ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮದು ಪ್ರತಿದಿನದ ವ್ಯಾಲೆಂಟೈನ್ಸ್ ಡೆ – ಸುನಿತಾ ಮಂಜುನಾಥ ಬರೀತಾರೆ

ಸುನಿತಾ ಮಂಜುನಾಥ್

‘ಮಂಜು ಈವತ್ತು ಯಾಕೋ ಕೆಲ್ಸ ಮಾಡೋಕೆ ಬೇಜಾರು …… ‘.. ‘ಎಷ್ಟ್ ಆಗುತ್ತೆ ಅಷ್ಟ್ ಮಾಡಿ ಉಳಿದದ್ದು ಆಫೀಸ್ ಅಲ್ಲಿ ಹೇಳಿಬಿಡು ಜಾಸ್ತಿ ಟೆನ್ಶನ್ ಮಾಡಿಕೊ ಬೇಡ. ಆದ್ರೆ 11ಗಂಟೆಗೆ ಬರ್ತೀನಿ , ಇಲ್ಲ ಅಂದರೆ 3ಗಂಟೆಗೆಲ್ಲ ಬಂದ್ಬಿಡ್ತೀನಿ ..ಏನಾದ್ರೂ ಬರ್ಕೊತಾ, ಓದ್ತಾ ಇರು , ಏನೂ ಮಾಡೋಕೆ ಹೋಗ್ ಬೇಡ …ಆಮೇಲೆ ಎಲ್ಲಾದರು ಕರ್ಕೊಂಡ್ ಹೋಗ್ತೀನಿ”.. “ಈವತ್ತು ಒಬ್ರು ಫ್ರೆಂಡ್ ಬರ್ತಾರೆ, ನಾ ಅವರನ್ನ ನೋಡೋಕೆ ಹೋಗಬೇಕು”… “೩ ಗಂಟೆ ಮೇಲೆ ಎಲ್ಲಿಗೆ ಬೇಕಾದರು ಕರ್ಕೊಂಡ್ ಹೋಗ್ತೀನಿ ಆಯ್ತಾ ಮಹರಾಯ್ತಿ , ಮುಖ ಹಂಗೆ ಸಪ್ಪೆ ಮಾಡ್ಕೋ ಬೇಡ ..” .. “ಒಂದು ಬುಕ್ ರಿಲೀಸ್ , ನಾ ಹೋಗ್ ಬೇಕಲ್ಲಾ … ” ‘ಯಾರಾದ್ರೂ ಜೊತೆ ಇದ್ರೆ ಹೋಗು ಇಲ್ಲ ಅಂದ್ರೆ ನಾನೇ ಬರಬೇಕ ಹೇಳು”…. “ಈವತ್ತು ಕೆಲಸ ಜಾಸ್ತಿ ಮಂಜು ” …’ಟೆನ್ಶನ್ ಬೇಡ, ಸಂಜೆ ನಾನೇ ಏನಾದ್ರೂ ಕುಕ್ ಮಾಡ್ತೀನಿ ಬಿಡು”

‘ಮಗಳಿಗೆ ಹುಷಾರಿಲ್ಲ, ಡಾಕ್ಟರ್ ತೋರಿಸೋಕೆ ನಾ ಇರಬೇಕ”… ‘ಬೇಡ ಮಂಜು, ಇದೇನು ದೊಡ್ಡ ವಿಷ್ಯ ನಾ ಕರ್ಕೊಂಡ್ ಹೋಗ್ತೀನಿ ಬಿಡು ‘… ‘ಮಗನ ಕಾಲೇಜ್ ಪೇರೆಂಟ್ಸ್ ಮೀಟಿಂಗ್ ಅಂತೆ’ ‘ ನಾ ಹೋಗ್ತೀನಿ ಬಿಡಪ್ಪ ನೀ ಯಾಕೆ ರಜ ಹಾಕ್ತತೀಯ ” … ‘ಆ ನೀರಿನ ಬಿಲ್ ಸ್ವಲ್ಪ ಕ್ಲಾರಿಫಯ್ ಮಾಡಬೇಕಲ್ಲಮ್ಮ ‘ ‘ ನಾ ಹೋಗ್ತೀನಿ ಬಿಡು ಮಂಜು”…
ಬದುಕಿನ ಕಪ್ಪು ಬಿಳುಪಿನ ಅನೇಕ ಪುಟಗಳನ್ನ ತಿರುಗಿಸಿ, ಬಣ್ಣದ ಪುಟಗಳನ್ನ ನೋಡಿ, ಏಳುಬೀಳುಗಳ ದಾಟಿ… ಬದುಕಿನ ಈ ಹಂತದಲ್ಲಿರುವಾಗ…. ‘ಅಕ್ಕ ನೀವು ಹೇಗೆ Valentine’s Day celebrate ಮಾಡ್ತೀರ” ಅಂತ ಒಂದ್ ಹುಡುಗಿ ಕೇಳಿದಳು..
ಪ್ರೀತಿ ಅಂದ್ರೆ ಬರೀ ಅರಿತುಕೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆ ಅಷ್ಟೇ ….ಜಗಳವೇ ಇಲ್ಲ , ಭಿನ್ನಾಭಿಪ್ರಾಯವೇ ಇಲ್ಲಾ ಅಂತಲ್ಲ ….ಎಲ್ಲದರ ನಡುವೆಯೂ being for HIM or for Her…..ನನಗೆ ಪ್ರತಿ ದಿನವೂ Valentine’s Day…ಮೇಲೆ ಹೇಳಿದ ರೀತಿಯಲ್ಲೇ …
 

‍ಲೇಖಕರು G

14 February, 2014

6 Comments

  1. ಸುಮ ಮುದ್ದಾಪುರ್

    ವಾಹ್ …… !

    • sunitha.a

      Thankyou..:))

  2. Anonymous

    ಪ್ರೀತಿ ಅಂದ್ರೆ ಬರೀ ಅರಿತುಕೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆ ಅಷ್ಟೇ ….ಜಗಳವೇ ಇಲ್ಲ , ಭಿನ್ನಾಭಿಪ್ರಾಯವೇ ಇಲ್ಲಾ ಅಂತಲ್ಲ ….ಎಲ್ಲದರ ನಡುವೆಯೂ being for HIM or for Her…..ನನಗೆ ಪ್ರತಿ ದಿನವೂ Valentine’s Day…
    Tumba chennagi helidira
    Nalina venkatanag

    • sunitha.a

      Thankyou..:)))

  3. bharathi b v

    Suni ishtavaythu … Ningoskara Nan book release hege banda nenpaythu …

    • sunitha.a

      bharathi..:))luv

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading