ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನನ್ನ ಅಲುಗಾಡಿಸಿಬಿಟ್ಟ ಕಾದಂಬರಿ ಇದು..

ಎನ್  ಜಗದೀಶ್ ಕೊಪ್ಪ

ನಾನು ಕನ್ನಡದ ಕಾದಂಬರಿಗಳನ್ನು ಓದಿ 12ವರ್ಷಗಳಾಗಿದ್ದವು. ಹಿರಿಯ ಮಿತ್ರ ಡಾ. ಹನೂರು ಕೃಷ್ಣಮೂರ್ತಿಯವರ ” ಅಜ್ಞಾತನೊಬ್ಬನ ಆತ್ಮ ಚರಿತ್ರೆ” ಮೊನ್ನೆ ಓದಿದೆ. ನಿಜಕ್ಕೂ ನನ್ನನ್ನ ಅಲುಗಾಡಿಸಿಬಿಟ್ಟ ಕಾದಂಬರಿ ಇದು.

ಟಿಪ್ಪು, ಹೈದರಾಲಿ ಕಾಲದ ದಳವಾಯಿ ಯೊಬ್ಬನ ಸ್ವಗತದ ಮೂಲಕ ಆರಂಭವಾಗುವ ಈ ಕಾದಂಬರಿಯಲ್ಲಿ, ಯುದ್ದದ ಭೀಕರತೆ, ಮಹಿಳೆಯರ ಶೋಷಣೆ, ಅರಮನೆಯ ಆತಂಕಗಳು, ಎಲ್ಲವೂ ಧಾಖಲಾಗಿರುವ ಪರಿಗೆ ಬೆಚ್ಚಿಬಿದ್ದಿದ್ದೇನೆ.ಕನ್ನಡದ ಶ್ರೇಷ್ಟ ಕಾದಂಬರಿಗಳ ಸಾಲಿಗೆ ಸೇರುವ ಕೃತಿ ಇದು.
ಮೊನ್ನೆ ರಾತ್ರಿ ಮೈಸೂರಿಗೆ ಫೋನ್ ಮಾಡಿ ಅಭಿನಂದಿಸುವಾಗ ಅತ್ತ ಕಡೆಯಿಂದ ಕೃಷ್ಣಮೂರ್ತಿ” ಗುರುವೇ ಇದಕ್ಕಾಗಿ ನಾಲ್ಕು ವರ್ಷ ನನ್ನ ಜೀವನಾ ತೇಯ್ದುಬಿಟ್ಟಿದ್ದೀನಿ” ಎಂದರು. ನನಗೆ ಪ್ರತಿಕ್ರಿಯೆ ನೀಡಲು ಶಬ್ಧಗಳು ಸಿಗಲಿಲ್ಲ. ನಾನು ಪದೇ ಪದೇ ಓದುವ ಮಲೆಗಳಲ್ಲಿ ಮದುಮಗಳು, ಸಂಸ್ಕಾರ, ಬೆಟ್ಟದ ಜೀವ, ಮರಳಿ ಮಣ್ಣಿಗೆ, ಗ್ರಾಮಾಯಣ, ಮಾಡಿಮಡಿದವರು, ಕರ್ವಾಲೊ, ಚಿರಸ್ಮರಣೆ, ಮುಂತಾದ ಕಾದಂಬರಿಗಳ ಸಾಲಿಗೆ ಇದನ್ನು ಸೇರಿಸಿ ಇಟ್ಟಿದ್ದೀನಿ.
ಒಬ್ಬ ಲೇಖಕ ಜೀವನದಲ್ಲಿ ಇಂತಹ ಒಂದು ಕೃತಿ ಬರೆದರೆ ಸಾಕು ಅನಿಸುತ್ತೆ.

‍ಲೇಖಕರು Avadhi

15 February, 2013

1 Comment

  1. Sunil HH

    ಒಮ್ಮೆ ಓದಲೇಬೇಕಾದಂತಹ ಅದ್ಬುತ ಕಾದಂಬರಿ,ಓದಲಾರoಭಿಸಿದರೆ ಕೆಳಗಿಡಲಾಗದಂತೆ ಓದಿಸಿ ಕೊಂಡು ಹೋಗುತ್ತದೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading