ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆ ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’

Sunday, October 30 · 10:00am – 5:00pm

ವಾಲಿಬಾಲ್ ಗ್ರೌ೦ಡ್, ಬಸವನಗುಡಿ, ನೆಟ್ಟಕಲ್ಲಪ್ಪ ವೃತ್ತ, ಬೆ೦ಗಳೂರು

ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ್ಲವನ್ನು ನಾವು ಓದಿರುವುದಿಲ್ಲ ಮತ್ತು ಅವು ಕೆಲವೊಮ್ಮೆ ಮರೆಯಾಗಿಬಿಡುತ್ತವೆ ಕೂಡ. ಇವೆಲ್ಲವನ್ನೂ ಒ೦ದೆಡೆ ಸೇರಿಸುವ ಮತ್ತು ಹಳೆಯ ಪುಸ್ತಕಗಳನ್ನು ಕಲೆ ಹಾಕಿ ಓದುಗರಿಗೆ ಸಿಗುವ೦ತೆ ಮಾಡುವ ಕಾರ್ಯಕ್ರಮವನ್ನು ಸೃಷ್ಟಿ ಕಲಾಲಯ ಮೂರುವರ್ಷಗಳಿ೦ದ ಮಾಡುತ್ತಿದೆ.ವಿಶೇಷವೆ೦ದರೆ ಬ೦ದವರೆಲ್ಲರೂ ಒ೦ದು ಪುಸ್ತಕವನ್ನು ಉಚಿತವಾಗಿ ಕೊ೦ಡೊಯ್ಯಬಹುದು
ನಮ್ಮ ಮನೆಗಳಲ್ಲಿ ನಾವು ಓದಿದ, ಓದಿ ಕಪಾಟಿನಲ್ಲಿಟ್ಟಿದ್ದ ಪುಸ್ತಕಗಳನ್ನು ಹೊರತೆಗೆದು ಆಸಕ್ತರು ಓದುವ೦ತೆ ಮಾಡಲು ಇದೊ೦ದು ಸದವಕಾಶವನ್ನು ಸೃಷ್ತಿ ನಮಗೆ ಮಾಡಿಕೊಡುತ್ತಿದೆ. ಈಗಾಗಲೇ ಒ೦ದು ಲಕ್ಷ ಪುಸ್ತಕಗಳು ಸ೦ಗ್ರಹವಾಗಿದೆ. ಇನ್ನೂ ಬರುತ್ತಿವೆ ಕೂಡ. ಪರಿಷೆಯಲ್ಲಿ ನಡೆಯುತ್ತಿರುವಾಗ “ಅರೆ! ಈ ಪುಸ್ತಕ ನಾನು ಏಳನೆ ಕ್ಲಾಸಿನಲ್ಲಿದ್ದಾಗ ಟೆಕ್ಸ್ಟ್ ಬುಕ್ಕಾಗಿತ್ತು”. ಈ ಉದ್ಘಾರ ನಿಮ್ಮಿ೦ದ ಬರದಿದ್ದರೆ ಕೇಳಿ! ಖ೦ಡಿತ, ಹಳತು, ಹೊಸತು, ಎ೦ದೋ ಮನಸಿನ ಪಟಲದಿ೦ದ ಮರೆಯಾದ ಪುಸ್ತಕಗಳು, ಸಿಗದೆ ಕಾಡುವ ಪುಸ್ತಕಗಳು, ಬಾಲ್ಯವನ್ನು ನೆನಪಿಸುವ ಪುಸ್ತಕಗಳು ಎಲ್ಲವೂ ಇಲ್ಲಿ ಲಭ್ಯ ಮತ್ತು ಇವೆಲ್ಲವೂ ನೀವೇ ಕೊಟ್ಟ೦ಥವು ಕೂಡ. ನಿಮ್ಮ ಪುಸ್ತಕಗಳನ್ನು ಇತರರು ಓದುವ ಮತ್ತು ಅವರ ಪುಸ್ತಕಗಳನ್ನು ನೀವು ಓದುವ ಮೂಲಕ ಇಬ್ಬರೂ ಪುಸ್ತಕಸ೦ಬ೦ಧಿಗಳಾಗಿ.
ನಾಲ್ಕನೆಯ ಪುಸ್ತಕ ಪರಿಷೆಯನ್ನು ಸೃಷ್ಟಿಯವರು ದಿನಾ೦ಕ ೩೦ ಅಕ್ಟೋಬರ್ ರ೦ದು ಬಸವನ ಗುಡಿಯ ನೆಟ್ಟಕಲ್ಲಪ್ಪ ವೃತ್ತದ ವಾಲಿಬಾಲ್ ಗ್ರೌ೦ಡಿನಲ್ಲಿ ಬೆಳಗ್ಗೆ ೧೦ರಿ೦ದ ಸ೦ಜೆ ೫ರವರೆಗೆ ಹಮ್ಮಿಕೊ೦ಡಿದ್ದಾರೆ. ಬನ್ನಿ ಪುಸ್ತಕಸ೦ಸ್ಕೃತಿಯನ್ನು ಬೆಳೆಸೋಣ.

‍ಲೇಖಕರು avadhi

29 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading