ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗಮೋಹನ ದಾಸ್, ಪಲ್ಲವ ವೆಂಕಟೇಶ್ ಸೇರಿದಂತೆ ಐವರಿಗೆ ಅಮ್ಮ ಗೌರವ ಪುರಸ್ಕಾರ

ಮಹಿಪಾಲರೆಡ್ಡಿ ಮುನ್ನೂರ್

ಮಹಿಪಾಲರೆಡ್ಡಿ ಮುನ್ನೂರ್

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಗೌರವ’ ಪುರಸ್ಕಾರಕ್ಕೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ

pallava venkateshಈ ಬಾರಿಯ `ಅಮ್ಮ ಗೌರವ’ ಪುರಸ್ಕಾರಕ್ಕೆ ನ್ಯಾಯಾಧೀಶ ಹೆಚ್.ಎನ್. h.n.nagmohan dasನಾಗಮೋಹನದಾಸ್,ಅಂತಾರಾಷ್ಟ್ರೀಯ ಕಲಾವಿದ ಡಾ.ವಿ.ಜಿ. ಅಂದಾನಿ, ಓದುಗರ, ಲೇಖಕರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ, ಪ್ರಕಾಶಕ ಪಲ್ಲವ ವೆಂಕಟೇಶ್, ಮಹಿಳಾ ಸಂಘಟನೆಯ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ಮಾನ್ವಿಕರ್ ಮತ್ತು ನಿವೃತ್ತ ಶಿಕ್ಷಕಿ ಬಸವಲಿಂಗಮ್ಮ ಪಾಟೀಲ ಸೇಡಂ ಅವರನ್ನು ಆಯ್ಕೆ ಮಾಡಲಾಗಿದೆ ಎಂದು `ಅಮ್ಮ ಪ್ರಶಸ್ತಿ’ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.

ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್ ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ಆರಂಭಗೊಂಡ `ಅಮ್ಮ ಗೌರವ ಪುರಸ್ಕಾರ’ಕ್ಕೆ ನಾಡು-ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಸತ್ಕರಿಸಲಾಗುತ್ತದೆ. ದಶಮಾನೋತ್ಸವ ವರ್ಷದಿಂದ ಆರಂಭಗೊಂಡ ಅಮ್ಮ ಗೌರವ ಪುರಸ್ಕಾರವನ್ನು ಮುಂದುವರಿಸಲಾಗಿದೆ ಎಂದು ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಯಶ್ರೀ ಕಾಸರವಳ್ಳಿ, ರಜನಿ ನರಹಳ್ಳಿ ಸೇರಿದಂತೆ ಐವರಿಗೆ ಅಮ್ಮ ಪುಸ್ತಕ ಪುರಸ್ಕಾರವನ್ನು ಘೋಷಿಸಲಾಗಿದೆ

ಅದರ ವಿವರಗಳು ಇಲ್ಲಿವೆ 

‍ಲೇಖಕರು admin

16 November, 2015

2 Comments

  1. ವಿಜಯೇಂದ್ರ ಕುಲಕರ್ಣಿ.( ಮಳ್ಳಿ ) ಕಲಬುರಗಿ

    ಅಮ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು.
    ಪ್ರಶಸ್ತಿಯ ಹೆಸರೇ ಎಷ್ಟು ಆಪ್ಯಾಯಮಾನ ಅಲ್ಲವೇ?

    • Anonymous

      dhanyavadagalu vijayendra..ji

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading