ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಂದ್ರ ನಾಯಕರೇ ಹಾಗೆ..

ನರೇಂದ್ರ ನಾಯಕ್ ಅವರೇ ಹಾಗೆ..ಸದಾ ಮೂಢನಂಬಿಕೆಯ ವಿರುದ್ಧ ಯುದ್ಧಕ್ಕೆ ಸಜ್ಜಾಗಿರುವವರು.

ಈಗ ಅವರೊಂದು ಸಂಸ್ಥೆ ಸ್ಥಾಪಿಸಲು ಹೊರಟಿದ್ದಾರೆ. ಅದಕ್ಕೆ ಅವರು ಹುಡುಕಿದ ಸಮಯದ ಕಥೆ ಕೇಳಿ-

Was looking for a inauspicious date to register a trust Aid without religion- found it-30th July new moon day, a Saturday

and to locals of Mangalore most inauspicious day of the year called as Ati Amavasye!

Narendra Nayak

‍ಲೇಖಕರು G

7 July, 2011

1 Comment

  1. ಅಶೋಕವರ್ಧನ ಜಿ.ಎನ್

    ಸಾಮಾನ್ಯರಲ್ಲಿ ಕೆಲವೊಮ್ಮೆ ಕಮ್ಮಿನಿಷ್ಠ (ಕಮ್ಯುನಿಸ್ಟ್), ದೈವದ್ರೋಹಿ, ಜಗಳಗಂಟ ಇತ್ಯಾದಿ ಬಿರುದಾಂಕಿತರಾಗುವ ಪ್ರೊ| ನರೇಂದ್ರನಾಯಕ್ ನಿಜದಲ್ಲಿ ಮಾಡಿದ, ಮಾಡುತ್ತಿರುವ ಜನಜಾಗೃತಿ ಅಸಾಮಾನ್ಯ. ಶೈಕ್ಷಣಿಕ ಯೋಗ್ಯತೆಯಲ್ಲಿ ಸಿಕ್ಕ ಜೀವರಸಾಯನ ಶಾಸ್ತ್ರದ ಪ್ರೊಫೆಸರ‍್ಗಿರಿ ಮತ್ತು ಸ್ವಂತದ ಲ್ಯಾಬೊರೇಟರಿ ಸಮರ್ಥವಾಗಿ ಸುಧಾರಿಸಿಕೊಳ್ಳುವುದರೊಡನೆ ಬಳಕೆದಾರರ ಜಾಗೃತಿಯನ್ನು ಮಂಗಳೂರಿನಲ್ಲಿ ಬಹುಶಕ್ತವಾಗಿ ಕಟ್ಟಿ ನಡೆಸಿದ ಮುಂದಾಳು ಇವರು. ಅಲ್ಲಿ ಎದುರಾಗುವ ಜನರ ಮಾನಸಿಕ ತಡೆಗಳಿಂದ ಪ್ರೇರಿತರಾಗಿಯೋ ಏನೋ ವೈಜ್ಞಾನಿಕ ಮನೋಧರ್ಮದ ಪ್ರಚಾರವನ್ನಿವರು ಜನರ ನಡುವೆ ಚಳವಳಿಯ ಮಟ್ಟದಲ್ಲಿ ಬೆಳೆಸಿದರು. ಸಾರ್ವಜನಿಕ ಪ್ರದರ್ಶನ ಚಟಗಳಾಗಿಯೂ (ಮುಗ್ಧರೂ ಇದ್ದಾರೆ) ಬೆಳೆದ ಭಕ್ತಿ, ಭಾವುಕತೆಗಳ ಅಮಲಿನಲ್ಲಿ ಕಳೆದುಹೋದವರನ್ನು ಸೌಮ್ಯ ಹಾಗಾಗಿ ಉದ್ದದ ದಾರಿಗಳಲ್ಲಿ ವಾಸ್ತವಕ್ಕೆ ತರುವುದು ನರೇಂದ್ರ ನಾಯಕರಿಗೆ ಹಿಡಿಸುವುದಿಲ್ಲ. ಇವರ ಪ್ರದರ್ಶನ-ಪ್ರವಚನಗಳಲ್ಲಿ ಅಂಥ ನಂಬಿಕೆಗಳ ಟೊಳ್ಳನ್ನು ಆಘಾತಕರವಾಗಿ ಬಯಲಿಗೆಳೆಯುತ್ತಾರೆ. ಪವಾಡಗಳ ಖಂಡನೆ, ದೇವ ಮತ್ತು ದೇವಮಾನವರ ವಿರುದ್ಧ ನಾಯಕರ ಪ್ರಚಾರ ಗಟ್ಟಿಧ್ವನಿಯಲ್ಲಿರುತ್ತದೆ. ಅದಕ್ಕೂ ಮಿಗಿಲಾಗಿ ಅವರ ಪ್ರಾತ್ಯಕ್ಷಿಕೆಗಳು ಎಷ್ಟೂ ಅಲೌಕಿಕ ಸಂಗತಿಗಳನ್ನು ಸಂಶ್ಲೇಷಿಸಿ, ಪಕ್ಕಾ ಲೌಕಿಕ ಕಾರ್ಯಕಾರಣವನ್ನು ತೆರೆದಿಟ್ಟು ಮುಕ್ತ ಮನಸ್ಸಿನ ಯಾರೂ “ಪವಾಡ ಸುಳ್ಳು, ಇರುವುದೆಲ್ಲ ಕಣ್ಕಟ್ಟು” ಎಂದು ಘೋಷಿಸುವಂತೆ ಪ್ರಭಾವಿಸುತ್ತದೆ.
    http://www.athree.wordpres.com ನಲ್ಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading