
ಮಾಲತಿ ಭಟ್
ಆತ್ಮೀಯರೆ,
ಪಾಸಿಟಿವ್ ಸೈಕಾಲಜಿ ಆಧಾರಿತ ಕನ್ನಡದ ಮೊದಲ ಮಾಸಪತ್ರಿಕೆ ‘ಪ್ರಾಫಿಟ್ ಪ್ಲಸ್’ ಪತ್ರಿಕೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ನನ್ನ ‘ಜಾಜಿ ಮಲ್ಲಿಗೆ’ ಅಂಕಣದಲ್ಲಿ ಪ್ರಕಟಗೊಂಡಿದ್ದ ಆಯ್ದ ಲೇಖನಗಳ ಗುಚ್ಛ ಈಗ ‘ದೀಪದ ಮಲ್ಲಿಯರು’ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿದೆ.
ಈ ಪುಸ್ತಕದಲ್ಲಿ 18 ಅನನ್ಯ ಮಹಿಳೆಯರ ಬದುಕಿನ ಕಥೆಗಳಿವೆ. ಕಡುಕಷ್ಟದ ಜೀವನವನ್ನು ಎದುರಿಸಿ ಕೊಳೆಗೇರಿಯಿಂದ ಮಹಲು ಮುಟ್ಟಿದವರು, ಅಂಗವೈಕಲ್ಯ ಇದ್ದರೂ ಕ್ರೀಡಾಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರು, ತಮ್ಮ ವೈಯಕ್ತಿಕ ಸಮಸ್ಯೆಗೆ ಪರಿಹಾರ ಕಂಡುಕೊಂಡು ಅದನ್ನು ಸಮಾಜಸೇವೆಯ ಭಾಗವಾಗಿಸಿಕೊಂಡವರ ಜೀವನ ಚಿತ್ರಣ ಇಲ್ಲಿದೆ.
ಏಪ್ರಿಲ್ 10ರಂದು ಭಾನುವಾರ, ಬೆಳಿಗ್ಗೆ 10.30 ರಂದು ಶಿವಾನಂದ ವೃತ್ತದ ಬಳಿ ಇರುವ ಗಾಂಧಿ ಭವನದಲ್ಲಿ ಈ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಇದರ ಜೊತೆ ‘ಪ್ರಾಫಿಟ್ ಪ್ಲಸ್’ ಸಂಪಾದಕಿ ಸುಧಾ ಶರ್ಮಾ ಅವರ ಸಂಪಾದಕೀಯ ಬರಹಗಳ ಸಂಕಲನ ‘ನಮ್ಮೊಳಗೆ ನಾವು’, ಇದೇ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ಪ್ರಕಟಗೊಂಡಿದ್ದ ಶೋಭಾ ಹೆಗಡೆ ಅವರ ‘ಅವಳೆಂಬ ಸುಗಂಧ’, ಚಿತ್ರ ಸಿ. ಅವರ ‘ಅನಾಮಿಕಳ ಅಂತರಂಗ’ ಪುಸ್ತಕಗಳೂ ಸಹ ಬಿಡುಗಡೆಗೊಳ್ಳಲಿವೆ.

ಬೆನಕ ಬುಕ್ಸ್ ಬ್ಯಾಂಕ್ ಈ ನಾಲ್ಕು ಪುಸ್ತಕಗಳ ಪ್ರಕಾಶಕರು. ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ, ಹಿರಿಯ ಲೇಖಕಿ ಶಾಂತಾ ನಾಗರಾಜ್ ಮತ್ತು ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳು. ವೈದ್ಯೆ, ಲೇಖಕಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುದ್ದಾಂ ಬನ್ನಿ.
ನಿಮ್ಮ ನಿರೀಕ್ಷೆಯಲ್ಲಿ






0 Comments