ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ತುಳಸಿ!

ನಮ್ಮ ತುಳಸಿಯೊಡನೆ ಕಳೆದ ಸಂತಸ, ಸಂತೃಪ್ತಿಯ ಕ್ಷಣಗಳು

ಶ್ಯಾಮಲಾ ಮಾಧವ 

ಸ್ಪಾರೋದ ಬೆಳ್ಳಿಹಬ್ಬ ಪ್ರಯುಕ್ತ ಕರ್ಜತ್ ನಲ್ಲಿ ನಡೆದ ಎರಡು ದಿನಗಳ ಬಹುಭಾಷಾ ಸಾಹಿತ್ಯಕೂಟ – Experiences & Expressions ನಲ್ಲಿ.
ಶ್ಯಾಮಲನಿಗೆ ಅಲ್ಲಿ ಕಾಫಿ ಸಿಗದೇನೋ ಎಂದುಕೊಂಡು ನನಗಾಗಿ ಚೆಲುವಾದ ಬಾಟಲಿಯಲ್ಲಿ ಕಾಫಿ ಪೌಡರ್ ತಂದ ತುಳಸಿ!

ಇಂದಿಗೂ ನಾನು ದಿನವೂ ಬೆಳಿಗ್ಗೆ ಎದ್ದು ನೋಡುವುದು ಅದನ್ನೇ – ನನ್ನ ತುಳಸಿಯ ಪ್ರೀತಿಯ ಮುಖವನ್ನು.

ತನ್ನ ಸೆಲ್ವಾರ್ ಕಮೀಜ್ ತಂದು ಬಲವಂತದಿಂದ ನನಗೆ ತೊಡಿಸಿ, “ಈಗ ನೋಡಿ, ಎಷ್ಟು ಆರಾಮವಾಗಿ ನೀವು ಈ ಬೆಟ್ಟದಲ್ಲಿ ಸುತ್ತಾಡಬಹುದು, ಎಂದು ಸಂಭ್ರಮಿಸಿದ ತುಳಸಿ!.

‘ಪುಟಗಳ ಮಧ್ಯದ ನವಿಲುಗರಿ’ಯಾಗಿ, ಮೀಸಿ ಮಲಗಿಸಿದ ಪುಟ್ಟಕಂದನ ಬಿಸುಪಾಗಿ ನಮ್ಮ ಹೃದಯಗಳಲ್ಲಿ ಉಳಿದ ನಮ್ಮ ತುಳಸಿ! .

ಘನತೆ, ಗಾಂಭೀರ್ಯ, ಸೌಜನ್ಯ, ಪ್ರೀತಿ, ಮಾರ್ದವದ ಸಾಕಾರ ಗೆಳತಿ ತುಳಸಿಯನ್ನು ಕಳಕೊಂಡಿದ್ದೇವೆ.

‘ಸ್ಪಾರೋ’ ಕನ್ನಡ ವಿಭಾಗದ ಸಂಚಾಲಕಿಯಾಗಿ ಮಹಿಳಾ ಜಾನಪದ, ಕಲೆ, ನಾಹಿತ್ಯ, ಮತ್ತಿತರ ಸಾಧನೆಗಳ ಸಿರಿಸಂಪದವನ್ನು ಕಾಪಿಡುವ ಕಾಯಕದಲ್ಲಿ ನನ್ನಂಥ ಹಲವರನ್ನು ತೊಡಗಿಸಿಕೊಂಡು ಹೊಸಲೋಕದ ದರ್ಶನ ಮಾಡಿಸಿದವಳು, ತುಳಸಿ.

ನಮ್ಮ ‘ಸೃಜನಾ’ ಬಳಗದ ಸದಸ್ಯೆಯಾಗಿ ತನ್ನ ಕಥಾ ಸಂಕಲನ, “ಮುಂಜಾವಿಗೆ ಕಾದವಳು”, ಕವನ ಸಂಕಲನ, “ಪುಟಗಳ ಮಧ್ಯದಲ್ಲೊಂದು ನವಿಲುಗರಿ”, ಪತಿ ಕೆ.ಟಿ.ವೇಣುಗೋಪಾಲರೊಡನೆ ಜೊತೆಯಾಗಿ ಕಥಾಸಂಕಲನ “ಜುಗಲ್ ಬಂದಿ” ಇಂತಹ ಸಾಹಿತ್ಯಸಿರಿಯನ್ನು ಇನ್ನಷ್ಟು ಮೊಗೆದು ಕೊಡುವಳೆಂಬ ಆಶೆ ಹುಟ್ಟಿಸಿ ಕಾಯುವಂತೆ ಮಾಡಿದವಳು.

ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಭಾಜನಳಾದವಳು. ಮೊಮ್ಮಗುವಿನ ಆಟ ಪಾಠಗಳ ಸಂತಸದಲ್ಲಿ ಅರಳುತ್ತಿದ್ದ ತುಳಸಿ. ಹುಟ್ಟೂರಿನಲ್ಲೇ ಕೊನೆಯುಸಿರೆಳೆದ ತುಳಸಿ ನಮ್ಮ ಹೃದಯಗಳಲ್ಲಿ ಸದಾ ಉಳಿವವರು.

‍ಲೇಖಕರು avadhi

9 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading