ವರ್ತಮಾನದ ತಲ್ಲಣಗಳು
– ರವಿಕುಮಾರ್ ಈಚಲಮರ

ದಿನಾಂಕ 10-02-2013 ರಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಸಮಾನಾಂತರ ವೇದಿಕೆಯಲ್ಲಿ 4 ಗಂಟೆಗೆ ವರ್ತಮಾನದ ತಲ್ಲಣಗಳು ಗೋಷ್ಡಿ ನಡೆಯಿತು. ಆಶಯ ನುಡಿಗಳನ್ನು ಡಾ|. ಬಂಜಗೆರೆ ಜಯ ಪ್ರಕಾಶ್ ರವರು ಆಡಿದರು, ಲೀಲಾ ಕೆ, ಮತ್ತು ನಟರಾಜ್ ಹುಳಿಯಾರ್ ರವರು ಭಾಷಣ ಮಾಡಿದರು, ಡಾ| ವಾಸು ರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಖಾಸಗೀಕರಣವನ್ನು ಅಸಹಾಯಕತೆಯಿಂದು ನಾವು ನೋಡುತ್ತದೇವೆ, ಅಂತಹ ಸ್ಥಿತೆ ಇಂದು ನಮ್ಮ ಮುಂದಿದೆ, ಸಾರ್ವಜನಿಕ ವಲಯ ಸೋಲುತ್ತಿದೆ, ಉದ್ಯೋಗ, ಆರೋಗ್ಯ ಇನ್ನು ಮುಂತಾದ ಕ್ಷೇತ್ರಗಳಲ್ಲಿ ಖಾಸಗಿ ವ್ಯಕ್ತಿಗಳು ಹಿಡಿತವನ್ನು ಸಾದಿಸುತ್ತಿದ್ದಾರೆ, ಆರೋಗ್ಯ ಮತ್ತು ಸಾರಿಗೆಯಲ್ಲಿ ಈಗಾಗಲೇ ಖಾಸಗಿ ವ್ಯಕ್ತಿಗಳು ಹಿಡಿತ ಸಾದಿಸಿದ್ದಾರೆ, ವಿದ್ಯಾವಂತ ಜನರು ಯಾರು ಸಹ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಸರ್ಕಾರ ಖಾಸಗಿ ರಂಗಕ್ಕೆ ಕಾವಲು ಗಾರರಾಗಿ ಕೆಲಸ ಮಾಡುತ್ತಿದೆ ಎಂದು ಡಾ| ಬಂಜಗೆರೆ ಜಯ ಪ್ರಕಾಶ್ ಹೇಳಿದರು, ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಮಾಪಿಯಾ, ಕ್ರಿಮಿನಲ್, ಹಿನ್ನೆಲೆ ಉಳ್ಳವರು ಇಂದು ರಾಜಕೀಯದಲ್ಲಿ ಇದ್ದಾರೆ, ಹಣ, ಜಾತಿ, ಕೋಮುವಾದವನ್ನು ಮುಂದಿಟ್ಟುಕೊಂಡು ಇಂದು ಅದಿಕಾರಕ್ಕೆ ಬರುತ್ತಿದ್ದಾರೆ. ಸಂಸ್ಕೃತಿ ಹೆಸರಿನಲ್ಲಿ ನೈತಿಕ ಪೋಲೀಸರ ಅಟ್ಟಹಾಸ ಹೆಚ್ಚಾಗಿದೆ. ಒಂದು ಹುಡುಗ ಹುಡುಗಿ ಇಂದು ಜೊತೆಯಲ್ಲಿ ಓಡಾಡುವಂತಿಲ್ಲ, ಇಂತಹವರಿಗೆ ಸಾಂಸ್ಕೃತಿಕ ಸನ್ನಿ ಹಿಡಿದಿದೆ, ಸಂಸ್ಕೃತಿ ಎಂಬುದು ಜನರ ರೈತರ ದುಡಿಮೆಯಲ್ಲಿ ಮತ್ತು ಮನಸ್ಸಿನಲ್ಲಿದೆ, ನಿಮ್ಮ ಲಾಂಚನಗಳಲ್ಲಿ ಇಲ್ಲ ಎಂದು ಅವರು ತಮ್ಮ ಅಬಿಪ್ರಾಯ ವ್ಯಕ್ತಪಡಿಸಿದರು
ಇದೇ ಸಂದರ್ಭದಲ್ಲಿ ಮಾಶತನಾಡಿ ನಟರಾಜ್ ಹುಳಿಯಾರ್ ರವರು, ನೈತಿಕ ಪೋಲೀಸರಿಗೆ ಮದುವೆ ಮಾಡಿದರೆ ಎಲ್ಲವು ಸರಿಯೊಗುತ್ತದೆ, ಏಕೆಂದರೆ ದೇಹಕ್ಕೆ ವಿರೋದವಾದ ಬ್ರಹ್ಮಚರ್ಯವನ್ನು ಪಾಲಿಸುತ್ತಿರುವುದರಿಂದ ಅವರಿಗೆ ಪ್ರೀತಿ ಮಾಡುತ್ತಿರುವವರನ್ನು ಕಂಡರೆ ಆಗುವುದಿಲ್ಲ ಎಂದು ಹೇಳಿದರು
ನಮ್ಮ ಹಳ್ಳಿಗಳಲ್ಲೆ ಜಾತಿ ಧರ್ಮ ಬೇದಗಳಿಲ್ಲದೆ ಹಬ್ಬಗಳನ್ನು ನಾವು ನೋಡಬಹುದು ಉದಾಹರಣೆಗೆ ಮೊಹರಂ ಹಬ್ಬಗಳು. ಆದ್ದರಿಂದ ಹಳ್ಳಿಗಳಲ್ಲಿ ಸಾಸ್ಕೃತಿಕ ಸಮಾನತೆಯನ್ನು ಕಾಣಬಹುದು. ಆದರೆ ನೈತಿಕ ಪೋಲೀಸರು ಗ್ರಾಂಈನ ಬಾಗದ ಜನರ ಸಮಾನತೆಯನ್ನು ಹೊಡೆಯುವ ಪ್ರಯತ್ನ ಮಾಡುತ್ತದಾರೆ. ಈ ಭಾರಿಯ ಚುನಾವಣೆಯಲ್ಲಿ ನಾವು ಸರಿಯಾದ ಪಾಠ ಕಲಿಸಬೇಕೆಂದು ಮಾತನಾಡಿದರು.
ಲೀಲಾ ಕೆ, ಮತ್ತು ಡಾ| ವಾಸು ಮಾತನಾಡಿ ಇಂದಿ ರಾಜಕೀಯ ಮೋಸಗಳು ಮತ್ತು ಜನಪ್ರತಿನಿಧಿಗಳು ಇಂದು ನಮಗೆ ಅನ್ಯಾಯ ಮಾಡುತ್ತಿದ್ದಾರೆ, ನಾವುಯೋಚನೆ ಮಾಡಿ ಮತ ಚಲಾಯಿಸಬೇಕು, ಹಣ ಪಡೆಯಬಾರದು ಎಂದು ಹೇಳಿದರು. ಈ ಭಾರಿ ಸರ್ಕಾರ ಮಂಡಿಸಿರುವ ಬಜೆಟ್ ಚುನಾವಣಾ ಪ್ರಚಾರದ ಗಿಮಿಕ್ ಅದು ಕಾರ್ಯರೂಪಕ್ಕೆ ಬರುವುದು ಖಚಿತ ಇಲ್ಲ ಎಂದು ಹೇಳಿದರು.







SAHITYA SAMMELANADALLI MUKHYAMANTRIGALU RAJAKEEYA BHASHANA MADUVUDOO TAPPU. SAHITHUGALU CHUNAVANA PRACHARA MADUVUDOO TAPPU
ನಟರಾಜ್ ರವರ ಮಾತು ನಿಜವೆಂದೆನಿಸುತ್ತದೆ. ಬಹಳಷ್ಟು ಸಾರಿ ಇಂತಹ ನೈತಿಕ ಪೋಲೀಸರು, ಬ್ರಹ್ಮಚಾರಿಗಳೂ ಅಷ್ಟೇ ಅಲ್ಲದೇ ಯಾವುದೇ ಲಲಿತ ಕಲೆಗಳನ್ನು ಅಸ್ವಾದಿಸದ ಮನಸ್ಥಿತಿಯವರೂ ಆಗಿರುತ್ತಾರೆ.