ಕುಸುಮಬಾಲೆ

ಇವ್ನು ಮಾದೇಸ. ಸ್ಕೂಲು ಗೀಲು ಇಲ್ಲ. ಬೆಂಗಳೂರಿನ ಬಸವನಗುಡಿ ದೇವಸ್ಥಾನದಲ್ಲಿ ಭಕ್ತರ ಚಪ್ಪಲಿಗಳ ಕಾಯುವ ಕಾಯಕ ಮಾಡುತ್ತಿದ್ದಾನೆ. ಅವನಪ್ಪ ಅಲ್ಲೆ ದೊಡ್ಡಗಣಪತಿ ದೇವಸ್ಥಾನದ ಬಳಿ ಸೆಕ್ಯೂರಿಟಿ ಗಾರ್ಡು. ಒಂದು ಜಾಗದಲ್ಲಿ ನಿಲ್ಲದ ಅವನಪ್ಪ ಅಮ್ಮ ಅವನ ಸ್ಕೂಲಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾಕೋ ಮಾದೇಸ ಸ್ಕೂಲಿಗ್ ಹೋಗಿಲ್ಲ ಅಂದಾಗ ಆ ಅಜ್ಜಿ ಹೇಳಿದ ಕಥೆಯಿದು. ಅವನ ಸ್ಕೂಲಲ್ಲಿ ಟಿಸಿ ಸಿಕ್ತಿಲ್ಲ ಅನ್ನೋ ಟೆಕ್ಕಿಕಲ್ ಪ್ರಾಬ್ಲಂ ಬೇರೆ ಇದೆಯಂತೆ. ಅಲ್ಲಿ ಇಲ್ಲಿ ಅಲೀತಾ ಇರ್ತಾನೆ. ನಾನ್ ತಂದ್ ಇಲ್ ಕೆಲಸಕ್ಕಿಟ್ಕೊಂಡಿದೀನಿ ಅಂತು ಅಜ್ಜಿ. ಏನೋ ನಿನ್ ಕಥೆ ರಾಜ್ಡು ಕುಮಾರ? ಅಂದ್ರೆ ರಾಜ್ ಕುಮಾರನಾಗಿದ್ರೆ ನಾನ್ಯಾಕಕ್ಕ ಇಲ್ಲಿರ್ತಿದ್ದೆ ಅಂತ ಮರುಪ್ರಶ್ನೆ ಎಸೆದ. ಬಲು ಚೂಟಿಯಾಗಿದ್ದಾನೆ. ಅವನಪ್ಪನ್ನ ಹುಡಕಿದೆ ಸಿಗಲಿಲ್ಲ. ಹೇಗಾದ್ರೂ ಮಾಡಿ ಅವನ್ನ ಸ್ಕೂಲಿಗ್ ಹಾಕಬೇಕು.
ನೀವೂ ಯಾರಾದ್ರೂ ಆ ರೋಡಲ್ ಹೋಗಿ, ಅವರಪ್ಪ ಸಿಕ್ಕಿದ್ರೆ ಅದೇನ್ ಪ್ರಾಬ್ಲಂ ಅಂತ ಚೂರ್ ವಿಚಾರ್ಸಿ. ನಮ್ ಮಾದೇಸ ಚಪ್ಪಲಿ ಬಿಟ್ಟು ಪೆನ್ ಹಿಡೀಲಿ.






0 Comments