ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೂ ನನ್ನ ಸೈಕಲ್ಲು!!

ಮತ್ತೆ ಸೈಕಲ್!

ನೇಸರ ಕಾಡನಕುಪ್ಪೆ

ಮತ್ತೆ ಸೈಕಲ್ ತುಳಿಯುವ ಸಂಕಲ್ಪದಲ್ಲಿ… ಸರಿಯಾಗಿ ಹತ್ತು ವರ್ಷಗಳ ನಂತರ ಮತ್ತೆ ಸೈಕಲ್ ಬಳಸಲು ಮುಂದಾಗಿದ್ದೇನೆ. ಇವತ್ತು ತಾನೇ ಹೊಸ ಸೈಕಲ್ ಕೊಂಡು ತಂದಿದ್ದೇನೆ. ಪತ್ರಿಕೋದ್ಯಮದಲ್ಲಿ ವಾಹನ ಕ್ಷೇತ್ರ ನನ್ನ ಪರಿಣಿತ ವಿಷಯವಾದ ಕಾರಣ ಈಗಾಗಲೇ ಸಾಕಷ್ಟು ಬಾರಿ ಪರಿಸರಪ್ರಿಯ ವಾಹನಗಳ ಬಗ್ಗೆ ಬರೆದಿದ್ದೇನೆ. ಆದರೆ ಪ್ರತಿ ಬಾರಿ ಬರೆಯುವಾಗಲೂ ನನ್ನ ಅಂತಃಕರಣ ನನ್ನನ್ನು ಚುಚ್ಚುತ್ತಲೇ ಇತ್ತು. ನಾನೇ ಒಂದು ಪರಿಸರ ಪ್ರಿಯ ವಾಹನ ಬಳಸದೇ ಅದರ ಬಗ್ಗೆ ಬರೆಯುವ ಅರ್ಹತೆ ನನಗಿದೆಯೇ ಎಂದು. ಕೇವಲ ಆತ್ಮಸಾಕ್ಷಿಗೆ ಮಾತ್ರ ಅಲ್ಲದೇ ನಿಜಕ್ಕೂ ಪ್ರೀತಿಯಿಂದ ಸೈಕಲ್ ತುಳಿಯಲು ಪ್ರಾರಂಭಿಸಿದ್ದೇನೆ. ಸೈಕಲ್ ತುಳಿದಾಗ ನಿಜಕ್ಕೂ ಖುಷಿ ಅನ್ನಿಸಿತು. ಪಿಯುಸಿ ಓದುವಾಗ ಕೊನೆಯ ಬಾರಿ ಸೈಕಲ್ ತುಳಿದದ್ದು. ಪಿಯುಸಿ ಮುಗಿಸಿ ಆಗಲೇ ೧೦ ವರ್ಷ ಆಯಿತಲ್ಲ ಎಂಬ ಅಚ್ಚರಿಯೂ ಆಗಿದೆ. ಸೈಕಲ್‌ನಲ್ಲಿ ನಿಧಾನವಾಗಿ ಹೋಗುವಾಗ ಸಿಗುವ ಆನಂದ ಬೈಕ್‌ನಲ್ಲಿ ವೇಗವಾಗಿ ಹೋಗುವಾಗ ಖಂಡಿತಾ ಸಿಗದು. ನಾನು ೭ನೇ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಬಳಿ ಹೀರೋ ‘ಟಾರ್ಗೆಟ್’ ಎನ್ನುವ ಸೈಕಲ್ ಇತ್ತು. ಪಿಯುಸಿ ಓದುತ್ತಿದ್ದಾಗ ಹೀರೋ ‘ರೇಂಜರ್’ ಮೌಂಟೇನ್ ಸೈಕಲ್ ಬಳಸುತ್ತಿದ್ದೆ. ನನ್ನ ಅಕ್ಕ ಬಳಸುತ್ತಿದ್ದ ‘ಬಿಎಸ್‌ಎ ಲೇಡಿಬರ್ಡ್’ ಸೈಕಲ್‌ನ್ನು ಸಹ ತುಳಿದಿದ್ದೆ. ಇದಕ್ಕಾಗಿ ಸರಿಸುಮಾರು ೨ ತಿಂಗಳ ಕಾಲ ಸಂಶೋಧನೆ ನಡೆಸಿ ಕೊನೆಗೂ ಒಂದು ಸೈಕಲ್ ಆಯ್ಕೆ ಮಾಡಿಕೊಂಡೆ. ನನ್ನ ಮೂರನೇ ಸೈಕಲ್ ಇದು. ನಾನೇ ದುಡಿದು ಕೊಂಡ ವಾಹನವೂ ಇದು ಎಂಬ ಹೆಮ್ಮೆ ಇದೆ. ಇದು ‘ಮಾಂಗೂಸ್ ಸ್ವಿಚ್‌ಬ್ಯಾಕ್ ಕಾಂಪ್’. ಸಂಪೂರ್ಣ ಅಲ್ಯೂಮಿನಿಯಂ ದೇಹದ ಅಮೆರಿಕನ್ ಮೌಂಟೇನ್ ಸೈಕಲ್ ಇದು. ಇದು ಗಟ್ಟಿಮುಟ್ಟು ಹಾಗೂ ಸವಾರ ಪ್ರಿಯನೂ ಹೌದು. ಅದರ ಚಿತ್ರ ಇಲ್ಲಿ ನೀಡಿದ್ದೇನೆ. ಇವತ್ತು ಕೊಂಡಿದ್ದರಿಂದ ಒಳ್ಳೆಯ ಫೋಟೊ ತೆಗೆಯಲು ಇನ್ನೂ ಆಗಿಲ್ಲ. ಇರುವ ಸಾಧಾರಣ ಗುಣಮಟ್ಟದ ಫೋಟೊ ಮಾತ್ರ ಇಲ್ಲಿ ಹಾಕಿದ್ದೇನೆ. ಸ್ವಲ್ಪ ದಿನದಲ್ಲೇ ಒಳ್ಳೆಯ ಫೋಟೊ ಹಾಕುವೆ. ]]>

‍ಲೇಖಕರು G

8 August, 2012

4 Comments

  1. hi

    Oh great!!! Even I love Cycling. Ur cycle looks fantastic.

  2. M.S.Hebbar

    ಬರಹ 1st person ನಲ್ಲಿ ಇದೆ. ಬರೆದವರ ಹೆಸರೇನು? ಶಿವು..ಜಯನಗರದಲ್ಲಿ ಸೈಕಲ್ ಟ್ರ್ಯಾಕ್ ನೋಡಿದೆ. ಆದರದು ಪಾರ್ಕಂಗ್ ಆಗಿದೆ !

    • G

      ಇದನ್ನು ಬರೆದವರು ನೇಸರ ಕಾಡನಕುಪ್ಪೆ

  3. M.S.Hebbar

    (Correction)ಆದರದು ಪಾರ್ಕಿಂಗ್ ಜಾಗ ಆಗಿದೆ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading