ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಈ ಹುಡುಗನ ಪರವಾಗಿ..

ಇಲ್ಲಿದ್ದಾನಲ್ಲಾ… ನಾನು ಗಲ್ಲ ತಟ್ಟುತ್ತಿರುವ ಈ ಹುಡುಗ, ನನ್ನ ಪ್ರೀತಿಯ ಮಣಿಕಾಂತ…

ಈಗ ‘ಅಪ್ಪ ಅಂದರೆ ಆಕಾಶ…’ ಅಂತ ಒಂದು ಪುಸ್ತಕವನ್ನ ನಾವೆಲ್ಲ ಓದಲಿ ಅಂತ ಸಿದ್ಧಪಡಿಸಿಕೊಂಡು ಕೂತಿದ್ದಾನೆ.

ಇದೇ ಭಾನುವಾರ, ಫೆಬ್ರವರಿ 17, 2013ರ ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಕೃತಿಯ ಬಿಡುಗಡೆ.

ಮಣಿಕಾಂತ ಅನೇಕ ಅರ್ಥದಲ್ಲಿ ‘ಮಣಿ’ಯೆ. ವ್ಯಕ್ತಿತ್ವ, ಬರಹ, ಅಕ್ಷರಗಳು, ಪ್ರೀತಿ, ಸ್ನೇಹ, ಹಿರಿಯರ ಬಗೆಗಿರುವ ಗೌರವಭಾವ ಎಲ್ಲದರಲ್ಲೂ ಆತ ‘ಅಮೂಲ್ಯ ಮಣಿ’ಯೇ.

ಈ ಕಾರಣದಿಂದಲೇ ನಿಮ್ಮ ಮೆಚ್ಚಿನ ಕವಿಗಳು, ಚಿತ್ರ ನಟರು, ನಿರ್ದೇಶಕರು ಮುಂತಾಗಿ ಅನೇಕ ಮಹನೀಯರು ಈ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ.

”ನೀವೂ ತಪ್ಪದೆ ಬನ್ನಿ,” ಅಂತ ನನ್ನ ಈ ಹುಡುಗನ ಪರವಾಗಿ ನಿಮ್ಮೆಲ್ಲರನ್ನೂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಿದ್ದೇನೆ.

ಅವತ್ತು ಅಲ್ಲಿ ಎಲ್ಲರೂ ಭೇಟಿಯಾಗೋಣ.

‍ಲೇಖಕರು G

13 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading