ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನವಕರ್ನಾಟಕ ಪ್ರಕಾಶನ’ಕ್ಕೆ ರಾಷ್ಟ್ರೀಯ ಪ್ರಶಸ್ತಿ

ಭಾರತೀಯ ಪ್ರಕಾಶಕರ ಒಕ್ಕೂಟವು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ನೀಡುತ್ತಿರುವ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ ‘ನವಕರ್ನಾಟಕ ಪ್ರಕಾಶನ’ ಆಯ್ಕೆಯಾಗಿದೆ. 

ಪ್ರಕಾಶನ ರಂಗದಲ್ಲಿ ಅನುರೂಪದ ಸೇವೆ ಸಲ್ಲಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ತಿಂಗಳ 11 ಮತ್ತು 12 ರಂದು ಒಕ್ಕೂಟವು ನವದೆಹಲಿಯಲ್ಲಿ ಹಮ್ಮಿಕೊಂಡಿರುವ ಭಾರತೀಯ ಪ್ರಕಾಶಕರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರಮೇಶ್ ಮಿತ್ತಲ್ ತಿಳಿಸಿದ್ದಾರೆ . 

‘ಪುಸ್ತಕಗಳ ಮೂಲಕ ಮಾನವ ಲೋಕದ ಸೇವೆ’ ಎನ್ನುವ ಧ್ಯೇಯದೊಂದಿಗೆ ಆರಂಭವಾದ ನವಕರ್ನಾಟಕ ಸಂಸ್ಥೆ ಇಂದು4 ಕೇಂದ್ರಗಳಲ್ಲಿ 6 ಮಾರಾಟ ಮಳಿಗೆಗಳನ್ನು ಹೊಂದಿದ್ದು 6500 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. 

ನವಕರ್ನಾಟಕ ಪ್ರಕಾಶನಕ್ಕೆ ಈವರೆಗೆ ನಾಡಿನ ಪುಸ್ತಕ ಪ್ರಾಧಿಕಾರ, ಅಂಕಿತ ಸೇರಿದಂತೆ ಹಲವು ಪ್ರತಿಷ್ಟಿತ ಪ್ರಶಸ್ತಿಗಳು ಸಂದಿವೆ. 

‍ಲೇಖಕರು avadhi

9 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading