ನಿನ್ನೆ ಸಂಜೆಯಷ್ಟೇ ಲಿಂಗದೇವರು ಹಳೆಮನೆ ಅವರ ಸಂಪಾದಕತ್ವದ ‘ಅರುಹು ಕುರುಹು’ ಕೈಗೆ ಬಂತು. ರಾತ್ರಿ ನಿದ್ದೆ ಬಾರದೆ ಇದ್ದಾಗ ಎದ್ದು ಅವರ ಸಂಪಾದಕೀಯವನ್ನು ಒಳಗೊಂಡಂತೆ ಮೊದಲ ಮೂರು ಲೇಖನವನ್ನು ಓದಿದೆ. ಬೆಳಿಗ್ಗೆ 6 ಗಂಟೆಗೆ ಪತ್ರಿಕೆ ಲಿಂಗದೇವರು ಹಳೆಮನೆ ಅವರ ಸಾವಿನ ಸುದ್ದಿ ಹೊತ್ತು ತಂದಾಗ ಮನಸ್ಸು ತಲ್ಲಣಿಸಿತು. ನಮಗೆ ಗೊತ್ತಿದೆ ನಮ್ಮ ಸಾವೂ ನಮ್ಮ ಬೆನ್ನ ಹಿಂದೆ ಹೊಂಚು ಹಾಕುತ್ತಿದೆ ಎಂದು. ಆದರೂ ಇಂತಹ ಕ್ಷಣಗಳ ತಲ್ಲಣವನ್ನು ತಡೆಯುವಲ್ಲಿ ಸೋಲುತ್ತೇವೆ, ಸಾವಿಗೆ ಸೋಲುವಂಗೆ.
-ಇಂದಿರಾ ಹೆಗಡೆ
+
ಒಳ್ಳೆಯ ವಿಶನ್ ನಿಂದ ಕೆಲಸ ಮಾಡುತ್ತಿದ್ದ ಒಳ್ಳೆಯ ರಂಗಕರ್ಮಿಗೆಗೆ ಎಲ್ಲಾ ವಿಜಯನಗರ ಬಿಂಬ ಪದಾಧಿಕಾರಿಗಳ ಪರವಾಗಿ ಹೃದಯಪೂರ್ವಕ ಕೊನೆಯ ನಮನಗಳು
-ಶೋಭಾ ವೆಂಕಟೇಶ್
+
ಇದು ನಮ್ಮ ತುಮಕೂರಿಗರಿಗೆ ತುಂಬಾ ನೋವಿನ ಸುದ್ದಿ. ಅವರು ನಮ್ಮ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನವರು. ಇನ್ನೊಂದು ವಾರದಲ್ಲಿ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತರಾಗಿದ್ದರು. ಈಗಾಗಲೇ ಈ ಸಮಾರಂಭದ ಆಹ್ವಾನ ಪತ್ರಿಕೆ ಕೂಡ ವಿತರಿಸಲಾಗಿದೆ. ಲಿಂಗದೇವರು ಅವರ ಸ್ಥಾನವನ್ನು ತುಂಬುವವರು ಯಾರು? ನಂದಾ ಲಿಂಗದೇವರು ಮತ್ತು ಮಕ್ಕಳಿಗೆ ದೇವರು ಧೈರ್ಯ ನೀಡಲಿ ಮತ್ತು ಸರ್ ಅವರ ಆತ್ಮಕ್ಕೆ ಶಾಂತಿಯಿರಲಿ .
-ಲಲಿತಾ ಸಿದ್ಧಬಸವಯ್ಯ
ಕನ್ನಡದ ವಿಶಿಷ್ಟ ವ್ಯಕ್ತಿಗಳಲ್ಲೊಬ್ಬರು ಅಸ್ತಂಗತರಾಗಿರುವುದು ನಿಜಕ್ಕೂ ದುರದೃಷ್ಟಕರ. ಲಿಂಗದೇವರು ಗಂಭೀರ ಚಿಂತಕರು. ಎಡಪಂಥೀಯ ವಿಚಾರಧಾರೆಯನ್ನು ತಮ್ಮ ಮಾತು ಕೃತಿಗಳಲ್ಲಿ ವ್ಯಕ್ತಪಡಿಸುತ್ತಿದ್ದ ಲಿಂಗದೇವರು ಅಷ್ಟೇ ಸ್ನೇಹಜೀವಿಯೂ ಹೌದು. ನನ್ನ ಕೃತಿ ‘ಒಳದನಿ’ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರಾಡಿದ ಮೆಚ್ಚುಗೆಯ ಮಾತುಗಳು ಮನದಲ್ಲಿ ಇನ್ನೂ ರಿಂಗಣಿಸುತ್ತವೆ.ಅವರ ವಿಮರ್ಶಾತ್ಮಕ ಟೀಕೆಗಳೂ ಸಹ ನೆನಪಾಗುತ್ತದೆ. 565 ಪುಟಗಳ ನನ್ನ ಕೃತಿಯನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ಓದಿ ಬಿಡುಗಡೆಗೆ ಸಿದ್ಧರಾಗಿ ಬಂದಿದ್ದ ಲಿಂಗದೇವರು ಅವರ ಶ್ರದ್ಧೆ ನಿಜಕ್ಕೂ ಅನುಕರಣೀಯ.
ರಂಗಾಯಣಕ್ಕೆ ಹೊಸ ಆಯಾಮ ನೀಡುವುದರಲ್ಲಿದ್ದ ಹಿರಿಯ ಚಿಂತಕ ಹಠಾತ್ತನೆ ಇನ್ನಿಲ್ಲವಾಗಿರುವುದು ಕರ್ನಾಟಕದ ಸಾರಸ್ವತ ಲೋಕಕ್ಕೆ ಉಂಟಾಗಿರುವ ನಷ್ಟ ಮಾತ್ರವಲ್ಲ, ರಾಜ್ಯದ ಪ್ರಗತಿಪರ ಚಳುವಳಿಗೂ ಅಪಾರ ನಷ್ಟವಾಗಿದೆ. ಲಿಂಗದೇವರು ಅವರ ವಿಚಾರಧಾರೆ, ಧೋರಣೆ ಮತ್ತು ಅವರು ಹಾಕಿಕೊಟ್ಟ ಮಾರ್ಗಗಳೇ ಮುಂಬರುವ ಪೀಳಿಗೆಗೆ ದಾರಿದೀಪವಾಗಲಿ ಎಂಬ ಇಚ್ಚೆಯೊಂದಿಗೆ ಅಗಲಿದ ಚೇತನಕ್ಕೆ ನಮನಗಳನ್ನು ಸಲ್ಲಿಸುತ್ತೇನೆ.
-ನಾ ದಿವಾಕರ.
ಮೈಸೂರು
+
ಲಿಂಗದೇವರು ಹಳೆಮನೆ ಅವರ ತಾಯಿ ಬೋರಮ್ಮ
ಚಿತ್ರ: ಉಗಮ ಶ್ರೀನಿವಾಸ್
ಯಾವಾಗಲೂ ಜನತೆಯ ಬಗೆಗೆ ಆಳವಾದ ಪ್ರೀತಿಯಿಂದ ಯೋಚಿಸುತಿದ್ದ ಹಳೆಮನೆ ಇನ್ನಿಲ್ಲ ಅನ್ನುವ ಸುದ್ದಿ ಕೇಳಿ ಆಘಾತವಾಯಿತು. ನಮ್ಮ ಸುರಪುರದ ಹಳ್ಳಿಗೆ ಬಂದು ನಾಟಕದ ಬಗ್ಗೆ ಮಾತನಾಡಿದ್ದರು. ಲಂಕೇಶ್, ತೇಜಸ್ವಿ, ರಾಮದಾಸ್, ಕಿ ರಂ, ಈಗ ಹಳೆಮನೆ …ಈ ಸ್ವಾರ್ಥವಿಲ್ಲದ ಬರಹಗಾರರು ಇಲ್ಲವಾದ ಬಳಿಕ ಇನ್ನೇನಿದೆ ತೌಡು ಕುಟ್ಟುವವರ ನಡುವೆ.. ?.
-ಅಜೀಂ
+
ಬೆಳೆಗ್ಗೆ ೫ .೧೫ಕ್ಕೆ ವಾಕ್ ಹೋಗಲಿಕ್ಕೆ ಎದ್ದಾಗ ಸಂಗಾತಿ ಸಿ ಕೆ ಗುಂಡಣ್ಣ ಕಳಿಸಿದ್ದ ಮೆಸೇಜ್ ಶಾಕ್ ನೀಡಿತು. ನಮ್ಮಂತವರಿಗೆ ಮೈಸೂರಿನ ಪ್ರೊ.ರಾಮದಾಸ್ ಅವರನ್ನು ಕಳೆದುಕೊಂಡ ಬಳಿಕ, ನೇರ , ನಿಷ್ಟುರ ಆದರೆ ಅಷ್ಟೇ ಸೌಮ್ಯದ ಹಳೆಮನೆಯವರು ಅವರ ಸ್ಥಾನ ತುಂಬಿ ನಮ್ಮನ್ತವರಿಗೆಲ್ಲಾ ಸ್ಫೂರ್ತಿಯಾಗಿದ್ದರು. ಹಳೆಮನೆಯವರ ಅಗಲುವಿಕೆ ನಾಡಿನ ಪ್ರಗತಿಪರರಿಗಂತೂ ತುಂಬಾ ದುಃಖ ತಂದಿದೆ
ಮಹಾಂತೇಶ. ಕೆ
+
ಲಿಂಗದೇವರು ಅವರು ಹುಟ್ಟಿ ಬೆಳೆದ ಮನೆ
ಚಿತ್ರ: ಉಗಮ ಶ್ರೀನಿವಾಸ್
ಭಾಷೆ , ಸಾಹಿತ್ಯ ಮತ್ತು ಕಲೆಗಳಿಗೆ ಸಂಬಂಧಪಟ್ಟ ಎಲ್ಲ ವಿಚಾರಗಳನ್ನು ಸಾಮಾಜಿಕ , ಧಾರ್ಮಿಕ , ಆರ್ಥಿಕ ಹಾಗೂ ಶ್ಯೆಕ್ಷಣಿಕ ನೆಲೆಗಳಲ್ಲಿ ಬಹಳ ಸರಳವಾಗಿ ಮತ್ತು ಖಚಿತವಾದ ನಿಲುವುಗಳಿಂದ ವಿಶ್ಲೇಷಣೆ ಮಾಡುತ್ತಿದ್ದ ಪ್ರತಿಭಾವಂತ ವ್ಯಕ್ತಿ ಶ್ರೀ ಲಿಂಗದೇವರು ಹಳೆಮನೆ . ಎಲ್ಲರೊಡನೆ ತುಂಬಾ ಪ್ರೀತಿ ಗೌರವಗಳಿಂದ ನಡೆದುಕೊಳ್ಳುತ್ತಿದ್ದ ಹಳೆಮನೆಯವರು ಸದಾಕಾಲ ಒಂದಲ್ಲ ಒಂದು ಬಗೆಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು , ತಮ್ಮ ಸುತ್ತಮುತ್ತಲಿದ್ದವರನ್ನು ಕ್ರಿಯಾಶೀಲರನ್ನಾಗಿ ಮಾಡುತ್ತಿದ್ದರು . ಹಳೆಮನೆಯವರ ಸಾವಿನ ಈ ಸಮಯದಲ್ಲಿ ಏಕೋ ಏನೋ ಕೆ. ರಾಮದಾಸ್ ಅವರು ನೆನಪಾಗುತ್ತಿದ್ದಾರೆ . ಮೈಸೂರಿನಲ್ಲಿ ನಡೆಯುತ್ತಿದ್ದ ಎಲ್ಲಾ ಬಗೆಯ ವೈಚಾರಿಕ ಚಟುವಟಿಕೆಗಳಲ್ಲಿ ಇವರಿಬ್ಬರ ಪಾತ್ರ ಬಹು ದೊಡ್ಡದಾಗಿತ್ತು .
-ಸಿ ಪಿ ನಾಗರಾಜ
+
It is very sad. Halemane sir was so enthusiastic. On Sunday he was the one who asked lot of questions to H S Shivaprakash in a interactive session organized by the Rangayana. He seemed so healthy and showed no sign of any symptoms. It was really shocking.
May his soul rest in peace.
-vasanth
+
ಬ್ರೆಕ್ಟ್ ನಾಟಕಗಳ ಅನುವಾದಕರಾದ ಲಿಂಗದೇವರು ಹಳೆಮನೆ ಇಂದು ನಮ್ಮೊಂದಿಗೆ ಇಲ್ಲವಾದ್ದು ತುಂಬಾ ನೋವಿನ ವಿಷಯ, ಅಧುನಿಕ ಕನ್ನಡ ನಾಟಕ ರಂಗಕ್ಕೆ ಮಹತ್ವವಾದ ಒಂದು ಕೊಂಡಿ ಇನ್ನಿಲವಾಗಿದೆ..
Raghavendra H K
+
ಲಿಂಗದೇವರು ರಂಗಾಯಣದ ನಿರ್ದೇಶಕರಾಗುವ ಸುದ್ದಿ ಬಂದಾಗ ಅವರ ಮೇಲೆ “ನಕ್ಷಲ್ ” ಹಿನ್ನೆಲೆಯವರೆಂದು ಗೂಬೆ ಕೂರಿಸುವ ಪ್ರಯತ್ನ ನಡೆದಿತ್ತು- ಆಗ ನಾವು ಕೆಲವರು ಅವರಿಗೆ ಫೋನ್ ಮಾಡಿ “ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ -ಅಳುಕಬೇಡಿ” ಎಂದಿದ್ದೆವು . ನಂತರ ರಂಗಾಯಣದಲ್ಲಿ ಇತ್ತೀಚಿಗೆ ಭೇಟಿಯಾದಾಗ ಅದನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದರು. ಅವರಿನ್ನೂ ಇರಬೇಕಿತ್ತು …
-ಪ್ರಸಾದ್ ರಕ್ಷಿದಿ









ಆತ್ಮೀಯ ಗೆಳೆಯರನ್ನು ಕಳೆದುಕೊಂಡ ದುಃಖ ಮನಸ್ಸನ್ನು ವ್ಯಾಪಿಸಿದೆ.