ಬಿಣದ್ದೋ ?’


ತಣ್ಣಗೆ ಹೇಳಿದಳು ಆಕೆ
‘ಕೊಳ್ಳುವುದಿದ್ದರೆ ಹೇಳುತ್ತೇನೆ
ಸುಮ್ಮನೆ ಗಂಟಲು ಒಣಗಿಸಬೇಡಿ ನನ್ನ’


ಮನೆಗೆ ಬಂದೆ ಕೊಂಡು ಕೊಂಡು ಒಂದು ಕತ್ತಿ
ಇವಳು ಅದನ್ನು ನೋಡಿ
‘ಇದೆಯಲ್ಲ ಆಗಲೇ ಮನೆಯಲ್ಲಿ ?
ಶಸ್ತ್ರಾಗಾರವಲ್ಲ ಇದು’ : ಎಂದಳು ಸಿಡುಕಿ


ಮುಂದಿನವಾರ ಸಂತೆಗೆ ಹೊರಟು ನಿಂತಾಗ ನಾನು
ಮುಂದೆ ಬಂದು ‘ಕೊಂಡು ಹೋಗಿ ಕತ್ತಿ
ಅವಳಿಗೆ ಕೊಡಿ ಹಣ ಹಿಂಪಡೆಯಬೇಡಿ’ ಎಂದಳು.


ನಾನು ಸಣ್ಣಗೆ ಅವಳ ಕಣ್ಣು ನೋಡಿದೆ
ಅಲ್ಲಿ ಯುದ್ಧವಿರಲಿಲ್ಲ !
ಎಲ್ಲ ತಾಯಂದಿರ ಕಣ್ಣು ಅಲ್ಲಿ ಮೂಡುತ್ತಿತ್ತು

‍ಲೇಖಕರು avadhi

11 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading